Connect with us
Loading...
Loading...

ಪ್ರಚಲಿತ

ಮದರಸಾ ಮತ್ತು ಮಸ್ಜಿದ್ ಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಡಬೇಕು!! ಸೇನಾ ಜನರಲ್ ಬಿಪಿನ್ ರಾವತ್ ಹೀಗೆ ಹೇಳಿದ್ಯಾಕೆ ಗೊತ್ತಾ?!

Published

on

 • 3
 •  
 •  
 •  
 •  
 •  
 •  
 •  
  3
  Shares

ದೇಶದ ಮದರಸಾಗಳಲ್ಲಿ ಭಯೋತ್ಪಾದನೆಯ ಪಾಠ ಮಾಡಲಾಗುತ್ತಿದೆ, ಕೇಂದ್ರ ಸರ್ಕಾರ ಈ ಕೂಡಲೇ ಮದರಸಾಗಳನ್ನ ಬಂದ್ ಮಾಡಬೇಕು ಅಂತ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ ವಾಸಿಂ ರಿಜ್ವಿ ಹೇಳಿಕೆ ನೀಡಿದ್ದು ನಿಮಗೆಲ್ಲಾ ಗೊತ್ತಿರಬಹುದು.

ಹೌದು ಹೀಗೆಂದು ವಾಸಿಂ ರಿಜ್ವಿ ಮೊನ್ನೆ ಮೊನ್ನೆಯಷ್ಟೇ ಹೇಳಿಕೆ ನೀಡಿದ್ದರು. ಮದರಸಾಗಳಲ್ಲಿ ಭಯೋತ್ಪಾದನೆಯ ಪಾಠ ಮಾಡಲಾಗುತ್ತಿದೆ, ಒಂದು ವೇಳೆ ಮದರಸಾಗಳಲ್ಲಿ ಒಳ್ಳೆಯ ಶಿಕ್ಷಣ ನೀಡುತ್ತಿರುವುದೇ ಆದರೆ ಮದರಸಾಗಳಿಂದ ಶಿಕ್ಷಣ ಪಡೆದ ಮಕ್ಕಳುಗಳ್ಯಾಕೆ ಇಂಜಿನಿಯರ್, ಸೈಂಟಿಸ್ಟ್, ಡಾಕ್ಟರ್ ಗಳಾಗೋಕೆ ಸಾಧ್ಯವಾಗುತ್ತಿಲ್ಲ ಅಂತ ಅವರು ಪ್ರಶ್ನೆ ಮಾಡಿದ್ದರು.

ಅವರ ಆರೋಪಗಳಲ್ಲೂ ಹುರುಳಿದೆ, ಅವರ ಈ ಆರೋಪಕ್ಕೆ ದೇಶಾದ್ಯಂತ ಬೆಂಬಲವೂ ಸಿಕ್ಕಿತ್ತು ಹಾಗು ಕಟ್ಟರ್ ಮುಸ್ಲಿಮರು ಇವರ ವಿರುದ್ಧ ಕೆಂಡಾಡಲವೂ ಆಗಿದ್ದರು.

ಇದ್ದಿದ್ದನ್ನ ಇದ್ದಂಗೆ ಹೇಳದ್ರೆ ತಡ್ಕೊಳ್ಳೋಕ್ಕಾಗ್ದೆ ಒದ್ದಾಡೋರು ನಮ್ ದೇಶದಲ್ಲಿ ತುಂಬಾ ಜನ ಸಿಗ್ತಾರೆ. ಈಗ ಆಗಿರೋದು ಅದೇ ಕಥೆ!!

ವಾಸಿಂ ರಿಜ್ವಿಯವರ ಈ ಹೇಳಿಕೆಯ ನಂತರ ಈಗ ಭಾರತೀಯ ಸೇನೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ರವರು ಕೂಡ ಇದೇ ವಿಷಯವನ್ನ ಪ್ರಸ್ತಾಪಿಸಿದ್ದಾರೆ.

ಜಮ್ಮು ಕಾಶ್ಮೀರದ ಪರಿಸ್ಥಿತಿಯಂತೂ ನಮಗೆಲ್ಲಾ ಗೊತ್ತಿದ್ದದ್ದೆ. ಪ್ರತ್ಯೇಕತಾವಾದಿಗಳ ಕಾಶ್ಮೀರ ಭಾರತದಿಂದ ಬೇರ್ಪಡಬೇಕು ಅನ್ನೋ ವಾದ, ಭಯೋತ್ಪಾದಕರ ಅಟ್ಟಹಾಸ, ಗುಂಡಿನ ದಾಳಿ, ಸೇನಾ ಕ್ಯಾಂಪ್ ಗಳ ಮೇಲೆ ದಾಳಿ, ಕಲ್ಲು ತೂರಾಟಗಾರರ ಹಾವಳಿ ಹೀಗೆ ಸಮಸ್ಯೆಗಳ ಮೂಟೆಯನ್ನ ಅಲ್ಲಿನ ಜನ ಹೊತ್ತು ತಿರುಗಾಡುತ್ತಿರುವುದು ದೇಶವಾಸಿಗಳಿಗೆಲ್ಲಾ ಗೊತ್ತಿರುವ ವಿಚಾರವೇ!!

ಆದರೆ ಕಾಶ್ಮೀರದಲ್ಲಿ ಆ ರೀತಿಯ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆ? ಅದಕ್ಕೆ ಕಾರಣವಾದರೂ ಏನು ಅನ್ನೋದನ್ನ ಜನರಲ್ ಬಿಪಿನ್ ರಾವತ್ ಬಹಳ ಚೆನ್ನಾಗಿಯೇ ಹೇಳಿದ್ದಾರೆ.

ಜಮ್ಮು ಕಾಶ್ಮೀರ ರಾಜ್ಯದ ಶಾಲೆಗಳಲ್ಲಿ ಭಾರತ ವಿರೋಧಿ ಪಾಠ ಮಾಡಲಾಗುತ್ತೆ ಎಂದು ರಾವತ್ ಹೇಳಿದ್ದಾರೆ.

ಸೇನಾ ಪ್ರಮುಖರಾದ ಬಿಪಿನ್ ರಾವತ್ ಜಮ್ಮುವಿನಲ್ಲಿ ಹೇಳಿದ್ದೇನು?

ಜಮ್ಮು ಕಾಶ್ಮೀರದ ಶಾಲೆಗಳ ಶಿಕ್ಷಣದ ಕುರಿತು ಪ್ರಶ್ನೆ ಮಾಡಿರುವ ರಾವತ್ “ಇಲ್ಲಿನ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರುವ ಅಗತ್ಯವಿದೆ” ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಶಾಲೆಗಳು, ಮದರಸಾ, ಮಸ್ಜಿದ್ ಗಳಲ್ಲಿ ಭಾರತದ ಬಗ್ಗೆ ಬೇರೆಯದೇ ಕಲ್ಪನೆಯನ್ನ ನೀಡಲಾಗುತ್ತೆ, ಜಮ್ಮು ಕಾಶ್ಮೀರದ ನಕ್ಷೆಯನ್ನೂ ಭಿನ್ನ ರೀತಿಯಲ್ಲೇ ಮಕ್ಕಳಿಗೆ ಜನರಿಗೆ ತೋರಿಸಲಾಗುತ್ತೆ.

ಇದರಿಂದ ವಿದ್ಯಾರ್ಥಿಗಳ ಮನಸ್ಸಲ್ಲಿ ಮುಸ್ಲಿಂ ಕಟ್ಟರತೆ, ಪ್ರತ್ಯೇಕತೆಯನ್ನ ಬಿತ್ತಲಾಗುತ್ತಿದೆ ಎಂದು ಅವರು ಹೇಳಿದ್ದಾರೆ

ಜನರಲ್ ರಾವತ್ ಅವರು ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿ ಜಮ್ಮು ಕಾಶ್ಮೀರದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸರ್ವೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನೂ ಮುಂದಿಟ್ಟಿದ್ದಾರೆ.

ಸೇನೆಯ ಆ್ಯನುವಲ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತ ಜನರಲ್ ರಾವತ್ ಈ ವಿಷಯಗಳನ್ನೂ ಹೇಳಿದ್ದಾರೆ

ಕಾಶ್ಮೀರದ ಸರ್ಕಾರಿ ಶಾಲೆಗಳಲ್ಲಿ
ಭಾರತದ ಬಗ್ಗೆ ತಪ್ಪು ಸಂದೇಶಗಳನ್ನ ಓದಿಸಲಾಗುತ್ತಿದೆ, ಸಮಸ್ಯೆಯ ಬೇರು ಇರೋದೆ ಅಲ್ಲಿ.
ಸೇನೆಯ ಮೇಲೆ ಕಲ್ಲು ತೂರಾಟ ನಡೆಸುವ ಕೃತ್ಯ ಶುರುವಾಗೋದೂ ಇಲ್ಲಿಂದಲೇ.

ದುಖಃದ ವಿಷಯವೆಂದರೆ ಮಕ್ಕಳಿಗೆ ಪಾಠ ಮಾಡುವ ಅಲ್ಲಿನ ಶಿಕ್ಷಕರಿಗೆ ಸಿಕ್ಕಿರುವ ಶಿಕ್ಷಣವೂ ಭಾರತ ವಿರೋಧಿಯೇ ಆಗಿರೋದ್ರಿಂದ ಅವರೂ ಮಕ್ಕಳಿಗದ ಅದೇ ಪಾಠವನ್ನ ಮಾಡ್ತಿದಾರೆ.

ಜಮ್ಮು ಕಾಶ್ಮೀರದ ಶಿಕ್ಷಣ ಪದ್ಧತಿ ಹೇಗಾಗಿದೆಯೆಂದರೆ ತಮ್ಮ ರಾಜ್ಯ ಪ್ರತ್ಯೇಕ ರಾಷ್ಟ್ರವೇ ಹೊರತು ಅದು ಭಾರತದ ಅಂಗವಲ್ಲ ಅನ್ನೋದಾಗಿದೆ.
ಇದರಿಂದ ಅಲ್ಲಿನ ಮಕ್ಕಳಿನ ತಲೆಯಲ್ಲಿ ತಾವು ಅನ್ಯರಾಜ್ಯದವರಂತಲ್ಲ ತಾವು ವಿಶೇಷ ಸೌಲಭ್ಯ ಪಡೆದಿರುವವರು ಅನ್ನುವ ಮಾನಸಿಕತೆಯನ್ನ ಬಿತ್ತಲಾಗಿದೆ ಹಾಗು ಬಿತ್ತಲಾಗುತ್ತಿದೆ ಕೂಡ.


ಇದರ ಜೊತೆ ಜೊತೆಗೆ ಸೋಶಿಯಲ್ ಮೀಡಿಯಾಗಳ ಮೇಲೆಯೂ ಆಕ್ರೋಶ ವ್ಯಕ್ತಪಡಿಸಿದ ರಾವತ್, ಈ ಸೋಶಿಯಲ್ ಮೀಡಿಯಾದಿಂದ ಇಲ್ಲಿನ ಜನ ದುಷ್ಪ್ರಚಾರ ಮಾಡಿ ಕಾಶ್ಮೀರದ ಪರಿಸ್ಥಿತಿಯನ್ನ ಇನ್ನಷ್ಟು ಹದಗೆಡುವಂತೆ ಮಾಡಿತ್ತಿದ್ದಾರೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಬಂದ 70 ವರ್ಷಗಳವರೆಗೂ ಕಾಶ್ಮೀರದಲ್ಲಿ ನಡೆಯುವ ಕೃತ್ಯಗಳಿಗೆ ಕಾರಣವಾದ ಬೇರು ಹುಡುಕದ ರಾಜಕಾರಣಿಗಳಿಗೆ ಸೇನಾ ಜನರಲ್ ಬಿಪಿನ್ ರಾವತರ ಈ ಕಟು ವಾಸ್ತವಗಳು ಮಗ್ಗಲು ಮುಳ್ಳಾಗಿ ಪರಿಣಮಿಸುವುದಂತೂ ಸತ್ಯ.

ಸೇನೆಗೆ ಮೋದಿ ಸರ್ಕಾರ ಎಲ್ಲ ಸ್ವಾತಂತ್ರ್ಯವನ್ನೂ ನೀಡಿದೆ, ಕೇವಲ ಒಂದೇ ವರ್ಷದಲ್ಲಿ ಭಾರತೀಯ ಸೇನೆ ಎರಡು ನೂರಕ್ಕೂ ಹೆಚ್ಚು ಉಗ್ರರನ್ನ ಹೊಡೆದುರುಳಿಸಿದೆ, ಬರೀ ಉಗ್ರರನ್ನ ಗನ್ನಿನಿಂದ ಉತ್ತರ ಕೊಡುವುದಷ್ಟೇ ಮುಖ್ಯವಲ್ಲ ಉಗ್ರರಿಗೆ ಪೆನ್ನಿನ ಉತ್ತರ ಅಂದರೆ ಶಿಕ್ಷಣ ವ್ಯವಸ್ಥೆಯಿಂದಲೂ ಬುದ್ಧಿ ಕಲಿಸಬಹುದು ಅನ್ನೋದು ರಾವತರ ಉದ್ದೇಶವಾಗಿದೆ.

ಶಾಲೆ, ಮದರಸಾ, ಮಸ್ಜಿದ್ ಗಳನ್ನ ಸರ್ಕಾರಗಳು ಅಂಕುಷ ಹಾಕಬೇಕು ಅನ್ನೋ ಸೇನಾ ಜನರಲ್ ರ ಮಾತುಗಳಿಗೆ ನಮ್ಮ ಬೆಂಬಲವಂತೂ ಇದೆ. ನಿಮ್ಮದು?

ನಿಮಗೆ ಈ ಸುದ್ದಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ, ಈ ರೀತಿಯ ಸುದ್ದಿಗಳನ್ನ ನಿಮ್ಮ ಮುಂದೆ ಹೀಗೆಯೇ ಇಡುತ್ತಿರುತ್ತೇವೆ

 •  
  3
  Shares
 • 3
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com