Connect with us
Loading...
Loading...

ಪ್ರಚಲಿತ

ವಿಜ್ಞಾನಿ ಆಗಬೇಕೆಂದಿದ್ದವರು ನಟರಾದರು. ಆ ಮೇರು ನಟ, ನಿರ್ದೇಶಕ ಕಾಶೀನಾಥ್ ಇನ್ನು ನೆನಪು ಮಾತ್ರ!!

Published

on

  • 396
  •  
  •  
  •  
  •  
  •  
  •  
  •  
    396
    Shares

ಕನ್ನಡ ಚಿತ್ರರಂಗಕ್ಕೆ ಭರಿಸಲಾಗಂತಹ ನಷ್ಟ ಇವತ್ತು ಆಗಿದೆ. ಕನ್ನಡದ ಪ್ರತಿಭಾನವಿತ ನಟ, ನಿರ್ದೇಶಕ ಇನ್ನು ನೆನಪು ಮಾತ್ರ.

ಅನೇಕರನ್ನು ಚಿತ್ರ ರಂಗಕ್ಕೆ ತಂದು ಬೆಳೆಸಿದ ಕಾಶೀನಾಥ್ ಅವರು ಆನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಪೇಂದ್ರ ರಂತಹ ಮೇರುನಟರನ್ನು ಚಿತ್ರ ರಂಗಕ್ಕೆ ತಂದವರೇ ಅವರು. ಬರೀ ಉಪೇಂದ್ರರಲ್ಲ, ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಹಲವರನ್ನು ಚಿತ್ರರಂಗಕ್ಕೆ ತಂದವರೇ ಅವರು.

ವಿಜ್ಞಾನಿ ಆಗಬೇಕೆಂದು ಕನಸು ಕಂಡಿದ್ದ ಕಾಶೀನಾಥರು ಮೇರ ನಟ, ನಿರ್ದೇಶಕರಾದರ. ಹುಟ್ಟಿದ್ದು ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟೇಶ್ವರದಲ್ಲಿ. ವಿಜ್ಞಾನಿ ಆಗಬೇಕೆಂದ ಇವರಿಗೆ ಪೋಷಿಸಿದ್ದು ಕನ್ನಡ ಚಿತ್ರರಂಗ. ಇವರು ಕನ್ನಡ ಚಿತ್ರರಂಗಕ್ಕೆ ಬಂದದ್ದ ಕನ್ನಡ ಚಿತ್ರರಂಗ ಅನೇಕ ಮೈಲುಗಲ್ಲುಗಳನ್ನು ಸಾಧಿಸುವಂತಾಯ್ತು. ಇವರದೇ ಒಂದು ಶೈಲಿ ಇದೆ.

ಆ ಶೈಲಿಯ ಚಿತ್ರಗಳನ್ನೇ ಇವರು ಕನ್ನಡಿಗರಿಗೆ ಕೊಟ್ಟಿದ್ದರು. ಇವರ ನಿರ್ದೇಶನದ ಅನುಭವ, ಅವನೆ ನನ್ನ ಗಂಡ, ಅಜಗಜಾಂತರ,ಅಪರಿಚಿತ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿದ್ದವು. ಇವರು ನಟಿಸಿದ ಒಂದು ಸಿನೆಮಾ ಅಂತು ಚಿತ್ರಮಂದಿರಗಳಲ್ಲಿ ಒಂದು ವರ್ಷ ಓಡಿತ್ತು. ಅದುವೇ 1989ರಲ್ಲಿ ಬಿಡುಗಡೆಯಾದ “ಅವನೇ ನನ್ನ ಗಂಡ”.

ಕಾಶಿನಾಥ ಅವರು ಇಲ್ಲಿಯವರೆಗೆ ಕನ್ನಡ ಚಿತ್ರರಂಗದ 43 ಚಿತ್ರಗಳಲ್ಲಿ ಅಭಿನಯ, 15 ನಿರ್ದೇಶನ, 11 ಚಿತ್ರಗಳನ್ನು ನಿರ್ಮಿಸಿದ್ದರು. ಮೇರು ನಟ, ನಿರ್ದೇಶಕ ಕಾಶೀನಾಥ್ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಕೊನೆಯದಾಗಿ ಅವರು ನಟಿಸಿದ ಚೌಕ ಸಿನೆಮಾ ಸಂದರ್ಭದಲ್ಲೂ ಕ್ಯಾನ್ಸರ್ ಇತ್ತಂತೆ.

ಕ್ಯಾನ್ಸರ್‌ ಇದ್ದರೂ ಕೂಡಾ ಹಾಗೆ ಚಿಕಿತ್ಸೆ ಪಡೆಯುತ್ತಲೇ ಚೌಕ ಚಿತ್ರವನ್ನು ಮಾಡಿದ್ದರು. ಅವರ ಉತ್ಸಾಹಕ್ಕೆ ಯಾವುದೇ ಕೊರತೆ ಇರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದವರು ಕಾಶೀನಾಥ್‌. ಅವರ ಕೈಚಳಕದಿಂದ ಅವರ ಸಿನೆಮಾಗಳು ಯಶಸ್ಸಿನ ಉತ್ತುಂಗಕ್ಕೇರಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯನ್ನು ಬರೆದಿದ್ದವು.

ಮಗನ ಬಗ್ಗೆ ಕಾಶೀನಾಥರಿಗೆ ತುಂಬಾ ಹೆಮ್ಮೆ ಇತ್ತು. ಅದೊಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ತಮ್ಮ ಮಗ ಅಲೋಕ್ ನಟಿಸಿದ ಬಾಜಿ ಸಿನೆಮಾದ ಬಗ್ಗೆ ಹೇಳುತ್ತಿದ್ದರು. ಆಗ ಅವರ ಮುಖದಲ್ಲಿ ಹೆಮ್ಮೆಯ ಭಾವ ನೋಡಬೇಕಿತ್ತು. ತಮ್ಮ ಮಗನ ಬಾಜಿ ಸಿನೆಮಾದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಲೆಂದೇ ಆ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು‌.

ತಂದೆಯನ್ನೇ ಮೀರಿಸುವ ಮಗ ಎಂದು ಕಾಶೀನಾಥರು ತಮ್ಮ ಮಗನನ್ನು ಹಾಡಿ ಹೊಗಳಿದ್ದರು. ಮಗ ಅಲೋಕ್ ಸಾಹಸ ದೃಶ್ಯ, ಡ್ಯಾನ್ಸ್ ಹೀಗೆ ಯಾವುದರಲ್ಲೂ ಕಡಿಮೆ ಇಲ್ಲ. ನಾನು ನಾಯಕನಾಗಿ ನಟಿಸಿದ ಮೊದಲ ಸಿನೆಮಾಗೆ ಹೋಲಿಸಿದರೆ ನನ್ನ ಮಗ ಅಲೋಕ್ ನನಗಿಂತಲೂ ಮೈಲುಗಟ್ಟಲೆ ದೂರದಲ್ಲಿದ್ದಾನೆ ಎಂದು ಹೆಮ್ಮೆಯಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಕಾಶೀನಾಥ್ ಅವರು ಅಗಲಿ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದಂತಹ ನಷ್ಟವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಓಂ ಶಾಂತಿ.

  •  
    396
    Shares
  • 396
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com