Connect with us
Loading...
Loading...

ಪ್ರಚಲಿತ

ಮೊದಲೇ ಬಹುರಾಷ್ಟ್ರೀಯ ಕಂಪೆನಿಗಳ ಸೊಂಟ ಮುರಿದಿದ್ದ ಪತಂಜಲಿ ಈಗ MNC ಗಳ ಬುಡಕ್ಕೇ ಕೈ ಹಾಕಲಿದೆ!! ಏನದು ಗೊತ್ತಾ?

Published

on

  • 5.6K
  •  
  •  
  •  
  •  
  •  
  •  
  •  
    5.6K
    Shares

ದೇಶದಲ್ಲಿ ಸ್ವದೇಶಿ ವಸ್ತುಗಳ ಬಗ್ಗೆ ನಮ್ಮ ಜನರಲ್ಲೇ ಅಸಡ್ಡೆಯಿತ್ತು. MNC ಕಂಪೆನಿಗಳ ವಸ್ತುಗಳನ್ನೇ ನೆಚ್ಚಿಕೊಂಡು ಸ್ವದೇಶಿ ವಸ್ತುಗಳ ಬಳಕೆಯನ್ನೇ ಭಾರತೀಯರು ಮರೆತು ಹೋಗಿದ್ದರು.

ಅದಕ್ಕೆ ಕಾರಣ ಬಹುರಾಷ್ಟೀಯ ಕಂಪೆನಿಗಳ ಜಾಹೀರಾತುಗಳು, ಅವುಗಳ ಬಣ್ಣಬಣ್ಣದ ಮಾತುಗಳು.

ಸ್ವರ್ಗಾಧೀನರಾದ ಅಪ್ಪಟ ಸ್ವದೇಶೀ ದಿವಂಗತ ರಾಜೀವ್ ಭಾಯ್ ದೀಕ್ಷಿತರು ತಮ್ಮ ಜೀವಮಾನದ ಕೊನೆ ಗಳಿಗೆಯವರೆಗೂ ಸ್ವದೇಶೀ ವಸ್ತುಗಳ ಬಳಕೆಯ ಬಗ್ಗೆ ಭಾರತೀಯರಲ್ಲಿ ಜಾಗೃತಿ ಮೂಡಿಸಿ ತಮ್ಮ ಅಂತಿಮ ಪಯಣ ಮುಗಿಸಿಬಿಟ್ಟರು.

ಆದರೆ ಆ ಕಾರ್ಯವನ್ನು ಕೈಗೆತ್ತಿಕೊಂಡ ರಾಜೀವ್ ದೀಕ್ಷಿತರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಯೋಗ ಗುರು ಬಾಬಾ ರಾಮದೇವ್ ರಾಜೀವ್ ಭಾಯಿಯವರ ಕನಸನ್ನ ನನಸುಗೊಳಿಸಲು ಪತಂಜಲಿ ಎಂಬ ಸ್ವದೇಶೀ ಸಂಸ್ಥೆಯನ್ನೇ ಹುಟ್ಟು ಹಾಕಿದರು.

ಬಹುರಾಷ್ಟೀಯ ಕಂಪೆನಿಗಳು ಮೊದಮೊದಲು ಪತಂಜಲಿ ಪ್ರಾಡಕ್ಟ್ಸ್ ಎಂದರೆ “ಇದು ಎಲ್ಲಿ ನಾವಿರೋದೆಲ್ಲಿ” ಅಂತ ವ್ಯಂಗವಾಡಿದ್ದ ಕಾಲವದು ಆದರೆ ಈಗ ಕಾಲ ಬದಲಾಗಿದೆ, ಪತಂಜಲಿ ಭಾರತದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಜನರಿಗೀಗ ಚಿರಪರಿಚಿತ ಉತ್ಪನ್ನವಾಗಿದೆ.

ಪತಂಜಲಿಯಲ್ಲಿ ಈ ಪ್ರಾಡಕ್ಟ್ ಇಲ್ಲ ಅನ್ನುವಂತಿಲ್ಲ, ಪ್ರತಿಯೊಂದರಲ್ಲೂ ಶುದ್ಧತೆ, ಸ್ವದೇಶೀ ವಸ್ತುಗಳ ಬಳಕೆ, ದೇಸಿ ಗೋವುಗಳ ಹಾಲು, ತುಪ್ಪ, ಬೆಣ್ಣೆ, ಸಗಣಿ, ಗೋಮೂತ್ರ, ಧೂಪ ಹಿಡಿದು ಪ್ರತಿಯೊಂದೂ ಸ್ವದೇಶೀಯಾಗಿದೆ.

ಭಾರತದಲ್ಲಿ ನಂಬರ್ 1 ಸ್ಥಾನಕ್ಕೆ ಪತಂಜಲಿ ಆದಷ್ಟು ಬೇಗ ಮುಟ್ಟಲಿದ್ದು ಇದೀಗ ವಿದೇಶಿ ಕಂಪೆನಿಗಳ ಸೊಂಟವನ್ನ ಮುಕ್ಕಾಲು ಭಾಗ ಪತಂಜಲಿ ಮುರಿದಿದೆ.

ಈಗ ಬಹುರಾಷ್ಟೀಯ ಕಂಪೆನಿಗಳಿಗೆ ಪತಂಜಲಿ ಮತ್ತೊಂದು ಶಾಕ್ ಕೊಡೋಕೆ ಮುಂದಾಗಿದೆ.

ಪತಂಜಲಿ ಉತ್ಪನ್ನಗಳನ್ನು ಇನ್ನುಮುಂದೆ ಜನರು ಮನೇಲಿ ಕೂತಲ್ಲಿಯೇ ಪಡೆದುಕೊಳ್ಳುವ ವ್ಯವಸ್ಥೆಯನ್ನು ಪತಂಜಲಿ ಮಾಡಿದೆ.

ಬಾಬಾ ರಾಮದೇವ್ ರವರ ಪತಂಜಲಿ ಸಂಸ್ಥೆ ಇದೀಗ ಫ್ಲಿಪ್ ಕಾರ್ಟ್, ಅಮೆಜಾನ್, ಪೇ.ಟಿ.ಎಮ್, ಗ್ರೋಫರ್ಸ್, ಬಿಗಬಾಸ್ಕೇಟ್ ಸಮೇತ ಅನೇಕ ಕಂಪೆನಿಗಳ ಮೂಲಕ ಗ್ರಾಹಕರಿಗೆ ಮನೆಯಲ್ಲಿ ಕುಳಿತುಕೊಂಡೇ ಪತಂಜಲಿ ಉತ್ಪನ್ನಗಳನ್ನು ತರಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಈ ಕಂಪೆನಿಗಳಷ್ಟೇ ಅಲ್ಲದೇ ಶಾಪಕ್ಲೂಸ್, ನೆಟಮೆಡ್ಸ್ ಮೂಲಕವೂ ಆನಲೈನ್ ಮೂಲಕ ಪತಂಜಲಿ ಉತ್ಪನ್ನಗಳನ್ನ ಮಾರಾಟ ಮಾಡಲು ಬಾಬಾ ರಾಮದೇವ್ ಮುಂದಾಗಿದ್ದಾರೆ.

ದೆಹಲಿಯಲ್ಲಿ ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಇ-ಕಾಮರ್ಸ್ ಕಂಪನಿಗಳ ಜೊತೆ ಮಾಡಿಕೊಂಡ ಒಪ್ಪಂದದ ಬಗ್ಗೆ ಅಧಿಕೃತ ಮಾಹಿತಿಯನ್ನ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪತಂಜಲಿ ಸಂಸ್ಥೆಯ ಎಂ.ಡಿ ಆಚಾರ್ಯ ಬಾಲಕೃಷ್ಣರವರ ಸಮೇತ ಇ-ಕಾಮರ್ಸ್ ಕಂಪೆನಿಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ HDFC ವತಿಯಿಂದ ಮಾತನಾಡಿದ ಸ್ಮಿತಾ ಭಗತ್ ಆನಲೈನ್ ಮಾಧ್ಯಮದ ಮೂಲಕ ಪತಂಜಲಿ ಉತ್ಪನ್ನಗಳನ್ನ ಖರೀದಿಸುವವರಿಗೆ ಐದು ಪಟ್ಟು ಹೆಚ್ಚು ರಿವಾರ್ಡ್ ಜೊತೆ ಜೊತೆಗೆ ಕ್ಯಾಶಬ್ಯಾಕ್ ಆಫರ್ ಕೂಡ ನೀಡುವುದಾಗಿ ಹೇಳಿದ್ದಾರೆ.

ಆನಲೈನ್ ಮೂಲಕ ಹೇಗೆ ಪತಂಜಲಿ ಉತ್ಪನ್ನಗಳನ್ನ ಖರೀದಿಸಬಹುದು?

ಇದಕ್ಕಾಗಿ ನೀವು www.patanjaliayurved.net ವೆಬಸೈಟ್ ಗೆ ಭೇಟಿ ನೀಡಿ ನಿಮಗೆ ಬೇಕಾದ ಪತಂಜಲಿ ಉತ್ಪನ್ನಗಳನ್ನು ಮನೇಲಿ ಕೂತಲ್ಲಿಯೇ ಆರ್ಡರ್ ಮಾಡಬಹುದಾಗಿದೆ.

ಬಾಬಾ ರಾಮದೇವ್ ಈ ಕುರಿತು ಇನ್ನಷ್ಟು ಮಾಹಿತಿ ನೀಡಿದ್ದು:

ಮುಂದಿನ 50 ವರ್ಷಗಳ ಪ್ಲ್ಯಾನ್ ರೆಡಿ ಮಾಡಿಯೇ ಇ-ಕಾಮರ್ಸ್ ಗೆ ಕೈ ಹಾಕಿದ್ದು ಸಂಸ್ಥೆಗೆ ಬರುವ ಲಾಭದಲ್ಲಿ ಗೋಸೇವೆ, ಹಳ್ಳಿಗಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನ್ಯಾಚುರೋಪತಿಗಾಗಿ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮತ್ಯಾಕೆ ತಡ ನೀವೂ ಪತಂಜಲಿ ಉತ್ಪನ್ನಗಳನ್ನ ಆನಲೈನ್ ಮೂಲಕ ತರಿಸಿಕೊಂಡು ನಮ್ಮ ದೇಶದ ದುಡ್ಡನ್ನ ಬಹುರಾಷ್ಟೀಯ ಕಂಪೆನಿಗಳಿಂದ ಅನ್ಯದೇಶಗಳಿಗೆ ನೀಡುವ ಬದಲು ನಮ್ಮ ದೇಶಕ್ಕೇ ನೀಡಿ.

  •  
    5.6K
    Shares
  • 5.6K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com