Connect with us
Loading...
Loading...

ಪ್ರಚಲಿತ

ಸ್ಪೋಟಕ ಮಾಹಿತಿ ಬಹಿರಂಗ : ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯನವರ ಸರ್ಕಾರದಲ್ಲೇ ದಲಿತರ ಮೇಲೆ ಅತೀ ಹೆಚ್ಚುದೌರ್ಜನ್ಯದ ಪ್ರಕರಣಗಳು!!

Published

on

 • 7
 •  
 •  
 •  
 •  
 •  
 •  
 •  
  7
  Shares

ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯನವರ ಸರ್ಕಾರದಲ್ಲೇ ಅತೀ ಹೆಚ್ಚು ದಲಿತರ ಮೇಲೆ ದೌರ್ಜನ್ಯದ ಪ್ರಕರಣಗಳು ನಡೆದಿವೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ತನ್ನನ್ನು ತಾನು ಯಾವಾಗಲೂ ಅಹಿಂದ ನಾಯಕ ಎಂದು ಹೇಳಿಕೊಂಡು ತಿರುಗಾಡುವ ಸಿದ್ದರಾಮಯ್ಯನವರ ಸರ್ಕಾರದಲ್ಲಿ ದಲಿತರಿಗೆ ರಕ್ಷಣೆಯಿಲ್ಲ ಎಂಬ ಮಾಹಿತಿ ಕರುನಾಡಿಗರಿಗೆ ಆಘಾತವನ್ನುಂಟು ಮಾಡಿದೆ.

ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂಬ ಮಾಹಿತಿಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಹಾಗೂ ಬಲವರ್ಧನೆ ಸಮಿತಿ ಮಾಡಿರುವ ವಿಶ್ಲೇಷಣೆಯಿಂದ ಬಹಿರಂಗವಾಗಿದೆ.

ಕರಾವಳಿ ಹೊತ್ತಿ ಉರಿಯುತ್ತಿದೆ. ಇದೇ ಸಂದರ್ಭದಲ್ಲಿ ದಲಿತರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ ಎಂಬ ಮಾಹಿತಿ ಹೊರಬಿದ್ದಿರುವುದರಿಂದ ಇಡೀ ಸಮಾಜವೇ ಬೆಚ್ಚಿಬಿದ್ದಿದೆ. ಈ ಮಾಹಿತಿಯಿಂದು ಹಿಂದೂ ಸಮಾಜದ ಮೇಲೆ ಆಘಾತದ ಮೇಲೆ ಆಘಾತವಾದಂತಿದೆ.

ನಮ್ಮದು ಹಿಂದುಳಿದ, ದಲಿತಪರ ಸರ್ಕಾರ ಎಂದುಕೊಂಡು ಓಡಾಡುವ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲೇ ಅತಿ ಹೆಚ್ಚು ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ನಡೆದಿವೆ.

ದೌರ್ಜನ್ಯ ಮಾಡಿದ ಅಪರಾಧಿಗಳ ಮೇಲೆ ಕೇಸ್ ಆಗಿ ಬಂಧಿಸಲ್ಪಟ್ಟರೆ, ಅಪರಾಧಿಗಳು ತಲೆಕಡೆಸಿಕೊಳ್ಳುವುದಿಲ್ಲ. ಯಾಕೆಂದರೆ ನ್ಯಾಯಾಲದಲ್ಲಿ ಬಿ ರಿಪೋರ್ಟ್ ವರದಿ ಸಲ್ಲಿಸಿ ಹೊರಬರುತ್ತಾರೆ. ಇದರಿಂದ ಅಪರಾಧಿಗಳು ಆರಾಮಾಗಿ ಹೊರಬರುವಂತಾಗಿದೆ. ಹೀಗಾಗಿಯೇ ದಲಿತರ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ.

ಇನ್ನೊಂದು ಆಘಾತಕಾರಿ ವಿಷಯವೂ ಬಹಿರಂಗವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಹಾಗೂ ಬಲವರ್ಧನೆ ಸಮಿತಿ ಮಾಡಿರುವ ವಿಶ್ಲೇಷಣೆಯ ಮಾಹಿತಿಯ ಪ್ರಕಾರ ದೌರ್ಜನ್ಯ ಮಾಡಿದ ಅಪರಾಧಿಗಳಿಗೆ ಆಗುತ್ತಿರುವ ಶಿಕ್ಷೆಯ ಪ್ರಮಾಣವೂ ಕಡಿಮೆಯಾಗಿದೆಯಂತೆ. ಇದು ಆತಂಕಕಾರಿ ವಿಷಯ.

ಅದೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಹಾಗೂ ಬಲವರ್ಧನೆ ಸಮಿತಿ ಮಾಡಿರುವ ವಿಶ್ಲೇಷಣೆಯ ಮಾಹಿತಿಯ ಪ್ರಕಾರ

2015 ರಲ್ಲಿ ದೌರ್ಜನ್ಯ ಮಾಡಿರುವವರ ಪೈಕಿ 5% ಅಪರಾಧಿಗಳಿಗಷ್ಟೇ ಶಿಕ್ಷೆಯಾಗಿದೆ,

2016 ರಲ್ಲಿ ದೌರ್ಜನ್ಯ ಮಾಡಿರುವವರ ಪೈಕಿ 4.83% ಅಪರಾಧಿಗಳಿಗಷ್ಟೇ ಶಿಕ್ಷೆಯಾಗಿದೆ.

ಈ ವಿಶ್ಲೇಷಣೆಯಿಂದ ಅಪರಾಧಿಗಳಿಗೆ ಆಗುವ ಶಿಕ್ಷೆ ಇಳಿಮುಖವಾಗಿದೆ ಅನಿಸುತ್ತೆ. ಬರೀ ಇದಷ್ಟೇ ಅಲ್ಲ ಕೆಲ ಜಿಲ್ಲೆಗಳಲ್ಲಿ ಶಿಕ್ಷೆಯೇ ಆಗಿಲ್ಲ.

ಆ ಜಿಲ್ಲೆಗಳು ಯಾವಂತ ಗೊತ್ತಾ?

ಬೆಂಗಳೂರು ನಗರ, ಗ್ರಾಮಾಂತರ, ಬಳ್ಳಾರಿ, ದಕ್ಷಿಣ ಕನ್ನಡ, ಗದಗ, ರಾಯಚೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು.

ಅಹಿಂದ ನಾಯಕ ಎನ್ನುವ ಮುಖ್ಯಮಂತ್ರಿಗಳು ದಲಿತರ ಮೇಲಿನ ದೌರ್ಜನ್ಯವನ್ನು ನೋಡಿಯೂ ಸುಮ್ಮನೆ ಕುಳಿತಿದ್ದಾರಲ್ಲ. ಹಿಂದೆ ಒಮ್ಮೆ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆದಿತ್ತು. ಆ ಸಭೆಯಲ್ಲಿ ಒಂದು ಮಹತ್ವದ ನಿರ್ಧಾರವನ್ನು ಮಾಡುತ್ತೇವೆಂದು ಸಿದ್ದರಾಮಯ್ಯನವರು ಭರವಸೆ ಕೊಟ್ಟಿದ್ದರು.

ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಹೋರಾಟದ ಸಲುವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ನೇಮಕ ಮಾಡುತ್ತೇವೆಂದು ಹೇಳಿದ್ದರು. ಆದರೆ ಆ ಭರವಸೆ ಭರವಸೆಯಾಗಿಯೇ ಉಳಿಯಿತು, ದೌರ್ಜನ್ಯಗಳು ಹೆಚ್ಚುತ್ತಲೆ ಬಂದವು.

ಹೇಳಿ ಕೇಳಿ ರಾಜಕಾರಣಿಗಳ ಭರವಸೆ ನಂಬೋಕಾಗಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ ಮಾಡಿದ ವಿಶ್ಲೇಷಣೆಯನ್ನು ಕೇಳಿದರೆ ಇಡೀ ಕರ್ನಾಟಕ ಬಿಚ್ಚಿ ಬೀಳುವುದರಲ್ಲಿ ಸಂದೇಹವೇ ಇಲ್ಲ.

ಅಷ್ಟಕ್ಕೂ ಆ ವಿಶ್ಲೇಷಣೆಯಲ್ಲಿ ಏನಿದೆ ಗೊತ್ತಾ?

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ ಮಾಡಿದ ವಿಶ್ಲೇಷಣೆಯ ವರದಿಯ ಪ್ರಕಾರ ದಲಿತರ ಮೇಲೆ ದೌರ್ಜನ್ಯವಾಗಿ ಕೇಸ್ ದಾಖಲಾದರೆ ಪೋಲಿಸ್ ಅಧಿಕಾರಿಗಳು ರಾಜಿ ಸಂಧಾನ ನಡೆಸಿ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ಹೀಗಾಗಿಯೇ ದಿನೇ ದಿನೇ ಹೆಚ್ಚು ದೌರ್ಜನ್ಯಗಳು ನಡೆಯುತ್ತಿವೆ.

ಅಬ್ಬಾ!! ಸಿದ್ದರಾಮಯ್ಯನವರ ಆಢಳಿತಾವಧಿಯಲ್ಲಿ ನಡೆದಿರುವ ದಲಿತರ ಕೊಲೆ ಅತ್ಯಾಚಾರಗಳೆಷ್ಟು ಗೊತ್ತೆ?

ಈ ಲೆಕ್ಕಾಚಾರ ಗೊತ್ತಾದರೆ ಬರೀ ಕರ್ನಾಟಕವಲ್ಲ ಇಡೀ ದೇಶವೇ ಬೆಚ್ಚಿ ಬೀಳುತ್ತದೆ.

ಕರ್ನಾಟಕಲ್ಲಿ ಒಂದು ಲೆಕ್ಕದ ಪ್ರಕಾರ ಸರಾಸರಿ ಎರಡು ದಿನಕ್ಕೊಬ್ಬ ದಲಿತ ಮಹಿಳೆ ಅತ್ಯಾಚಾರಕ್ಕೊಳ ಗಾಗುತ್ತಿದ್ದಾಳೆ.

2016 ರಲ್ಲಿ 164 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ,

2017 ರಲ್ಲಿ ಈ ಸಂಖ್ಯೆ 200ರ ಹತ್ತಿರವಿದೆ,

ಮೂರು ದಿನಕ್ಕೊಬ್ಬ ದಲಿತನ ಹತ್ಯೆ ನಡೆಯುತ್ತಿದ್ದು,

2016 ರಲ್ಲಿ 78,

2017ರಲ್ಲಿ ಅಂದಾಜು 80 ದಲಿತರ ಹತ್ಯೆ ನಡೆದಿದೆ.

ಅತ್ಯಾಚಾರ ಪ್ರಕರಣಗಳು ಶೇ.13 ಹಾಗು ಕೊಲೆ ಪ್ರಕರಣಗಳು ಶೇ.42 ರಷ್ಟು ಹೆಚ್ಚಾಗಿದೆ.

ಸರ್ಕಾರ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಎಷ್ಟು ಉದಾಸೀನತೆ ತೋರಿಸಿದೆ ಗೊತ್ತಾ?

ಜಾಗೃತಿ ಸಮಿತಿಯ ಸಭೆಗಳನ್ನು ಮಾಡಬೇಕಿದ್ದ ಜಿಲ್ಲಾಧಿಕಾರಿಗಳು ನಿರ್ಲಕ್ಷ ತೋರಿಸಿದ್ದಾರೆ. ಬರೀ ಜಿಲ್ಲಾಧಿಕಾರಿಗಳಷ್ಟೇ ಅಲ್ಲ ಅಹಿಂದ ನಾಯಕ ಎಂದು ಹೇಳಿಕೊಂಡು ತಿರುಗಾಡುವ ಸಿದ್ದರಾಮಯ್ಯನವರ ಅಧ್ಯಕ್ಷತೆಯ ಸಮಿತಿಯೂ ಮೂರು ವರ್ಷಗಳಿಂದ ಉದಾಸೀನ ತೋರಿಸಿದೆ‌.

ದಲಿತರ ಮೇಲೆ ಹೆಚ್ಚು ದೌರ್ಜನ್ಯ ನಡೆದಿರುವುದು ಮುಖ್ಯಮಂತ್ರಿಗಳ ತವರು ಮೈಸೂರಿನಲ್ಲಿ, ಗೃಹ ಸಚಿವರು ಪ್ರತಿನಿಧಿಸುವ ಬೆಂಗಳೂರು ಹಾಗೂ ಸಮಾಜ ಕಲ್ಯಾಣ ಸಚಿವರ ಚಿತ್ರದುರ್ಗ ಜಿಲ್ಲೆಗಳಲ್ಲಿ.

ಅಹಿಂದ ನಾಯಕನೆಂದು ಹೇಳಿಕೊಂಡು ತಿರುಗಾಡುವ ಸಿದ್ದರಾಮಯ್ಯನವರ ಆಢಳಿತದಲ್ಲಿಯೇ ದಲಿತರ ಮೇಲೆ ಅತೀ ಹೆಚ್ಚು ದೌರ್ಜ ನಡೆದಿರುವುದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಹಿಂದೂ ಧರ್ಮದ ಯಾವುದೇ ಜಾತಿಯವನಿಗೂ ರಕ್ಷಣೆಯಿಲ್ಲ ಎಂಬುದು ಸರ್ಕಾರವೇ ನೀಡಿದ ಈ ವರದಿಯಿಂದ ಬಹಿರಂಗವಾಗಿದೆ.

 •  
  7
  Shares
 • 7
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com