Connect with us
Loading...
Loading...

ಪ್ರಚಲಿತ

ಮೋದಿ ಇಸ್ರೇಲಿಗೆ ಹೋಗಿ ಬಂದರು, ಬೆಂಜಮಿನ್ ಭಾರತಕ್ಕೆ ಬಂದರು!! ಮತ್ತಷ್ಟು ಬಲಿಷ್ಟವಾಯಿತು ಭಾರತ

Published

on

  •  
  •  
  •  
  •  
  •  
  •  
  •  
  •  

ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತಕ್ಕೆ ಬಂದು ಭಾರತೀಯರ ಆತಿಥ್ಯ ಸ್ವೀಕರಿಸಿದ್ದನ್ನು ಇಡೀ ವಿಶ್ವದ ರಾಷ್ಟ್ರಗಳು ತಮ್ಮ ಕ್ಯಾಮರಾವನ್ನು ಭಾರತದೆಡೆಗೆ ಬಿಟ್ಟು ನೋಡುತ್ತಲಿವೆ.

ಕಳೆದ ಬಾರಿ ಮೋದಿಯವರು ಇಸ್ರೇಲ್ ಗೆ ಭೇಟಿಕೊಟ್ಟದ್ದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿತ್ತು. ಭೇಟಿಯ ವೇಳೆ ಇಸ್ರೇಲ್ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಮೋದಿಯವರನ್ನು ತುಂಬಾ ಗೌರವದಿಂದ ಸತ್ಕರಿಸಿತ್ತು.

ಮೋದಿಜಿಯವರ ಭೇಟಿಯ ವೇಳೆ ಇಡೀ ಇಸ್ರೇಲ್ ಮಂತ್ರಿ ಮಂಡಲವೇ ವಿಮಾನ ನಿಲ್ದಾಣಕ್ಕೆ ಹೋಗಿ ಸತ್ಕರಿಸಿತ್ತು‌. ತದನಂತರ ಮೋದಿಯವರನ್ನು ಇಸ್ರೇಲ್ ತನ್ನ ದೇಶದ ಅತೀ ಸುರಕ್ಷತೆಯ ಸ್ಥಳದಲ್ಲಿ ಇರಿಸಿ ಗೌರವಿಸಿತ್ತು. ಬರೀ ಅಷ್ಟೇ ಅಲ್ಲ ಇಸ್ರೇಲಿಗರು ಬೆಳೆಯುವ ವಿಶೇಷವಾದ ಹೂವಿಗೆ ಮೋದಿಯವರ ಹೆಸರನ್ನಿಟ್ಟು ತನ್ನ ಮತ್ತು ಭಾರತದ ಗೆಳೆತನವನ್ನು ಸಾಬೀತು ಮಾಡಿತ್ತು.

ಈಗ ಇಸ್ರೇಲ್ ಪ್ರಧಾನಿ ಭಾರತಕ್ಕೆ ಆಗಮಿಸಿದ್ದು ಐತಿಹಾಸಿಕ ಘಟನೆಯಾಗಿದೆ. ಒಟ್ಟು ಆರು ದಿನಗಳ ಕಾಲ ಇಸ್ರೇಲ್ ಪ್ರಧಾನಿ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ 4 ದಿನ ಕಳೆದಿದೆ.
ಅಷ್ಟಕ್ಕೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಭಾರತಕ್ಕೆ ಸುಖಾಸುಮ್ಮನೆ ಬಂದಿಲ್ಲ. ಭಾರತದ ಜೊತೆ ಮತ್ತಷ್ಟು ಗಟ್ಟಿ ಸಂಭಂದವನ್ನು ಸಾಬೀತು ಮಾಡಲು ಬಂದಿದ್ದಾರೆ.

ಮೋದಿಯವರು ಇಸ್ರೇಲ್ ಗೆ ಹೋದಾಗ ಅವರು ಹೇಗೆ ಗೌರವದಿಂದ ಸತ್ಕರಿಸಿದ್ದರೋ ಅದೇ ರೀತಿಯಲ್ಲಿ ಇಸ್ರೇಲ್ ಪ್ರಧಾನಿ ಭಾರತಕ್ಕೆ ಆಗಮಿಸಿದಾಗ, ಪ್ರಧಾನಿ ಮೋದಿಯವರು ಹಾಗೆಯೇ ಸತ್ಕರಿಸಿದ್ದರು‌.

ಇಲ್ಲಿಗೆ ಇಸ್ರೇಲ್ ಪ್ರಧಾನಿ ನೇತನ್ಯಾಹು ಬರುತ್ತಿದ್ದಂತೆ ನಮ್ಮ ಪ್ರಧಾನಿಗಳಾದ ಮೋದಿಯವರು ಶಿಷ್ಟಾಚಾರವನ್ನು ಕಡೆಗಣಿಸಿ ಖುದ್ದು ತಾವೇ ವಿಮಾನ ನಿಲ್ದಾಣಕ್ಕೆ ಹೋಗಿ ಅವರನ್ನು ಗೌರವದಿಂದ ಆಗಮಿಸಿದ್ದರು. ಸ್ವಾಗತ ದೋಸ್ತ್ ಎಂದು ಆತ್ಮೀಯದಿಂದ ಕರೆದು ಗೌರವಿಸಿದ್ದರು.‌ಇದಕ್ಕೆ ಪ್ರತಿಯಾಗಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಶುಕ್ರಿಯಾ ದೋಸ್ತ್ ಎಂದಿದ್ದರು. ಹೀಗೆ ಆಗಮನದ ಚಿತ್ರಗಳು ಎಲ್ಲೆಡೆ ವೈರಲ್ ಆಗಿದ್ದವು.

ಪ್ರಧಾನಿ ಮೋದಿಯವರಿಗೂ ಮತ್ತು ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರ ನಡುವೆ ಅಷ್ಟೊಂದು ಸ್ನೇಹ ಏಕಿದೆ ಗೊತ್ತಾ?
ಇದು ಪ್ರಧಾನಿ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ದೋಸ್ತಿಯಲ್ಲ ಬದಲಿಗೆ ಇದು ಭಾರತ ಮತ್ತು ಇಸ್ರೇಲ್ ನ ದೋಸ್ತಿ. ವಿಶ್ವದಲ್ಲಿ ಭಾದತಕ್ಕೆ ಏನಾದರೂ ಆದರೆ ತತಕ್ಷಣ ನಮ್ಮ ನೆರವಿಗೆ ಬರುವ ರಾಷ್ಟ್ರ ಇಸ್ರೇಲ್. ಯಾಕೆ ಗೊತ್ತಾ?

ಹಿಂದೆ ವಿದೇಶಿಯರು ದಾಳಿ ಮಾಡಿ, ಇಸ್ರೇಲಿಗರನ್ನು ಅಲ್ಲಿಂದ ಓಡಿಸಿದಾಗ, ಜಗತ್ತಿನ ಯಾವ ರಾಷ್ಟ್ರಗಳೂ ಇಸ್ರೇಲಿಗರಿಗೆ ಜಾಗ ಕೊಟ್ಟಿರಲಿಲ್ಲ. ಆಗ ಭಾರತವೇ ಇಸ್ರೇಲಿಗರ ನೆರವಿಗೆ ಬಂದು ಭಾರತದಲ್ಲಿರುವಂತೆ ಮಾಡಿತ್ತು. ಹೀಗಾಗಿಯೇ ಇಸ್ರೇಲಿಗರು ಭಾರತವನ್ನು ತಮ್ಮ ಮಾತೃಭೂಮಿ ಮತ್ತು ಇಸ್ರೇಲ್ ನ್ನು ಧರ್ಮಭೂಮಿ ಎಂದು ಕರೆಯುತ್ತಾರೆ.

ಇಸ್ರೇಲ್ ಸುತ್ತಲೂ ವೈರಿಗಳಾಗಿ ಕ್ರೈಸ್ತ ಮತ್ತು ಮುಸಲ್ಮಾನ ರಾಷ್ಟ್ರಗಳಿದ್ದಾವೆ. ಹೀಗಾಗಿ ಇಲ್ಲಿಯವರೆಗೆ ಭಾರತದ ಪ್ರಧಾನಿ ಇಸ್ರೇಲಿಗೆ ಭೇಟಿ ಕೊಟ್ಟಿರಲಿಲ್ಲ. ಇಸ್ರೇಲ್ ಗೆ ಭೇಟಿ ಕೊಟ್ಟರೆ ಇಲ್ಲಿನ ಮುಸಲ್ಮಾನರಿಗೆ ಮತ್ತು ಕ್ರೈಸ್ತರಿಗೆ ಕೋಪ ಬರುತ್ತದೆ ಎಂಬ ಕಾರಣದಿಂದ. ಆದರೆ ಮೋದಿಯವರು ಇಸ್ರೇಲ್ ಗೆ ಭೇಟಿ ನೀಡಿ, ಐತಿಹಾಸಿಕ ಮುನ್ನುಡಿ ಬರೆದರು.

ಇಬ್ಬರೂ ಬಲಾಢ್ಯ ಪ್ರಧಾನಿಗಳ ಭೇಟಿಯ ವೇಳೆ ಒಟ್ಟು 9 ದ್ವಿಪಕ್ಷೀಯ ಒಪ್ಪಂದಗಳಾಗಿವೆ. ಇದರಿಂದ ಭಾರತ ಮತ್ತು ಇಸ್ರೇಲಿನ ಸಂಭಂದ ಇನ್ನಷ್ಟು ಗಟ್ಟಿಯಾಗಿದೆ. ಈ ಒಂಬತ್ತು ಒಪ್ಪಂದಗಳಲ್ಲಿ ಸೈಬರ್ ಭದ್ರತೆಯ ಒಪ್ಪಂದ ತುಂಬಾ ಮಹತ್ವದ್ದಾಗಿದೆ.

ಮುಂದೆ ಯುದ್ಧಗಳು ರಣರಂಗದಲ್ಲಿ ನಡೆಯೋದು ಕಡಿಮೆ ಬದಲಾಗಿ ಸೈಬರ್ ಯುದ್ಧಗಳು ನಡೆಯುತ್ತವೆ. ಚೀನಾ ಇಂತಹುದರಲ್ಲಿ ಎತ್ತಿದ ಕೈ. ಹೀಗಾಗಿಯೇ ಸೈಬರ್ ಒಪ್ಪಂದ ಮಹತ್ವದ್ದಾಗಿದೆ. ಇದೇ ಸಂದರ್ಭದಲ್ಲಿ ಕೃಷಿ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಪ್ಪಂದಗಳು ಆಗಿವೆ.

ಒಟ್ಟಿನಲ್ಲಿ ಭಾರತ ಮತ್ತು ಇಸ್ರೇಲ್ ನ ಗೆಳೆತನ ಮತ್ತಷ್ಟು ಗಟ್ಟಿಗೊಂಡಿದೆ.

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com