Connect with us
Loading...
Loading...

ಪ್ರಚಲಿತ

ಶಾಕಿಂಗ್ ನ್ಯೂಸ್: ರಾಹುಲ್ ಗಾಂಧಿ ಹಿಂದೂ ಆಗಿದ್ದಕ್ಕೆ ತಿರುಗಿಬಿದ್ದ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದೇನು ಗೊತ್ತಾ?

Published

on

 • 1.9K
 •  
 •  
 •  
 •  
 •  
 •  
 •  
  1.9K
  Shares

ಹೊಚ್ಚ ಹೊಸ ಹಿಂದೂ, ಜನಿವಾರಧಾರಿ ಬ್ರಾಹ್ಮಣ ರಾಹುಲ್ ಗಾಂಧಿ ಕುರಿತಾಗಿ ಇದೀಗ ಕಾಂಗ್ರೆಸ್ಸಿನ ವರಿಷ್ಠ ನಾಯಕ ಗುಲಾಂ ನಬಿ ಆಜಾದ್ ಇದೀಗ ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದು ಕಾಂಗ್ರಸ್ ಪಕ್ಷದಲ್ಲಿ ಭಾರೀ ಕೋಲಾಹಲ ವನ್ನೇ ಎಬ್ಬಿಸಿಬಿಟ್ಟಿದೆ. ಗುಲಾಂ ನಬಿ ಆಜಾದ್ ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯ ಹಾಗು ಕಾಂಗ್ರೆಸ್ಸಿನ ವರಿಷ್ಟ ನಾಯಕರಲ್ಲೊಬ್ಬರಾಗಿದ್ದರು.

ಕಳೆದ ಕೆಲ ತಿಂಗಳುಗಳಿಂದ ರಾಹುಲ್ ಗಾಂಧಿ ತನ್ನನ್ನ ತಾನು ಜನಿವಾರಧಾರಿ ಬ್ರಾಹ್ಮಣ, ಹಿಂದೂ ವಾಗಿ ಬದಲಾಗಿ ಅದರ ಕುರಿತಾಗಿ ಸಿಕ್ಕಾಪಟ್ಟೆ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ, ಮೊದಲು ಅವರು ತಮ್ಮ ಪಕ್ಷದ ನಾಯಕನಾದ ರಣದೀಪ್ ಸುರ್ಜೇವಾಲಾ ಮೂಲಕ ತಾನೊಬ್ಬ ಜನಿವಾರಧಾರಿ ಬ್ರಾಹ್ಮಣನೆಂದು ಘೋಷಿಸಿಕೊಂಡಿದ್ದರು. ಬಳಿಕ ಅವರು ತಮ್ಮನ್ನ ತಾವು ಶಿವಭಕ್ತ, ನಂತರ ರಾಮಭಕ್ತ ಅದಾದ ಬಳಿಕ ನರ್ಮದಾ ಭಕ್ತನೆಂದೂ ಕನ್ವರ್ಟ್ ಆಗಿಬಿಟ್ಟಿದ್ದರು.

ನೀವೆಲ್ಲಾ ಹಿಂದೆ ನೋಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಈಗ ಮಸೀದಿ, ಚರ್ಚ್ ಗಳ ಭೇಟಿ ನೀಡುತ್ತಿಲ್ಲ ಇದಕ್ಕೆ ಕಾರಣ ಸದ್ಯ ರಾಜಸ್ಥಾನ,‌ ಮಧ್ಯಪ್ರದೇಶ, ಛತ್ತಿಸಗಢ್ ಚುನಾವಣೆಗಳಿದ್ದು ಅಲ್ಲಿ ಮುಸಲ್ಮಾನರ ಜನಸಂಖ್ಯೆ ಕಡಿಮೆಯಿದ್ದು ಹಿಂದುಗಳು ಬಹುಸಂಖ್ಯಾತ ರಾಗಿದ್ದಾರೆ ಹಾಗಾಗಿ ಮುಸಲ್ಮಾನರಿಗಿಂತ ಹೆಚ್ಚು ವೋಟಬ್ಯಾಂಕ್ ಹಿಂದುಗಳಲ್ಲಿರುವುದರಿಂದ ಆ ವೋಟ್ ಗಳನ್ನ ಪಡೆಯಲೇಬೇಕಾದ ಅನಿವಾರ್ಯತೆ ರಾಹುಲ್ ಗಾಂಧಿಗಿದೆ. ಹಾಗಾಗಿ ಚುನಾವಣಾ ನಿಮಿತ್ಯಂ ಬಹುಕೃತ ವೇಷಂ ಎಂಬಂತೆ ಚುನಾವಣೆ ಹತ್ತಿರ ಬಂದ ಬಳಿಕ ಇದೀಗ ರಾಹುಲ್ ಗಾಂಧಿ ಕೇವಲ ಮಠ ಮಂದಿರಗಳಿಗೆ ಭೇಟಿ ನೀಡುತ್ತ ಹಿಂದೂ ಧರ್ಮಕ್ಕೆ ಮತಾಂತರವಾಗಿಬಿಟ್ಟಿದ್ದಾರೆ.

ಈ ಹಿಂದೆ ಇದೇ ರಾಹುಲ್ ಗಾಂಧಿ ಎಲ್ಲಿ ಹೋದರೂ ಸದಾ ತನ್ನ ಪಕ್ಷದ ನಾಯಕ, ವರಿಷ್ಠ ನೇತಾರ ಗುಲಾಂ ನಬಿ ಆಜಾದ್ ಜೊತೆಯಲ್ಲೇ ಇರುತ್ತಿದ್ದರು. ಆದರೆ ಈಗ ತಾನು ಹಿಂದೂವಾಗಿ ಬದಲಾದ ಬಳಿಕ ಹಾಗು ಚುನಾವಣೆಯಲ್ಲಿ ಹಿಂದುಗಳ ವೋಟ್ ಪಡೆಯಲೇಬೇಕಾಗಿರುವುದರಿಂದ ರಾಹುಲ್ ಗಾಂಧಿ ಈಗ ಗುಲಾಂ ನಬಿ ಆಜಾದ್ ರನ್ನ ತಮ್ಮ ಹತ್ತಿರಕ್ಕೂ ಸುಳಿಯಲು ಬಿಡುತ್ತಿಲ್ಲವಂತೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ತನ್ನ ಪಕ್ಷದ ಮುಸ್ಲಿಂ ನೇತಾರರನ್ನೂ ದೂರವಿಡುತ್ತಿದ್ದಾರಂತೆ, ಈ ಕುರಿತು ಇದೀಗ ಗುಲಾಂ ನಬಿ ಆಜಾದ್ ರವರೇ ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ‌.

ಗುಲಾಂ ನಬಿ ಆಜಾದ್ ಮಾತನಾಡುತ್ತ ಯಾವಾಗಿನಿಂದ ರಾಹುಲ್ ಗಾಂಧಿ ಹಿಂದೂವಾಗಿದ್ದಾರೆ ಆಗಿನಿಂದ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ವ್ಯಾಲ್ಯೂ ಕಡಿಮೆಯಾಗಿಬಿಟ್ಟಿದೆ, ಮೊದಲೆಲ್ಲಾ ಕಾಂಗ್ರೆಸ್ ಪಕ್ಷದ ಹಿಂದೂ ನಾಯಕರು ನನ್ನನ್ನ ಚುನಾವಣಾ ಪ್ರಚಾರಕ್ಕೆ ಕರೆಯುತ್ತಿದ್ದರು ಆದರೆ ಇದೀಗ ನನ್ನನ್ನ ಕರೆಯೋದನ್ನೇ ಬಿಟ್ಟು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಮೊದಲೆಲ್ಲಾ ಕಾಂಗ್ರೆಸ್ಸಿನ ಹಿಂದೂ ನೇತಾರರು ನನ್ನನ್ನ ತಮ್ಮ ಚುನಾವಣಾ ಪ್ರಚಾರದಲ್ಲಿ ಕ್ಯಾಂಪೇನರ್ ಆಗಿ ಕರೆಯುತ್ತಿದ್ದರು (ಇದರರ್ಥ ಆಯಾ ಕ್ಷೇತ್ರಗಳಲ್ಲಿನ ಮುಸ್ಲಿಂ ಮತದಾರರನ್ನ ಆಕರ್ಷಿಸಿ ವೋಟ್ ಪಡೆಯೋಕೆ) ಆದರೆ ಈಗ ಕಾಂಗ್ರೆಸ್ಸಿನ ಯಾವ ನಾಯಕರೂ ನನ್ನನ್ನ ಅವರ ಬಳಿ ಸೇರಿಸಲಾಗಲಿ ಅಥವ ಪ್ರಚಾರಕ್ಕಾಗಿ ಕರೆಯೋದನ್ನೇ ಬಂದ್ ಮಾಡಿಬಿಟ್ಟಿದ್ದಾರೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಗುಲಾಂ ನಬಿ ಆಜಾದ್ ರವರ ಈ ಹೇಳಿಕೆಯಿಂದ ಸ್ಪಷ್ಟವಾಗುವ ವಿಷಯವೆಂದರೆ ರಾಹುಲ್ ಗಾಂಧಿ ಈ ದಿನಗಳಲ್ಲಿ ಪಕ್ಕಾ ಹಿಂದುವಾಗಿ ಅಷ್ಟೇ ಕಾಣಲು ಬಯಸುತ್ತಿದ್ದಾರೆ ಹಾಗು ಅವರು ಯಾವುದೇ ಕಾರಣಕ್ಕೂ ಗುಲಾಂ ನಬಿ ಆಜಾದ್ ರನ್ನ ಹಾಗು ಮುಸ್ಲಿಂ ನಾಯಕರನ್ನ ಹತ್ತಿರ ಸೇರಿಸಲು ಬಯಸುತ್ತಿಲ್ಲ‌. ದೇಶದಲ್ಲಿ ಹಿಂದುಗಳು ಒಗ್ಗಟ್ಟಾಗಿದ್ದಾರೆ ಅನ್ನೋದು ಕಾಂಗ್ರೆಸ್ಸಿಗೆ ಇದೀಗ ಅರ್ಥವಾದಂತೆ ಕಾಣುತ್ತಿದೆ ಹಾಗು ಹಿಂದುಗಳ ಹೊರತು ತಾವು ಎಲೆಕ್ಷನ್ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯೋದು ಅಸಾಧ್ಯ ಅಂತ ಕಾಂಗ್ರೆಸ್ಸಿಗೆ ಮನವರಿಕೆಯಾಗಿದೆಯಾದ್ದರಿಂದ ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ ತಾನೊಬ್ಬ ಹಿಂದೂವಾಗಿ ಕಾಣಲು ಮಾಡಬೇಕಾದ ಎಲ್ಲಾ ಸರ್ಕಸ್ ಗಳನ್ನೂ ಮಾಡುತ್ತಿದ್ದಾರೆ. ಇದನ್ನ ನಾವಲ್ಲ ಬದಲಾಗಿ ಅವರ ಪಕ್ಷದ ಮುಸ್ಲಿಂ ನಾಯಕನೇ ಹೇಳುತ್ತಿದ್ದಾನೆ

– Team Nationalist Views

Nationalist Views ©2018 Copyrights Reserved

 •  
  1.9K
  Shares
 • 1.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com