Connect with us
Loading...
Loading...

ಅಂಕಣ

ಸ್ಪೋಟಕ ಮಾಹಿತಿ ಬಹಿರಂಗ: ಆರ್.ಟಿ.ಐನಲ್ಲಿ ಬಹಿರಂಗವಾಯಿತು ಪ್ರಧಾನಿ ಮೋದಿಯವರ ಬಟ್ಟೆಯ ಖರ್ಚು!!! ಪ್ರಧಾನಿ ತಮ್ಮ ಬಟ್ಟೆಗಾಗಿ ಎಷ್ಟು ಖರ್ಚು ಮಾಡುತ್ತಾರೆ ಗೊತ್ತಾ?

Published

on

 • 1.2K
 •  
 •  
 •  
 •  
 •  
 •  
 •  
  1.2K
  Shares

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧರಿಸುವ ಬಟ್ಟೆಗಳ ಖರ್ಚಿನ ಮಾಹಿತಿ ಆರ್.ಟಿ.ಐನಲ್ಲಿ ಬಹಿರಂಗ. ಮೊನ್ನೆ ಮೊನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರ ಚಹಾ ಮಾತ್ತು ಉಟದ ಖರ್ಚು RTI ಮಾಹಿತಿ ಬಹಿರಂಗವಾಗಿತ್ತು. ಈಗ ಮತ್ತೊಂದು ಮಾಹಿತಿ ಬಹಿರಂಗವಾಗಿದೆ. ಪ್ರಧಾನಿ ಮೋದಿ ಧರಿಸುವ ಬಟ್ಟೆಗಳಿಗೆ ಸರ್ಕಾರದಿಂದ ಎಷ್ಟು ಖರ್ಚಾಗುತ್ತದೆ ಎಂಬ ಮಾಹಿತಿ RTI ನಿಂದ ಬಹಿರಂಗವಾಗಿದೆ.

ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸುವ ಬಟ್ಟೆಗಳಿಗೆ ಪ್ರಧಾನಿ ಕಚೇರಿಯಿಂದ ಎಷ್ಟು ಖರ್ಚಾಗುತ್ತದೆ ಎಂಬ ಮಾಹಿತಿ ಕಡೆಗೂ ಆರ್.ಟಿ.ಐ ನಿಂದ ಬಹಿರಂಗವಾಗಿದೆ.

ದೆಹಲಿಯ ಆಮ್ ಆದ್ಮಿ ಸರ್ಕಾರ ಜಾಹೀರಾತಿಗೆ ಮಾಡುವ ಖರ್ಚಿಗಿಂತ ಹೆಚ್ಚು ಮೋದಿ ತಮ್ಮ ಬಟ್ಟೆಗೆ ಖರ್ಚು ಮಾಡುತ್ತಾರೆ , ಮೋದಿ ಒಂದು ಸಲ ಬಟ್ಟೆಗೆ 2 ಲಕ್ಷ ರುಪಾಯಿ ಖರ್ಚು ಮಾಡುತ್ತಾರೆ, ದಿನಕ್ಕೆ ಐದು ಸಲ ಬಟ್ಟೆ ಬದಲಾಯಿಸುತ್ತಾರೆ ಹೀಗೆಂದು ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದರು, ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಮಾಹಿತಿ ಹಕ್ಕು ಹೋರಾಟಗಾರ ರೋಹಿತ್ ಸಭರವಾಲ್ ಎಂಬುವರು ಮನಮೋಹನ್ ಸಿಂಗ್ ಅವಧಿಯಿಂದ ಪ್ರಧಾನಿ ನರೇಂದ್ರ ಮೋದಿ, ಅವರು ಅಧಿಕಾರ ಅವಧಿಯಲ್ಲಿ ತಾವು ಧರಿಸುವ ಬಟ್ಟೆಗಳಿಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ(RTI) ಪ್ರಧಾನಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಧಾನಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಈ ಮಾಹಿತಿಯು ಪ್ರಧಾನಿಯಾದವರ ವಯ್ಯಕ್ತಿಕ ವಿಷಯವಾಗಿದ್ದು ಈ ರೀತಿಯ ಖರ್ಚುಗಳ ಬಗ್ಗೆ ಯಾವುದೇ ದಾಖಲೆಗಳು ತಮ್ಮ ಬಳಿ ಇಲ್ಲ ಮತ್ತು ಇದು ಅವರ ವಯ್ಯಕ್ತಿಕ ಖರ್ಚು ವೆಚ್ಚವಾಗಿರುವುದರಿಂದ ಪ್ರಧಾನಿ ಕಚೇರಿ ಈ ರೀತಿಯ ಯಾವುದೇ ವೆಚ್ಚವನ್ನು ಭರಿಸುವುದಿಲ್ಲ ಎಂದು ಉತ್ತರಿಸಿದೆ.

ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆದಮೇಲೆ ಭ್ರಷ್ಟಾಚಾರದ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೆ ಆರೋಪ ಮಾಡಲು ಅವಕಾಶ ಸಿಗುತ್ತಿಲ್ಲ. ಹಾಗಾಗಿ ಈ ರೀತಿಯ ವಯಕ್ತಿಕ ವಿಷಯದಲ್ಲಿ ಮೋದಿಯವರನ್ನು ಹಣಿಯಲು ವಿರೋಧಿಗಳು ಹಲವು ಬಾರಿ ಯತ್ನಿಸಿ ವಿಫಲರಾಗಿದ್ದಾರೆ.

ಪ್ರಾರಂಭದಲ್ಲಿ ಮೋದಿಜಿಯವರ ಧರ್ಮಪತ್ನಿಯ ಬಗ್ಗೆ ಮಾತನಾಡಿದರು, ಮೋದಿಯವರ ವಿದ್ಯಾಭ್ಯಾಸದ ಬಗ್ಗೆ ಟೀಕೆ ಮಾಡಿದರು, ಮೋದಿ ಚಹಾ ಮಾರುತ್ತಿದ್ದ ಎಂದು ಅವಮಾನಿಸಿದರು. ಇಂತಹ ಸಣ್ಣ ಪುಟ್ಟ ವಿಷಯದಲ್ಲಿ ಮೋದಿಯವರ ಕಾಲೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ 2G,3G,CWG,… ಅಂತ ಸಾವಿರಾರು ಕೋಟಿ ಹಗರಣಗಳು ಕೇಳಿ ಬರುತ್ತಿದ್ದವು ಆದರೆ ಈಗ ಯಾವ ಹಗರಣವೂ ಇಲ್ಲದೆ ಬರೀ ಟೊಳ್ಳು ಆರೋಪಗಳು ಕೇಳಿ ಬರುತ್ತಿವೆ. ಇದಲ್ಲವೆ ನಿಜವಾದ ಅಚ್ಚೆ ದಿನ? ನಮ್ಮ ದೇಶ ಒಬ್ಬ ಒಳ್ಳೆಯ ನಾಯಕನ ಕೈಯಲ್ಲಿ ಸುಭದ್ರವಾಗಿದೆ ಎಂದೆನಿಸುವುದಿಲ್ಲವೇ?

ಮಾಹಿತಿ ಹಕ್ಕು ಎಲ್ಲರ ಹಕ್ಕು ಎಂಬ ಸೋಗಿನಲ್ಲಿ ಹಲವಾರು ಬಾರಿ ಪ್ರಧಾನಿ ಅವರ ಕಾಲೆಳೆಯುವ ಪ್ರಯತ್ನ ನಡೆದಿದೆ ಮೋದಿಜಿ ಬಳಸುವ ಫೋನ್ ಯಾವುದು? ಮೋದಿ ಅವರ ಫೇಸ್ಬುಕ್ ಅಕೌಂಟ್ ನಿರ್ವಹಿಸುವುದು ಯಾರು? ಮೋದಿಯವರು ಬಳಸುವ ಇಂಟರ್‌ನೆಟ್ ಸ್ಪೀಡ್ ಎಷ್ಟು? ಮೋದಿಯವರು ಪ್ರಧಾನಿ ಆದಮೇಲೆ ಎಷ್ಟು ಬಾರಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಾರೆ?

ಮೋದಿಜಿ ಅಡುಗೆಗೆ ಬಳಸುವ ಸಾಮಗ್ರಿ ಹಾಗೂ ತರಕಾರಿ ಬಿಲ್ಲುಗಳ ಮೊತ್ತ ಎಷ್ಟು? ಮೋದಿಯವರ ಅಡುಗೆ ಮನೆಯಲ್ಲಿ ಬಳಸುವ ಗ್ಯಾಸ್ ಸಿಲಿಂಡರ್ ಯಾವುದು? ಕಮರ್ಷಿಯಲ್ ಸಿಲಿಂಡರ್ ಅಧವಾ ಡೊಮೆಸ್ಟಿಕ್ ಸಿಲಿಂಡರ್? ಮೋದಿಜಿ ತಮ್ಮ ಆಪ್ತ ಸಹಾಯಕರನ್ನು ಎಷ್ಟು ಬಾರಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ? ಪ್ರಧಾನಿ ಬಳಸುವ ಇಂಟರ್‌ನೆಟ್ ಖರ್ಚು ವೆಚ್ಚ ಎಷ್ಟು? ಮೋದಿಯವರು ದೇಶದ ಸಂವಿಧಾನ ಓದಿದ್ದಾರೆಯೆ? ಮೋದಿಯವರ ಪದವಿಯಲ್ಲಿ ಪಡೆದ ಅಂಕಗಳ ಎಷ್ಟು?

ಒಂದಾ ಎರಡಾ…ಈ ರೀತಿಯ ವಿಷಯಗಳು ದೇಶದ ರಾಜಕೀಯದಲ್ಲಿ ಎಂದೂ ಗಂಭೀರ ಸ್ವರೂಪದ ಪರಿಣಾಮ ಬೀರುವುದಿಲ್ಲವೆಂದು ಈ ಎಡಬಿಂಡಗಿ ವಿರೋಧಿಗಳಿಗೆ ತಿಳಿಯುವುದಿಲ್ಲವೇ??

ಕಾಂಗ್ರೆಸ್ಸಿನವರಿಗೆ, ಎಡಪಂಥೀಯರಿಗೆ, ಮಾಧ್ಯಮದವರಿಗೆ ಪ್ರಧಾನಿ ಮೋದಿಯನ್ನು ಟೀಕಿಸಲು ಬೇರೆ ಯಾವುದೇ ರೀತಿಯ ವಿಷಯಗಳಿಲ್ಲವೇ? ಮೋದಿಯವರಿಗಂತೂ ಈ ರೀತಿಯ ಹುರುಳಿಲ್ಲದ ಆರೋಪಗಳು, ಟೀಕೆಗಳು ಸಾಮಾನ್ಯವಾಗಿ ಹೋಗಿದೆ ಅನ್ನಿಸುತ್ತದೆ. ಪ್ರತಿ ತಿಂಗಳು ಒಂದೂವರೆ ಲಕ್ಷ ರೂಪಾಯಿ ಸಂಬಳ ಪಡೆಯುವ ಪ್ರಧಾನಿ ಮೋದಿಯವರು ತಮ್ಮ ಬಟ್ಟೆ, ಊಟಕ್ಕೆ ಸ್ವಂತ ಹಣ ಖರ್ಚು ಮಾಡಲಾಗದಷ್ಟು ಅಶಕ್ತರೆ?

ಹಿಂದೊಮ್ಮೆ ಅಮೆರಿಕ ಪ್ರವಾಸದಲ್ಲಿ ಮೋದಿಯವರ ಧರಿಸಿದ್ದ ಸೂಟು ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದೆಲ್ಲಾ ಆರೋಪಗಳ ಕೇಳಿ ಬಂದಾಗ ಕೇವಲ ಒಂದು ಬಾರಿ ಧರಿಸಿದ್ದ ಆ ಸೂಟನ್ನು ಅಮೆರಿಕದ ಮಾಜಿ ಅಧ್ಯಕ್ಷ ಓಬಾಮ ಭಾರತ ಪ್ರವಾಸದಲ್ಲಿದ್ದಾಗ ಓಬಾಮ ಮತ್ತು ಮಾಜಿ ರಾಷ್ಟ್ರಪತಿ ಪ್ರನಬ್ ಮುಖರ್ಜಿ ಅವರ ಸಮ್ಮುಖದಲ್ಲಿ ಹರಾಜು ಮಾಡಿಸಿ ಬರೊಬ್ಬರಿ 4.3 ಕೋಟಿ ರೂಪಾಯಿಗೆ ಮಾರಾಟ ಮಾಡಿ ಬಂದ ಹಣವನ್ನೆಲ್ಲಾ ಸ್ವಚ್ಛ ಭಾರತ ಅಭಿಯಾನ ಯೋಜನೆಯ ಖಾತೆಗೆ ಸಮರ್ಪಿಸಿ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿ ವಿರೋಧಿಗಳ ಬಾಯಿ ಮುಚ್ಚಿಸಿ ತಕ್ಕ ಉತ್ತರವನ್ನೇ ನೀಡಿದ್ದರು ಮೋದಿ.

ಮೋದಿಯವರ ಉಡುಪಿನ ಬಗ್ಗೆ ಬೊಬ್ಬೆಯಿಡುವ ಕಾಂಗ್ರೆಸ್ಸಿಗರು ಹಿಂದಿನ ಪ್ರಧಾನ ಮಂತ್ರಿಗಳಾದ ಶೋಕಿಲಾಲ ನೆಹರು, ಆತನ ಮಗಳು ಇಂದಿರಾ ಗಾಂಧಿ, ಆಕೆಯ ಮಗ ರಾಜೀವ್ ಗಾಂಧಿ ಇವರೆಲ್ಲಾ ತಮ್ಮ ತಮ್ಮ ಬಟ್ಟೆಗಳಿಗೆ ಅದೆಷ್ಟು ಖರ್ಚು ಮಾಡಿದ್ದರು ಅನ್ನೋ ಪ್ರಶ್ನೆಯನ್ನು ಏಕೆ ಕೇಳಲ್ಲ?

ಹಾಗಾದರೆ ಪ್ರಧಾನಿ ಮೋದಿ ರಾಜತಾಂತ್ರಿಕ ಭೇಟಿಗಳನ್ನ, ಜಗತ್ತಿನ ದೊಡ್ಡಣ್ಣನನ್ನ, ಅನೇಕ ರಾಷ್ಟ್ರದ ಪ್ರಮುಖರನ್ನ ಭೇಟಿಯಾಗೋಕೆ ತೋರಿಕೆಗಾಗಿ ನಮ್ಮ ದೆಹಲಿ ಮುಖ್ಯಮಂತ್ರಿಯಾಗಿರುವ ಅರವಿಂದ ಕೇಜ್ರೀವಾಲನ ರೀತಿಯಲ್ಲಿ ಹವಾಯಿ ಚಪ್ಪಲಿ, ತಲೆಗೊಂದು ಮಫ್ಲರ್ ಸುತ್ತಿಕೊಂಡು ಹೋಗಬೇಕಾ? ವಿದೇಶದಲ್ಲಿ ಆ ರೀತಿ ಬಟ್ಟೆ ಧರಿಸಿದರೆ ನಮ್ಮ ಪ್ರಧಾನಮಂತ್ರಿಗಳಿಗೆ ಗೌರವ ಸಿಗುತ್ತದೆಯೇ?

ಒಬ್ಬ ವ್ಯಕ್ತಿಯು ಒಂದು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂದರೆ ಒಳ್ಳೆಯ ಬಟ್ಟೆ ಧರಿಸಿದರೆ ತಪ್ಪೇನು?, ನಾವು ಅದರ ಬಗ್ಗೆ ಹೆಮ್ಮೆ ಪಡಬೇಕು, ಬದಲಿಗೆ ಏನೋ ಒಂದು ಆರೋಪ ಮಾಡಲೇಬೇಕು ಅನ್ನೋ ಕಾರಣಕ್ಕೆ ಏನೇನೋ ಪ್ರಶ್ನೆ ಮಾಡಲು ಹೋದರೆ ನಗೆಪಾಟಲಾದೀತು.

ಇನ್ನಾದರೂ ಇಂತಹ ಕೀಳು ಮಟ್ಟದ ಆರೋಪ ಮಾಡೋದನ್ನ ಬಿಟ್ಟು ಮೋದಿ ದೇಶಕ್ಕಾಗಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದರೆ ಜನ ಮರ್ಯಾದೆ ಕೊಡ್ತಾರೆ ಇಲ್ಲವಾದರೆ 2014 ರಲ್ಲಿ ಕೊಟ್ಟ 44 ಸೀಟುಗಳನ್ನ ಕಿತ್ತು ಕೈಗೆ ಚಂಬು ಕೊಟ್ಟು ಕೂಡಿಸಿಯಾರು ಹುಷಾರು!!!!

– ಪ್ರಭಾಕರ್

 •  
  1.2K
  Shares
 • 1.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com