Connect with us
Loading...
Loading...

ಅಂಕಣ

ಯಾರು ಈ ಮಹಾನ್ ವ್ಯಕ್ತಿ?

Published

on

 • 5.2K
 •  
 •  
 •  
 •  
 •  
 •  
 •  
  5.2K
  Shares

ವಿಶ್ವದ 3 ನೇ ಪ್ರಸಿದ್ಧ ವ್ಯಕ್ತಿ, ಚೀನಾಕ್ಕೆ ಸೆಡ್ಡು ಹೊಡೆಯಬಲ್ಲ ವಿಶ್ವದ ಒಬ್ಬನೇ ಒಬ್ಬ ನಾಯಕ ಎನಿಸಿಕೊಂಡಿರುವ, ಭವ್ಯ ಭಾರತದ ಪುನರ್ನಿರ್ಮಾಣ ಮಾಡಲು ಬಂದಿರುವ ಅವತಾರಪುರುಷವೆಂದೇ ಜನ ಕರೆಯುವ ನಮ ದೇಶದ ಪ್ರಧಾನಿ ಮೋದಿಯವರು ಕೂಡಾ ಆ ಒಬ್ಬ ವ್ಯಕ್ತಿಗೆ ತಲೆ ಬಾಗುತ್ತಾರೆ.

ಅಷ್ಟಕ್ಕೂ ಆ ವ್ಯಕ್ತಿ ಯಾರು?

ಇದನ್ನು ತಿಳಿಯುವ ಮುನ್ನ ಮೋದಿಜಿಯು ವಿಶ್ವದಲ್ಲಿ ಯಾವ ಸ್ಥಾನದಲ್ಲಿದ್ದಾರೆಂದು ತಿಳಿದುಕೊಳ್ಳಿ.

ಮೋದಿಜೀಯವರು ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಮೋದಿಯವರ ವರ್ಚಸ್ಸು ಇಡೀ ಜಗತ್ತಿನಾದ್ಯಾಂತ ಹರಡಿದೆ. ಈಗ ಮೋದಿಜೀ ವಿಶ್ವದ ಮೂರನೇ ಪ್ರಸಿದ್ಧ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದು ಭಾರತೀಯರು ಹೆಮ್ಮೆ ಪಡುವ ವಿಷಯ. ರಾಜಕೀಯ ದೃಷ್ಟಿಯಲ್ಲಿ ನೋಡೋದು ಬೇಡ. ಇದು ದೇಶದ ಹೆಮ್ಮೆಯ ವಿಷಯ. ಇದನ್ನು ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದೆ‌.

ಆ ವರದಿಯ ಪ್ರಕಾರ ದೇಶದ 88% ಜನರು ಪ್ರಧಾನಿ ಮೋದಿಗೆ ಬೆಂಬಲವಾಗಿದ್ದಾರೆ ಎನ್ನಲಾಗಿದೆ.

ಜಗತ್ತಿನ ಖ್ಯಾತ ಅರ್ಥಶಾಸ್ತ್ರಜ್ಞರು, ನೊಬೆಲ್ ಪ್ರಶಸ್ತಿಪುರಸ್ಕೃತರು, ಮೂಡೀಸ್ ಸಂಸ್ಥೆಯ ವರದಿಗಳು ಮೋದಿಜೀಯ ವರ್ಚಸ್ಸು ಜಾಸ್ತಿಯಾಗಿದ್ದನ್ನು ಬಹಿರಂಗ ಪಡಿಸಿವೆ.

ಪ್ರಧಾನಿ ಮೋದಿಜೀಯ ವರ್ಚಸ್ಸು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ ಹೊರತು ಕಡಿಮೆಯಂತು ಆಗಿಲ್ಲ ಅಂತ ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಆಗ ಅಟಲ್ ಬಿಹಾರಿ ವಾಜಪೇಯಿ ವರ್ಚಸ್ಸು ಹೇಗಿತ್ತೋ ಹಾಗೆ ಈಗ ಮೋದಿಜೀಯವರ ವರ್ಚಸ್ಸು ಇದೆ. ವಿರೋಧ ಪಕ್ಷದವರ ಕಡೆಯಿಂದಲೂ ನಿಂದನೆಗೆ ಒಳಗಾಗದೇ, ಟೀಕಿಸಿಕೊಳ್ಳದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಅಜಾತ ಶತ್ರು ಕವಿ ಹೃದಯಿ ಅಟಲ್ ಬಿಹಾರಿ ವಾಜಪೇಯಿ.

ಅವರ ನಂತರ ಈ ದೇಶಕ್ಕೆ ಭಾರತಾಂಬೆ ಕೊಟ್ಟ ಒಳ್ಳೆಯ ವ್ಯಕ್ತಿತ್ವವೆಂದರೆ ಅದು ಪ್ರಧಾನಿ ನರೇಂದ್ರ ಮೋದಿಯವರು ಅಂದ್ರೆ ಅತಿಶಯೋಕ್ತಿ ಅನಿಸಲಿಕ್ಕಿಲ್ಲ.

ಮೋದಿಯವರನ್ನು ವಿರೋಧಿಗಳೂ ಹೊಗಳುವಂತಾಗಿದೆ!!

ಇತ್ತೀಚೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದ ಕಟ್ಟರ್ ಕಾಂಗ್ರೆಸ್ಸಿಗ ಲೋಕೇಶ್ ಚಂದ್ರ ಅವರು ಮೋದಿಯವರು ಗಾಂಧೀಜಿಗಿಂತಲೂ ಶ್ರೇಷ್ಠವೆಂದು ಹಾಡಿ ಹೊಗಳಿದ್ದಾರೆ.

ಒಬ್ಬ ಕಟ್ಟರ್ ಕಾಂಗ್ರೆಸ್ಸಿಗ ಅದು ಕೂಡಾ ಇಂದಿರಾಗಾಂಧಿಯವರ ಆಪ್ತ ಮೋದಿಯವರನ್ನು ಹಾಡಿ ಹೊಗಳಿದ್ದಾರೆಂದರೆ ನೀವೇ ಅಲೋಚಿಸಿ ಮೋದಿಯವರ ವರ್ಚಸ್ಸು ಕಡಿಮೆ ಆಗಿದೆಯೋ ಜಾಸ್ತಿ ಆಗಿದೆಯೋ ಅಂತ.

ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ಮ ಗಾಂಧೀಜಿಗಿಂತ ಶ್ರೇಷ್ಠ. ಬಡವರ ಜೀವನದಲ್ಲಿ ಕಾರ್ಲ್ ಮಾರ್ಕ್ಸ್ ಗಿಂತ ಹೆಚ್ಚು ಮೌಲ್ಯಯುತ ಪರಿಣಾಮವನ್ನು ಮೋದಿ ಬೀರಿದ್ದಾರೆ ಹಾಗೂ ಅವರು ಭಗವಂತನ ಅವತಾರವಿದ್ದಂತೆ ಎಂದು ಕಟ್ಟರ್ ಕಾಂಗ್ರೆಸ್ಸಿಗ ಲೋಕೇಶ್ ಚಂದ್ರ ಅವರು ಹಾಡಿ ಹೊಗಳಿದ್ದರು.

“ಚೀನಾದ ವಿರುದ್ಧ ಈ ತನಕ ಮತ್ತು ಈಗಲೂ ಎದೆ ಸೆಟೆದು ನಿಂತಿರುವ ವಿಶ್ವದ ಏಕೈಕ ಅಗ್ರ ರಾಜಕೀಯ ಮುತ್ಸದ್ದಿ ಎಂದರೆ ಅದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಎಂದು ಅಮೆರಿಕಾದ ಖ್ಯಾತ ತಜ್ಞ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಹೇಳಿದ್ದರು.

ಇದನ್ನೆಲ್ಲಾ ಗಮನಿಸಿದರೆ ತಾಯಿ ಭಾರತಮಾತೆಯೇ ಭಾರತವನ್ನು ವಿಶ್ವಗುರುವಾಗಿಸಲು ಮಹಾಪುರುಷನೊಬ್ಬನನ್ನು ಹೆತ್ತು ಕಳಿಸಿದ್ದಾಳೆ ಅನ್ನಿಸದೇ ಇರುವುದಿಲ್ಲ.

ಇಂತಹ ವಿಶ್ವದ 3ನೇ ಪ್ರಸಿದ್ಧ ವ್ಯಕ್ತಿ, ಚೀನಾಕ್ಕೆ ಸೆಡ್ಡು ಹೊಡೆಯಬಲ್ಲ ವಿಶ್ವದ ಒಬ್ಬನೇ ಒಬ್ಬ ನಾಯಕ ಎನಿಸಿಕೊಂಡಿರುವ, ಭಗವಾನನ ಅವತಾರವೆನಿಸಿಕೊಂಡಿರುವ ಪ್ರಧಾನಿ ಮೋದಿಯವರು ಕೂಡಾ ಆ ಒಬ್ಬ ವ್ಯಕ್ತಿಗೆ ತಲೆ ಬಾಗುತ್ತಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು ಗೊತ್ತಾ?

ಆ ಮಹಾಪುರುಷನ ಹೆಸರು ಸಾಂಭಾಜಿ ಭಿಡೆ ಗುರುಜಿ. ಇವರ ಒಂದು ಕರೆಗೆ ಇಡೀ ಮಹಾರಾಷ್ಟ್ರದ ಲಕ್ಷ ಲಕ್ಷ ಯುವಕರು ಪ್ರಾಣ ಕೊಡಲು ಸಿದ್ದರಾಗುತ್ತಾರೆ. ಇವರನ್ನು ಕಂಡರೆ ಸ್ವತಃ ಮೋದಿಯವರೇ ತಲೆ ಬಾಗುತ್ತಾರೆ.

ಅಷ್ಟೊಂದು ಗೌರವಿಸಲ್ಪಡುವ ಈ ವ್ಯಕ್ತಿಯ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು!!

ಸಾಂಭಾಜಿ ಭಿಡೆ ಗುರೂಜಿ ಅವರು ಹಿಂದುತ್ವದ ಪ್ರತಿಪಾದಕ, ಶಿವಾಜಿ ಮಹಾರಾಜರ ಪರಮಭಕ್ತ. ಈಗ ಅವರಿಗೆ 85 ವರ್ಷ ವಯಸ್ಸು. ಮೂಲತಃ ಮಹಾರಾಷ್ಟ್ರದವರು.

ಬೆಳೆದು ಬಂದ ಹಾದಿ ಅದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ. ಧೋತಿ ಉಟ್ಟು ಥೇಟ್ ರೈತ, ಏನೂ ಓದಿರದಂತೆ ಕಾಣುವ ಸಾಂಭಾಜಿ ಭಿಡೆ ಗುರುಜಿ ಅವರು ಪುಣೆ ವಿಶ್ವವಿದ್ಯಾಲಯದಿಂದ ಅಣು ವಿಜ್ಞಾನ (Nuclear Atomic Science) ದಲ್ಲಿ ಎಂಎಸ್ಸಿ ಪದವಿ ಹೊಂದಿ ಚಿನ್ನದ ಪದವನ್ನು ಪಡೆದಿದ್ದಾರೆ.

ಪದವಿಯ ನಂತರ ಪುಣೆಯ ಫೆರ್ಗುಸನ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.


ಫೋಟೋ ನೋಡಿ ಅವರು ನೋಡಲು ಏನೂ ಓದಿರದಂತೆ ಕಾಣುತ್ತಾರೆ.

1986ರಲ್ಲಿ ಶಿವಪ್ರತಿಷ್ಠಾನ ಹಿಂದುಸ್ತಾನ್’ ಸಂಘಟನೆಯನ್ನು ಪ್ರಾರಂಭಿಸಿ ತಮ್ಮ ಜೀವನವನ್ನು ಹಿಂದೂ ಸಮಾಜಕ್ಕಾಗಿ ಧಾರೆ ಎರೆದರು. ಒಬ್ಬ ಅಣುವಿಜ್ಞಾನಿಯಾದ ಇವರು ಮನಸ್ಸು ಮಾಡಿದ್ದರೆ ಕೋಟಿಗಟ್ಟಲೆ ಸಂಬಳ ತೆಗೆದುಕೊಂಡು ಕೆಲಸ ಮಾಡಬಹುದಾಗಿತ್ತು. ಆದರೆ ಆ ಮಹಾಪುರುಷ ತನ್ನ ಜೀವನವನ್ನು ಹಿಂದೂ ಸಮಾಜಕ್ಕೆ ಧಾರೆ ಎರೆದಿದ್ದಾರೆ.

ಇದೇ ಕಾರಣಕ್ಕಾಗಿಯೇ ಮೋದಿಯವರು ಆ ಮಹಾಪುರುಷನಿಗೆ ತಲೆ ಬಾಗಿಸಿ ಗೌರವಿಸುತ್ತಾರೆ. ಥೇಟ್ ಸನ್ಯಾಸಿಯಂತೆ ಇರುವ ಅವರು ಹಿಂದೂ ಸಮಾಜದ ಜಾಗೃತಿಗಾಗಿ ಊರೂರು ಸುತ್ತುತ್ತಾರೆ‌. ಅದು ಕೂಡಾ ಕಾರ್, ಬಸ್ ಗಳಲ್ಲಿ ಅಲ್ಲ. ಸೈಕಲ್ ತುಳಿದುಕೊಂಡೇ.‌ ಕಾಲಿಗೆ ಚಪ್ಪಲಿಯನ್ನು ಹಾಕಿಕೊಳ್ಳೋದಿಲ್ಲ. ಥೇಟ್ ಸನ್ಯಾಸಿಯಂತೆ ಇರ್ತಾರೆ‌.

ಒಬ್ಬ ಅಣುವಿಜ್ಞಾನಿಯಾದ ಸಂಭಾಜಿ ಬಿಡೆ ಗುರೂಜಿಯವರು ಹಿಂದೂ ಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇದೇ ಕಾರಣಕ್ಕಾಗಿಯೇ ಇವರ ಒಂದು ಕರೆಗೆ ಇಡೀ ಮಹಾರಾಷ್ಟ್ರದ ಲಕ್ಷ ಲಕ್ಷ ಯುವಕರು ಪ್ರಾಣ ಕೊಡಲು ಸಿದ್ದರಾಗುತ್ತಾರೆ. ಇದೇ ಕಾರಣಕ್ಕಾಗಿಯೇ ಮೋದಿಯವರು ತಲೆ ಬಾಗಿಸಿ ನಮಸ್ಕರಿಸಿ ಗೌರವಿಸುತ್ತಾರೆ.

– Nationalist Mahi

 •  
  5.2K
  Shares
 • 5.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com