Connect with us
Loading...
Loading...

ಪ್ರಚಲಿತ

“ರಾಜ್ಯಸರ್ಕಾರಕ್ಕೆ ಮೆದುಳೇ ಇಲ್ಲ” ಎಂದು ಸಿದ್ದರಾಮಯ್ಯನವರ ಸರ್ಕಾರಕ್ಕೆ ಮತ್ತೆ ಹೈಕೋರ್ಟ್ ತರಾಟೆ!! ಯಾಕೆ ಗೊತ್ತಾ?

Published

on

 • 1.9K
 •  
 •  
 •  
 •  
 •  
 •  
 •  
  1.9K
  Shares

ಸಿದ್ದರಾಮಯ್ಯನವರ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸುತ್ತಲೇ ಬರುತ್ತಿದೆ.

ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ, ಕೋಮು ಸಾಮರಸ್ಯ ಯಕ್ಕುಟ್ಟು ಹೋಗಿದೆ, ಬೀದಿಬೀದಿಗಳಲ್ಲಿ ಹಾಡುಹಗಲೇ ರಾಜಾರೋಷವಾಗಿ ಹೆಣಗಳು ಉರುಳುತ್ತಿವೆ.

ಆದರೂ ರಾಜ್ಯ ಸರ್ಕಾರ ಮಾತ್ರ ಅದ್ಯಾಕೋ ಕಣ್ಣುಮುಚ್ಚಿಯೇ ಕುಳಿತಯಕೊಂಡಿದೆ ಅನಿಸುತ್ತೆ. ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಬೇಕಾಬಿಟ್ಟಿಯಾಗಿ ನಡೀತಿದೆ, ಹಿಂದೂ ಸಂಘಟನೆಯ ಕಾರ್ಯಕರ್ತರ ಕಗ್ಗೊಲೆಗಳಾಗುತ್ತಿವೆ, ಇಲ್ಲಿಯವರೆಗೂ ಮೂರು ಸಾವಿರ ಗಡಿ ದಾಟಿದ ಸಾಲು ಸಾಲು ರೈತರು ಆತ್ಮಹತ್ಯೆಗಳು, ದಲಿತರ ಮೇಲಿನ ದೌರ್ಜನ್ಯ, ಮಹಿಳಾ ಅಧಿಕಾರಿಗಳಿಗೆ ಕಿರುಕುಳ, ಅಬ್ಬಾ ಹೇಳುತ್ತ ಹೋದರೆ ಒಂದಾ ಎರಡಾ…

ಸರ್ಕಾರದ ಅಧಿಕಾರಿಗಳೇ ರಾಜ್ಯದಲ್ಲಿ ಸೇಫ್ ಇಲ್ಲದಿರುವಾಗ ಇನ್ನು ರಾಜ್ಯದ ಸಾಮಾನ್ಯ ಪ್ರಜೆಯ ಗತಿಯೇನು? ರಾಜ್ಯದ ಜನತೆ ಭಯದಲ್ಲಿ ಬದುಕುವ ಪರಿಸ್ಥಿತಿ ಕರ್ನಾಟಕದಲ್ಲಿ ಎದುರಾಗಿದೆ.

ಇದರ ಮಧ್ಯೆ ಸಿದ್ದರಾಮಯ್ಯನವರ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಚಾಟಿಯೇಟು ಬೀಸಿದೆ.

“ರಾಜ್ಯಸರ್ಕಾರಕ್ಕೆ ಮೆದುಳೇ ಇಲ್ಲ” ಎಂದು ಸಿದ್ದರಾಮಯ್ಯನವರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ!

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಅವಾಸ್ತವಿಕ ಹಾಗೂ ಅವೈಜ್ಞಾನಿಕ ಮರಳು ಹರಾಜು ನೀತಿ ಬಗ್ಗೆ ಹೈಕೋರ್ಟ್‌ ಮಂಗಳವಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

“ಇಂದಿರಾ ಕ್ಯಾಂಟೀನ್‌, ಪಡಿತರ ಧಾನ್ಯಗಳನ್ನು ಹೇಗೆ ಡಿಪೊಗಳ ಮಾದರಿಯಲ್ಲಿ ಸರಬರಾಜು ಮಾಡುತ್ತೀರೋ ಅದೇ ಮಾದರಿಯಲ್ಲಿ ಮರಳು ಡಿಪೊಗಳನ್ನು ತೆರೆದು ಮರಳು ಸರಬರಾಜು ಮಾಡಿದರೆ ಸಮಸ್ಯೆಗಳು ಇರುವುದಿಲ್ಲ” ಎಂದೂ ಸರಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.

ಬೇಕಾಬಿಟ್ಟಿ ಮರಳು ಹರಾಜು ಮಾಡುತ್ತಿರುವ ರಾಜ್ಯ ಸರ್ಕಾರದಿಂದ ಕಂಗೆಟ್ಟ ಹಾವೇರಿಯ ವನಜಾಕ್ಷಿ ಎಂಬುವವರು ಹೈಕೋರ್ಟಗೆ ಅರ್ಜಿಯೊಂದನ್ನ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ರಾಜ್ಯಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದೆ

ಪ್ರಕರಣ ಬೆಳಗ್ಗೆ ವಿಚಾರಣೆಗೆ ಬಂದಾಗ ಅಧಿಕಾರಿಗಳು ಮತ್ತು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠ, ಸಂಜೆ ವೇಳೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ‍್ಯದರ್ಶಿಯನ್ನು ಖುದ್ದು ಹಾಜರಾಗುವಂತೆ ಸೂಚಿಸಿ ವಿಚಾರಣೆ ಮುಂದೂಡಿತ್ತು.

ಸಂಜೆ ಮತ್ತೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ‍್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾರನ್ನ ಕುರಿತು

”ಇಂತಹ ಮರಳು ನೀತಿಯನ್ನು ಯಾವ ದೇಶದಲ್ಲಾದರೂ ಕಂಡಿದ್ದೀರಾ? ಹರಾಜಿನಲ್ಲಿ ಮರಳನ್ನು ಜಾಸ್ತಿ ದುಡ್ಡಿಗೆ ಕೂಗಿದರೂ ಅದನ್ನು ಸ್ವೀಕರಿಸಲು ನಿಮಗೇನು ಅಡ್ಡಿ? ದಿನಕ್ಕೆ ನೂರಾರು ಜನ ಮರಳು ನೀತಿಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರುತ್ತಿದ್ದಾರೆ. ಮೊದಲು ನಿಮ್ಮ ಹರಾಜು ನೀತಿಯನ್ನು ಸರಿಪಡಿಸಿ,” ಎಂದು ತರಾಟಗೆ ತೆಗೆದುಕೊಂಡಿದೆ.

”ಹೆಚ್ಚು ಹಣ ಕೊಡ್ತೀವಿ ಅಂದರೂ ಟೆಂಡರ್ ಯಾಕೆ ಕ್ಯಾನ್ಸಲ್ ಮಾಡ್ತಿದೀರಾ? ನಾವಂತೂ ಇಂತಹ ಮರಳು ನೀತಿಯನ್ನು ಕಂಡಿಲ್ಲ. ಇದು ವಾಸ್ತವಿಕವಾದುದಲ್ಲ, ಜಾರಿಗೆ ಸಾಧ್ಯವಿಲ್ಲ. ಏಕಪಕ್ಷೀಯವಾಗಿದೆ.”ಎಂದೂ ನ್ಯಾಯಪೀಠ ಹೇಳಿದೆ.

”ಎಲ್ಲರಿಗೂ ಮರಳು ಸಿಗಬೇಕೆಂದಿದ್ದರೆ ಮೊದಲು ನಿಮ್ಮ ನೀತಿಯನ್ನು ಬದಲಾಯಿಸಿ. ಇಂದಿರಾ ಕ್ಯಾಂಟೀನ್‌, ಇಲ್ಲವೇ ಪಡಿತರ ಧಾನ್ಯಗಳ ರೀತಿ ಮರಳು ಹಂಚಿ,” ಎಂದು ನ್ಯಾಯಪೀಠ ಹೇಳಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಈ ಮಧ್ಯೆ ಸಮರ್ಥನೆ ನೀಡಲು ಮುಂದಾದ ರಾಜೇಂದ್ರ ಕುಮಾರ್ ಕಟಿಯಾರ್ ಗೆ ಹೈಕೋರ್ಟ್ ”ನೀವು ನೇರವಾಗಿ ಏನೂ ಕೋರ್ಟ್‌ಗೆ ಹೇಳಲು ಬರಬೇಡಿ. ಏನೇ ಇದ್ದರೂ ಸರಕಾರಿ ವಕೀಲರ ಮೂಲಕ ತಿಳಿಸಿ,” ಎಂದು ಅವರ ಬಾಯಿಮುಚ್ಚಿಸಿತು.

ಏನಪ್ಪಾ ಈ ಸರ್ಕಾರದ ನೀತಿಗಳು? ಹೈಕೋರ್ಟ್ ಮೇಲಿಂದ ಮೇಲೆ ಛೀಮಾರಿ ಹಾಕುತ್ತಿದೆ, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಹೋಗಿದೆ. ಎಗ್ಗಿಲ್ಲದೆ ನಡು ಬೀದಿಗಳಲ್ಲಿ ಹೆಣಗಳು ಉರುಳುತ್ತಿವೆ. ಇಷ್ಟಾದರೂ ರಾಜ್ಯ ಸರ್ಕಾರ ಮಾತ್ರ ನಿದ್ದೆಯಿಂದೇಳಲು ತಯಾರಿಲ್ಲ.

ಈ ಮಧ್ಯೆ ಸಿದ್ದರಾಮಯ್ಯನವರ ನಿದ್ದೆ ಪುರಾಣ ಬರೀ ಕರ್ನಾಟಕಕ್ಕಷ್ಟೇ ಗೊತ್ತಿದೆಯೆಂದು ನಾವೆಲ್ಲಾ ಅಂದುಕೊಂಡಿದ್ದೆವು ಆದರೆ ಹೋದಲ್ಲಿ ಬಂದಲ್ಲೆಲ್ಲಾ ನಿದ್ದೆಗೆ ಜಾರುವ ಸಿದ್ದರಾಮಯ್ಯನವರ ನಿದ್ರಾಪುರಾಣ ಪಕ್ಕದ ರಾಜ್ಯದ ತೆಲಂಗಾಣಕ್ಕೂ ಗೊತ್ತಾಗಿಬಿಟ್ಟಿದೆ.

ತೆಲುಗಿನ ಖಾಸಗಿ ನ್ಯೂಸ್ ಚಾನೆಲ್ ಒಂದು ಸಿದ್ದರಾಮಯ್ಯನವರು ಕಾರ್ಯಕ್ರಮಗಳಲ್ಲೆಲ್ಲಾ ಗಡತ್ತಾಗಿ ನಿದ್ದೆಗೆ ಜಾರಿಬಿಡುತ್ತಾರೆ ಎಂದು ಸುದ್ದಿ ಪ್ರಸಾರ ಮಾಡಿದೆ.

ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿಬಿಟ್ಟಿದೆ.

ಈಗಲಾದರೂ ಎದ್ದೇಳಿ ಸಿದ್ದರಾಮಯ್ಯನವರೇ!!!

 •  
  1.9K
  Shares
 • 1.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com