Connect with us
Loading...
Loading...

ಪ್ರಚಲಿತ

ವಿರೋಧಿಗಳ ವಿರುದ್ಧ ತೊಡೆ ತಟ್ಟಿ ಈ ಸಲವೂ ಮೋಹನ್ ಭಾಗವತರು ಕೇರಳದಲ್ಲಿ ಧ್ವಜಾರೋಹಣ ಮಾಡಲಿದ್ದಾರಾ?

Published

on

 • 2.5K
 •  
 •  
 •  
 •  
 •  
 •  
 •  
  2.5K
  Shares

ವಿರೋಧಿಗಳ ವಿರುದ್ಧ ತೊಡೆ ತಟ್ಟಿ ಈ ಸಲವೂ ಮೋಹನ್ ಭಾಗವತ್ ಅವರು ಕೇರಳದಲ್ಲಿ ಧ್ವಜಾರೋಹಣ ಮಾಡಲಿದ್ದಾರಾ? ಧ್ವಜಾರೋಹಣ ಮಾಡೋಕೆ ಯಾರ ವಿರೋಧವಿದೆ? ಯಾರು ವಿರೋಧ ಮಾಡ್ತಾರೆ? ಯಾರ ವಿರುದ್ಧ ತೊಡೆ ತಟ್ಟಲು ಮೋಹನ್ ಭಾಗವತ್ ಅವರು ತಯಾರಾಗಿದ್ದಾರೆ? ಎಂಬ ಇತ್ಯಾದಿ ಪ್ರಶ್ನೆಗಳು ನಿಮಗೆ ಕಾಡುತ್ತಿರಬಹುದು.

ಆದರೆ ಏನಿದು ವಿವಾದ ಎಂಬುದನ್ನು ನಿಮ್ಮ ಮುಂದೆ ಬಹಿರಂಗ ಪಡಿಸುತ್ತೇನೆ. ಈ ಬಾರಿಯ ಗಣರಾಜ್ಯೋತ್ಸವ ದಿನದಂದು ಕೇರದಲ್ಲಿ ಮೋಹನ್ ಭಾಗವತ್ ಅವರು ಧ್ವಜಾರೋಹಣ ಮಾಡಲಿದ್ದಾರೆ ಎಂದು ಹಿರಿಯ ಸ್ವಯಂ ಸೇವಕರು ತಿಳಿಸಿದ್ದಾರೆ.

ಇದರಲ್ಲೇನಿದೆ ಭಾರತೀಯ ಪ್ರಜೆ ಭಾರತ ದೇಶದ ಯಾವ ಭಾಗದಲ್ಲಿ ಬೇಕಾದರೂ ಧ್ವಜಾರೋಹಣ ಮಾಡುವ ಹಕ್ಕು ಆತನಿಗಿದೆ ಎಂದು ನೀವು ಆಲೋಚಿಸುತ್ತಿರಬಹುದು. ಆದರೆ ಭಾರತದ ಪ್ರಜೆಗಳ ಹಕ್ಕನ್ನು ದಮನ ಮಾಡುವ ಪ್ರಯತ್ನ ಕೇರಳ ಸರ್ಕಾರ ನಡೆಸಿದೆ.

ಅಷ್ಟಕ್ಕೂ ಕಳೆದ ಸ್ವಾತಂತ್ರ್ಯೋತ್ಸವ ದಿನದಂದು ಕೇರಳ ಸರ್ಕಾರ ಮಾಡಿದ್ದೇನು ಗೊತ್ತಾ?

ಕಳೆದ ಬಾರಿಯ ಸ್ವಾತಂತ್ರ್ಯೋತ್ಸವದ ದಿನ ಇದೇ ಮೋಹನ್ ಭಾವತ್ ಅವರು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಿದ್ದರು. ಆಗ ಕೇರಳದ ಕಮ್ಯುನಿಸ್ಟ್ ಪಾರ್ಟಿ ಮೋಹನ್ ಭಾಗವತ್ ಅವರ ಮೇಲೆ ಆರೋಪ ಮಾಡಿತ್ತು. ಏನು ಆರೋಪ ಗೊತ್ತಾ? ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು ಧಿಕ್ಕರಿಸಿ ಮೋಹನ್ ಭಾಗವತ್ ಅವರು ಧ್ವಜಾರೋಹಣವನ್ನು ಮಾಡಿದ್ದಾರೆಂಬ ಆರೋಪ.

ಅಷ್ಟಕ್ಕೂ ಜಿಲ್ಲಾಡಳಿತ ಧ್ವಜಾರೋಹಣ ಮಾಡಲೇಬಾರದು ಅಂತ ಆದೇಶ ಹೊರಡಿಸಿದ್ದು ಯಾಕೆ?

ಇದು ಭಾರತೀಯ ಪ್ರಜೆಯ ಹಕ್ಕಿನ ದಮನ ಮಾಡಿದಂತೆ ಆಗಲ್ವಾ?

ಇದರಲ್ಲಿ ದೊಡ್ಡ ಷಡ್ಯಂತ್ರವಿದೆ. ಧ್ವಜಾರೋಹಣವನ್ನು ಮಾಡಲು ಬಿಟ್ಟರೆ ದೇಶಪ್ರೇಮಿಗಳು ಒಂದಾಗ್ತಾರೆ. ದೇಶಪ್ರೇಮಿಗಳೆಲ್ಲಾ ಒಂದಾದರೆ ನಮಗೆ ಉಳಿಗಾಲವಿಲ್ಲ. ಇದು ಕಮ್ಯುನಿಸ್ಟರ ಲೆಕ್ಕಾಚಾರವಿರಬಹುದು.

ಕಮ್ಯುನಿಸ್ಟ್ ಸಿದ್ಧಾಂತದ ಒಲವಿರುವವರೆಲ್ಲಾ ಈ ದೇಶಕ್ಕೆ ಕಮ್ಮಿ ನಿಷ್ಠೆಯವರಾಗಿದ್ದಾರೆ. ಅವರನ್ನು ಕಮ್ಯುನಿಸ್ಟ್‌ ಎನ್ನುವುದಕ್ಕಿಂತಲೂ ಕಮ್ಮಿ ನಿಷ್ಠೆಯವರು ಅಂದರೆ ಸೂಕ್ತವಾಗಬಹುದು. ಇವರಿಗೆ ನೆನಪಿಲ್ಲಾ ಅನಿಸುತ್ತೆ. ನೆಹರು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಒಲವು ತೋರಿಸಿ ಕೊನೆಗೆ ಅವರಿಂದ ಬೆನ್ನಿಗೆ ಚೂರಿ ಹಾಕಿಸಿಕೊಂಡಿದ್ದರು.

ಈಗ ಕಮ್ಯುನಿಸ್ಟರು ಮೋಹನ್ ಭಾಗವತ್ ಅವರು ಧ್ವಜಾರೋಹಣ ಮಾಡುವುದನ್ನು ವಿರೋಧಿಸುತ್ತಿರುವುದನ್ನು ನೋಡಿದರೆ ಇಲ್ಲಿ ರಾಷ್ಟ್ರಾಂತರದ ಪ್ರಕ್ರಿಯೆಯ ಕೆಲಸ ನಡೆಸುತ್ತಿದ್ದಾರೆ ಅಂತ ಗೊತ್ತಾಗುತ್ತದೆ.

ಇದೇ ರೀತಿಯಿಂದಲೇ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಬೋಡೋ ಲ್ಯಾಂಡ್, ಗೂರ್ಖಾ ಲ್ಯಾಂಡ್ ಗಳಲ್ಲಿ ಧ್ವಜಾರೋಹಣ ನಡೆಯುವುದನ್ನೇ ನಿಲ್ಲಿಸುವ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ.

ಕೇರಳದ ಕಮ್ಯನಿಸ್ಟರ ಈಗಿನ ವಿರೋಧಿ ನೀತಿಯನ್ನು ನೋಡಿದರೆ ಕೇರಳವು ಮಣಿಪುರ, ಮಿಜೋರಾಮ್ ಗಳಂತೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಅಷ್ಟಕ್ಕೂ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಬೋಡೋ ಲ್ಯಾಂಡ್, ಗೂರ್ಖಾ ಲ್ಯಾಂಡ್ ಗಳಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ದಿನಗಳಲ್ಲಿ ಏನು ನಡೆಯುತ್ತೆ ಗೊತ್ತಾ? ಇನ್ನೇನು ನಾಲ್ಕೈದು ದಿನಗಳಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಇದೆ ಅನ್ನುವಷ್ಟರಲ್ಲಿ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಬೋಡೋ ಲ್ಯಾಂಡ್, ಗೂರ್ಖಾ ಲ್ಯಾಂಡ್ ಗಳಲ್ಲಿ ಜನ ಗಲಭೆ ಎಬ್ಬಿಸುತ್ತಾರೆ. ಆಗ ಸರ್ಕಾರ ಕರ್ಫ್ಯೂ ಹಾಕಿ ಬಿಡುತ್ತದೆ.

ಅದರಲ್ಲಿ ಗಲಭೆ ಮಾಡಿದವರ ಉದ್ದೇಶವೇನಿತ್ತು ಗೊತ್ತಾ? ಈ ವಿಶೇಷ ದಿನಗಳಲ್ಲಿ ನಾಲ್ಕೈದು ದಿನಗಳ ಮುಂಚೆ ಗಲಭೆ ಮಾಡಿದರೆ ಕರ್ಫ್ಯೂ ಜಾರಿಗೆ ಬರುತ್ತದೆ, ಆಗ ಧ್ವಜಾರೋಹಣವೇ ನಡೆಯೋದಿಲ್ಲ. ಇದು ಆ ಪ್ರದೇಶಗಳ ದೇಶ ವಿರೋಧಿಗಳ ಲೆಕ್ಕಾಚಾರ. ಕಾಶ್ಮೀರದಲ್ಲಿಯೂ ಇದೇ ಗೋಳು.

ಈಗ ಕೇರಳದ ಕಮ್ಯುನಿಸ್ಟರು ಮಾಡುತ್ತಿರುವ ರಾಷ್ಟ್ರ ವಿರೋಧಿ ಕೃತ್ಯಗಳನ್ನು ನೋಡಿದರೆ, ಕೇರಳ ಆದಷ್ಟು ಬೇಗ ಕಾಶ್ಮೀರ, ಮಣಿಪುರದಂತೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಕಮ್ಯುನಿಸ್ಟರ ಬಗ್ಗೆ ಹೇಳುವುದಾದರೆ ಇವರು ದೇಶಕ್ಕೆ ತುಂಬಾ ಕಮ್ಮಿ ನಿಷ್ಠೆ ಉಳ್ಳವರು. ಇದಕ್ಕೆ ನೇರ ಉದಾಹರಣೆ ಮಣಿಶಂಕರ್ ಅಯ್ಯರ್. ಈತ ಪಕ್ಕಾ ಕಮ್ಯುನಿಸ್ಟ್ ಚೇಲಾ. ಈತನನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಕಮ್ಯುನಿಸ್ಟರ್ ಕಮ್ಮಿನಿಷ್ಠೆಯ ಬಗ್ಗೆ ಅರಿವಾಗುತ್ತದೆ.

ಈತ ಅಂಡಮಾನ್ ನಿಕೋಬಾರ್ ನಲ್ಲಿ ಸಾವರ್ಕರರು ಹೇಳಿದ್ದ ಹೇಳಿಕೆಯ ಫಲಕವನ್ನು ತೆಗೆಸಿದ್ದ. ಸಂಸತ್ತಿನಲ್ಲಿ ಸಾವರ್ಕರರ ಫೋಟೋವನ್ನು ಇಡೋದಕ್ಕೆ ವಿರೋಧಿಸಿದ್ದ. ಸರ್ವಸ್ವವನ್ನೂ ತ್ಯಾಗ ಮಾಡಿದ ಆ ಮಹಾಪುರುಷನಿಗೆ ಹೇಡಿ ಅಂತ ಕರೆದಿದ್ದ. ಕಾರಣವಿಷ್ಟೇ ಸಾವರ್ಕರು ದೇಶಪ್ರೇಮಿಗಳಾಗಿದ್ದರಿಂದ.

ಈ ಕಮ್ಯುನಿಸ್ಟರಿಗೆ ದೇಶಪ್ರೇಮಿಗಳೆಂದರೆ ಅಲರ್ಜಿ. ಸಾವರ್ಕರರನ್ನೇ ಬಿಡದ ಈತ ಮೊನ್ನೆ ಮೊನ್ನೆಯಷ್ಟೇ ಭವ್ಯ ಭಾರತದ ಪ್ರಧಾನಿಯವರನ್ನು ಬಾಯಿಗೆ ಬಂದಂತೆ ಬೈದಿದ್ದ. ಇದೇ ಮಣಿಶಂಕರ್ ಅಯ್ಯರ್ ಕೊನೆಯ ಬಾರಿಯ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಲು ಪಾಕಿಸ್ತಾನದ ನೆರವು ಕೇಳಿದ್ದನಂತೆ. ಅಂದ್ರೆ ಈತ ದೇಶದ್ರೋಹಿ ಅಲ್ವಾ? ಈತ ಬರೀ ಉದಾಹರಣೆ. ಕಮ್ಯುನಿಸ್ಟರೆಲ್ಲಾ ಇದೇ ತರ ಇದ್ದಾರೆ.

ಈಗ ಕೇರಳದಲ್ಲಿ ಕಮ್ಯುನಿಸ್ಟರು ಮೋಹನ್ ಭಾಗವತರು ಮಾಡುವ ಧ್ವಜಾರೋಹಣಕ್ಕೆ ಅಡ್ಡಿಪಡಿಸುವುದನ್ನು ನೋಡಿದರೆ, ಕೇರಳವನ್ನು ಕಾಶ್ಮೀರ ಮಾಡುವ ಹುನ್ನಾರ ನಡೆಸಿದ್ದಾರೆ ಎನ್ನಬಹುದು.

ಕೇರಳದಲ್ಲಿ ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯಲ್ಲಿ ಧ್ವಜಾರೋಹಣ ಮಾಡಿದ್ದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಈ ಬಾರಿ ಗಣರಾಜ್ಯೋತ್ಸವಕ್ಕೂ ಕೇರಳದಲ್ಲಿರಲಿದ್ದಾರೆ. ಕೇರಳ ರಾಜ್ಯದಲ್ಲಿ ಗಣರಾಜ್ಯೋತ್ಸವದಂದು ಪಾಲಕ್ಕಾಡ್ ಜಿಲ್ಲೆಯ ಹೊರವಲಯದಲ್ಲಿರುವ ಶಾಲೆಯೊಂದರಲ್ಲಿ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಧ್ವಜಾರೋಹಣ ಮಾಡಲಿದ್ದಾರೆ ಎಂದು ಸಂಘದ ಹಿರಿಯ ಸ್ವಯಂಸೇವಕರೊಬ್ಬರು ತಿಳಿಸಿದ್ದಾರೆ.

ಜನೇವರಿ 26 ರಂದು ಕೇರಳಕ್ಕೆ ಮೋಹನ್ ಭಾಗವತ್ ತೆರಳಲಿದ್ದು ಮೂರು ದಿನಗಳ ಕಾಲ ಅವರು ಕೇರಳದಲ್ಲೇ ತಂಗಲಿದ್ದಾರೆ. “ಸರಸಂಘಚಾಲಕರು ಕೇರಳದ ಯಾವ ಭಾಗಕ್ಕೆ ಹೋದರೂ ಆ ದಿನಗಳನ್ನ ಇಲ್ಲಿನ ಜನ ಸ್ವಾತಂತ್ರ್ಯ ದಿನ, ರಿಪಬ್ಲಿಕ್ ದಿನ” ಅಂತಲೇ ಆಚರಿಸುತ್ತಾರೆ ಅಂತ ಹಿರಿಯ ಸ್ವಯಂಸೇವರೊಬ್ಬರು ತಿಳಿಸಿದ್ದಾರೆ.

ಕಮ್ಯುನಿಸ್ಟರ ವಿರೋಧವಂತೂ ಇದೆ. ಈಗ ಮತ್ತೆ ಸರಸಂಘಚಾಲಕರಾದ ಮೋಹನ್ ಭಾಗವತರು ಕೇರಳಕ್ಕೆ ತೆರಳಲಿದ್ದಾರೆ. ಈ ಬಾರಿ ಮತ್ತೆ ಅದೇನು ವಿವಾದವನ್ನ ಅಲ್ಲಿನ ಸರ್ಕಾರ ಸೃಷ್ಟಿಸುತ್ತೋ ಕಾದು ನೋಡಬೇಕಿದೆ.

– Nationalist Mahi

 •  
  2.5K
  Shares
 • 2.5K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com