Connect with us
Loading...
Loading...

ಪ್ರಚಲಿತ

ಮತ್ತೆ ಹಿಂದೆ ಸರಿಯಿತು ಚೀನಾ, ಭಾರತದ ವಿದೇಶಾಂಗ ನೀತಿಗೆ ಸಂದ ಮತ್ತೊಂದು ಜಯ!!!

Published

on

  • 1
  •  
  •  
  •  
  •  
  •  
  •  
  •  
    1
    Share

ಅರುಣಾಚಲ ಪ್ರದೇಶದ ಬಾರ್ಡರ್ ಹತ್ತಿರ ಟೂಟಿಂಗ್ ಎಂಬ ಪ್ರದೇಶದಲ್ಲಿ ಕೆಲ ದಿನಗಳಿಂದ ಚೀನೀ ಸೈನಿಕರು ಬೀಡು ಬಿಟ್ಟಿದ್ದರು. ಇದೇ ರೀತಿಯ ಕೃತ್ಯವನ್ನ ಚೀನಿ ಸೈನಿಕರು ದೋಕ್ಲಾಮ್ ಪ್ರದೇಶದಲ್ಲಿಯೂ ಮಾಡಿದ್ದರು.

ಆಗ ಭಾರತದ ವಿದೇಶಾಂಗ ನೀತಿಗೆ ಮಣಿದು ಹಿಂದೆ ಸರಿದಿದ್ದ ಚೀನಾ ಮತ್ತೆ ತನ್ನ ಚಾಳಿ ಮುಂದುವರೆಸಿ ಈಗ ಟೂಟಿಂಗ್ ಪ್ರದೇಶದಲ್ಲಿ ಬೀಡು ಬಿಟ್ಟಿದೆ.

ಎರಡು ದಿನಗಳ ಹಿಂದೆ ಭಾರತೀಯ ಸೇನೆ ಹಾಗು ಚೀನಾ ಸೇನೆಯ ನಡುವೆ ಬಾರ್ಡರ್ ಪರ್ಸನಲ್ ಮೀಟಿಂಗ್ ನಡೆದಿದ್ದು ಟೂಟಿಂಗ್ ಪ್ರದೇಶದ ಸಮಸ್ಯೆ ಇತ್ಯರ್ಥವಾಗಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.

ಸಿಕ್ಕಿಂ-ಭೂತಾನ್-ಟಿಬೆಟ್ ಮೂರೂ ಪ್ರದೇಶಗಳಿಗೆ ಹತ್ರಿರವಾಗುವಂತಹ ಪ್ರದೇಶವಾದ ದೋಕ್ಲಾಂನಲ್ಲಿ ಚೀನೀ ಸೈನಿಕರು ಈ ಮೊದಲು ಜಮಾವಣೆಯಾಗಿದ್ದು ಕಳೆದ ವರ್ಷ 73 ದಿನಗಳ ಕಾಲ ಬೀಡು ಬಿಟ್ಟು ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆದೇ ಬಿಡುತ್ತೋ ಏನೋ ಎಂಬ ಸನ್ನುವೇಶ ಸೃಷ್ಟಿಯಾಗಿಬಿಟ್ಟಿತ್ತು.

ಆದರೆ ಅಂತರಾಷ್ಟ್ರೀಯ ಮಂಡಳಿ ಭಾರತ ಮತ್ತು ಚೀನಾ ದೇಶಗಳಿಗೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದರಿಂದ ಚೀನಾ ಹಿಂದಕ್ಕೆ ಸರಿದಿತ್ತು. ಇದರ ಹಿಂದೆ ಭಾರತದ ಪ್ರಬಲ ಅಂತರಾಷ್ಟ್ರೀಯ ನೀತಿಗಳೂ ಕೆಲಸ ಮಾಡಿದ್ದವು.

ಆದರೆ ಈಗ ಮತ್ತೆ ಕ್ಯಾತೆ ತೆಗೆದಿರುವ ಚೀನಾ ಅರುಣಾಚಲ ಪ್ರದೇಶದ ಹತ್ತಿರದ ಟೂಟಿಂಗ್ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಹೆಸರಿನ ಮೂಲಕ ತನ್ನ ಸೈನಿಕರನ್ನ ಜಮಾವಣೆಗೊಳಿಸಿ ಮತ್ತೊಮ್ಮೆ ಭಾರತವನ್ನ ಕೆಣಕಲು ಮುಂದಾಗಿತ್ತು. ಆದರೆ ಎರಡು ದಿನಗಳ ಹಿಂದೆ ನಡೆದ ಬಿ.ಪಿ.ಎಮ್ ಮೀಟಿಂಗ್ ನಲ್ಲಿ ಚೀನಾ ಹಿಂದಕ್ಕೆ ಸರಿಯಲು ಒಪ್ಪಿ ಮತ್ತೆ ಭಾರತಕ್ಕೆ ತಲೆಬಾಗಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಚೀನಿ ಸೈನಿಕರು ಭಾರತದ ಅರುಣಾಚಲ ಪ್ರದೇಶದ ಭಾಗದಲ್ಲಿ ರಸ್ತೆ ಕಾಮಗಾರಿಯನ್ನೂ ಶುರು ಮಾಡಿ ಕೆಲ ಕಿಲೋಮೀಟರ್ ಭಾರತೀಯ ಗಡಿಯನ್ನೂ ದಾಟಿ ಒಳ ನುಸುಳಿದ್ದರು.

ಇದನ್ನ ಗಮನಿಸಿದ್ದ ಭಾರತೀಯ ಸೈನಿಕರು ಎರಡು ಯಂತ್ರಗಳನ್ನ ಚೀನಿಯರಿಂದ ವಶಪಡಿಸಿಕೊಂಡಿದ್ದರು. ಆದರೆ ಬಾರ್ಡರ್ ಮೀಟಿಂಗ್ ಆದತಂತರ ಚೀನಾ ಈಗ ಹಿಂದೆ ಸರಿಯಲು ಒಪ್ಪಿಕೊಂಡಿದ್ದು ಇನ್ನು ಮುಂದೆ ಅರುಣಾಚಲ ಪ್ರದೇಶದ ಸುತ್ತಮುತ್ತ ತನ್ನ ರಸ್ತೆ ಕಾಮಗಾರಿಗಳನ್ನ ನಡೆಸುವುದಿಲ್ಲ ಅಂತ ಹೇಳಿಕೊಂಡ ಮೇಲೆ ಅವುಗಳನ್ನ ವಾಪಸ್ ಮಾಡಲಾಗಿದೆ.

ಈಗ ಸದ್ಯ ಟೂಟರ್ ಪ್ರದೇಶದಲ್ಲಿ ಯಾವ ಗೊಂದಲಗಳೂ ಇಲ್ಲ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ

  •  
    1
    Share
  • 1
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com