Connect with us
Loading...
Loading...

Uncategorized

ಸ್ಪೋಟಕ ಮಾಹಿತಿ ಬಹಿರಂಗ: ಸಿದ್ದರಾಮಯ್ಯನವರ ಆಡಳಿತದಲ್ಲಿ ಅರ್ಧ ಲಕ್ಷ ಹೆಣ್ಣುಮಕ್ಕಳು ನಾಪತ್ತೆ!!

Published

on

 • 1
 •  
 •  
 •  
 •  
 •  
 •  
 •  
  1
  Share

“ಕರ್ನಾಟಕ ದಲ್ಲಿ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಸಂಪೂರ್ಣವಾಗಿ ಫರ್ಸ್ಟ್ ಕ್ಲಾಸ್ ಸ್ಥಿತಿಯಲ್ಲಿದೆ”, ಹೀಗೆ ತಮ್ಮ ಸಾಧನಾ ಸಮಾವೇಶಗಳಲ್ಲಿ ನಮ್ಮ ಸಿಎಂ ಸಾಹೇಬರು ಹೇಳುತ್ತಲೇ ಇರ್ತಾರೆ.

ಆದರೆ ರಾಜ್ಯದಲ್ಲಿ ನಿಜಕ್ಕೂ ಕಾನೂನು ಸುವ್ಯವಸ್ಥೆ ಚೆನ್ನಾಗಿದೆಯಾ? ಮಹಿಳೆಯರು ಸುರಕ್ಷಿರಿದ್ದಾರ? ದಲಿತರು ಸುರಕ್ಷಿತವಾಗಿದ್ದಾರಾ? ರೈತರು ಸುಖದಿಂದಿದ್ದಾರಾ?

ಇಲ್ಲ.. ಅನ್ನುತ್ತೆ ಸರ್ಕಾರವೇ ಬಹಿರಂಗಗೊಳಿಸಿದ ಈ ರಿಪೋರ್ಟ್ ಗಳು!!

ಕಳೆದ ನಾಲ್ಕೂವರೆ ವರ್ಷದ ಸಿದ್ದರಾಮಯ್ಯನವರ ಆಡಳಿತದಲ್ಲಿ ಎಷ್ಟು ಜನ ಹೆಣ್ಣುಮಕ್ಕಳಯ ಕಾಣೆಯಾಗಿದ್ದಾರೆ ಅಂತ ಹೇಳಿದರೆ ನಿಮಗೆ ನಿಜಕ್ಕೂ ಶಾಕ್ ಆಗದೆ ಇರದು.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ಎಷ್ಟು ಮಹಿಳೆಯರು ಕಾಣೆಯಾಗಿದ್ದಾರೆ ಗೊತ್ತಾ??

ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ ಮಹಿಳೆಯರು ಕಾಣೆಯಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ;

ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬರೋಬ್ಬರಿ 50 ಸಾವಿರ ಹೆಣ್ಣುಮಕ್ಕಳು & 16 ಸಾವಿರ ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರು ನಗರವೊಂದರಲ್ಲೇ 18 ಸಾವಿರ ಹೆಣ್ಣು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ಇದರ ಜೊತೆ 7 ಸಾವಿರ ಮಕ್ಕಳು ಬೆಂಗಳೂರಿನಲ್ಲಿ ಕಾಣೆಯಾಗಿದ್ದಾರೆ.

ಯಾವ ಯಾವ ವರ್ಷಗಳಲ್ಲಿ ಎಷ್ಟೆಷ್ಟು ಅಪಹರಣ?

2014: ಬರೋಬ್ಬರಿ 5,989 ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಪೈಕಿ 5,509 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಮತ್ತು ಉಳಿದ 480 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

2015: 5,975 ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಪೈಕಿ 5,435 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಮತ್ತು ಉಳಿದ 540 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

2016: 6,316 ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಪೈಕಿ 5,362 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಮತ್ತು ಉಳಿದ 954 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

2017: 2,773 ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಪೈಕಿ 1,471 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಮತ್ತು ಉಳಿದ 480 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಹಿರಿಯ ಪೋಲಿಸ್ ಅಧಿಕಾರುಗಳು ಈ ಪ್ರಕರಣಗಳ ಬಗ್ಗೆ ಮಾತನಾಡುತ್ತ ಈ ಕಾಣೆಯಾದ ಪ್ರಕರಣಗಳಲ್ಲಿ ಕೆಲವೊಂದಿಷ್ಟು ಜನ ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿದ್ದರೆ ಹಲವಾರು ಜನ ಮಾನವ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ ಎಂಬ ಸ್ಪೋಟಕ ಮಾಹಿತಿಯನ್ನ ನೀಡಿದ್ದಾರೆ. ಹೌದು ಹೊರದೇಶಗಳಿಗೆ ಮಹಿಳೆರನ್ನ ಮಾರುವುದು, ಮಾನವ ಕಳ್ಳ ಸಾಗಣೆ ನಡೆಸೋದು ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಎಂದು ಹೇಳಲಾಗುತ್ತಿದೆ.

ಮೇಲಿನ ಎಲ್ಲಾ ಅಂಕಿಅಂಶಗಳು ಸ್ವತಃ ಸರ್ಕಾರದ ಅಧಿಕೃತ ಮಾಹಿತಿಯೇ ಆಗಿದೆ. ಇದನ್ನ ಗೃಹಸಚಿವರಾಗಿದ್ದವರೇ ವಿಧಾನಸಭೆಯ ಸದನದಲ್ಲಿ ಹೇಳಿದ್ದರು.

ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳೂ ಹೆಚ್ಚಾಗುತ್ತಿವೆ ಎಂಬ ಮಾಹಿತಿಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಹಾಗೂ ಬಲವರ್ಧನೆ ಸಮಿತಿ ಮಾಡಿರುವ ವಿಶ್ಲೇಷಣೆಯಿಂದ ಬಹಿರಂಗವಾಗಿದೆ.

ಅದೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಹಾಗೂ ಬಲವರ್ಧನೆ ಸಮಿತಿ ಮಾಡಿರುವ ವಿಶ್ಲೇಷಣೆಯ ಮಾಹಿತಿಯ ಪ್ರಕಾರ

2015 ರಲ್ಲಿ ದೌರ್ಜನ್ಯ ಮಾಡಿರುವವರ ಪೈಕಿ 5% ಅಪರಾಧಿಗಳಿಗಷ್ಟೇ ಶಿಕ್ಷೆಯಾಗಿದೆ,

2016 ರಲ್ಲಿ ದೌರ್ಜನ್ಯ ಮಾಡಿರುವವರ ಪೈಕಿ 4.83% ಅಪರಾಧಿಗಳಿಗಷ್ಟೇ ಶಿಕ್ಷೆಯಾಗಿದೆ.

ಈ ವಿಶ್ಲೇಷಣೆಯಿಂದ ಅಪರಾಧಿಗಳಿಗೆ ಆಗುವ ಶಿಕ್ಷೆ ಇಳಿಮುಖವಾಗಿದೆ ಅನಿಸುತ್ತೆ. ಬರೀ ಇದಷ್ಟೇ ಅಲ್ಲ ಕೆಲ ಜಿಲ್ಲೆಗಳಲ್ಲಿ ಶಿಕ್ಷೆಯೇ ಆಗಿಲ್ಲ.

2016: 164 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ,

2017: 2017 ರಲ್ಲಿ ಈ ಸಂಖ್ಯೆ 200 ರ ಹತ್ತಿರವಿದೆ,

ಮೂರು ದಿನಕ್ಕೊಬ್ಬ ದಲಿತನ ಹತ್ಯೆ ನಡೆಯುತ್ತಿದ್ದು,

2016 ರಲ್ಲಿ 78,

2017 ರಲ್ಲಿ ಅಂದಾಜು 80 ದಲಿತರ ಹತ್ಯೆ ನಡೆದಿದೆ.

ಅತ್ಯಾಚಾರ ಪ್ರಕರಣಗಳು ಶೇ.13 ಹಾಗು ಕೊಲೆ ಪ್ರಕರಣಗಳು ಶೇ.42 ರಷ್ಟು ಹೆಚ್ಚಾಗಿದೆ.

ಹಾಗಾದರೆ ರಾಜ್ಯದಲ್ಲಿ ಸಿಎಂ ಹೇಳುವ ಪ್ರಕಾರ ನಿಜಕ್ಕೂ ಕಾನೂನು ಸುವ್ಯವಸ್ಥೆ ಫರ್ಸ್ಟ್ ಕ್ಲಾಸ್ ಆಗಿದೆಯೆ?

ಖಂಡಿತವಾಗಿಯೂ ಇಲ್ಲ, ದಿನಬೆಳಗಾದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ರೌಡಿಗಳ ಅಟ್ಟಹಾಸ, ಪೋಲಿಸ್ ಅಧಿಕಾರಿಗಳ ನಿಗೂಢ ಸಾವು, ಮಹಿಳೆಯರು ಕಾಣೆಯಾಗಿರುವ ಸುದ್ದಿ, ಗ್ಯಾಂಗ್ ವಾರ್, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಹೀಗೆ ಸರ್ಕಾರದ ಬೇಜವಾಬ್ದಾರಿತನದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ.

ಇದರ ಜೊತೆ ಜೊತೆಗೆ ಕಳೆದ ನಾಲ್ಕೂವರೆ ವರ್ಷದ ಸಿದ್ದರಾಮಯ್ಯನವರ ಆಡಳಿತದಲ್ಲಿ ಸುಮಾರು ಮೂರೂವರೆ ಸಾವಿರದಿಂದ ಹತ್ತಿರ ಹತ್ತಿರ ನಾಲ್ಕು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಕ್ಷ ಅಧಿಕಾರಿಗಳ ಕಾರ್ಯದಕ್ಷತೆಗೆ ಅವರಿಗೆ ಸಿಗುತ್ತಿರುವ ಭಾಗ್ಯವೆಂದರೆ ಅದು ‘ವರ್ಗಾವಣೆ ಭಾಗ್ಯ’. ಟಿವಿ ನ್ಯೂಸ್ ಚಾನೆಲ್ ಹಾಕಿದರೆ ಆ ಅಧಿಕಾರಿ ಮಂಗಳೂರಿನಿಂದ ವರ್ಗಾವಣೆಯಾದರು, ಈ ಅಧಿಕಾರಿ ಹಾಸನದಿಂದ ವರ್ಗಾವಣೆಯಾದರೂ, ಅವರನ್ನ ಮಂಗಳೂರಿನಿಂದ ಎತ್ತಂಗಡಿ ಮಾಡಲಾಯಿತು ಇವರನ್ನ ಬೆಂಗಳೂರಿನಿಂದ ಎತ್ತಂಗಡಿ ಮಾಡಲಾಯಿತು ಅನ್ನೋ ಸುದ್ದಿಗಳೇ ರಾರಾಜಿಸುತ್ತವೆ ಹೊರತು ಸರ್ಕಾರದ ಒಳ್ಳೆಯ ಕಾರ್ಯಗಳ ಚರ್ಚೆ ಕಾಣೋದೇ ಇಲ್ಲ.

ಹಗರಣ, ಮಾಫಿಯಾ, ಟ್ರಾನ್ಸಫರ್, ಆತ್ಮಹತ್ಯೆ, ಕಾಣೆ ಪ್ರಕರಣಗಳು, ಆರೋಪ ಪ್ರತ್ಯಾರೋಪಗಳು, ಸರಣಿ ಹತ್ಯೆಗಳು, ರೌಡಿಗಳ ವಾರ್ ಎಂಬ ಮಾತುಗಳೇ ಈ ಸರ್ಕಾರದಲ್ಲಿ ಕೇಳಿಬರುತ್ತಿದ್ದರೂ ಸಿದ್ದರಾಮಯ್ಯನವರು ಅದ್ಹೇಗೆ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಅಂತ ಹೇಳುತ್ತಿದ್ದಾರೋ ಅದನ್ನ ಅವರೇ ಸ್ಪಷ್ಟಪಡಿಸಬೇಕು.

 •  
  1
  Share
 • 1
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com