Connect with us
Loading...
Loading...

ಅಂಕಣ

ಶ್ರೇಷ್ಠ ಪ್ರಧಾನಿ ಮೋದಿ ಹಿನ್ನೆಲೆ ಬಗ್ಗೆ ನಿಮಗೆಲ್ಲಾ ಗೊತ್ತು, ಈಗ ಆಕಡೆ ನಿಂತಿರೋ ಇಸ್ರೇಲಿನ ಅಮಾಯಕನ ಬಗ್ಗೆ ಹಾಗು ಆಪರೇಷನ್ ಐಸೋಟೋಪ್ ಬಗ್ಗೆ ನಿಮಗೆಷ್ಟು ಗೊತ್ತು?

Published

on

 • 1.3K
 •  
 •  
 •  
 •  
 •  
 •  
 •  
  1.3K
  Shares

ವಿಯೆನ್ನಾದಿಂದ ಹೊರಟ ಆ ಬೋಯಿಂಗ್ ಕಂಪನಿ ತಯಾರಿತ “ಸಬೀನಾ-571 “ ವಿಮಾನ ಇನ್ನು ಇಪ್ಪತ್ತು ನಿಮಿಷಗಳಲ್ಲಿ ಇಸ್ರೇಲಿನ ಟೆಲ್ ಅವೀವ್ ಗೆ ತಲುಪಬೇಕಿತ್ತು.

ಬ್ರಿಟಿಷ್ ಕ್ಯಾಪ್ಟನ್ ರೆಜಿನಾಲ್ಡ್ ಲೇವಿ ಚಲಾಯಿಸುತ್ತಿದ್ದ ಆ ವಿಮಾನವನ್ನು ಪ್ಯಾಲಸ್ತೇನಿನ ಬ್ಲಾಕ್ ಸೆಪ್ಟೆಂಬರ್ ವಿಭಾಗದ ಉಗ್ರಗಾಮಿಗಳ ಮುಖ್ಯಸ್ಥ ಅಲಿ ಹಸನ್ ಸಲ್ಮಾ ಎಂಬುವವನ ಪಿತೂರಿಯಂತೆ ಅಹಮದ್ ಅವಾದ್, ಅಬೇದ್ ಅಲ್-ಅತ್ರಾಶ್,ತೆರ್ಹೇಸಾ ಹಾಲ್ಸಾ ಮತ್ತು ರಿಮಾ ತನೂಸ್ ಉಗ್ರರು ವಿಮಾನವನ್ನು ಹೈಜಾಕ್ ಮಾಡಿದ ನಂತರ ಊಟ ಹಾಗೂ ಇಂಧನ ಮರು ಪೂರೈಕೆಗಾಗಿ ಲಾಡ್ (ಈಗ ಆ ಊರನ್ನು ಬೆನ್ ಗುರಿಯನ್ ಎಂಬ ಹೆಸರಿನಿಂದ ಕರೆಯುತ್ತಾರೆ) ಎಂಬ ಏರಪೋರ್ಟಿನಲ್ಲಿ ಒತ್ತಾಯ ಪೂರ್ವಕವಾಗಿ ಇಳಿಸಲು ಬೆದರಿಕೆ ಹಾಕಿದರು.

ವಿಮಾನವನ್ನು ಲ್ಯಾಂಡ್ ಮಾಡುವಾಗ ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿ ಲ್ಯಾಂಡಿಂಗ್ ಟಯರ್ ಹೈಡ್ರಾಲಿಕ್ ಸಿಸ್ಟಮ್ ಕೆಡುವಂತೆ ಗಡುಸಾಗಿ ಲ್ಯಾಂಡ್ ಮಾಡಿದನು.

ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ತನ್ನ ಜೈಲಿನಲ್ಲಿ ಇಟ್ಟಿದ್ದ 315 ಜನ ಪ್ಯಾಲಸ್ತೇನಿಗಳನ್ನು ಬಿಡುಗಡೆ ಮಾಡಬೇಕೆಂದು ಇಸ್ರೇಲಿಗೆ ಹೆದರಿಸಿ ಒತ್ತಡ ಹೇರಲು ಈ ಹೈಜಾಕ್ ಮಾಡಲಾಗಿತ್ತು !

ಇಸ್ರೇಲ್ ಪ್ರಧಾನಿ ಝಲ್ಮಾನ್ ಶಾಜರ್ ಈ ಸಮಸ್ಯೆಯನ್ನು ಇಸ್ರೇಲ್ ಡಿಫೆನ್ಸ್ ಫೋರ್ಸಿನ ಮೋರ್ಶೆ ಡಯಾನ್ ರ ಮುಂದಕ್ಕಿಟ್ಟು ಜೈಲಿನಲ್ಲಿರುವ ಪ್ಯಾಲಸ್ತೇನಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ! ನೀವು ಅದಾವ ಕಮಾಂಡೋ ಆಪರೇಸನ್ ಬೇಕಿದ್ದರೂ ನಡೆಸಿಬಿಡಿ ಒಟ್ಟಿನಲ್ಲಿ ವಿಮಾನವು ಸುರಕ್ಷಿತವಾಗಬೇಕು ಹಾಗೂ ಅದರಲ್ಲಿನ ಪ್ರಯಾಣಿಕರ ಪ್ರಾಣಹಾನಿಯಾಗಬಾರದು ಅಷ್ಟೇ ! ಎಂದರು.

ಮೋರ್ಶೆ ಡಯಾನ್ ಆಗ “ಸೈರಾಟ್ ಮಟ್ಕಲ್”ಎಂಬ ಕಮಾಂಡೋ ಪಡೆಯನ್ನು ಆರಿಸಿಕೊಂಡರು.ಅದರಲ್ಲಿದ್ದ ಪ್ರಮುಖರು ಇಹದ್ ಬರ್ಹಾಕ್ (10ನೇ ಪ್ರಧಾನಿ) ಬೆಂಜಮಿನ್ ನೇತನ್ಯಾಹು(ಈಗಿನ ಪ್ರಧಾನಿ) ಮುಂಚೂಣಿ ಸೈನಿಕರಾಗಿದ್ದರು.

ಸೈರಾಟ್ ಮಟ್ಕಲ್ ಪಡೆಯವರ ಪರಿಸ್ಥಿತಿಯನ್ನು ನಾವು ಊಹಿಸಿದರೆ ಭಾದೆಯೆನಿಸುತ್ತದೆ ಕೆಲವು ಸಲ ಹೆಮ್ಮೆಯೆನಿಸುತ್ತದೆ ಏಕೆಂದರೆ ಇಸ್ರೇಲಿನ ಮೊಸ್ಸಾದ್ ಅಡಿಯಲ್ಲಿ ಹಲವಾರು ಟೀಮ್ ಗಳಿರಬಹುದು ಆದರೆ ಈ ಸೈರಾಟ್ ಮಟ್ಕಲ್ ಎಂಬ ಪಡೆ ಏನಿದೆಯಲ್ಲ ಈ ಟೀಮಿನಲ್ಲಿ ಇರುವಷ್ಟು ದೈಹಿಕ ಬಲಿಷ್ಟರಾದವರು ,ಮಾನಸಿಕವಾಗಿ ಬಲಿಷ್ಟರಾದವರು ಮತ್ತಾವ ಇಸ್ರೇಲಿ ಪಡೆಯಲ್ಲಿಯೂ ಇಲ್ಲ !

ಬೇರೆಲ್ಲಾ ಕಮಾಂಡೋ ಟೀಮ್ ಗಳು ಆಪರೇಸನ್ನಿಗೆ ಇಳಿಯುವಾಗ ಅವರೆಲ್ಲರಿಗೂ ಆಪರೇಸನ್ ಮುಗಿದ ನಂತರ ನಾವು ಹಿಂತಿರುಗಿ ಬರುತ್ತೇವೆಂದು ಖಚಿತವಾಗಿರುತ್ತದೆ ಆದರೆ ಸೈರಾಟ್ ಮಟ್ಕಲ್ ಪಡೆಗೆ ಆಪರೇಸನ್ನಿಗೆ ಇಳಿಯಲು ತಿಳಿಸಿದರೆಂದರೆ ತಟಕ್ಕನೆ ಅವರೇ ಅರಿತುಕೊಂಡು ಬಿಡುತ್ತಾರೆ “ಇದು ಅತ್ಯಂತ ಅಪಾಯಕಾರೀ ಆಪರೇಸನ್ “ಹಾಗಾಗಿ ನಮ್ಮನ್ನು ಕಣಕ್ಕಿಳಿಸುತ್ತಿದ್ದಾರೆ !
ಅಂದರೆ ನಮ್ಮಲ್ಲಿ ಯಾವೊಬ್ಬನೂ ಜೀವಂತ ಹಿಂದಿರುಗಿ ಬರುವ ಸಾಧ್ಯತೆ ಪ್ರತಿಶತ 99.99% ಇಲ್ಲವೇ ಇಲ್ಲ ! ಎಂದರ್ಥ !

“ಸೈರಾಟ್ ಮಟ್ಕಲ್ ಪಡೆಯು ಕಣಕ್ಕಿಳಿದಿತ್ತು”ಎಂದು ಎಂಟಬ್ಬೆ ಆಪರೇಸನ್ ವಿಚಾರದಲ್ಲಿಯೂ ನಾ ಬರೆದಿದ್ದೆ .ಆ ಪಡೆ ಕಣಕ್ಕಿಳಿದರೆ ಪ್ರಾಣಾಂತಿಕ ಹೋರಾಟ ಶುರುವಾಯಿತು ಎಂಬುದಂತೂ ಶತಃಸಿದ್ದ ನಿಜ ಆದರೆ ಆಪರೇಸನ್ನಿಗೆ ಹೊರಟ ಸೈರಾಟ್ ಮಟ್ಕಲ್ ಕಮಾಂಡೋ ಟೀಮ್ ನೋಡಿ “ಇವರಾರೂ ಹಿಂದಿರುಗಿ ಬರಲಾರರು ಎಂಬುದನ್ನು ಊಹಿಸಿ “ಮಿಕ್ಕ ಸೈನಿಕರು ಕಣ್ಣೀರಾಗುತ್ತಾರೆ !

ಆದರೂ ಉಗ್ರರ ಗುಂಡಿಗೆ ರಕ್ತ ಕಾರಿಸಿ ಅದೆಷ್ಟೋ ಸೈನಿಕರು ಹಿಂದಿರುಗಿಯೂ ಇದ್ದಾರೆ ಎಷ್ಟೋ ಸೈನಿಕರು ಆಪರೇಸನ್ ಸಮಯದಲ್ಲಿ ಸತ್ತದ್ದೂ ಇದೆ ಬಿಡಿ .

“ಆಪರೇಸನ್ ಐಸೋಟೋಪ್ “

ಹೈಜಾಕ್ ಆದ ವಿಮಾನ ಸಬೀನಾ 571 ಗೆ ಇಂಧನ ಪೂರೈಕೆ , ಆಹಾರ ಪೂರೈಕೆಗಾಗಿ ಹೋಗುವ ಟೀಮಿನಂತೆ ಒಳನುಗ್ಗಲು 16 ಸೈನಿಕರಿದ್ದ ಸೈರಾಟ್ ಮಟ್ಕಲ್ ಪಡೆ ಸಿದ್ಧವಾಯ್ತು ಹಾಗೂ ಆ ಟೀಮ್ ಐದು ಬೇರೆ ಬೇರೆ ಟೀಮ್ ಗಳಾಗಿ ಮೈನ್ ಡೋರ್ , ಹಿಂಭಾಗದ ಲೋ ಲೆವೆಲ್ ಡೋರ್ ,ಎಮರ್ಜೆನ್ಸಿ ಡೋರ್ ಹಾಗೂ ವಿಮಾನದ ಎರಡು ಟಾಯ್ಲೆಟ್ ಕಿಟಕಿಗಳ ಮೂಲಕ ಒಳಗೆ ನುಗ್ಗುವುದು ಎಂದು ಪೂರ್ವ ನಿರ್ಧರಿತವಾಯ್ತು.

ವಿಮಾನದ ಒಳಗೆ ನುಗ್ಗಿ ಸೈಲೆಂಟಾಗಿ ಉಗ್ರರನ್ನು ಹಂಗಿಂದಗೆಯೇ ಪರಂಧಾಮಕ್ಕೆ. ಅಟ್ಟಿಬಿಟ್ಟರು ಆ ಸಂದರ್ಭದಲ್ಲಿ ರೇರ್ ಡೋರಿನಿಂದ ಒಳಗೆ ತೂರಿದ ಬೆಂಜಮಿನ್ ನೇತನ್ಯಾಹು ಕೈಗೆ ಉಗ್ರಳಾದ ತ್ಹೆರೇಸಾ ಹಾಲ್ಸಾ ಸಿಕ್ಕದ್ದೇ ತಡ ಢಮೀಲನೆ ಮುಖಕ್ಕೆ ಗುದ್ದಿದ ಬೆಂಜಮಿನ್ ನೇತನ್ಯಾಹು ಇಡೀ ವಿಮಾನದಲ್ಲಿ ಬಾಂಬ್ ಇಟ್ಟಿರುವ ಜಾಗದ ಕುರಿತು ತಿಳಿಸಲು ಹೇಳಿದನು ಅವಳು ಹ್ಞಾಂ ಹ್ಞೂಂ ಏನೂ ಹೇಳದ ಕಾರಣಕ್ಕೆ ಜೊತೆ ಸೈನಿಕ ಮಾರ್ಕೋ ಹಾಶ್ಕೆನಾಜಿ ಕೈಗೆ ಇವಳನ್ನು ಒಪ್ಪಿಸಿ ಗುಂಡು ಹಾರಿಸಿ ಸಾಯಿಸಲು ತಿಳಿಸಿದನು !

ಬೆಂಜಮಿನ್ ನೇತನ್ಯಾಹು ಕೈಯಲ್ಲಿಯೂ ಮಷೀನ್ ಗನ್ ಇತ್ತು ಆದರೆ ಅದು ಅತೀ ಹೆಚ್ಚು ಶಕ್ತಿಶಾಲಿಯಾದ ಕಾರಣ ಪಿಸ್ತೂಲಿನಿಂದ ಇವಳ ಕಥೆ ಕೇಳಲು ನಿರ್ಧರಿಸಿದರು ಆಗ ಅವಳು ಹೊಡೆದಾಟ ಶುರುಹಚ್ಚಿದ್ದರಿಂದ ಮಾರ್ಕೋ ಹಾಶ್ಕೆನಾಜಿ ಹಾರಿಸಿದ ಗುಂಡು ಹಾಲ್ಸಾಳ ಬೆನ್ನಿನ ಕಡೆಯಿಂದ ಎದೆಗೆ ತೂರಬೇಕಾಗಿತ್ತು ಅವಳ ಹಾರಾಟ ಹೋರಾಟಕ್ಕೆ ಗುಂಡು ಮಿಸ್ಸಾಗಿ ಬೆಂಜಮಿನ್ ನೇತನ್ಯಾಹುವಿನ ಕಡೆ ತೂರಿತು !

ಆ ಧಡ್ ಎಂಬ ಕಡಿಮೆ ಶಬ್ಧಕ್ಕೆ ಬೆಳಕಿನ ವೇಗದಲ್ಲಿ ಹಾಲ್ಸಾಳ ಎದೆಯ ಮುಂದೆ ನಿಂತಿದ್ದ ನೇತನ್ಯಾಹು ತಟಕ್ಕನೆ ಸ್ವಲ್ಪ ಬಲಕ್ಕೆ ವಾಲಿಬಿಟ್ಟನು ಆದ್ದರಿಂದ ಬುಲೆಟ್ ಎಡಗೈ ತೋಳಿನಿಂದ ಧಸಕ್ಕನೆ ತೂರಿ ಆಚೆ ಹೋಯಿತು !

ಇಲ್ಲದಿದ್ದರೆ ಬೆಂಜಮಿನ್ ನೇತನ್ಯಾಹು ಎದೆಯಿಂದ ತೂರಿ ಆಚೆ ಹೋಗಿರುತ್ತಿತ್ತು !!!

ಅದೇನೇ ಆಗಲಿ ಇಸ್ರೇಲ್ ಯಾವತ್ತೂ ಉಗ್ರರ ಹೈಜಾಕಿಗೋ ಮತ್ತೊಂದಕ್ಕೋ ಎಂದೆಂದಿಗೂ ಹೆದರುವುದಿಲ್ಲ ಎಂಬುದು ಸಾಬೀತು ಮಾಡುವಲ್ಲಿ ಇಸ್ರೇಲ್ ಯಶಸ್ವಿಯಾಯ್ತು.

ಇಡೀ 16 ಜನರ ಸೈರಾಟ್ ಮಟ್ಕಲ್ ಪಡೆಯ ಸೈನಿಕರಲ್ಲಿ ಬೆಂಜಮಿನ್ ನೇತನ್ಯಾಹುವಿಗೆ ಮಾತ್ರ ಗುಂಡು ತಗುಲಿತ್ತು ವಿಮಾನದಲ್ಲಿದ್ದ ಇಬ್ಬರಿಗೆ ಗಂಭಿರವಾದ ಜಾಗಕ್ಕೆ ಬುಲೆಟ್ ತೂರಿದ್ದವು ಹಾಗೂ ಮತ್ತೊಬ್ಬ ಸಾವನ್ನಪ್ಪಿದ್ದನು.

ಇದಿಷ್ಟೂ ಆ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಿನ್ನೆಲೆ ,ಇದೊಂದೆಯಾ ಅಂತೇನಿಲ್ಲ ಆತನೊಬ್ಬ ಅತ್ಯುತ್ತಮ ಸ್ನೈಪರ್ !
ಬರೊಬ್ಬರಿ ಒಂದೂವರೆ ಕಿಲೋಮೀಟರು ದೂರದಲ್ಲಿ ಓಡುತ್ತಿರುವವನಿಗೆ ಗುರಿಯಿಟ್ಟು ಕರಾರುವಕ್ಕಾಗಿ ತಲೆಯನ್ನೇ ಢಮೀಲೆನ್ನಿಸುವ ಛಾತಿಯೂ ಆತನಲ್ಲಿದೆ !

ಅವನನ್ನ ಹಂಗೇ ಸೈಡಿಗೆ ಕರೆದು ಬಟ್ಟೆ ಬಿಚ್ಚಿ ನಿಲ್ಲಿಸಿದರೆ ಆತನ ದೇಹದಲ್ಲಿ ಹದಿಮೂರು ಕಡೆ ಬುಲೆಟ್ ತೂರಿದ ಗುರುತುಗಳಿವೆ! ಇದಿಷ್ಟೂ ದೇಶಪ್ರೇಮಿ ಅರ್ಹತೆಗಳೇ ಆತನನ್ನು ಇಸ್ರೇಲಿನ ಪ್ರಧಾನಿಯನ್ನಾಗಿಸಿದ್ದು !

ಚಿತ್ರದಲ್ಲಿ:-

1) ಜೆರುಸಲೆಮ್ ಓಟಿಂಗ್ ವಿಚಾರದಲ್ಲಿ ನಿಮ್ಮ ಮೇಲೆ ನಮಗೆ ಎಂದು ನೇರವಾಗಿ ಮೋದಿಗೆ ಹೇಳಿದ ಸೈನಿಕ ಆಲಿಯಾಸ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು !!

2) ಅಂದಿನ ಇಸ್ರೇಲ್ ಪ್ರಧಾನಿ ಝಲ್ಮಾನ್ ಶಾಜರ್ ಥ್ಯಾಂಕ್ಸ್ ಕೊಡುತ್ತಿರುವ ಕೈಗೆ ಬುಲೆಟ್ ತೂರಿಸಿಕೊಂಡ ಕಮಾಂಡರ್ ಬೆಂಜಮಿನ್ ನೇತನ್ಯಾಹು !!

– ಉಮೇಶಾಚಾರ್ ಕೆ.ಬಿ

 •  
  1.3K
  Shares
 • 1.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com