Connect with us
Loading...
Loading...

ಪ್ರಚಲಿತ

ಮತ್ತೆ ಹಿಂದೂ ಸಂತರ ವಿರುದ್ಧ ಪ್ರಹಾರ ಶುರುಮಾಡಿದ ಸಿದ್ದರಾಮಯ್ಯ ಸರ್ಕಾರ!! ನಾಲ್ಕು ವರ್ಷದ ಹಿಂದಿನ ಕೇಸ್ ರೀಓಪನ್!!

Published

on

 • 25
 •  
 •  
 •  
 •  
 •  
 •  
 •  
  25
  Shares

ಮಂಗಳೂರಿನ ಉಲಾಯಿಬೆಟ್ಟುವಿನಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿಗೆ ಸಮನ್ಸ್ ಜಾರಿ ಮಾಡಲಾಗಿದೆ.

2014 ರ ಪ್ರಕರಣವನ್ನು ಕೆದಕಿ ಈಗ ಶ್ರೀಗಳ ವಿರುದ್ಧ ಸಮನ್ಸ್ ಜಾರಿಮಾಡಲಾಗಿದೆ, 2014 ಡಿಸೆಂಬರ್ 07 ರಂದು ಉಲಾಯಿಬೆಟ್ಟುವಿನಲ್ಲಿ ದತ್ತಮಾಲಾಧಾರಿಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು.

ಈ ಕೃತ್ಯವನ್ನು ವಿರೋಧಿಸಿ, ಕಿಡಿಗೇಡಿಗಳನ್ನು ಬಂಧಿಸುವಂತೆ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.

ಮಾಲಾಧಾರಿಗಳ ಮೇಲೆ ಕಲ್ಲುತೂರಾಟವಾದ್ದರಿಂದ ಸಹಜವಾಗಿಯೇ ಹಿಂದುಗಳು ಸಿಡಿದೆದ್ದಿದ್ದರು, ಆದರೆ ಈ ಪ್ರಕರಣದ ವಿರುದ್ಧ ನೀವು ಪ್ರತಿಭಟನೆ ಮಾಡುವಂತಿಲ್ಲ ಅಂತ ಪೋಲಿಸರು ಸೆಕ್ಷನ್ 144 ಜಾರಿ ಮಾಡಿಬಿಟ್ಟಿದ್ದರು.

ಆದರೆ ಹಿಂದುಗಳ ಆಕ್ರೋಶ ಭುಗಿಲೆದ್ದು ಪ್ರತಿಭಟನೆ ಮಾಡಲಾಗಿತ್ತು. ಪರಿಸ್ಥಿತಿಯನ್ನ ಹತೋಟಿಗೆ ತರಲು ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸ್ವಾಮೀಜೀಗಳ ವಿರುದ್ಧ ಪೋಲಿಸರು ನಾಲ್ಕು ವರ್ಷಗಳ ಹಿಂದೆ ಪ್ರಕರಣ ದಾಖಲಿಸಿಕೊಂಡು ಪ್ರಕರಣವನ್ನ ಪೋಲಿಸರು ಕೈಬಿಟ್ಟಿದ್ದರು.

ಆದರೆ ಕೈ ಬಿಟ್ಟ ಪ್ರಕರಣವನ್ನು ಮತ್ತೆ ಕೆದಕುವಂತೆ ಅದ್ಯಾವ ‘ಕೈ’ ಪೋಲಿಸರಿಗೆ ಸೂಚಿಸಿತೋ ನಾಲ್ಕು ವರ್ಷದ ನಂತರ ಮತ್ತೆ ಅದೇ ಪ್ರಕರಣವನ್ನ ರೀಓಪನ್ ಮಾಡಿರುವುದು.

ಹಿಂದುಗಳ, ಹಿಂದೂ ಸಂತರ ವಿರುದ್ಧ ನಡೆದ ಪ್ರಕರಣ ಇದೊಂದೇ ‌ಅಲ್ಲ!!

ಸಿದ್ದರಾಮಯ್ಯನವರ ಆಡಳಿತದಲ್ಲಿ ಹಿಂದುಗಳು ಅಸುರಕ್ಷಿತ ಅನ್ನೋ ಭಾವನೆ ಹಿಂದುಗಳಿಗೆ ಕಾಡುತ್ತಿದೆ. ಮನೆಯಿಂದ ಹೊರಹೋದವನು ಮತ್ತೆ ಮನೆಗೆ ಸುರಕ್ಷಿತ ವಾಪಸ್ ಬರ್ತಾರೆ ಅನ್ನೋ ವಿಶ್ವಾಸ ಹಿಂದುಗಳಲ್ಲಿ ಈಗ ಉಳಿದಿಲ್ಲ.

ಕಾರಣ ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಿದ್ದರಾಮಯ್ಯನವರ ಆಡಳತಿದಲ್ಲಿ ಇಲ್ಲಿಯವರೆಗೆ ಬರೋಬ್ಬರಿ 21 ಹಿಂದೂ ಸಂಘಟನೆ ಕಾರ್ಯಕರ್ತರ ದಾರುಣ ಹತ್ಯೆಯಾಗಿವೆ.

ಪ್ರತಿಯೊಂದು ಕೊಲೆಯನ್ನೂ ಬರ್ಬರವಾಗೇ ಮಾಡಲಾಗಿದೆ, ಕರಾವಳಿಯಂತೂ ಬೆಚ್ಚಿ ಬಿದ್ದಿದೆ, ಕಂಡ ಕಂಡಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ದಾಳಿಗಳು ಮೇಲಿಂದ ಮೇಲಾಗುತ್ತಿವೆ.

ಬರೀ ಹಿಂದೂ ಯುವಕರ ಮೇಲಷ್ಟೇ ದೈಹಿಕ ಹಲ್ಲೆ ಕೊಲೆಗಳು ನಡೆಯುತ್ತಿಲ್ಲ, ಬದಲಾಗಿ ಹಿಂದೂ ಸಂತರನ್ನ ಕೂಡ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮಾಡಲಾಗುತ್ತಿದೆಯೇ ಎನ್ನುವ ಅನುಮಾನಗಳು ಕಾಡಲಾರಂಭಿಸಿವೆ.

ಹೌದು ಹಿಂದೂ ಸಂತರನ್ನೂ ಟಾರ್ಗೇಟ್ ಮಾಡಲಾಗುತ್ತಿದೆ.
ಕಳೆದ ಕೆಲ ತಿಂಗಳ ಹಿಂದೆ ಕಲಬುರಗಿ ಜಿಲ್ಲೆಯ ಆಂದೋಲಾ ಗ್ರಾಮದಲ್ಲಿ ಶ್ರೀರಾಮಸೇನೆ ರಾಜ್ಯ ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಸಿದ್ದಲಿಂಗಸ್ವಾಮಿಜೀಗಳನ್ನ ರಾಜಕೀಯ ಲೆಕ್ಕಾಚಾರವನ್ನಿಟ್ಟುಕೊಂಡು ಓವೈಸಿ ಪಕ್ಷದ ಜನರು ನೀಡಿದ ದೂರಿನನ್ವಯ ಬಂಧಿಸಲಾಗಿತ್ತು.

ಪ್ರಕರಣಕ್ಕೂ ಶ್ರೀಗಳಿಗೂ ಸಂಬಂಧವೇ ಇಲ್ಲದಿದ್ದರೂ ಶ್ರೀಗಳ ಬಂಧನವಾಗಿದ್ದಕ್ಕೆ ಕಲಬುರಗಿ ಅಕ್ಷರಶಃ ರಣಾಂಗಣವಾಗಿತ್ತು. ನಂತರ ಜಾಮೀನು ಪಡೆದು ಶ್ರೀಗಳು ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ತಕ್ಷಣ ಶ್ರೀಗಳು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡು “ಹಿಂದುಗಳೇ ಈ ಹಿಂದೂ ವಿರೋಧಿ ಸರ್ಕಾರವನ್ನ ಕಿತ್ತೆಸೆಯಿರಿ” ಅನ್ನೋ ಕರೆಯನ್ನ ಕೊಟ್ಟಿದ್ದರು.

ಈ ಪ್ರಕರಣಕ್ಕಿಂತ ಮುನ್ನ ಸ್ವಯಂಘೋಷಿತ ಪ್ರಗತಿಪರರು, ಬುದ್ಧಿಜೀವಿಗಳು, ಹಾಗು ದೂರದ ಗುಜರಾತಿನ ಜಿಗ್ನೇಶ್ ಮೇವಾನಿ ಎಂಬ ಹುಸಿ ದಲಿತ ಹೋರಾಟಗಾರ ಉಡುಪಿಯ ಕೃಷ್ಣ ಮಠವನ್ನ ಟಾರ್ಗೇಟ್ ಮಾಡಿ ಮಠವನ್ನ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಬಂದಾಗ ನಮ್ಮ ಘನ ಮುಖ್ಯಮಂತ್ರಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಮೋದಿಯ ಮೇಲಿನ ದ್ವೇಷದಿಂದ ಹೇಳಿಕೆ ಕೊಟ್ಟು ನಂತರ ಯೂ ಟರ್ನ್ ತೆಗೆದುಕೊಂಡು “ನಾನು ಹೋಗೋಲ್ಲ ಅಂದಿರಲಿಲ್ಲ, ನನಗೆ ಆಮಂತ್ರಣ ಬಂದಿಲ್ಲವೆಂದು ಹೋಗಿಲ್ಲ” ಎಂದಿದ್ದರು.

ರಾಜ್ಯದಲ್ಲಿ ಗೋಸೇವೆಯೇ ಶ್ರೇಷ್ಟ ಸೇವೆ ಅಂತ ರಾಜ್ಯಾದ್ಯಂತ ಗೋಸೇವೆ ಮಾಡುತ್ತಿರುವ ರಾಘವೇಶ್ವರ ಭಾರತಿ ಸ್ವಾಮೀಜಿಗಳನ್ನೂ ಹುಸಿ ಪ್ರಕರಣವೊಂದರಲ್ಲಿ ಸಿಲುಕಿಸಲು ಟಾರ್ಗೇಟ್ ಮಾಡಲಾಗಿತ್ತು.

ಹಿಂದೂ ಸಂತರ ಮೇಲಿನ ಈ ಟಾರ್ಗೇಟ್ ಗಳು ಹಿಂದುಗಳ ಅಸಾಮಾಧಾನಕ್ಕೆ ಕಾರಣವಾಗಿದೆ.

ಇನ್ನೆಷ್ಟು ದಿನ ಈ ಅನ್ಯಾಯ ಸಿದ್ದರಾಮಯ್ಯನವರೇ?

 •  
  25
  Shares
 • 25
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com