Connect with us
Loading...
Loading...

ಪ್ರಚಲಿತ

ಸ್ಪೋಟಕ ಮಾಹಿತಿ ಬಹಿರಂಗ: ಲವ್ ಜಿಹಾದ್ ಮಾಡಿ ಐಸಿಸ್ ಗೆ ಹಿಂದೂ ಹುಡುಗಿಯರ ಮಾರಾಟ?!!

Published

on

 • 532
 •  
 •  
 •  
 •  
 •  
 •  
 •  
  532
  Shares

ಹಿಂದುಗಳಿಗೆ ರಕ್ತ ಕುದಿಯುವಂತೆ ಮಾಡಿದ್ದರ ಹೆಸರೇ ಲವ್ ಜಿಹಾದ್. “ಜಿಹಾದ್ ಎಂದರೆ ಇಸ್ಲಾಮಿನಲ್ಲಿ ಧರ್ಮ ಯುದ್ಧ.

ದಾರ್-ಉಲ್-ಇಸ್ಲಾಂ ಮಾಡುವುದಕ್ಕಾಗಿ ಬಳಸುವ ತಂತ್ರವೇ ಈ ಲವ್ ಜಿಹಾದ್. ಅಷ್ಟಕ್ಕೂ ದಾರ್-ಉಲ್-ಇಸ್ಲಾಂ ಅಂದ್ರೆ ಏನ್ ಗೊತ್ತಾ?

ಒಂದು ದೇಶವು ಮುಸ್ಲಿಮರ ಆಳ್ವಿಕೆಯಲ್ಲಿರುವಾಗ ‘ದಾರ್-ಉಲ್-ಇಸ್ಲಾಮ್’ (ಇಸ್ಲಾಂನ ವಾಸಸ್ಥಾನ) ಆಗಿರುತ್ತದೆ. ಮುಸ್ಲಿಮರು ಆಡಳಿತಗಾರರಲ್ಲದೆ ಮಾತ್ರ ಆ ದೇಶದಲ್ಲಿ ವಾಸಿಸುವವರಾದಾಗ ಅದು ‘ದಾರ್-ಉಲ್-ಹರಬ್’(ಯುದ್ಧಸ್ಥಾನ) ಆಗಿರುತ್ತದೆ. ಇಡೀ ವಿಶ್ವವನ್ನು ಇಸ್ಲಾಮೀಕರಣ ಮಾಡುವುದೇ ದಾರ್-ಉಲ್-ಇಸ್ಲಾಮ್. ದಾರ್-ಉಲ್-ಹರಬ್ ನ್ನು ದಾರು-ಉಲ್-ಇಸ್ಲಾಂ ಆಗಿ ಮಾಡುವುದಕ್ಕೆ ಬಳಸುವ ತಂತ್ರವೇ ಜಿಹಾದ್.

ದಾರ್-ಉಲ್-ಹರಬ್ ಅಂದ್ರೆ ಮುಸ್ಲಿಂ ಮೂಲಭೂತವಾದಿಗಳ ದೃಷ್ಟಿಯಲ್ಲಿ ಕಾಫೀರರ ಪ್ರದೇಶ(ಮುಸ್ಲಿಮರಲ್ಲದ ಪ್ರದೇಶ) ಇದನ್ನು ಯುದ್ಧ ಮಾಡಿ ದಾರ್-ಉಲ್-ಇಸ್ಲಾಂ ಆಗಿ ಪರಿವರ್ತಿಸಬೇಕು. ಪರಿವರ್ತನೆಗಾಗಿ ಅವರು ಬಳಸುವ ತಂತ್ರವೇ ಜಿಹಾದ್.

ಲವ್ ಜಿಹಾದ್ ಅಂದ್ರೆ ಪ್ರೀತಿಯ ನಾಟಕವಾಡಿ ಮತಾಂತರ ಮಾಡುವುದು. ಈ ಲವ್ ಜಿಹಾದ್ ಗೆ ಬಲಿಯಾಗುವವರು ಹಿಂದೂ ಹುಡುಗಿಯರು‌. ಹಿಂದೂ ಹುಡುಗಿಯರಿಗೆ ಅದೇನಾಗಿದೆಯೋ ಗೊತ್ತಿಲ್ಲ, ಬರೀ ಲವ್ ಜಿಹಾದ್ ಎಂಬ ತಂತ್ರಕ್ಕೆ ಬಲಿಯಾಗುತ್ತಲೇ ಇದ್ದಾರೆ. ದಿನ ಬೆಳಗಾದರೆ ಲವ್ ಜಿಹಾದ್ ಎಂಬ ಮೋಸಕ್ಕೆ ಬಲಿಯಾಗಿದ್ದಾರೆಂಬ ಸುದ್ದಿ ಕೇಳುತ್ತದೆ. ಈ ಸುದ್ದಿ ಕೇಳಿಸಿದರೂ ಕೂಡಾ ಹಿಂದೂ ಹುಡುಗಿಯರು ಬಲಿಯಾಗೋದು ಕಡಿಮೆಯಾಗಿಲ್ಲ.

ತುಂಬು ಯೌವನದ ಸಮಯದಲ್ಲಿ ಆಕರ್ಷಣೆ ಸಹಜ ಆದರೆ ಆಕರ್ಷಣೆಯನ್ನು ಮೋಸಕ್ಕೆ ಬಳಸುತ್ತಿದ್ದಾರೆಂಬುದೆ ವಿಪರ್ಯಾಸ.

ಹೆತ್ತ ತಂದೆ ತಾಯಿಯ ಮೋಸ ಮಾಡಿ, ಕೊನೆಗೆ ತಾನೂ ಮೋಸ ಹೋಗಿ ಆಕಡೆ ಬದುಕಲಿಕ್ಕೂ ಆಗದೆ, ಸಾಯಲಿಕ್ಕೂ ಆಗದೆ ವೇಶ್ಯೆಯಂತೆ ಬಾಳುವ ಹಾಗೆ ಮಾಡುವುದೇ ಈ ಲವ್ ಜಿಹಾದ್. ತಮ್ಮ ಸಂಖ್ಯೆಯನ್ನು ಹೆಚ್ವಿಸಲು ಹೆರುವ ಯಂತ್ರದಂತೆ ಬಳಸುವುದೇ ಈ ಲವ್ ಜಿಹಾದ್.

ಕೆಲ ಅವಿವೇಕಿಗಳು ಲವ್ ಜಿಹಾದ್ ಎಂಬುದೇ ಇಲ್ಲವೆಂದು ಟೊಳ್ಳುವಾದ ಮಾಡುತ್ತಾರೆ. ಲವ್ ಜಿಹಾದ್ ಎಂಬುದು ಇದೆ ಅಂತ ಕೇರಳದ ನ್ಯಾಯಾಲಯ ಒತ್ತಿ ಹೇಳಿದೆ.

ಕೇರಳದ ನ್ಯಾಯಾಲಯ ಹೇಳಿಕೆಗೆ ಇಂಬು ಕೊಡುವಂತೆ ಕೇರಳದಲ್ಲಿ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿ ಲವ್ ಜಿಹಾದ್ ಎಂಬ ಮೋಸಕ್ಕೆ ಬೀಳಿಸಿ ಐಸಿಸ್ ಉಗ್ರ ಸಂಘಟನೆಗೆ ಮಾರುತ್ತಿದ್ದಾರೆಂಬ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದಲ್ಲಿ ಐಸಿಸ್ ಬೇರುಗಳು ಹರಡಿವೆ ಎಂಬುದು ಈಗಾಗಲೇ ಬೆಳಕಿಗೆ ಬಂದಿತ್ತು. ಅದರಂತೆಯೇ ಹಿಂದೂ ಹುಡುಗಿರಿಗೆ ಲವ್ ಜಿಹಾದ್ ಎಂಬ ಮೋಸಕ್ಕೆ ಬೀಳಿಸಿ, ಬಲವಂತದಿಂದ ಮತಾಂತರ ಮಾಡಿ ಐಸಿಸ್ ಗೆ ಮಾರಾಟ ಮಾಡುತ್ತಿದ್ದಾರೆ.

ಕೇರಳದ ಉತ್ತರ ಪರವೂರ್​ನಲ್ಲಿ ಕೇರಳದ ಪೋಲಿಸರು ಈ ಕರಾಳ ದಂಧೆಯನ್ನು ಬೇಧಿಸಿದ್ದಾರೆ.

ಆಕೆ ಹಿಂದೂ ಹುಡುಗಿ ಹೆಸರು………ಲವ್ ಜಿಹಾದ್ ಎಂಬ ಕರಾಳ ಕೂಪಕ್ಕೆ ಬಲಿಯಾದ ಹುಡುಗಿ. ರಿಯಾಜ್ ಎಂಬ ಕೇರಳದ ಕಣ್ಣೂರಿನ ಹುಡುಗ 2015ರಲ್ಲಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆಗ ಕೇರಳ ಮೂಲದ ಯುವತಿಯ ಸ್ನೇಹ ಬೆಳೆಸಿಕೊಂಡು ದೇಹ ಸಂಪರ್ಕ ಬೆಳೆಸಿದ್ದ. ಅದನ್ನ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿ, 2016ರಲ್ಲಿ ಕೇಳರಕ್ಕೆ ಕರೆದೊಯ್ದು ಮತಾಂತರಿಸಿ ಮದುವೆಯಾಗಿದ್ದ.

ಅಲ್ಲಿಂದಾಚೆಗೆ ಅವಳು ನರಕ ದರ್ಶನವಾಯ್ತು. ದಿನೇ ದಿನೇ ಅವಳನ್ನು ಇಸ್ಲಾಂ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸುವಂತೆ ಹಿಂಸಿಸಿದ್ದ. ಅದಕ್ಕೆ ಬೇಸತ್ತ ಆ ಯುವತಿ ಅವನನ್ನು ಬಿಟ್ಟು, ತನ್ನ ಪೋಷಕರನ್ನು ಸೇರಿಕೊಂಡಿದ್ದಳು. ಆ ಮತಾಂಧ ಹೆಂಡತಿ ನಾಪತ್ತೆಯಾಗಿದ್ದಾಳೆಂದು ಹೇಬಿಯಸ್ ಕಾರ್ಪಸ್ ಕೇಸ್ ಹಾಕಿದ್ದ. ಅನಂತರ ನ್ಯಾಯಾಲಯ ಅವಳನ್ನು ಪತಿಯ ಜೊತೆ ಹೋಗಬೇಕೆಂದು ಆದೇಶ ಮಾಡಿತ್ತು. ಆ ಆದೇಶದ ಮೇರೆಗೆ ಆಕೆ ರಿಯಾಜ್ ಎಂಬ ಮತಾಂಧನ ಜೊತೆ ತಿರುಗಿ ಹೋಗಿದ್ದಳು.

ಆಕೆಯನ್ನು ಕರೆದೊಯ್ದ ಮತಾಂಧ ಆಗಸ್ಟ್​ನಲ್ಲಿ ಸೌದಿ ಅರೇಬಿಯಾಗೆ ಕರೆದೊಕೊಂಡು ಹೋದ. ಸೌದಿ ಅರೇಬಿಯಾದಲ್ಲಿ ಆಕೆಯನ್ನು ಹಿಂಸಿಸಿ ರೂಮ್ ನಲ್ಲಿ ಕೂಡಿ ಹಾಕಿ, ಐಸಿಎಸ್ ಗೆ ಮಾರಲು ಪ್ರಯತ್ನಿಸಿದ್ದ.

‎ಆಕೆಗೆ ಆತನ ಮೋಸ ತಿಳಿದು ಅಲ್ಲಿಂದ ತಪ್ಪಿಸಿಕೊಂಡು ಎನ್ಅರ್ ಐಗಳ ಮೂಲಕ ಕೇರಳಕ್ಕೆ ಮರಳಿ ಮತಾಂಧನ ವಿರುದ್ಧ ಕೇಸ ಕೊಟ್ಟಿದ್ದಳು. ಆತನನ್ನು ಹಿಡಿಯಲು ಕೇರಳದ ಪೋಲಿಸರು ಇಂಟರ್ ಪೋಲ್ ನೆರವು ಪಡೆಯುತ್ತಿದ್ದಾರೆ. ಈಗಾಗಲೇ ಪೋಲಿಸರು ಜಮಾಲ್ ಮತ್ತು ಮೊಹಮದ್ ಸಿಯಾದ್ ಎಂಬಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಸೇನಾ ಜನರಲ್‌ ಬಿಪಿನ್ ರಾವತ್ ಅವರು ಮದರಾಸ ಮೇಲೆ ಕಣ್ಣಿಡಬೇಕು. ಮದರಸಾಗಳಲ್ಲಿ ದೇಶ ವಿರೋಧಿ ಪಾಠವನ್ನು ಬೋಧಿಸುತ್ತಿದ್ದಾರೆಂದು ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಇಂಬುಕೊಡುವಂತೆ ಖಾಸಗಿ ಇಂಗ್ಲಿಷ್ ಸುದ್ದಿವಾಹಿನಿಯೊಂದು ನಡೆಸಿದ ತನಿಖೆಯ ವೇಳೆ ಬಯಲಾಗಿದೆ. ಮದ್ರಸಾಗಳಲ್ಲಿ ಧರ್ಮಬೋಧನೆಯ ಹೆಸರಿನಲ್ಲಿ ವಹಾಬಿ ಸಿದ್ಧಾಂತ ಮತ್ತು ಖಲೀಫತ್​ನ ಆಶಯ, ವಿಧಾನಗಳನ್ನು ಬೋಧಿಸಲಾಗುತ್ತಿದೆ ಎಂದು ಖಾಸಗಿ ಇಂಗ್ಲಿಷ್ ಸುದ್ದಿವಾಹಿನಿಯೊಂದು ಬಹಿರಂಗ ಪಡಿಸಿದೆ.

ಒಟ್ಟಿನಲ್ಲಿ ಈ ಲವ್ ಜಿಹಾದ್ ಗೆ ನಮ್ಮ ಹಿಂದೂ ಹುಡುಗಿಯರು ಬಲಿಯಾಗುತ್ತಿದ್ದಾರೆಂಬುದೆ ವಿಪರ್ಯಾಸ. ಲವ್ ಜಿಹಾದ್ ಎಂಬುದು ಮತಾಂಧರಿಗೆ ಮತಾಂತರ ಮಾಡುವ ಸುಲಭ ತಂತ್ರ. ಲವ್ ಜಿಹಾದ್ ಮಾಡಲು ಕತ್ತಿ, ಬಂದೂಕು ಏನೂ ಬೇಕಿಲ್ಲ. ರಕ್ತದ ಕೋಡಿಯೂ ಹರಿಸದೇ ಚೆಂದ ಚೆಂದ ಮಾತಾಡಿ ಮರುಳು ಮಾಡಿ ಲವ್ ಜಿಹಾದ್ ಎಂಬ ಜಾಲಕ್ಕೆ ಸಿಲುಕಿಸಿ, ಮತಾಂತರಿಸಿ ಐಸಿಎಸ್ ಗೆ ಮಾರಾಟ ಮಾಡ್ತಾರೆ.

ಲವ್ ಜಿಹಾದ್‍ ಎಂಬ ಬೆಂಕಿ ನಮ್ಮ ಕಣ್ಣಿಗೆ ಕಾಣುವಂತೆ ಧಗಧಗನೆ ಉರಿಯುತ್ತಿಲ್ಲ. ಆದರೆ ಕೆಂಡವಾಗಿ ಒಳಗಿನಿಂದಲೇ ನಮ್ಮ ಬೇರುಗಳನ್ನು ಸುಡುತ್ತಿದೆ. ಪ್ರೀತಿಯೆಂಬ ಬೂದಿಯನ್ನು ಮುಚ್ಚಿಕೊಂಡಿರುವ ಇದಕ್ಕೆ ಬಲಿಯಾಗದಂತೆ ನಮ್ಮ ಯುವ ಪೀಳಿಗೆಯನ್ನು ತಡೆಯಬೇಕಾಗಿದೆ.

ಬಾಲಿವುಡ್ ಚಿತ್ರಗಳ, ಚಿತ್ರನಟರ ಮೋಡಿಗೆ ಬಲಿಯಾಗಿ ಮನಸ್ಸನ್ನು ಲಂಗು ಲಗಾಮಿಲ್ಲದೆ ಹರಿಯಬಿಡುವ ಮಂದಿಯನ್ನು ವಾಸ್ತವಕ್ಕೆ ಎಳೆದು ತರಬೇಕಾಗಿದೆ.

ಸದ್ಯದ ಮಟ್ಟಿಗೆ ಪ್ರೀತಿಯನ್ನು ಧರ್ಮದ ತಳಹದಿಯ ಮೇಲೇ ಹುಡುಕಿಕೊಳ್ಳುವ ಅನಿವಾರ್ಯತೆಯನ್ನೂ ಬಿಡಿಸಿ ಹೇಳಬೇಕಾಗಿದೆ. ಸಹಿಷ್ಣುಗಳು ಎಂಬ ಹಣೆಪಟ್ಟಿಯೊಂದಿಗೆ ಜೀವಿಸುವ ರೂಢಿಯನ್ನು ಬಿಡದಿದ್ದಲ್ಲಿ ನಮ್ಮ ಧರ್ಮಕ್ಕೆ ನಾವೇ ಮಾರಕವಾಗುವ ದಿನಗಳು ದೂರವಿಲ್ಲ.

ಕಾಲೇಜಿಗೆ ಹೋಗುವ ಹಿಂದೂ ಹುಡುಗಿಯರೆ ದಯವಿಟ್ಟು ಪ್ರೀತಿಪ್ರೇಮ ಎಂದು ಕುರುಡಾಗಿ ಜಿಹಾದಿಗಳ ಬಲೆಯಲ್ಲಿ ಬೀಳಬೇಡಿ. ನನ್ನನ್ನು ನರಕದ ಕೂಪಕ್ಕೆ ತಳ್ಳಿದ ಫರ್ಜಾನಳಂತ ಬೆನ್ನಿಗೆ ಚೂರಿ ಹಾಕುವ ಮುಸ್ಲಿಂ ಗೆಳತಿಯರನ್ನು ನಂಬಬೇಡಿ.
ನಿಮ್ಮನ್ನು ಸ್ವಂತ ಸಹೋದರಿಯರು ಲವ್ ಜಿಹಾದ್ ಬಗ್ಗೆ ಹೋರಾಟ ಮಾಡುತ್ತಿರುವ ಬಜರಂಗ ದಳದ ಯುವಕರ ಬಗ್ಗೆ ಗೌರವ ತಾಳಿ.

ನಿಮಗಾಗಿ ಕೇಸು ಹಾಕಿಸಿಕೊಂಡು ಅಗತ್ಯ ಬಿದ್ದರೆ ಪ್ರಾಣ ಕೊಡುವ ಹಿಂದು ಯುವಕರು ಸಿಕ್ಕಾಗ ಕೈ ಜೋಡಿಸಿ ನಮಸ್ಕಾರ ಮಾಡಿ. ಅವರಿಲ್ಲದಿದ್ದರೆ ಮುಂದೊಂದು ದಿನ ಇದೇ ಜಿಹಾದಿಗಳು ನಮ್ಮ ಮನೆಗೆ ನುಗ್ಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

 •  
  532
  Shares
 • 532
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com