Connect with us
Loading...
Loading...

ಪ್ರಚಲಿತ

ಸದ್ಯ ಚುನಾವಣೆ ನಡೆದರೆ ಪ್ರಧಾನಿ ಮೋದಿಗೆ ಕಾದಿದೆಯಾ ಬಿಗ್ ಶಾಕ್?!!

Published

on

  • 1.2K
  •  
  •  
  •  
  •  
  •  
  •  
  •  
    1.2K
    Shares

ಈಗ ಚುನಾವಣೆ ನಡೆದರೆ ಮೋದಿ ಸರ್ಕಾರಕ್ಕೆ ಎಷ್ಟು ಸ್ಥಾನ ಲಭಿಸಲಿವೆ ಗೊತ್ತಾ?

2014 ರ ಲೋಕಸಭೆ ಚಿನಾವಣೆಯಲ್ಲಿ ಎನ್.ಡಿ.ಎ ಸರ್ಕಾರ ರಚನೆಯಾಗಿತ್ತು, ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ ಎನ್.ಡಿ.ಎ ಭರ್ಜರಿ ಗೆಲುವಿನೊಂದಿಗೆ 336 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

ಈ ಚುನಾವಣೆಯಲ್ಲಿ ಮೋದಿ ಸರ್ಕಾರ ರಚಿಸಲು ಸಾಧ್ಯವೇ ಇಲ್ಲ, ದಕ್ಷಿಣ ಭಾರತ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಸ್ಥಿತ್ವವೇ ಇಲ್ಲದ ಕಾರಣ ಮೋದಿ ಪ್ರಧಾನಿಯಾಗಲೂ ಸಾಧ್ಯವೇ ಇಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು.

ಕಾರಣ ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಷ್ಟೇ ಬಿಜೆಪಿ ಕೆಲ ಸ್ಥಾನಗಳನ್ನು ಗಳಿಸಬಹುದಾಗಿತ್ತು ಹೊರತು ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಓರಿಸ್ಸಾದಲ್ಲಿ ಬಿಜೆಪಿ ನೆಲೆಯೇ ಇರಲಿಲ್ಲ, ದಕ್ಷಿಣ ಭಾರತದ ಬೆಂಬಲವಿಲ್ಲದೇ ಪ್ರಧಾನಿ ಹುದ್ದೆ ಮೋದಿಗೆ ಒಳಿಯೋದು ಸಾಧ್ಯವೇ ಇರದ ಮಾತಾಗಿತ್ತು.

ದೆಹಲಿಯಲ್ಲಿ ಕೇಂದ್ರ ಸರ್ಕಾರ ರಚನೆಯಾಗಬೇಕಾದರೆ 543 ಕ್ಷೇತ್ರಗಳಲ್ಲಿ 272 ಕ್ಷೇತ್ರಗಳನ್ನ ಬಿಜೆಪಿ ಗಳಿಸಲೇಬೇಕಾಗಿತ್ತು.

ಮೋದಿ ಸಾಲು ಸಾಲು ಸಭೆಗಳನ್ನ ಮಾಡಿ ಕಾಲಿಗೆ ಚಕ್ರ ಕಟ್ಟಿ ಓಡಾಡಿ ಕೊನೆಗೂ 272 ಅಲ್ಲ ಅದಕ್ಕೂ ಹೆಚ್ಚು ಅಂದರೆ 282 ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿಯೇ ಬಿಟ್ಟಿತ್ತು. ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಉತ್ತರಪ್ರದೇಶದ 80 ಕ್ಷೇತ್ರಗಳಲ್ಲಿ ಬಿಜೆಪಿ ಬರೋಬ್ಬರಿ 73 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಕಾರಣವಾಗಿತ್ತು.

ಬಿಜೆಪಿ 282 ಸ್ಥಾನಗಳು ಗಳಿಸಿತ್ತು ಹಾಗು ಬಿಜೆಪಿ ಮಿತ್ರ ಪಕ್ಷಗಳು 54 ಸ್ಥಾನ ಗಳಿಸುವ ಮೂಲಕ ಬಿಜೆಪಿ ಬೆಂಬಲಿತ ಎನ್.ಡಿ.ಎ ಸರ್ಕಾರ 336 ಸ್ಥಾನಗಳೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿತ್ತು.

ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಿಂದ ಅನೇಕ ಕ್ರಾಂತಿಕಾರಿ, ಐತಿಹಾಸಿಕ ನಿರ್ಧಾರಗಳನ್ನ ತೆಗೆದುಕೊಂಡರು ಅದರಲ್ಲಿ ಪ್ರಮುಖವಾದುವೆಂದರೆ ನೋಟು ಅಮಾನ್ಯೀಕರಣ ಹಾಗು ಜಿಎಸ್ಟಿ.

ಕಪ್ಪು ಹಣ ನಿಯಂತ್ರಣಕ್ಕೆ ನೋಟು ಅಮಾನ್ಯೀಕರಣ ಐತಿಹಾಸಿಕ ನಿರ್ಧಾರ ವಾಗಿ ಸಾಬೀತಾಗಿತ್ತು. ಆದರೆ 500, 1000 ನೋಟುಗಳು ಬ್ಯಾನ್ ಆದನಂತರ ಜನ ಸಾಕಷ್ಟು ತೊಂದರೆ ಅನುವಭವಿಸಿದ್ಸಾರೆ ಅಂತ ಕಾಂಗ್ರೆಸ್ ಆದಿಯಾಗಿ ಎಲ್ಲ ವಿಪಕ್ಷಗಳೂ ಸರ್ಕಾರವನ್ನ ಟಾರ್ಗೇಟ್ ಮಾಡಿ ಪ್ರಧಾನಿ ಮೋದಿಯವರ ವಿರುದ್ಧದ ಅಲೆ ಜನಮಾನಸದಲ್ಲಿ ಬಿತ್ತಲು ಶುರುಮಾಡಿಕೊಂಡರು.

ಆದರೆ ಅವರ ಪ್ರಯತ್ನ ಫಲಿಸಲಿಲ್ಲ ಎನ್ನುವುದಕ್ಕೆ ತಾಜಾ ನಿದರ್ಶನವೆಂದರೆ ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು.

ಡಿಮಾನಿಟೈಸೇಷನ್ ಅಪಪ್ರಚಾರ ಫಲಿಸಲಿಲ್ಲ ಎಂದು ಈಗ ಕಾಂಗ್ರೆಸ್ ಜಿಎಸ್ಟಿಯನ್ನ ಅಸ್ತ್ರವಾಗಿ ಬಳಸಿಕೊಂಡು ಮೋದಿ ಸರ್ಕಾರದ ವಿರುದ್ಧ ಅಭಿಯಾನ ಶುರು ಮಾಡಿದೆ.

ನೋಟು ಅಮಾನ್ಯೀಕರಣ, ಜಿಎಸ್ಟಿ ಯ ಕಾರಣವೇ ದೇಶದ ಜಿಡಿಪಿ ಕುಸಿದಿದೆ ಅಂತ ಅಪಪ್ರಚಾರವನ್ನೂ ಮಾಡಲಾಗುತ್ತಿದೆ.

ಆದರೆ ವಿಪಕ್ಷಗಳ ಈ ದಾಳಿಯಲ್ಲಿ ಪ್ರಧಾನಿ ಮೋದಿ 2019 ರ ಚುನಾವಣೆ ಗೆಲ್ಲುತ್ತಾರಾ? ವಿರೋಧಿಗಳ ಷಡ್ಯಂತ್ರಕ್ಕೆ ತಕ್ಕ ಉತ್ತರ ಮೋದಿ ಕೊಡಬಲ್ಲರಾ?

ಈ ವಿಷಯಗಳನ್ನ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಆಂಗ್ಲ ಸುದ್ದಿವಾಹಿನಿ ರಿಪಬ್ಲಿಕ್​ ಟಿವಿ​ – ಸಿವೋಟರ್ ಸರ್ವೆ ನಡೆಸಿದೆ.

ಈ ಸರ್ವೇ ಪ್ರಕಾರ ಈಗ ಲೋಕಸಭೆ ಚುನಾವಣೆ ನಡೆದರೆ ಮತ್ತೆ ಎನ್​​ಡಿಎ ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆಯಿದೆ.

ಈಗ ಚುನಾವಣೆ ನಡೆದರೆ 543 ಲೋಕಸಭಾ ಸ್ಥಾನಗಳ ಪೈಕಿ ಎನ್’ಡಿಎ ಮೈತ್ರಿಕೂಟವು 335 ಸ್ಥಾನಗಳನ್ನು, ಹಾಗೂ ಕಾಂಗ್ರೆಸ್ ಬೆಂಬಲಿತ ಯುಪಿಎ ಕೇವಲ 89 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಯು ಹೇಳಿದೆ.

ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲೂ ಪ್ರಧಾನಿ ಮೋದಿ ಅಲೆ ಕೆಲಸ ಮಾಡಲಿದೆ.

ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ, ಬಿಜೆಪಿ 22, ಕಾಂಗ್ರೆಸ್ 5, ಹಾಗೂ ಜೆಡಿಎಸ್ 1 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೆ ಅಂತ ಈ ಸಮೀಕ್ಷೆ ಹೇಳಿದೆ.

ಒಂದು ವೇಳೆ ಜೆಡಿಎಸ್​​​​ ಜತೆ ಕೈಜೋಡಿಸಿದರೆ ಕಾಂಗ್ರೆಸ್​ ಮುನ್ನಡೆ ಸಾಧಿಸುವುದು ಎಂದು ಹೇಳಲಾಗಿದೆ.

ಜೆಡಿಎಸ್​​​​-ಕಾಂಗ್ರೆಸ್ ಮೈತ್ರಿಯಿಂದ ಯುಪಿಎಗೆ 17 ಹಾಗೂ ಬಿಜೆಪಿಗೆ 11​ ಸ್ಥಾನಗಳು ದಕ್ಕಲಿವೆ.

ರಿಪಬ್ಲಿಕ್​​ – ಸಿವೋಟರ್ ಸರ್ವೆ ಇತರ ಮುಖ್ಯಾಂಶಗಳು:

ದೆಹಲಿ(7) – ಏಳೂ ಲೋಕಸಭಾ ಕ್ಷೇತ್ರಗಳಲ್ಲೂ ಎನ್​​ಡಿಎ ಗೆಲ್ಲುವ ಸಾಧ್ಯತೆ.

ಛತ್ತೀಸ್​ಗಢ(11) – ಬಿಜೆಪಿ 4, ಯುಪಿಎ 7

ಗೋವಾ(2) – ಎರಡೂ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧ್ಯತೆ

ಗುಜರಾತ್(26)​ – ಎನ್​​ಡಿಎ 23, ಯುಪಿಎ 3

ಹರಿಯಾಣ(10) – ಎನ್​​ಡಿಎ 8, ಯುಪಿಎ 1, ಇತರೆ 1 ರಲ್ಲಿ ಗೆಲುವು

ಹಿಮಾಚಲಪ್ರದೇಶ(4) – ನಾಲ್ಕೂ ಸ್ಥಾನಗಳನ್ನೂ ಬಿಜೆಪಿ ಗೆಲ್ಲಬಹುದು

ಜಮ್ಮು-ಕಾಶ್ಮೀರ(6) – ಎನ್​ಡಿಎ 4, ಯುಪಿಎ 2 ಸ್ಥಾನಗಳಲ್ಲಿ ಗೆಲುವು

ಜಾರ್ಖಂಡ್(14)​ – ಎನ್​ಡಿಎ 7, ಯುಪಿಎ 6, ಇತರೆ 1

ಕೇರಳ(20) – ಎನ್​​ಡಿಎ 1, ಯುಪಿಎ 12, ಇತರೆ 7 ಸ್ಥಾನ

ಲಕ್ಷದ್ವೀಪ(1) – ಒಂದು ಲೋಕಸಭಾ ಕ್ಷೇತ್ರವೂ ಯುಪಿಎ ಪಾಲು

ಮಧ್ಯಪ್ರದೇಶ(29) – ಎನ್​​ಡಿಎ 23, ಯುಪಿಎ 6

ಮಹಾರಾಷ್ಟ್ರ(48) – ಎನ್​​ಡಿಎ 44, ಯುಪಿಎ 2, ಇತರೆ 2

ಮಣಿಪುರ(2)– ಎನ್​​ಡಿಎ 2

ಮೇಘಾಲಯ(2) – ಎನ್​​ಡಿಎ 2, ಯುಪಿಎ 0

ಮಿಜೋರಾಮ್​​​​(1) – ಎನ್​​ಡಿಎ 1, ಯುಪಿಎ 0

ನಾಗಾಲ್ಯಾಂಡ್​​​​​​​​(1) – ಎನ್​​ಡಿಎ 1, ಯುಪಿಎ 0

ಓರಿಸ್ಸಾ(21) – ಎನ್​​ಡಿಎ 13, ಯುಪಿಎ 0, ಇತರೆ 8

ಪುದುಚೇರಿ – ಎನ್​​ಡಿಎ 0, ಯುಪಿಎ 1

ಪಂಜಾಬ್​​(13) – ಎನ್​​ಡಿಎ 2, ಯುಪಿಎ 9, ಇತರೆ 2

ಸೋ ಈ ರಿಪೋರ್ಟ್ ನಿಂದ ಸ್ಪಷ್ಟವಾಗುವುದೆಂದರೆ ಈಗ ಸದ್ಯ ಲೋಕಸಭಾ ಚುನಾವಣೆ ನಡೆದರೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಮತ್ತೆ ಸ್ಪಷ್ಟ ಬಹುಮತ ಪಡೆದು ಮತ್ತೆ ಪ್ರಧಾನಿ ಹುದ್ದೆಯನ್ನ ಅಲಂಕರಿಸುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

  •  
    1.2K
    Shares
  • 1.2K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com