Connect with us
Loading...
Loading...

Uncategorized

ಸಿಂಹದ ಗುಹೆಗೆ ನರಸಿಂಹನ ಆಗಮನವಾದಾಗ ಇಡೀ ಗುಹೆ ಬೆಚ್ಚಿಬಿದ್ದಿತ್ತು!!!

Published

on

  • 17
  •  
  •  
  •  
  •  
  •  
  •  
  •  
    17
    Shares

ತಾಯಿ ಭಾರತೀಯ ಮುಡಿಗೆ ಕೈ ಹಾಕಿದ ಇಂಗ್ಲೆಂಡಿನ ಬ್ರಿಟಿಷರಿಗೆ ಅವರ ದೇಶಕ್ಕೆ ಹೋಗಿ ಅವರಿಗೆ ಬಿಸಿ ಮುಟ್ಟಿಸುವ ಯೋಜನೆಯನ್ನು ಸ್ವಾತಂತ್ರ್ಯ ವೀರ ಸಾವರ್ಕರರು ಹಾಕಿದರು. ಅದೊಂದು ದಿನ ಒಂದು ದಿನಪತ್ರಿಕೆಯಲ್ಲಿ ಶಾಮ್ ಜೀ ಕೃಷ್ಣ ವರ್ಮಾ ಅವರು ಭಾರತೀಯ ದೇಶಭಕ್ತರ ವಿಧ್ಯಾಭ್ಯಾಸಕ್ಕಾಗಿ ನಡೆಸುತ್ತಿದ್ದ ಭಾರತ ಭವನದ ಜಾಹೀರಾತನ್ನು ಹಾಕಲಾಗಿತ್ತು. ಅದನ್ನು ನೋಡಿದ ಸಾವರ್ಕರರು ಬಾಲ ಗಂಗಾಧರ ತಿಲಕರ ಶಿಫಾರಸ್ಸು ಪತ್ರ ತೆಗೆದುಕೊಂಡು ಇಂಗ್ಲೆಂಡಿಗೆ ನೆಗೆದರು. ಅಲ್ಲಿಗೆ ಸಿಂಹದ ಗುಹೆಗೆ ನರಸಿಂಹನ ಆಗಮನವಾದಂತೆ ಆಯಿತು.

ಸಾವರ್ಕರರು ಇಂಗ್ಲೆಂಡಿಗೆ ಹೋಗಿದ್ದು ಬ್ಯಾರಿಸ್ಟರ್ ಪದವಿ ಪಡೆಯಲಲ್ಲ ಅದು ನೆಪ ಮಾತ್ರಕ್ಕೆ. ಆದರೆ ಅವರ ಮೂಲ ಉದ್ದೇಶ ಇಂಗ್ಲೆಂಡನ್ನು ಅಲ್ಲಾಡಿಸುವುದು. ಲಂಡನ್ನಿಗೆ ಹೋದ ಸಾವರ್ಕರರು ಭಾರತ ಭವನವನ್ನು ಸೇರಿ ಅಭಿನವ ಭಾರತ ಸಂಘಟನೆಯನ್ನು ಕಟ್ಟಿದರು. ಆಗಲೇ ನೋಡಿ ಶೋಕಿಲಾಲನಾಗಿದ್ದ ಮದನ್ ಲಾಲ್ ಧೀಂಗ್ರಾ ಸಾವರ್ಕರರ ಸಂಪರ್ಕಕ್ಕೆ ಬಂದದ್ದು. ಮದನ್ ಲಾಲ್ ಧೀಂಗ್ರಾ ಸಾವರ್ಕರರ ಸಂಪರ್ಕಕ್ಕೆ ಬಂದದ್ದೆ ತಡ ತಾಯಿ ಭಾರತೀಯನ್ನು ಪೂಜಿಸಲು ಶುರು ಮಾಡಿದ. ಅದೊಂದು ದಿನ ಭಾರತದಲ್ಲಿ ಭಾರತೀಯರ ಮೇಲೆ ಅಟ್ಟಹಾಸ ಮೆರೆದಿದ್ದ ಕರ್ಜನ್ ವೈಲಿ ಲಂಡನ್ನಿನ ಜಹಾಂಗೀರ್ ಹಾಲಿಗೆ ಯಾವುದೋ ಕಾರ್ಯಕ್ರಮವೊಂದಕ್ಕೆ ಬಂದಿದ್ದ. ಆ ಸಮಯವನ್ನೇ ಕಾಯುತ್ತಿದ್ದ ಮದನ್ ಲಾಲ್ ಧೀಂಗ್ರಾ ಅಂದು ಜಹಾಂಗೀರ್ ಹಾಲಿಗೆ ನುಗ್ಗಿದವನೇ ಕರ್ಜನ್ ವೈಲಿಯನ್ನು ಸಂಹರಿಸಿಬಿಟ್ಟ. ನಂತರ ಮದನ್ ಲಾಲ್ ಧೀಂಗ್ರಾನನ್ನ ಲಂಡನ್ನಿನ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ.

ಮದನ್ ಲಾಲ್ ಧೀಂಗ್ರಾನನ್ನು ಲಂಡನ್ನಿನ ಕೋರ್ಟಿನಲ್ಲಿ ವಿಚಾರಣೆ ನಡೆಸಿದಾಗ ಮದನ್ ಲಾಲ್ ಅಲ್ಲಿನ ನ್ಯಾಯಾಧೀಶರಿಗೆ ಏನು ಹೇಳ್ತಾನೆ ಗೊತ್ತಾ?
ನ್ಯಾಯಾಧೀಶರೇ ನೀವು ಕೊಡೋದು ಗಲ್ಲ ಶಿಕ್ಷೆ ಅನ್ನೋದು ನನಗೆ ಗೊತ್ತು. ಹಾಗಿದ್ದ ಮೇಲೆ ಬೇಗ ನನ್ನನ್ನು ಗಲ್ಲಿಗೇರಿಸಿಬಿಡಿ. ಯಾಕಂದ್ರೆ ನಾನು ಸತ್ತು ಬೇಗ ಹುಟ್ಟಿಬಂದು ಮತ್ತೆ ಭಾರತಾಂಬೆಯ ಮುಕ್ತಿಗಾಗಿ ಹೋರಾಡಬೇಕು. ಈ ಮಾತನ್ನ ಕೇಳಿಸಿಕೊಂಡ ನ್ಯಾಯಾಲಯ ಒಂದು ಸ್ತಬ್ಧವಾಯಿತು.

ಮದನ್ ಲಾಲ್ ಧೀಂಗ್ರಾ ತಾಯಿ ಭಾರತಿಯನ್ನು ಕುರಿತು ಒಂದು ಹೇಳಿಕೆಯನ್ನು ಕೊಡ್ತಾನೆ. ಅಮ್ಮಾ!! ನಿನ್ನ ಸೇವೆಯೆಂದರೆ ಅದು ಪ್ರಭು ಶ್ರೀರಾಮನ ಸೇವೆ. ನಿನ್ನ ಅಪಮಾನ ಅದು ನನ್ನ ದೇವರ ಅಪಮಾನ. ನಿನ್ನಂತಹ ದೊಡ್ಡ ಮಾತೆಗೆ ನನಂತಹ ದಡ್ಡ ಮಗ ಪ್ರಾಣವನ್ನು ಬಿಟ್ಟು ಇನ್ನೇನು ಕೊಡಬಲ್ಲ. ವಿಚಾರಣೆಯುದ್ದಕ್ಕೂ ಮದನ್ ಲಾಲ್ ಧೀಂಗ್ರಾ ಸಾವನ್ನು ಪ್ರೀತಿಸುತ್ತಲೇ ಇದ್ದನು. ಸಾವಿಗಾಗಿ ಕಾತರದಿಂದ ಕಾಯುತ್ತಿದ್ದನು. ಅದಕ್ಕಾಗಿಯೇ ಮದನ್ ವಿಚಾರಣೆಯುದ್ದಕ್ಕೂ ಈಗ ಬಲಿದಾನದ ಅಗತ್ಯವಿದೆ. ಆ ಅಗತ್ಯತೆಗಾಗಿ ನಾನೇ ಬಲಿದಾನಗೈಯ್ಯುತ್ತೇನೆ ಅಂತಿದ್ದ. ವಿಚಾರಣೆಯ ಬಳಿಕ ಮದನ್ ಲಾಲ್ ಧೀಂಗ್ರಾನನ್ನು ನೇಣಿಗೆ ಏರಿಸಿಬಿಟ್ಟರು. ಆತ ನಗು ನಗುತ್ತಾ ನೇಣು ಕುಣಿಕೆಗೆ ತುಂಬಿಸಿ ಭಾರತದ ಸ್ವಾತಂತ್ರ್ಯದ ಅಗ್ನಿಗೆ ಹವಿಸ್ಸಾಗಿಬಿಟ್ಟ. ವಿದೇಶದಲ್ಲಿ ಹುತಾತ್ಮನಾದ ಭಾರತದ ಮೊದಲ ಕ್ರಾಂತಿಕಾರಿ ಎನಿಸಿಕೊಂಡ.

ಮದನ್ ಲಾಲ್ ಧೀಂಗ್ರಾ ನೇಣಿಗೇರಿದ ಮರುದಿನ ಆತನ ಎಲ್ಲಾ ಹೇಳಿಕೆಗಳು ಇಂಗ್ಲೆಂಡಿನ ದಿನಪತ್ರಿಕೆಗಳಲ್ಲಿ ಪ್ರಕಟವಾದವು. ಆ ಹೇಳಿಕೆಗಳನ್ನು ‌ನೋಡಿದ War Time Prime Minister ವಿನಸ್ಟನ್ ಚರ್ಚಿಲ್ ಇಡೀ ದಿನ ಸಪ್ಪೆ ಮೋರೆಯಲ್ಲಿ, ಅಳುವ ರೀತಿಯಲ್ಲಿದ್ದರಂತೆ. ಮದನ್ ಕುರಿತು ವಿನಸ್ಟನ್ ಚರ್ಚಿಲ್ ಏನು ಹೇಳ್ತಾನೆ ಗೊತ್ತಾ? ಮದನ್ ನೀನು ಇಂಗ್ಲೆಂಡಿನಲ್ಲಿ ಹುಟ್ಟಬೇಕಿತ್ತು. ಯಾಕಂದ್ರೆ ನಿನ್ನಂತ ಕ್ರಾಂತಿಕಾರಿ ದೇಶಭಕ್ತನನ್ನು ನನ್ನ ದೇಶ ನೋಡಿರಲಿಲ್ಲ. Hats off to you ಮದನ್. ಮದನ್ ನಿನ್ನನ್ನ ಮುಂದಿನ ಹಲವಾರು ಶತಮಾನಗಳವರೆಗೆ ಭಾರತದ ಯುವಕರು ಪೂಜಿಸುತ್ತಾರೆ. ಹೀಗಂತ ಇಂಗ್ಲೆಂಡಿನ War Time Prime Minister ವಿನಸ್ಟನ್ ಚರ್ಚಿಲ್ ಮದನ್ ಕುರಿತು ಹೇಳ್ತಾನೆ.

ಸ್ವಾತಂತ್ರ್ಯ ಅಗ್ನಿಗೆ ಮದನ್ ಲಾಲ್ ಧೀಂಗ್ರಾನಂತಹ ಶೋಕಿಲಾಲ್ ಹವಿಸ್ಸಾಗುತ್ತಾನೆ ಅಂದರೆ ಅದಕ್ಕೆ ಪ್ರೇರಣೆ ಬೇರಾರೂ ಅಲ್ಲ ಸ್ವಾತಂತ್ರ್ಯ ವೀರ ಸಾವರ್ಕರ್. ಸಾವರ್ಕರರಲ್ಲಿ ಅಂತಹ ತಾಕತ್ತು ಇತ್ತು.

  •  
    17
    Shares
  • 17
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com