Connect with us
Loading...
Loading...

ಅಂಕಣ

ಹಿಂದುತ್ವದ ಬಗ್ಗೆ ಈ ಮಹಾನ್ ಸಂತನಿಗಿದ್ದ ಗೌರವವೆಷ್ಟೆಂದು ಗೊತ್ತೆ??

Published

on

 • 16
 •  
 •  
 •  
 •  
 •  
 •  
 •  
  16
  Shares

ವಿವೇಕಾನಂದ ಎಂದರೆ ಯುವಕರೆ ಆಗಲಿ ಮುದುಕರೆ ಆಗಲಿ ಅಥವ ಮಕ್ಕಳೆಯಾಗಲಿ ಎಲ್ಲರ ಮೈಯಲ್ಲು ಮಿಂಚಿನ ಸಂಚಾರವಾಗುವುದು, ಕೇವಲ ಆ ವ್ಯಕ್ತಿಯ ಹೆಸರಿಗೇ ಈಗಾದರೆ ಇನ್ನ ಅವರ ಮಾತುಗಳಾಗಲಿ ಅಥವ ಅವರ ವ್ಯಕ್ತಿತ್ವವಾಗಲಿ ಮತ್ತೆಷ್ಟು ನಮ್ಮನ್ನು ಚೈತನ್ಯಗೊಳಿಸುವುದೆಂದು ಒಮ್ಮೊ ಯೋಚಿಸಿ.

ವಿಷಯಕ್ಕೆ ಬರೋಣ ವಿವೇಕಾನಂದರು ಸ್ವಾಮಿಜಿಯಷ್ಟೆಯಲ್ಲ ಭಾರತದ ಸರ್ವ ಶ್ರೇಷ್ಟ ಮಾರ್ಘದರ್ಶಕ ಹಾಗೂ ಹಿಂದುತ್ವ ಪ್ರತಿಪಾದಕರು ಸಹ ಹೌದು!!

ಅರೇ ಎಲ್ಲರು ಅಷ್ಟೆಯಲ್ಲವೆ?ಎಂದು ಕೇಳುವುದಾದರೆ ಅವರೆ ಹೇಳಿದ ಹಾಗೂ ಬರೆದು ತಿಳಿಸಿದ ಅನೇಕ ವಿಷಯಗಳಲ್ಲಿ ಕೆಲವನ್ನ ಇಲ್ಲಿ ತಿಳಿಸುತ್ತ ಹೋಗುತ್ತೇನೆ ನೋಡಿ.

ವಿವೇಕಾನಂದರು ಹೇಳಿದ್ದು “ಭಾರತದ ಆತ್ಮವೆಂದರೆ ಅದು ಧರ್ಮ ಮಾತ್ರವೆಂದು”
ಸ್ವಾಮಿಜಿಯು ಉದಾಹರಣೆ ನೀಡುತ್ತಲೇ ಇದನ್ನು ಪ್ರತಿಧ್ವನಿಸಿದರು, ಅವರೆಳಿದ್ದು ಇಷ್ಟೆ ಆಂಗ್ಲರು ತಮ್ಮ ಸತ್ವವನ್ನ ಇಟ್ಟಿರುವುದು ವ್ಯಾಪಾರ ವ್ಯವಹಾರಗಳಲ್ಲಿ, ಅವರ ರಾಜನ ಮೇಲೆ ಎಷ್ಟೆ ಗೌರವವಿದ್ದರು ರಾಜನು ಹೇರುವ ತೆರಿಗೆಯ ಪ್ರತೀ ಹಣಕ್ಕು ಅದರ ಖರ್ಚೆನೆಂದು ತಿಳಿಸಲೆ ಬೇಕಿತ್ತು ಆಂಗ್ಲ ದೊರೆ, ಏಕೆಂದರೆ ಅವರು ಬದುಕುತ್ತಿದ್ದೆ ಹಣವೆಂಬ ಭೌತಿಕ ಶಕ್ತಿಗಾಗಿ.

ಮತ್ತೆ ಫ್ರೆಂಚರ ವಿಷಯವೆ ಭಿನ್ನ ಅವರ ಸತ್ವವಿದ್ದದ್ದು ಸಮಾನತೆಯಲ್ಲಿ ಹಾಗೂ ಅವರಲ್ಲಿ ಅತ್ಯಂತ ಉನ್ನತನು ಹಾಗೂ ಅತ್ಯಂತ ಹೀನನು, ಯಾರೆ ಆದರು ಎಲ್ಲರು ಸಮಾನರಾಗಿರ ಬೇಕೆಂದು ಕೂಗಿ ಹೇಳುತ್ತಿದ್ದರು!!

ಆದರೆ “ಭಾರತ ದೇಶಿಯರ” ಅಂತಿಮ ಗುರಿ ಇರುವುದು ಹಣವನ್ನು ದಾಟಿ ಸಮಾನ ಜೀವನ ಮುಗಿಸಿ ಅಂತಿಮವಾಗಿ ತಲುಪುವ “ಮೋಕ್ಷ”ವಾಗಿತ್ತು!! ಮೋಕ್ಷವ ಪಡೆಯುವ ದಾರಿಯೆ ಧರ್ಮ ಆ ಧರ್ಮವೆ ವೈಧಿಕ ಧರ್ಮ ಅದೇ ಈ ದೇಶದ ಸತ್ವ ಒಮ್ಮೆ ಅದನ್ನ ಮರೆತರೆ ದೇಶವೆ ಸತ್ತಂತೆ ಎಂದಿದ್ದರು ಸ್ವಾಮೀಜಿ!!!

ಅತೀ ಬುದ್ದಿವಂತರೆಂದು ಕರೆದು ಕೊಳ್ಳುವ ಸ್ವಯಮ್ ಘೋಷಿತ ಪರಕೀಯರ ಅನುಕರಣೆ ಮಾಡುವ ಲದ್ದಿ ಜೀವಿಗಳು ಅಂದು ಇದ್ದರು!! ಯಾರೋ ಕೇಳಿದರಂತೆ ಸ್ವಾಮಿಜಿಯನ್ನ, ಮೂರ್ತಿಗೆ ಪೂಜೆ ಮಾಡಿ ಹಣವನ್ನೇಕೆ ವ್ಯರ್ತ ಮಾಡುವಿರಿ ಎಂದು ಅದಕ್ಕೆ ಸ್ವಾಮಿಜಿ ಕೊಟ್ಟ ಉತ್ತರವೆನು ಗೊತ್ತೆ??

ಆ ವ್ಯಕ್ತಿಗಳಿಗೆ ಸ್ವಾಮಿಜಿ ಅವರ ರಾಜರ ಭಾವಚಿತ್ರವಿರುವ ಪಟ ತಂದು ಅದಕ್ಕೆ ಹುಗಿಯಿರಿ ಎಂದರಂತೆ! ಅದಕ್ಕೆ ದಿಕ್ಕೆ ತೋಚದಂತೆ ಸುಮ್ಮನೆ ನಿಂತರು ಆ ವ್ಯಕ್ತಿಗಳು ನಂತರ ಮಾತಾಡಿ ಅದು ನಮ್ಮ ರಾಜರು ಅದಕ್ಕೆ ಹೇಗೆ ಹುಗಿಯುವುದು ಸಾಧ್ಯವಿಲ್ಲ ಎಂದರಂತೆ, ಅದಕ್ಕೆ ಸ್ವಾಮಿಜಿ ನಕ್ಕು ಹೇಳಿದರು ಹೌದ ಇದು ಕೇವಲ ಭಾವಚಿತ್ರವಷ್ಟೆ ನಿಮ್ಮ ರಾಜರ ಜೀವವೆನು ಇದಕ್ಕಿಲ್ಲವಲ್ಲ ಎಂದು ಚೇಡಿಸಿ ಮುಂದುವರೆಸುತ್ತಾರೆ, ನೋಡಿದಿರ ಹೀಗೆ ದೇವರು ಸರ್ವಾಂತರ್ಯಾಮಿಯಾದರು ಆತನನ್ನು ನಾವು ಗುಡಿಗಳಲ್ಲಿಟ್ಟು ಪೂಜಿಸುತ್ತೇವೆ ನಮ್ಮಿಚ್ಚೆಯಂತೆ ಹಾಗೂ ಅವನು ಮೆಚ್ಚುವಂತೆ ಎಂದು ಹೇಳಿದರು ಸ್ವಾಮಿಜಿ!!
ಹಾಗೇ ಸ್ವಾಮಿಜಿಯು ಮತಾಂತರ ಮಾಡುತ್ತಿದ್ದಲರ ಬಗ್ಗೆಯು ಒಂದು ಮಾತನ್ನ ಹೇಳಿದ್ದರು “ಹಿರಿಯ ವ್ಯಕ್ತಿಗೆ ನವಜಾತ ಶಿಶು ಒಂದು ಬುದ್ದಿ ಹೇಳಿದಂತೆ ಈ ಹೊಸ ಮತ ಪ್ರಚಾರಕರು! ಎಂದು ಹೇಳುತ್ತ ಹಿಂದೂ ಧರ್ಮದ ಹಿರಿಮೆಯನ್ನ ತಿಳಿಸಿದ್ದಾರೆ ಸ್ವಾಮಿಜಿ!!

ಇದಷ್ಟೆ ಅಲ್ಲ ಅಮೇರಿಖಾದಲ್ಲಿ ನಿಂತು ಆಂಗ್ಲರ ಮುಂದೆಯೆ ಅವರ ದೌರ್ಜನ್ಯವನ್ನ ಹೇಳುತ್ತ ಅದಕ್ಕೆಲ್ಲ ಪರಿಹಾರವಾಗಿ ನಿಲ್ಲುವುದು ಸಹಸ್ರ ವರ್ಷಗಳ ಇತಿಹಾಸವಿರೋ ಹಿಂದೂ ಧರ್ಮ ಮಾತ್ರವೆಂದು ಘರ್ಜಿಸಿತ್ತು ನಮ್ಮ ಹಿಂದೂ ಹುಲಿ!!!!!

ಇದೇ ರೀತಿಯಲಿ ಈಗಲು ನಮ್ಮ ತನವನ್ನ ಮರೆತು ಯಾರದ್ದೋ ಅನುಕರಣೆಯಲ್ಲಿ ದೇಶದ ಮೂಲವನ್ನೆ ಪ್ರಶ್ನಿಸುತ್ತ ನಿಲ್ಲುವ ಜನಗಳಿಗೆ ಸ್ವಾಮಿಜಿ ಅಂದೇ ಉತ್ತರಿಸಿದ್ದರು ಅದನ್ನ ಮತ್ತೇ ಆ ಬುದ್ದಿಜೀವಿಗಳಿಗೆ ತಿಳಿ ಹೇಳುವ ಕಾರ್ಯವಾಗಬೇಕಷ್ಚೆ.

– Hemanth C Shekhar

 •  
  16
  Shares
 • 16
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com