Connect with us
Loading...
Loading...

ಪ್ರಚಲಿತ

ಯಾವುದೇ ಕಾರಣಕ್ಕೂ ತನ್ನ ಸಿದ್ಧಾಂತಗಳನ್ನು ಬಿಟ್ಟುಕೊಡುವುದಿಲ್ಲವೆಂದು ಸಾಬೀತು ಮಾಡಿದ ಹಿಂದೂ ಫೈರ್ ಬ್ರ್ಯಾಂಡ್!!

Published

on

 • 3K
 •  
 •  
 •  
 •  
 •  
 •  
 •  
  3K
  Shares

ಕರ್ನಾಟಕದ ಹಿಂದೂ ಫೈರ್ ಬ್ರ್ಯಾಂಡ್ ಎಂದಾಕ್ಷಣ ನೆನಪಿಗೆ ಬರುವವರು ಅನಂತ ಕುಮಾರ್ ಹೆಗ್ಡೆ. ಯಾವುದೇ ಮುಲಾಜಿಲ್ಲದೇ ದೇಶದ್ರೋಹಿಗಳನ್ನು ಅನಂತ ಕುಮಾರ್ ಹೆಗ್ಡೆಯವರು ಉಗಿದು ಉಪ್ಪು ಹಾಕುತ್ತಾರೆ. ಹಿಂದೂ ಧರ್ಮದ ಅಸ್ಮಿತೆಗೆ ಯಾರೇ ಧಕ್ಕೆ ತಂದರೂ ಅದನ್ನು ಅನಂತ ಕುಮಾರ್ ಹೆಗ್ಡೆಯವರು ಖಂಡಿಸುತ್ತಾರೆ.

ಕೆಲ ದಿನಗಳ ಹಿಂದೆ ಅನಂತ ಕುಮಾರ್ ಹೆಗ್ಡೆಯವರು ಸ್ವಯಂ ಘೋಷಿತ ಜಾತ್ಯಾತೀತರನ್ನು ಖಾರವಾಗಿ ಜಾಡಿಸಿದ್ದರು. ಅದಾದ ನಂತರ ಕೆಲ ವಾದ ವಿವಾದಗಳಾದವು. ಇದರಿಂದ ಅನಂತ ಕುಮಾರ್ ಹೆಗ್ಡೆಯವರು Silent ಆಗಿದ್ದಾರೆಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ಅನಂತ ಮತ್ತೊಮ್ಮೆ ಅನಂತ ಕುಮಾರ್ ಹೆಗ್ಡೆಯವರು ಸ್ವಯಂ ಘೋಷಿತ ಜಾತ್ಯಾತೀತರ ವಿರುದ್ಧ ಗುಡುಗಿದ್ದಾರೆ. ತಮ್ಮ ರಕ್ತದ ಪರಿಚಯವಿಲ್ಲದವರು ಮಾತ್ರ ಶೋಕಿಗಾಗಿ ಜಾತ್ಯಾತೀತತೆ ಹೆಸರು ಬಳಸುತ್ತಾರೆ ಎಂದು ಖಾರವಾಗಿ ಗುಡುಗಿದ್ದಾರೆ.

ಅಷ್ಟಕ್ಕೂ ಅನಂತ ಕುಮಾರ್ ಹೆಗ್ಡೆಯವರು ಎಲ್ಲಿ ಯಾಕೆ ಗುಡುಗಿದ್ದಾರೆ ಗೊತ್ತಾ?
ಸಿಡಿಲ ಸಂತ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಸಾಗರಲ್ಲಿ ಒಂದು ಕಾಯ್ರಕ್ರಮ ಏರ್ಪಾಟಾಗಿತ್ತು. ಆ ಕಾರ್ಯಕ್ರಮದಲ್ಲಿ ಹಿಂದೂ ಫೈರ್ ಬ್ರ್ಯಾಂಡ್ ಅನಂತ ಕುಮಾರ್ ಹೆಗ್ಡೆಯವರು ಪಾಲ್ಗೊಂಡಿದ್ದರು. ಆಗಲೇ ನೋಡಿ ಜಾತ್ಯಾತೀತರ ವಿರುದ್ಧ ಗುಡುಗಿದ್ದು.

ಅಷ್ಟಕ್ಕೂ ಅನಂತ ಕುಮಾರ್ ಹೆಗ್ಡೆಯವರು ಜಾತ್ಯಾತೀತರಿಗೆ ಏನೆಂದು ಝಾಡಿಸಿದ್ದಾರೆ ಗೊತ್ತಾ?

ಕೆಲ ತಲೆ ತಿರುಕರರಿಂದ ತಲೆ ತಲೆಬುಡವಿಲ್ಲದ ವಿಚಾರಗಳ ಹಾಗೂ ಸಿದ್ದಾಂತಗಳ ಮಂಡನೆಯಾಗುತ್ತಿದೆ. ಆ ತಲೆತಿರುಕರು ತಮ್ಮ ಟೊಳ್ಳು ವಿಚಾರಗಳ ಮತ್ತು ಸಿದ್ಧಾಂತಗಳ ಮಂಡನೆಗಾಗಿ ಕೆಲವೊಂದಿಷ್ಟು ಗ್ರಂಥಗಳನ್ನು ಬರೆಯುತ್ತಿದ್ದಾರೆ.

ನಾವು ಹಿಂದೂ ಧರ್ಮೀಯರು. ಮೂರ್ತಿ ಪೂಜೆಯಲ್ಲಿ ನಂಬಿಕೆ ಇಟ್ಟವರು. ಹೀಗಾಗಿ ನಮಗೆ ಈಶ್ವರ ಲಿಂಗದಲ್ಲಿ ಈಶ್ವರ ಕಾಣುತ್ತಾನೆ. ಭಗವಂತನ ರೂಪದಲ್ಲಿ ನಮಗೆ ಈ ಈಶ್ವರ ಲಿಂಗ ಕಾಣುತ್ತದೆ. ಅದರೆ ಕೆಲ ಅಡ್ನಾಡಿಗಳಿಗೆ ಈಶ್ವರ ಲಿಂಗ ಬರೀ ಕಲ್ಲಿನಂತೆ ಕಾಣುತ್ತದೆ.

ನಾ ಕೊಟ್ಟ ಹೇಳಿಕೆಯಿಂದ ಕೆಲವರ ಚೆಡ್ಡಿಗೆ ಬೆಂಕಿ ಬೀಳುತ್ತಿದೆ. ಆದರೆ ನಾನು ನನ್ನ ಸಿದ್ಧಾಂತವನ್ನು ಯಾವುದೇ ಕಾರಣಕ್ಕೂ ಬಿಡುವವನಲ್ಲ. ಶಿಕ್ಷಣವೆಂದರೆ ಅದು ಕಾಲೇಜಿನಲ್ಲಿ ಸಿಗುವುದೇ ಎಂದು ಎಲ್ಲರೂ ಭಾವಿಸಿದ್ದಾರೆ. ಜಾತ್ಯಾತೀತವೆಂಬುದು ಶೋಕಿ ಆಗಿದೆ.

ಶೋಕಿಗಾಗಿ ಕೆಲವರು ಜಾತ್ಯಾತೀತಯ ಬಗ್ಗೆ ಮಾತನಾಡುತ್ತಾರೆ. ಅಸಲಿಗೆ ಹಿಂದುಗಳಿಗೆ ಜಾತ್ಯಾತೀತದ ಪಾಠದ ಅವಶ್ಯಕತೆಯೇ ಇಲ್ಲ. ಆದರೆ ನಮಗೆ ಜಾತ್ಯಾತೀತದ ಪಾಠವನ್ನು ಹೇಳಿಕೊಡಲು ಬರುತ್ತಾರೆ‌. ನಾವು ನಮ್ಮ ರಕ್ತದ ಗುರುತನ್ನ ಮರೆಯುತ್ತಿದ್ದೇವೆ. ಯಾರೋ ಕೊಟ್ಟಿರುವ ಸೀಲನ್ನು ಹಣೆಯ ಮೇಲೆ ಹೊತ್ತು ತಿರುಗುತ್ತಿದ್ದೇವೆ. ಇದನ್ನ ಹೇಗೆ ಸ್ವೀಕರಿಸಬೇಕು ಎಂದು ಯೋಚಿಸುವ ಸಮಯ ಬಂದಿದೆ” ಎಂದು ಸಿಡಿಲ ಸಂತ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಸಾಗರಲ್ಲಿ ಒಂದು ಕಾಯ್ರಕ್ರಮದಲ್ಲಿ ಅನಂತ ಕುಮಾರ್ ಹೆಗ್ಡೆಯವರು ಹೇಳಿದ್ದಾರೆ.

ಅನಂತ ಕುಮಾರ್ ಹೆಗ್ಡೆಯವರು ಹಿಂದುತ್ವದ ಹೋರಾಟಗಳಲ್ಲಿ ಸದಾ ಮುಂದಿರುವ ವ್ಯಕ್ತಿ. ಬರೀ ಭಾಷಣ ಅಲ್ಲಾ. ಕೆಲವರಿಗೆ ಭಾಷಣ ಅಂದರೆ ನೀರು ಕುಡಿದಷ್ಟು ಸಲೀಸು ಆದರೆ ಇವರು ಕೆಳ ಸ್ಥರದಲ್ಲಿ ಕಾರ್ಯಕರ್ತರ ಜೊತೆ ಲಾಠಿ ಏಟು ನೂರಾರು ಕೇಸು ಕೋರ್ಟು ಅಂತ ಸಮಾಜಕ್ಕಾಗಿ ತ್ಯಾಗ ಮಾಡಿದವರು. ಇತ್ತೀಚೆಗೆ ಜಾತ್ಯಾತೀತರು ಇವರ ತೇಜೊವಧೆ ಮಾಡಲು ಪ್ರಯತ್ನಿಸಿದ್ದರು.

ಆ ಪ್ರಯತ್ನದಿಂದ ಅನಂತ ಕುಮಾರ್ ಹೆಗ್ಡೆಯವರ ಬಾಯಿಗೆ ಬೀಗ ಬೀಳುತ್ತದೆ ಎಂದೇ ಭಾವಿಸಿದ್ದರು. ಆದರೆ ಅನಂತ ಕುಮಾರ್ ಹೆಗ್ಡೆ ತಮ ಸಿದ್ಧಾಂತವನ್ನು ಯಾವತ್ತೂ, ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲವೆಂದು ಸಾಬೀತು ಮಾಡಿದ್ದಾರೆ.

ಇದೇ ಸಿದ್ದಾಂತಗಳಿಂದಲೇ ಹಿಂದುತ್ವದ ರಕ್ಷಕನಾಗಿ ಅನಂತ ಕುಮಾರ್ ಹೆಗ್ಡೆಯವರು ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿಯೇ ನಮ್ಮ ಪ್ರಧಾನಿಯವರು ಅನಂತ ಕುಮಾರ್ ಹೆಗಡೆಯವರಿಗೆ ಮಂತ್ರಿಗಿರಿಯನ್ನು ಕೊಟ್ಟಿರೋದು.

ಒಟ್ಟಿನಲ್ಲಿ ಅನಂತ ಕುಮಾರ್ ಹೆಗ್ಡೆಯವರು ತಮ್ಮ ಸಿದ್ಧಾಂತಕ್ಕೆ ಕಟಿಬದ್ದರಾಗಿದ್ದಾರೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

 •  
  3K
  Shares
 • 3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com