Connect with us
Loading...
Loading...

ಪ್ರಚಲಿತ

ಸುಪ್ರೀಂಕೋರ್ಟ್ ವಿರುದ್ಧವೇ ತಿರುಗಿಬಿದ್ದ ಮೋದಿ ವಿರೋಧಿಗಳು!!! ಮೋದಿಯನ್ನ ವಿರೋಧಿಸೋಕೆ ಈ ಮಟ್ಟಕ್ಕೆ ಇಳಿಯೋದಾ?

Published

on

 • 1.1K
 •  
 •  
 •  
 •  
 •  
 •  
 •  
  1.1K
  Shares

ನಿಮಗೆಲ್ಲಾ ಗೊತ್ತಿರುವಂತೆ ಮೊನ್ನೆ ಮೊನ್ನೆಯಷ್ಟೇ ಸುಪ್ರೀಂ ಕೋರ್ಟಿನ ನಾಲ್ವರು ಜಡ್ಜ್ ಗಳು ಪ್ರೆಸ್ ಮೀಟ್ ನಡೆಸಿದ್ದರು. ಈ ಹಿಂದೆ ಭಾರತ ಸ್ವಾತಂತ್ರ್ಯ ಸಿಕ್ಕಾಗಿನಿಂದರಲೂ ಯಾವೊಬ್ಬ ಜಡ್ಜ್‌ ಕೂಡ ಬಹಿರಂಗವಾಗಿ ಈ ರೀತಿಯ ಪ್ರೆಸ್ ಮಾಡಿದ್ದೇ ಇರಲಿಲ್ಲ. ಆ ನಾಲ್ವರೂ ಜಡ್ಜ್ ಗಳು ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ದೀಪಕ್ ಮಿಶ್ರಾರವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಲು ಪ್ರೆಸ್ ಮೀಟ್ ಕರೆದಿದ್ದರು.

ಅಲ್ಲಿಯವರೆಗೆ ಅದು ನ್ಯಾಯಾಂಗದ ವಿಚಾರ ಎಂದೇ ಆಗಿತ್ತು ಆದರೆ ಅದರ ಹಿಂದಿನ ಷಡ್ಯಂತ್ರಗಳು ಈಗ ಒಂದೊಂದಾಗಿ ಬಹಿರಂಗವಾಗಿತ್ತಿವೆ. ಆ ನಾಲ್ವರೂ ಸುಪ್ರಿಂಕೋರ್ಟ್ ಜಡ್ಜ್ ಗಳ ಬೆನ್ನಿಗೀಗ ಮೋದಿ ವಿರೋಧಿಗಳು ನಿಂತುಬಿಟ್ಟಿದ್ದಾರೆ.

ಬುಧವಾರದಂದು ಸಿಪಿಎಮ್ ಪಕ್ಷದ ಸೀತಾರಾಂ ಯೆಚೂರಿ ಮಾಧ್ಯಮಗಳನ್ನುದ್ದೇಶಿ ಮಾತನಾಡುತ್ತ,

“ನಾವು ಈ ನಾಲ್ವರು ಜಡ್ಜ್ ಗಳ ಬೆಂಬಲ ಕೊಡುವುದರ ಬಗ್ಗೆ ಯೋಚಿಸುತ್ತಿದ್ದೇವೆ, ಚೀಫ್ ಜಸ್ಟಿಸ್ ಆಗಿರುವ ದೀಪಕ್ ಮಿಶ್ರಾ ವಿರುದ್ಧ impeachment motion ನ್ನ ಬರುವ ಬಜೆಟ್ ಸೆಷನ್ ನಲ್ಲಿ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ, ಈ ನಿರ್ಧಾರ ರಾಜ್ಯಸಭೆ, ಲೋಕಸಭೆ ಎರಡರಲ್ಲೂ ಅಂಗೀಕಾರವಾಗಬೇಕಾದರೆ ಕನಿಷ್ಟ 50 ಸಂಸದರ ಸಂಖ್ಯಾಬಲ ಬೇಕಾಗುತ್ತೆ” ಅಂತ ಹೇಳಿದ್ದರು.

ಇವರ ಈ ನಡೆಯ ಉದ್ದೇಶ ಚೀಫ್ ಜಸ್ಟಿಸ್ ಆಫ್ ಇಂಡಿಯಾ ಆಗಿರುವ ದೀಪಕ್ ಮಿಶ್ರಾರನ್ನ ಟಾರ್ಗೇಟ್ ಮಾಡಿ ಅದರ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ನೀಡುವುದಾಗಿದೆ. ಈಗ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಕೈ ಜೋಡಿಸಿರುವ ಕಾಂಗ್ರೆಸ್ ಕೂಡ ದೀಪಕ್ ಮಿಶ್ರಾ ವಿರುದ್ಧ ಕಹಳೆ ಊದಿಬಿಟ್ಟಿದೆ.

ಅಷ್ಟಕ್ಕೂ ಆ ನಾಲ್ವರು ಜಡ್ಜ್ ಗಳು ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನವಾಗಿದ್ಯಾಕೆ? ಯಾರು ಈ ದೀಪಕ್ ಮಿಶ್ರಾ?

ಕಳೆದ ವರ್ಷ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರಿಂದ ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ಆಗಿ ಅಧಿಕಾರ ಸ್ವೀಕರಿಸಿದ ದೀಪಕ್ ಮಿಶ್ರಾ ಸುಪ್ರೀಂಕೋರ್ಟಿನಲ್ಲಿರುವ ಎಡಪಂಥೀಯ ವಿಚಾರಧಾರೆಯಿರುವಂತಿರುವ ಜಡ್ಜ್ ಗಳಿಗೆ ಕ್ಯಾರೆ ಅನ್ನದಿರುವುದೇ ಈ ನಾಲ್ಕೂ ಜಡ್ಜ್ ಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಅಷ್ಟಕ್ಕೂ ಈ ದೀಪಕ್ ಮಿಶ್ರಾ ಯಾರು ಗೊತ್ತೆ?

1. ಕೆಲ ದಿನಗಳ ಹಿಂದೆ ಚೀಫ್ ಜಸ್ಟಿಸ್ ಆಗಿರುವ ದೀಪಕ್ ಮಿಶ್ರಾರವರು 1984 ರಲ್ಲಿ ನಡೆದ ದೆಹಲಿ ಸಿಖ್ಖರ ಹತ್ಯಾಕಾಂಡದ ಬಗ್ಗೆ ಹಾಗು ಅದಕ್ಕೆ ಸಂಬಂಧಿಸಿದ 186 ಕೇಸ್ಗಳನ್ನ ಮತ್ತೆ ರೀ ಓಪನ್ ಮಾಡಲು ಎಸ್.ಐ.ಟಿ(Special Investigation Team) ಗೆ ಸೂಚನೆ ನೀಡಿದ್ದವರು ಇದೇ ದೀಪಕ್ ಮಿಶ್ರಾ

2. ಕಳೆದ ತಿಂಗಳು ಕಾಂಗ್ರೆಸ್ಸಿನ ಹಿರಿಯ ನಾಯಕ ಕಮ್ ಸುಪ್ರಿಂಕೋರ್ಟಿನ ವಕೀಲನಾದ ಕಪಿಲ್ ಸಿಬ್ಬಲ್ ಗೆ ದೀಪಕ್ ಮಿಶ್ರಾ ರಾಮಜನ್ಮಭೂಮಿ ಕೇಸ್ ನ್ನ 2019 ರ ಚುನಾವಣೆ ಮುಗಿದಮೇಲೆ ವಿಚಾರಣೆ ನಡೆಸಬೇಕು ಅಂತ ಹೇಳಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದು ಇದೇ ದೀಪಕ್ ಮಿಶ್ರಾ

3. ರಾಮಜನ್ಮಭೂಮಿ ತೀರ್ಪನ್ನ ನೀಡುವ ಮುಖ್ಯವಾದ ನಿರ್ಣಯ ಇರೋದು ಇದೇ ದೀಪಕ್ ಮಿಶ್ರಾರವರ ಬಳಿ.

4. 1993 ರಲ್ಲಿ ನಡೆದಿದ್ದ ಮುಂಬೈ ಸ್ಫೋಟದ ರೂವಾರಿ ಯಾಕೂಬ್ ಮೆಮೊನ್ ನ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದು ಇದೇ ದೀಪಕ್ ಮಿಶ್ರಾ!

5. ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಬೇಕಾಗಿ ಆಜ್ಞಾಪಿಸಿದ್ದು ಇದೇ ದೀಪಕ್ ಮಿಶ್ರಾ

6. ಯಾಕೂಬ್ ಗೆ ಗಲ್ಲಾಗುವ ಹಾಗೆ ಮಾಡಿದರೆ, ನೀನೆಷ್ಟೇ ಸುರಕ್ಷಿತವಾಗಿದ್ಧರೂ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅನಾಮಿಕರಿಂದ ಮೇಲಿಂದ ಮೇಲೆ ಕರೆ ಬಂದರೂ ಸಹ, ಯಾಕೂಬ್ ಗೆ ಗಲ್ಲಾಗುವ ಹಾಗೆ ಮಾಡಿದ್ದು ಇದೇ ದೀಪಕ್ ಮಿಶ್ರಾ

7. ದೀಪಕ್ ಮಿಶ್ರಾರವರ ವಿರುದ್ಧದ ಈ ಕ್ಯಾಂಪೇನ್ ನ ಮುಖ್ಯ ಉದ್ದೇಶ ಚೀಫ್ ಜಸ್ಟಿಸ್ ಎಂಬ ಸ್ಥಾನಕ್ಕೆ ಧಕ್ಕೆ ತರಲು ಈ ನಾಲ್ವರೂ ಜಡ್ಜ್ ಗಳು ನಡೆಸುತ್ತಿರುವ ಹುನ್ನಾರ ಎಂಬುದು ಅನೇಕ ಹಿರಿಯ ವಕೀಲರಲ್ಲಿ ಕೇಳಿಬರುತ್ತಿದೆ.

ದೀಪಕ್ ಮಿಶ್ರಾರವರ ಹತ್ತಿರವಿರುವ ಸಿಖ್‌ ಹತ್ಯಾಕಾಂಡದ ಕೇಸ್ ಹಾಗು ರಾಮಮಂದಿರದ ತೀರ್ಪು ಎಲ್ಲಿ ತಮ್ಮ ಆಶಯದ ವಿರುದ್ಧ ಬಂದುಬಿಡುತ್ತೋ ಅನ್ನೋದು ಇವರಿಗೆ ನುಂಗಲಾರದ ತುತ್ತಾಗಿ ಕಾಡುತ್ತಿದೆ.

ಅಷ್ಟಕ್ಕೂ ಸಿಜೆಐ ದೀಪಕ್ ಮಿಶ್ರಾರನ್ನ ಟಾರ್ಗೇಟ್ ಮಾಡುತ್ತಿರುವ ಈ ನಾಲ್ವರೂ ಜಡ್ಜ್ ಗಳ ಹಿನ್ನೆಲೆ ನಿಮಗೆ ಗೊತ್ತೆ?

* ಸೈನಿಕರ ಮೇಲೆ ಕಲ್ಲು ತೂರುವವರ ವಿರುದ್ಧ ಭಾರತೀಯ ಸೇನೆ ಪೆಲೆಟ್ ಗನ್ ಬಳಸಿತ್ತು, ಪಲೆಟ್ ಗನ್ ಎಂದರೆ ಅದರಲ್ಲಿರೋ ಬುಲೆಟ್ ಗಳು ರಬ್ಬರ್ ದಾಗಿರುತ್ತವೆ, ಇದರಿಂದ ಪ್ರಾಣಕ್ಕೇನೂ ಅಪಾಯವಾಗಲ್ಲ. ಆದರೆ ಯೋಧರು ಕಲ್ಲು ತೂರಾಟಗಾರರ ವಿರುದ್ಧ ಪೆಲೆಟ್ ಗನ್ ಬಳಸುವುದನ್ನು ನಿಲ್ಲಿಸುವಂತೆ ತೀರ್ಪು ಕೊಟ್ಟವರು ಇದೇ ಜಡ್ಜ್ ಗಳು

* ಆಧಾರ್ ಕಾರ್ಡ್ ಕಡ್ಡಾಯ ಮಾಡುವುದಕ್ಕೆ ವಿರೋಧಿಸಿದ್ದವರಿವರು ಇವರೇ.

* ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ ಮೇಲೆ ಅದೆಷ್ಟೋ ಬಿಲಿಯನ್ ಡಾಲರ್ ಗಳ ಹಗರಣಗಳು ಬೆಳಕಿಗೆ ಬಂದರೂ, ಆಧಾರ್ ಗೆ ವಿರೋಧಿಸುತ್ತಾ ನಿಂತಿದ್ದು ಇವರೇ!

* ಕಂಬಳ, ಜಲ್ಲಿಕಟ್ಟು ನಂತಹ ವಿಚಾರಗಳಲ್ಲಿ ಆ ಹಬ್ಬಗಳ ಆಚರಣೆಯಲ್ಲಿ ತಕರಾರು ತೆಗೆದು ತೀರ್ಪು ನೀಡಿದ್ದೂ ಇದೇ ಜಡ್ಜ್ ಗಳು

* ದೀಪಾವಳಿಯಂದು ಪಟಾಕಿ ಬ್ಯಾನ್ ಮಾಡಿದ್ದೂ ಇದೇ ಜಡ್ಜ್ ಗಳು

ಕೊಲೆಜಿಯಂ ಅನ್ನೋ ನ್ಯಾಯಾಂಗ ಪ್ರಕ್ರಿಯೆ ಮೂಲಕ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಇವರೆಲ್ಲಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದವರು. ಈಗ ರಾಷ್ಟಪತಿ ರಾಮನಾಥ್ ಕೋವಿಂದರಿಂದ ಆಯ್ಕೆಯಾದ ಸುಪ್ರೀಂ ಕೋರ್ಟ್ ಸಿಜೆಐ ದೀಪಕ್ ಮಿಶ್ರಾ ಈ ನಾಲ್ವರೂ ಜಡ್ಜ್ ಗಳಿಗೆ ನುಂಗಲಾರದ ತುತ್ತಾಗಿದ್ದಾರೆ. ಅದಕ್ಕೇ ದೀಪಕ್ ಮಿಶ್ರಾರವರ ವಿರುದ್ಧ ಈ ನಾಲ್ವರೂ ತಿರುಗಿಬಿದ್ದಿದ್ದಾರೆ.

ಇನ್ನೊಂದು ವಿಷ್ಯ ಇಲ್ಲಿ ಗಮಸಿಬೇಕೆಂದ್ರೆ ಈ ನಾಲ್ಕೂ ನ್ಯಾಯಾಧೀಶರು ಸುದ್ದಿಗೋಷ್ಟಿ ಮುಗಿಸಿ ನೇರವಾಗಿ ಭೇಟಿಯಾಗಿದ್ದು ಮೋದಿ ವಿರೋಧಿಗಳನ್ನು! ಅದೂ ಮೋದಿಯನ್ನು ಅತಿಯಾಗಿ ದ್ವೇಷಿಸುವ ರಾಜಕೀಯ ಪಕ್ಷಗಳ ನಾಯಕರುಗಳನ್ನ.

ಇವರಿಗೆ ನ್ಯಾಯ ಬೇಕಾಗಿದ್ದರೆ ಮೀಡಿಯಾ ಎದುರಿಗೆ ಬಂದಿದ್ದರಲ್ವಾ ಹಾಗಿದ್ದ ಮೇಲೆ ಕಮ್ಯುನಿಸ್ಟ್, ಕಾಂಗ್ರೆಸ್ ಪಕ್ಷದ ಬಾಗಿಲು‌ ಬಡಿದ ಈ ನ್ಯಾಯಾಧೀಶರ ನಡೆ ಅನುಮಾನಗಳಿಗೆ ಎಡೆ ಮಾಡಿಕೊಡಲ್ಲವೇ?

ಈಗ ಈ ನಾಲ್ವರೂ ಜಡ್ಜ್ ಗಳ ಪರವಾಗಿ ಕಾಂಗ್ರೆಸ್, ಕಮ್ಯುನಿಸ್ಟ್ ಹಾಗು ಇನ್ನಿತರ ಮೋದಿ ವಿರೋಧಿ ಪಕ್ಷಗಳು ದೀಪಕ್ ಮಿಶ್ರಾ ವಿರುದ್ಧ ಮೋಷನ್ ಪಾಸ್ ಮಾಡಲು ಮುಂದಾಗಿದ್ದಾರೆ.

ಕೇವಲ ಮೋದಿಯನ್ನ ವಿರೋಧಿಸಲು ಈ ಮೋದಿ ವಿರೋಧಿಗಳು ಸುಪ್ರೀಂ ಕೋರ್ಟನ್ನೇ ವಿರೋಧಿಸೋಕೆ ಹೋಗ್ತಾರೆ ಅಂದ್ರೆ ಕಳೆದ 70 ವರ್ಷಗಳಲ್ಲಿ ಇವರು ನ್ಯಾಯಾಂಗವನ್ನ ಅದೆಷ್ಟು ದುರುಪಯೋಗ ಪಡಿಸಿಕೊಂಡಿರಬಾರದು?

ದೇಶ ವಿರೋಧಿಗಳ ಸೊಕ್ಕಡಗಬೇಕೆಂದರೆ ಪ್ರಾಮಾಣಿಕರಾದ ದೀಪಕ್ ಮಿಶ್ರಾರವರ ಬೆನ್ನಿಗೆ ದೇಶದ ಜನ ನಿಲ್ಲಬೇಕಾಗಿದೆ

#ISupportDeepakMishra

– Vinod Hindu Nationalist

 •  
  1.1K
  Shares
 • 1.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com