Connect with us
Loading...
Loading...

Uncategorized

ಶಾಕಿಂಗ್ ನ್ಯೂಸ್: ರೇಪಿಸ್ಟ್ ಪಾದ್ರಿ ಮುಲಕ್ಕಲ್ ವಿರುದ್ಧ ಸಾಕ್ಷಿ ಹೇಳಿ ನಾಪತ್ತೆಯಾಗಿದ್ದ ಪ್ರೀಸ್ಟ್‌ ಪತ್ತೆಯಾಗಿದ್ದು ಯಾವ ಸ್ಥಿತಿಯಲ್ಲಿ ಗೊತ್ತಾ?

Published

on

 • 596
 •  
 •  
 •  
 •  
 •  
 •  
 •  
  596
  Shares

ರೇಪಿಸ್ಟ್ ಪಾದ್ರಿ ಫ್ರ್ಯಾಂಕೋ ಮುಲಕ್ಕಲ್ ಜೈಲಿನಿಂದ ಹೊರಬಂದಿದ್ದಾನೆ ಹಾಗು ಇತ್ತ ಆತನ ವಿರುದ್ಧ ಸಾಕ್ಷಿ ಹೇಳಿದ್ದ ಮತ್ತೊಬ್ಬ ಪ್ರೀಸ್ಟ್ ಕುರಿಯಾಕೋಸೆ ಯನ್ನ ಇದೀಗ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನನ್ ಒಬ್ಬಳು ಪಾದ್ರಿ ಫ್ರ್ಯಾಂಕೋ ಮುಲಕ್ಕಲ್ ತನ್ನನ್ನ ಹಲವು ಬಾರಿ ರೇಪ್ ಮಾಡಿದ್ದ ಎಂಬ ಆರೋಪವನ್ನ ಹೊರಿಸಿದ್ದಳು. ಆಕೆ ಕಂಪ್ಲೇಂಟ್ ಕೊಟ್ಟ ಬಳಿಕವೂ ರೇಪಿಸ್ಟ್ ಪಾದ್ರಿಯನ್ನ ಬಂಧಿಸದೆ ಹಲವು ದಿನಗಳ ಕಾಲ ಹೊರಗಡೆ ಆರಾಮಾಗಿ ಓಡಾಡಲು ಬಿಡಲಾಗಿತ್ತು.

ದೇಶಾದ್ಯಂತ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾದ ಬಳಿಕ ಫ್ರ್ಯಂಕೋ ಮುಲಕ್ಕಲ್‌ನನ್ನ ಬಂಧಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ರೇಪಿಸ್ಟ್ ಪಾದ್ರಿ ಜಾಮೀನು ಪಡೆದು ಇತ್ತೀಚೆಗಷ್ಟೇ ಹೊರ ಬಂದಿದ್ದ. ರೇಪಿಸ್ಟ್ ಪಾದ್ರಿ ಮುಲಕ್ಕಲ್ ಹೊರ ಬಂದ ಬಳಿಕ ಆತನಿಗೆ ಅದ್ಧೂರಿ ಸ್ವಾಗತ, ಸನ್ಮಾನವನ್ನೂ ಚರ್ಚ್ ವತಿಯಿಂದ ಮಾಡಲಾಗಿತ್ತು.

ಈ ಕೇಸಿನಲ್ಲಿ ರೇಪಿಸ್ಟ್ ಪಾದ್ರಿ ಮುಲಕ್ಕಲ್ ವಿರುದ್ಧ ಪ್ರೀಸ್ಟ್ ಕುರಿಯಾಕೋಸೆ ಕತ್ಥುಥಾರಾ ನ ವಿರುದ್ಧ ಪ್ರಮುಖ ಸಾಕ್ಷಿಯಾಗಿದ್ದರು. ಅವರು ರೇಪಿಸ್ಟ್ ಮುಲಕ್ಕಲ್ ವಿರುದ್ಧ ಸಾಕ್ಷಿ ಹೇಳಿದ್ದರು, ಇದೀಗ ಅವರ ಹೆಣ ಜಾಲಂಧರ್ ನಲ್ಲಿ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಅಂದರೆ ಅಕ್ಟೋಬರ್ 22, 2018 ರಂದು ಪ್ರೀಸ್ಟ್ ಕುರಿಯಾಕೋಸೆ ಡೆಡ್ ಬಾಡಿ ಪತ್ತೆಯಾಗಿದೆ.

ಪ್ರೀಸ್ಟ್ ಕುರಿಯಾಕೋಸೆ ಯವರು ರೇಪಿಸ್ಟ್ ಪಾದ್ರಿ ಫ್ರ್ಯಾಂಕೋ ಮುಲಕ್ಕಲ್ ವಿರುದ್ಧ ಕೇರಳದ ಪೋಲಿಸರ ಬಳಿ ರೇಪ್ ಗೊಳಗಾಗಿದ್ದ ಸಂತ್ರಸ್ತೆ ನನ್ ಪರವಾಗಿ ಸಾಕ್ಷಿ ಹೇಳಿದ್ದರು. ರೇಪಿಸ್ಟ್ ಪಾದ್ರಿ ಫ್ರ್ಯಾಂಕೋ ಮುಲಕ್ಕಲ್ ಮಿಶನರಿ ಆಫ್ ಜೀಸಸ್ ನ ನನ್ ಒಬ್ಬಳನ್ನ ಹಲವು ಬಾರಿ ಅತ್ಯಾಚಾರವೆಸಗಿದ್ದ ಎಂದು ಆಕೆಯೇ ದೂರು ದಾಖಲಿಸಿದ್ದಳು.

ಇದೀಗ ಜಾಲಂಧರ್ ನಲ್ಲಿ ಪ್ರೀಸ್ಟ್ ಕುರಿಯಾಕೋಸೆ ರವರು ಶವವಾಗಿ ಪತ್ತೆಯಾಗಿದ್ದು, ಅವರ ಕುಟುಂಬಸ್ಥರು ನೇರವಾಗಿ ಅವರ ಹತ್ಯೆಯ ಆರೋಪವನ್ನ ರೇಪಿಸ್ಟ್ ಪಾದ್ರಿ ಫ್ರ್ಯಾಂಕೋ ಮುಲಕ್ಕಲ್ ವಿರುದ್ದ ಮಾಡಿದ್ದಾರೆ. ನನ್ ಳ ರೇಪ್ ಕೇಸ್ ನಲ್ಲಿ ಜೈಲು ಸೇರಿದ್ದ ಪಾದ್ರಿ ಫ್ರ್ಯಾಂಕೋ ಮುಲಕ್ಕಲ್ ಬೇಲ್ ಪಡೆದು ಹೊರಬಂದಾಗಿನಿಂದ ಪ್ರೀಸ್ಟ್ ಕುರಿಯಾಕೋಸೆ ರವರ ಜೀವಕ್ಕೆ ಅಪಾಯವಿತ್ತು ಹಾಗು ಇದೀಗ ಅವರನ್ನ ಕೊಂದು ಬಿಸಾಡಲಾಗಿದೆ.‌

ಪ್ರೀಸ್ಟ್ ಕುರಿಯಾಕೋಸೆ ರವರು ಕೇರಳದ ಪೋಲಿಸರೆದುರು ರೇಪಿಸ್ಟ್ ಪಾದ್ರಿ ಫ್ರ್ಯಾಂಕೋ ಮುಲಕ್ಕಲ್ ವಿರುದ್ಧ “ತೀವ್ರ ಜೀವಬೆದರಿಕೆ ಹಾಗು ಭಯದಿಂದ ಅತ್ತಾಚಾರಕ್ಕೊಳಗಾದ ನನ್ ಪೋಲಿಸರ ಬಳಿ ಹೋಗಲು ಹೆದರುತ್ತಿದ್ದಾಳೆ, ಫ್ರ್ಯಾಂಕೋ ಮುಲಕ್ಕಲ್ ತನನ್ನ 13 ಬಾರಿ ಬಲಾತ್ಕಾರ ಮಾಡಿದ್ದ ಎಂದು ಆಕೆಯೇ ನನ್ನ ಬಳಿ ಹೇಳಿಕೊಂಡಿದ್ದಳು & ಆ ಮಾತನ್ನ ಕಂಪ್ಲೇಂಟ್ ರೂಪದಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ” ಎಂದು ಕುರಿಯಾಕೋಸೆ ಕೇರಳದ ಪೋಲಿಸರಿಗೆ ತಿಳಿಸಿದ್ದರು.

ಪ್ರೀಸ್ಟ್ ಕುರಿಯಾಕೋಸೆ ರವರು ರೇಪಿಸ್ಟ್ ಪಾದ್ರಿ ಫ್ರ್ಯಾಂಕೋ ಮುಲಕ್ಕಲ್ ವಿರುದ್ದ ಕೇರಳದ ಪೋಲಿಸರಿಗೆ ಸಾಕ್ಷಿ ಹೇಳಿದ್ದೇ ತಡ ದೇಶದೆಲ್ಲೆಡೆ ಮುಲಕ್ಕಲ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಕ್ರೈಸ್ತ ಸನ್ಯಾಸಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪ ಹೊತ್ತಿರುವ ಕ್ಯಾಥೊಲಿಕ್ ಬಿಶಪ್ ಫ್ರಾಂಕೊ ಮುಲಕ್ಕಲಿಗೆ ಕೇರಳ ನ್ಯಾಯಾಲಯ ಜಾಮೀನು ದೊರೆತ ಬಳಿಕ ಬುಧವಾರ ಜಲಂಧರ್ನಲ್ಲಿ ಭರ್ಜರಿ ಸ್ವಾಗತ ನೀಡಿಲಾಗಿತ್ತು ಈ ಹಿಂದೆ ಘಟನೆಯ ತೀವ್ರತೆಯನ್ನು ಪರಿಗಣಿಸಿ ಕೋರ್ಟ್ ಆತನಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಆತ ತನ್ನ ಅಧಿಕಾರ ದುರುಪಯೋಗಪಡಿಸಿ ಸಾಕ್ಷಿಗಳನ್ನು ಪ್ರಭಾವಿಸಬಹುದು ಎಂದು ನ್ಯಾಯಾಲಯ ಗಮನಿಸಿತ್ತು.

ಆದರೆ ಸೋಮವಾರ (15 ಅಕ್ಟೋಬರ್) ಪಾಲಾದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮುಲಕ್ಕಲ್ ಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಬುಧವಾರ (17 ಅಕ್ಟೋಬರ್) ನಂದು ಜಲಂಧರಿನ ಮನೆಯಲ್ಲಿ ಆತನನ್ನು ಹಾರ ಹಾಕಿ ಸ್ವಾಗತಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ‘ಬಿಷಪ್ ಗೆ ಸ್ವಾಗತ’ ಎನ್ನುವ ಬ್ಯಾನರ್ ಗಳನ್ನೂ ಕಟ್ಟಲಾಗಿದೆ ಎಂದು ವರದಿ ಆಗಿದೆ.

ಮುಲ್ಲಕ್ಕಲ್ ಮನೆಯೊಳಗೆ ಸಂಭವಿಸಿದೆ ಎನ್ನಲಾದ ಈ ಘಟನೆಯಲ್ಲಿ ಸಮೀಪದ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಅವರ ಬೆಂಬಲಿಗರು ಉಪಸ್ಥಿತರಿದ್ದರು.

ಕೊಟ್ಟಾಯಂ ಸಮೀಪದ ಕಾನ್ವೆಂಟ್ನಲ್ಲಿ 2014 ಮತ್ತು 2016 ರ ನಡುವೆ ಒಬ್ಬ ಕ್ರೈಸ್ತ ಸನ್ಯಾಸಿನಿಯ ಮೇಲೆ ಲೈಂಗಿಕ ಶೋಷಣೆ ಮಾಡಿರುವ ಆರೋಪ ಹೊಂದಿರುವ ಬಿಷಪ್ ನನ್ನು ಹಾರ-ತುರಾಯಿಗಳಿಂದ ಸನ್ಮಾನಿಸಲಾಗಿತ್ತು. ಕೆಲವೇ ದಿನಗಳಲ್ಲಿ ಆತ ಬೇಲ್ ಪಡೆದು ಹೊರಬಂದಿದ್ದೇ ತಡ ಇದೀಗ ಸಾಕ್ಷಿ ನುಡಿದಿದ್ದ ಪ್ರೀಸ್ಟ್ ಕುರಿಯಾಕೋಸೆ ರವರ ಹತ್ಯೆ ನಡೆದಿದೆ‌.

– Team Nationalist Views

Nationalist Views ©2018 Copyrights Reserved

 •  
  596
  Shares
 • 596
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com