Connect with us
Loading...
Loading...

ಅಂಕಣ

ಸನಾತನಿ ಭಾರತದ ಬಗ್ಗೆ ಈ ವಿಷ್ಯಗಳು ನಿಮಗೆ ಗೊತ್ತೆ? ಗೊತ್ತಿಲ್ಲದಿದ್ರೆ ಓದಿ!!! ಭಾಗ 2

Published

on

 • 39
 •  
 •  
 •  
 •  
 •  
 •  
 •  
  39
  Shares

1. ಚಂದ್ರನಲ್ಲಿ ನೀರಿದೆ ಅನ್ನೋದನ್ನ ಕಂಡುಹಿಡಿದದ್ದು ಭಾರತ

2009 ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದ್ದ ಚಂದ್ರಯಾನ-1 ಚಂದ್ರನಲ್ಲಿ ನೀರಿದೆ ಅನ್ನೋದನ್ನ ತನ್ನ ಮೂನ್ ಮಿನರಾಲಜಿ ಮ್ಯಾಪರ್ ಮೂಲಕ ಜಗತ್ತಿಗೆ ತಿಳಿಸಿತ್ತು.

ಅಲ್ಲೀವರೆಗೂ ಚಂದ್ರನಲ್ಲಿ ನೀರಿದೆ ಅನ್ನೋದು ಜಗತ್ತಿಗೆ ಗೊತ್ತಿರಲಿಲ್ಲ, ಭಾರತದಿಂದ ಜಗತ್ತಿಗೆ ಈ ವಿಷ್ಯ ಗೊತ್ತಾಗುವಂತಾಗಿತ್ತು.

2. ಸ್ವಿಟ್ಜರ್ಲೆಂಡ್‌‌ ನಲ್ಲಿ ವಿಜ್ಞಾನ ದಿನವನ್ನ ಭಾರತೀಯನೊಬ್ಬನ ಹೆಸರಿನಿಂದ ಆಚರಿಸಲಾಗುತ್ತದೆ

ಹೌದು ಸ್ವಿಟ್ಜರ್ಲೆಂಡ್‌‌ ನಲ್ಲಿ ವಿಜ್ಞಾನ ದಿನವನ್ನ ಭಾರತದ ಹೆಮ್ಮೆಯ ಪುತ್ರ, ಮಾಜಿ ಅಬ್ದುಲ್ ಕಲಾಂ ಅವರ ಹೆಸರಿನಿಂದ ಆಚರಿಸಲಾಗುತ್ತೆ.

ಮಿಸೈಲ್ ತಂತ್ರಜ್ಞಾನದ ಪಿತಾಮಹ ಅಂತ ಕರೆಯುವ ಅಬ್ದುಲ್ ಕಲಾಂ ರವರು 2006 ರ ಮೇ 26 ಕ್ಕೆ ಸ್ವಿಟ್ಜರ್ಲೆಂಡ್‌‌ ಗೆ ಭೇಟಿ ನೀಡಿದ್ದರು, ಇದರ ಕಾರಣ ದಿನವನ್ನೇ ಸ್ವಿಟ್ಜರ್ಲೆಂಡ್‌‌ ವಿಜ್ಞಾನ ದಿನವಂತ ತನ್ನ ರಾಷ್ಟ್ರದಲ್ಲಿ ಪ್ರತಿ ವರ್ಷ ಆಚರಣೆ ಮಾಡುತ್ತ ಬಂದಿದೆ.

3. ಭಾರತದ ಮೊದಲ ರಾಷ್ಟ್ರಪತಿ ಪಡೆದ ಸಂಬಳವೆಷ್ಟು ಗೊತ್ತಾ?

ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ತಮ್ಮ ಸಂಬಳದ ಕೇವಲ 50% ಮಾತ್ರ ಪಡೆದವರಾಗಿದ್ದರು.

ನನಗೆ ಇಷ್ಟು ಸಂಬಳ ಪಡೆಯುವ ಅವಶ್ಯಕತೆಯಿಲ್ಲ, ಸಂಬಳವನ್ನ ಮಾತ್ರ ಪಡೆಯುತ್ತೇನೆ ಅಂತ ರಾಜೇಂದ್ರಪ್ರಸಾದರು ತಮ್ಮ ಸಂಬಳದ 50% ನ್ನ ಪಡೆಯಲಿಲ್ಲ.

12 ವರ್ಷಗಳ ಅಧಿಕಾರಾವಧಿಯ ಕೊನೆಯಲ್ಲಿ ಅವರು ತಮ್ಮ ಸಂಬಳದ ಕೇವಲ 25% ವನ್ನಷ್ಟೆ ಪಡೆದಿದ್ದರಂತೆ. ಆಗ ರಾಷ್ಟ್ರಪತಿಗಳ ಸಂಬಳ 10,000 ಇತ್ತು

4. ಭಾರತದ ಮೊದಲ ರಾಕೆಟ್ ನ್ನ ಉಡಾವಣಾ ಸ್ಥಳಕ್ಕೆ ಕೊಂಡೊಯ್ದದ್ದು ಹೇಗೆ ಗೊತ್ತಾ?

ಭಾರತದ ಮೊದಲ ರಾಕೆಟ್ ನ್ನ ಟ್ರಾನ್ಸಪೋರ್ಟೇಷನ್ ಗಾಗಿ ಸೈಕಲ್ ಮೇಲೆ ಕೊಂಡೊಯ್ಯಲಾಗಿತ್ತು.

ಮೊದಲ ರಾಕೆಟ್ ಗಾತ್ರದಲ್ಲಿ ಚಿಕ್ಕದಾಗಿದ್ದು ಅದನ್ನ ಕೇರಳದ ತಿರುವನಂತಪುರಂ ನಲ್ಲಿರುವ ಥುಂಬಾ ಲಾಂಚಿಂಗ್ ಸ್ಟೇಷನ್ನಿಗೆ ಬೈಸಿಕಲ್ ಮೂಲಕ ಕೊಂಡೊಯ್ಯಲಾಗಿತ್ತು.

5. ಜಗತ್ತಿನಲ್ಲಿ ಅತಿ ಹೆಚ್ಚು ಇಂಗ್ಲಿಷ್ ಮಾತನಾಡುವ ಜನರಿರೋದು ಭಾರತದಲ್ಲಿ

ಅಮೇರಿಕಾದ ನಂತರ ಭಾರತದಲ್ಲಿ ಇಂಗ್ಲಿಷ್ ಮಾತನಾಡುವ ಅತಿ ಹೆಚ್ಚು ಜನರಿದ್ದಾರೆ, ಈ ಸಂಖ್ಯೆ ಒಂದೂವರೆ ಕೋಟಿ ಅಂದರೆ ಭಾರತದ ಜನಸಂಖ್ಯೆಯ ಕೇವಲ 10% ಮಾತ್ರ.

6. ಜಗತ್ತಿನಲ್ಲಿ ಅತಿ ಹೆಚ್ಚು ಸಸ್ಯಾಹಾರಿಗಳು ಇರುವ ದೇಶ ಭಾರತ

ಭಾರತದ ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳೋ ಏನೋ ಗೊತ್ತಿಲ್ಲ ಆದರೆ ಭಾರತದ 20-40% ಜನ ಸಸ್ಯಾಹಾರಿಗಳಂತೆ

7. ಜಗತ್ತಿನ “ಮಾನವ ಕಂಪ್ಯೂಟರ್” ನಮ್ಮ ದೇಶದವರೇ

ಭಾರತದ ಹೆಮ್ಮೆಯ ಮಹಿಳೆ ಶಕುಂತಲಾ ದೇವಿಯವರನ್ನ ಮಾನವ ಕಂಪ್ಯೂಟರ್ ಅಂತ ಕರೆಯಲಾಗುತ್ತೆ.

13 ಅಂಕಿಯ ಎರಡು ಸಂಖ್ಯೆಗಳನ್ನ ಕೆಲವೇ ಸೆಕೆಂಡುಗಳಲ್ಲಿ ಲೆಕ್ಕ ಹಾಕುವ ಶಕ್ತಿ ಶಕುಂತಲಾ ದೇವಿಯವರಲ್ಲಿತ್ತು.

ಉದಾ:
7,686,369,774,870 × 2,465,099,745,779 ಎಂಬ ಎರಡು random ನಂಬರ್ ಗಳನ್ನ ಗುಣಿಸಲು ಶಕುಂತಲಾ ದೇವಿಯವರಿಗೆ ಹೇಳಿದಾಗ ಅವರು ಕೇವಲ 28 ಸೆಕೆಂಡುಗಳಲ್ಲಿ ನಿರ್ದಿಷ್ಟವಾದ ಉತ್ತರವನ್ನ ನೀಡಿದ್ದರು.

8. ಗಗನಯಾತ್ರಿ ರಾಕೇಶ್ ಶರ್ಮಾರನ್ನ ಅಂತರಿಕ್ಷದಿಂದ ಭಾರತ ಹೇಗೆ ಕಾಣುತ್ತೆ ಅಂತವಕೇಳಿದ ಪ್ರಶ್ನೆಗೆ ಅವರು ನೀಡಿದ್ದ ಉತ್ತರವೇನು ಗೊತ್ತಾ?

ಮಾಜಿ ಪ್ರಧಾನಿ ಇಂದಿರಾಗಾಂಧಿ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾರನ್ನ ಈ ರೀತಿಯ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರ “ಸಾರೇ ಜಹಾನ್ ಸೇ ಅಚ್ಛಾ” ಎಂಬ ನಮ್ಮ ದೇಶದ ಸುಪ್ರಸಿದ್ಧ ದೇಶಭಕ್ತಿ ಗೀತೆ.

ಭಾರತದ ಬಗ್ಗೆ ಹೇಳಲು ಇರೋ ವಿಷಯಗಳು ಒಂದೇ ಎರಡೇ ಪಟ್ಟಿ ಮಾಡುತ್ತ ಹೋದರೆ ಸಂಖ್ಯೆಗಳಿಗೆ ಬರ ಬರಬಹುದೇನೋ!!

ಇಂತಹ ಇಂಟರೆಸ್ಟಿಂಗ್ ವಿಷಯಗಳನ್ನ ದಿನವೂ ನಿಮ್ಮ ಮುಂದಿಡುವ ಸಣ್ಣ ಪ್ರಯತ್ನ ಮಾಡುತ್ತೇನೆ.

ಭಾರತ ಮಾತಾ ಕೀ ಜೈ!!!

 •  
  39
  Shares
 • 39
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com