Connect with us
Loading...
Loading...

ಪ್ರಚಲಿತ

ರದ್ದಾದ ಹಜ್ ಸಬ್ಸೀಡಿ ಹಣವನ್ನ ಮೋದಿಜೀ ಈ ಕಾರ್ಯಕ್ಕೆ ಬಳಸಲಿದ್ದಾರೆ!!!

Published

on

  • 2.3K
  •  
  •  
  •  
  •  
  •  
  •  
  •  
    2.3K
    Shares

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹಜ್ ಸಬ್ಸಿಡಿಯನ್ನು 2018 ರಿಂದ ನಿಲ್ಲಿಸುವ ಪ್ರಸ್ತಾವನೆಯನ್ನು ಮೋದಿ ಸರಕಾರ ಮಾಡಿತ್ತು. ಈಗ ಆ ಪ್ರಸ್ತಾವನೆಯಂತೆ ಹಜ್ ಸಬ್ಸೀಡಿಯನ್ನು ಬ್ಯಾನ್ ಮಾಡುವ ದೃಢ ನಿರ್ಧಾರವನ್ನು ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ.

ತ್ರಿವಳಿ ತಲಾಖ್ ನಿಷೇಧ ಆಗಿದ್ದು ಐತಿಹಾಸಿಕವೇ ಆಗಿತ್ತು. ಈಗ ಮತ್ತೊಂದು ಐತಿಹಾಸಿಕ ನಿರ್ಧಾರವನ್ನು ಮೋದಿಯವರ ಸರ್ಕಾರ ತೆಗೆದುಕೊಂಡಿದೆ.

ತ್ರಿವಳಿ ತಲಾಕ್ ನಿಷೇಧದ ನಂತರ ಮೋದಿ ಸರಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ ಇದಾಗಿದ್ದು ಐತಿಹಾಸಿಕ ನಿರ್ಧಾರವಾಗುವುದು ಖಚಿತವಾಗಿದೆ.

ಕೇಂದ್ರ ಸರ್ಕಾರ 2018 ರಿಂದ ಹಜ್ ಸಹಾಯಧನ ರದ್ದು ಮಾಡಲು ತಯಾರಾಗಿದೆ. ಕೇಂದ್ರ ಸರ್ಕಾರ ಹಜ್ ಯಾತ್ರೆಗೆ ಸಂಬಂಧಿಸಿದ ಕರಡು ನೀತಿಯನ್ನು ಸಿದ್ಧಪಡಿಸಿತ್ತು. ಆ ಕರಡು ನೀತಿಯಲ್ಲಿ ಮುಸಲ್ಮಾನ ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಗೊಳಿಸುವ ಕುರಿತ ಮಾಹಿತಿಯನ್ನು ಕರಡು ಸಮಿತಿ ಬಹಿರಂಗ ಪಡಿಸಿತ್ತು‌.

2017 ಅಕ್ಟೋಬರ್ ತಿಂಗಳಿನಲ್ಲಿ ಸಿದ್ಧಗೊಂಡಿರುವ ಕರಡು ನೀತಿಯಲ್ಲಿನ ಮುಖ್ಯ ಶಿಪಾರಸ್ಸುಗಳು ಕೆಳಗಿನಂತೆ ಮಂಡಿಸಿದ್ದರು.

* ಹಜ್ ಸಬ್ಸಿಡಿ ರದ್ದು.

* 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ನಾಲ್ವರ ತಂಡದೊಂದಿಗೆ ಯಾತ್ರೆ ಕೈಗೊಳ್ಳಬಹುದು.

* 45 ವರ್ಷ ಕ್ಕೆ ಕಡಿಮೆ ವಯಸ್ಸಿನವರು ತಮ್ಮ ಕುಟುಂಬ ವರ್ಗದೊಡನೆ ಯಾತ್ರೆ ಮಾಡಬೇಕು.

* ನಿಗದಿತ ವಿಮಾನ ನಿಲ್ದಾಣಗಳನ್ನು 21ರಿಂದ 9ಕ್ಕೆ ಇಳಿಸುವುದು.

* ಸಬ್ಸಿಡಿ ರದ್ದಿನಿಂದ ಉಳಿದ ಹಣವನ್ನು ಮುಸ್ಲಿಮರ ಶೈಕ್ಷಣಿಕ ಸಬಲೀಕರಣಕ್ಕೆ ಬಳಸಿಕೊಳ್ಳುವುದು.

* ಮುಂದಿನ 5 ವರ್ಷಗಳ ಕಾಲ ಹಜ್ ಕಮಿಟಿ ಮತ್ತು ಖಾಸಗಿ ಸಂಸ್ಥೆಗಳ ಹಜ್ ಕೋಟಾ 70:30ರ ಅನುಪಾತದಲ್ಲಿ ಹಂಚಿಕೆ.

* ಪ್ರಯಾಣದ ವೆಚ್ಚ ತಗ್ಗಿಸುವ ಸಲುವಾಗಿ ಯಾತ್ರಿಗಳನ್ನು ಹಡಗಿನಲ್ಲಿ ಕಳಿಸುವ ಕುರಿತು ಸೌದಿ ಸರ್ಕಾರದೊಡನೆ ಮಾತುಕತೆ.

ಇಲ್ಲಿ ಇನ್ನೊಂದು ಮುಖ್ಯ ವಿಷಯವನ್ನು ಹೇಳಲೇಬೇಕು. ಅದೇನೆಂದರೆ ಈ ಕರುಡು ನೀತಿಯನ್ನ ಸಿದ್ಧಪಡಿಸಿದ್ದವರು ಹಿಂದುಗಳಲ್ಲ ಬದಲಿಗೆ ಮುಸಲ್ಮಾನ ನಾಯಕರು. ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ನೇತೃತ್ವದ ಸಮಿತಿ ಈ ಕರಡು ನೀತಿಯನ್ನು ರಚಿಸಿದ್ದರು.

ಆ ಕರುಡು ರಚನೆಯ ಹಿನ್ನಲೆಯಲ್ಲಿ ಪ್ರಸ್ತುತ ವರ್ಷದಿಂದ ಮೋದಿ ಸರಕಾರದಿಂದ ಹಜ್ ಸಬ್ಸಿಡಿ ಸೌಲಭ್ಯ ಇನ್ನು ಸಂಪೂರ್ಣವಾಗಿ ನಿಲ್ಲಲಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಎಂದು ಖಚಿತಪಡಿಸಿದ‌್ದಾರೆ!

ಮುಸಲ್ಮಾನರೇ ಈ ಹಜ್ ಸಬ್ಸೀಡಿ ನಿಷೇಧಕ್ಕೆ ಬೆಂಬಲ ಕೊಟ್ಟಿದ್ದಾರೆ. ಅಷ್ಟಕ್ಕೂ ಮುಸಲ್ಮಾನರೇ ಈ ಹಜ್ ಸಬ್ಸೀಡಿ ನಿಷೇಧಕ್ಕೆ ಯಾಕೆ ಬೆಂಬಲ ಕೊಟ್ಟಿದ್ದಾರೆ ಗೊತ್ತಾ?

ಹಜ್ ಯಾತ್ರೆಯೆಂಬುದು ಪವಿತ್ರ ಯಾತ್ರೆ! ಅಂತಹ ಘನತೆಯ ಯಾತ್ರೆಯನ್ನು ಯಾವುದೇ ಕಾರಣಕ್ಕೂ ಸಬ್ಸಿಡಿಯ ಹಣದಲ್ಲಿ ಮಾಡಬಾರದು. ‘ಹಜ್ ಯಾತ್ರೆ’ಗೆ ಅದರದ್ದೇ ಆದ ಮಹತ್ವವಿದೆ!

ಒಬ್ಬ ಮುಸಲ್ಮಾನ ತಾನು ದುಡಿದ ಹಣದಲ್ಲಿಯೇ ಯಾತ್ರೆಯನ್ನು ಮುಗಿಸಬೇಕೇ ವಿನಃ ಯಾವುದೇ ರೀತಿಯಾದ ಸಹಾಯವನ್ನೂ ಆತ ಪಡೆದುಕೊಳ್ಳುವಂತಿಲ್ಲ. ಹೀಗಾಗಿಯೇ ಮುಸಲ್ಮಾನರು ಹಜ್ ಸಬ್ಸೀಡಿ ನಿಷೇಧಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.

ಪ್ರತಿವರ್ಷ ಹಜ್ ಸಬ್ಸೀಡಿಗಾಗಿ ಸರ್ಕಾರ ಎಷ್ಟು ಹಣ ಖರ್ಚು ಮಾಡ್ತಿತ್ತು ಗೊತ್ತೆ?

ಬರೋಬ್ಬರಿ 750 ಕೋಟಿ ರೂಪಾಯಿಗಳನ್ನು ಸರ್ಕಾರ ಹಜ್ ಸಬ್ಸಿಡಿಗಾಗಿ ಖರ್ಚು ಮಾಡುತ್ತಿತ್ತು. ಆದರೆ 750 ಕೋಟಿ ರೂಪಾಯಿ ಸಮಂಜಸವಾಗಿ ಬಳಕೆಯಾಗುತ್ತಿರಲಿಲ್ಲ. ಬದಲಿಗೆ ಸಬ್ಸೀಡಿ ಏಜೆಂಟ್ ಗಳು ತಿಂದು ತೇಗುತ್ತಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಬ್ಯಾನ್ ಆದ ಹಜ್ ಸಬ್ಸೀಡಿ ಹಣವನ್ನ ಮೋದಿಜಿಯವರ ಸರ್ಕಾರ ಯಾವ ಕಾರ್ಯಕ್ಕೆ ಬಳಸಲಿದ್ದಾರೆ ಗೊತ್ತಾ?

ಕರುಡು ಸಮಿತಿಯ ರಚನೆಯಂತೆ ಹಜ್ ಸಬ್ಸಿಡಿಯ ಬದಲಾಗಿ, ಆ ಹಣವನ್ನು ಮುಸಲ್ಮಾನ ಹೆಣ್ಣುಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಯ ಸಲುವಾಗಿ ಮೋದಿಜಿಯವರ ಸರ್ಕಾರ ವಿನಿಯೋಗ ಮಾಡಲಿದೆ. ಕೇಂದ್ರದ ಈ ದೃಢ ನಿರ್ಧಾರವನ್ನು ಸಚಿವ ರೋಷನ್ ಬೇಗ್ ಅವರು ಸ್ವಾಗತಿಸಿದ್ದಾರೆ.

ಅಸಲಿಗೆ ಹಜ್ ಸಬ್ಸೀಡಿ ಅನ್ನೋದು ಕಟ್ಟರ್ ಮುಸಲ್ಮಾನ್ ರಾಷ್ಟ್ರಗಳಲ್ಲಿಯೇ ಇಲ್ಲ. ಯಾಕಂದ್ರ ಹಜ್ ಯಾತ್ರೆ’ಗೆ ಅದರದ್ದೇ ಆದ ಮಹತ್ವವಿದೆ! ಒಬ್ಬ ಮುಸಲ್ಮಾನ ತಾನು ದುಡಿದ ಹಣದಲ್ಲಿಯೇ ಯಾತ್ರೆಯನ್ನು ಮುಗಿಸಬೇಕೇ ವಿನಃ ಯಾವುದೇ ರೀತಿಯಾದ ಸಹಾಯವನ್ನೂ ಆತ ಪಡೆದುಕೊಳ್ಳುವಂತಿಲ್ಲ.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿರುವಂತೆ ಸುಪ್ರೀಂ ಕೋರ್ಟ್ 2012 ರಲ್ಲಿ ಹಜ್ ಯಾತ್ರಿಗಳ ಸಬ್ಸಿಡಿಯನ್ನು ಸ್ವಲ್ಪ ಪ್ರಮಾಣದಲ್ಲೇ ಇಳಿಸಿತ್ತು. ಹಾಗೂ 2022ರೊಳಗೆ ಸಂಪೂರ್ಣವಾಗಿ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಸುಪ್ರೀಂ ಕೋರ್ಟಿನ ಆದೇಶದಂತೆ, ಕರುಡು ಸಮಿತಿಯ ರಚನೆಯನೆಯಂತೆ, ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ವ್ಯವಸ್ಥೆಯ ಸಲುವಾಗಿ ಈಗ ದೃಢ ನಿರ್ಧಾರವನ್ನು ಮೋದೀಜಿಯವರ ಸರ್ಕಾರ ಕೈಗೊಂಡಿದೆ.

– Nationalist Mahi

  •  
    2.3K
    Shares
  • 2.3K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com