Connect with us
Loading...
Loading...

ಅಂಕಣ

ಹೆಣ್ಣನ್ನು ಕೀಳಾಗಿ ನೋಡುವ ಓ ಗಂಡೇ ಒಂದು ಸಲ ಗರ್ಭ ಧರಿಸಿ ನೋಡು!!

Published

on

  • 54
  •  
  •  
  •  
  •  
  •  
  •  
  •  
    54
    Shares

ಅದ್ಯಾವ ಯುಗಗಳ ಕರ್ಮದ ಫಲವೋ ಏನೋ ತೀರಾ ಹೆಣ್ಣು ಜೀವಕ್ಕೊಂದು ಶಾಪ ಅಂಟಿಬಿಟ್ಟಿದೆ. ಹೇಳಲಿಕ್ಕೇನೋ ಹೆರುವುದು, ಹೊರುವುದು ಸರ್ವ ಶ್ರೇಷ್ಠ. ಆದರೆ ಅದರ ಹಿಂದಿನ ನೋವಿನ ವ್ಯಥೆ ಶಾಪವಲ್ಲದೇ ಬೇರೇನೂ ಅಲ್ಲ. ಆ ನೋವಿನ ವ್ಯಥೆ ಹೆಣ್ಣಿಗೆ ಮಾತ್ರ ಗೊತ್ತು.

ತಿಂಗಳ ಕೊನೆಯಲ್ಲಿ ಒಂದು ನೋವಾದರೆ, ನವ ಮಾಸ ಹೊರುವಾಗ ಮತ್ತೊಂದು ನೋವು, ನವಮಾಸವಾದ ಮೇಲೆ ಹೊರುವಾಗ ಇನ್ನೊಂದು ನೋವು. ನವಮಾಸ ಹೊತ್ತು ಹೆರುವಾಗ ಆಗುವ ನೋವು ಇದೆಯಲ್ಲ, ಅದು ಅವಳ ಪುನರ್ಜನ್ಮದ ರೀತಿ. ಹೆಣ್ಣಿನ ಈ ಎಲ್ಲಾ ನೋವನ್ನು ಕೊಟ್ಟ ಆ ದೇವರಿಗೆ ನನ್ನದೊಂದು ಧಿಕ್ಕಾರವಿದೆ.

ಓ ದೇವ!! ಹೆಣ್ಣಿಗೆ ಯಾಕೆ ಈ ಶಾಪ, ಯಾಕೆ ಈ ಶಿಕ್ಷೆ? ನವಮಾಸ ಹೊತ್ತು ಹೆರುತ್ತಾಳಲ್ಲ ಆಗ ಆಗುವ ನೋವು ಎಷ್ಟು ಮಟ್ಟದ್ದಾಗಿರುತ್ತೆ ಅಂತ ಗಂಡಸರಾದ ನಮಗೆ ಗೊತ್ತಿರಲ್ಲ. ಆ ನೋವಿನ ವೇದನೆಯನ್ನು ಒಂದು ಹೆಣ್ಣಿನ ಬಾಯಿಯಿಂದಲೇ ಕೇಳಿ ನೋಡಿ. ಅದು ಅವಳ ಪುನರ್ಜನ್ಮ ಅಂತಾಳೆ. ನವಮಾಸಗಳ ನಂತರ ಗರ್ಭ ಸೀಳಿಕೊಂಡು ಮಗು ಹೊರಬರುತ್ತಲ್ಲ. ಆ ನೋವನ್ನು ಅವುಡುಗಚ್ಚಿಸೋ ಸಾಮರ್ಥ್ಯ ಹೆಣ್ಣಿಗೆ ಮಾತ್ರ ಇರುತ್ತದೆ‌. ಹುಟ್ಟಿದ ಮಗುವಿಗೆ ಮಾತು ಬರುವಂತಿದ್ದರೆ, ಅದು ಹುಟ್ಟಿದ ತಕ್ಷಣ ಮಾತೆ ನನ್ನನ್ನು ಕ್ಷಮಿಸಿಬಿಡು ಅಂತ ಕೇಳುತ್ತಿತ್ತೇನೋ…? ಯಾಕಂದ್ರೆ ಅದು ಕಟುಕನ ಕಣ್ಣಲ್ಲೂ ನೀರು ಬರುವಂತಹ ನೋವಿನ ವ್ಯಥೆ. ಆ ಪರಿಯ ನೋವನ್ನು ಕೊಟ್ಟ ದೇವರಿಗೆ ನನ್ನದು ಹಿಡಿ ಶಾಪ.

ಹೆಣ್ಣಿನ ಜನ್ಮ ಸರ್ವಶ್ರೇಷ್ಠವೇನೋ ಸರಿ. ಯಾಕಂದ್ರೆ ಅದು ಜೀವ ಕೊಡುವ ಜೀವ. ಆದರೆ ಹೆಣ್ಣಿಗೆ ಕೇಳಿನೋಡಿ. ಅವಳು ಹೇಳುವ ಮಾತು ಒಂದೇ, ಇನ್ನೊಂದು ಜನ್ಮ ಅಂತೇನಾದರೂ ಇದ್ರೆ ಹೆಣ್ಣಾಗಿ ಹುಟ್ಟಲ್ಲ ಅಂತಾಳೆ‌. ಯಾಕಂದ್ರೆ ಹೆಣ್ಣಾಗಿ ಅವಳು ಪಟ್ಟ ನೋವು, ವ್ಯಥೆ, ಕಟ್ಟಳೆಗಳು ಅವಳಿಗೆ ಮಾತ್ರ ಗೊತ್ತು.

ಹೆಣ್ಣಿಗೆ ತುಂಬಾ ಸ್ವಾತಂತ್ರ್ಯ ಕೊಟ್ಟಿದ್ದೇವೆ ಹಾಗೆ ಹೀಗೆ ಅಂತ ಹಾರಾಡುವವರಿಗೆ ಒಂದು ಪ್ರಶ್ನೆ.
ಗಂಡಸು ತಾನೇನನ್ನಾದರೂ ಸಾಧಿಸಬೇಕು ಅಂತ ನಿರ್ಧಾರ ಮಾಡಿ ಹೊರಟರೆ ಆತ ಮನೆ, ಊರು, ದೇಶ, ಮದುವೆಯ ಆಸೆಗಳನ್ನೆಲ್ಲಾ ಬಿಡ್ತಾನೆ. ಆದರೆ ಹೆಣ್ಣಿಗೆ ಮಾತ್ರ ಇದು ಸಾಧ್ಯವಾಗಲ್ಲ. ಯಾಕಂದ್ರೆ ಅವಳಿಗೆ ಸಮಾಜದಲ್ಲಿ ಅನೇಕ ತೆರನಾದ ಕಟ್ಟಳೆಗಳಿವೆ. ಹೆಣ್ಣು ತಾನೇನ್ನಾದರೂ ಸಾಧಿಸಬೇಕೆಂದು ನಿರ್ಧಾರ ಮಾಡಿ ಹೊರಟು ನಿಂತರೆ ನಮ್ಮ ಸಮಾಜ ಅವಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತದೆ. ಇನ್ನು ಮದುವೆ ವಿಷಯಕ್ಕೆ ಬಂದರೆ, ಗಂಡು ತಾನು ಮದುವೆಯಾಗಲ್ಲ ಅಂತ ಹೇಳುವುದಕ್ಕೂ, ಹೆಣ್ಣು ತಾನು ಮದುವೆಯಾಗುವುದಿಲ್ಲ ಅಂತ ಹೇಳುವುದಕ್ಕೂ ತುಂಬಾ ವ್ಯತ್ಯಾಸವಿದೆ. ಹಾಗೆ ಹೇಳುವ ಹೆಣ್ಣನ್ನು ಸಮಾಜ ಬೇರೆಯ ರೀತಿಯಲ್ಲಿ ನೋಡುತ್ತದೆ.

ಇಲ್ಲಿ ನಾನು ಹೆಣ್ಣನ್ನು ವೈಭವೀಕರಿಸುತ್ತಿಲ್ಲ. ವೈಭವೀಕರಿಸುವ ದರ್ದೂ ನನಗಿಲ್ಲ, ವೈಭವೀಕರಿಸುವುದರಿಂದ ಲಾಭವೂ ಇಲ್ಲ.
ಇರೋ ಸತ್ಯವನ್ನು ಹೇಳುತ್ತಿದ್ದೇನೆ. ನಾನು ಪ್ರತಿ ಹೆಣ್ಣನ್ನು ಗೌರವಿಸುತ್ತೇನೆಯೇ ಹೊರತು, ಸಿಕ್ಕಸಿಕ್ಕ ಹೆಣ್ಣುಗಳನ್ನೆಲ್ಲಾ ಪ್ರೀತಿಸುವವನಲ್ಲ. ನನಗೆ ಹೆಣ್ಣು ಅಂದ ತಕ್ಷಣ ಮೊದಲು ನೆನಪಾಗೋದು ನನ್ನ ಅಮ್ಮ, ನನ್ನ ಅಕ್ಕ- ತಂಗಿ.

ಪ್ರತಿ ತಿಂಗಳ ಕಿರಿಕಿರಿ, ನವ ಮಾಸ ಹೊತ್ತು ಹೆರುವ ಕಿರಿಕಿರಿ, ಸಮಾಜದ ಕೆಲ ಕಟ್ಟಳೆಗಳ ನಡವೆಯೂ ಆಕೆ ಸಮಚಿತ್ತದಿಂದ ಇರುತ್ತಾಳಲ್ಲ. ನಿಜಕ್ಕೂ ಗ್ರೇಟ್.

ಹೆಣ್ಣನ್ನು ಪ್ರೀತಿಸುವುದಕ್ಕಿಂತ, ಮೋಹಿಸುವುದಕ್ಕಿಂತ, ಗೌರವಿಸಿ ನೋಡಿ ಆಗ ಮಾತ್ರ ಅವಳು ನಿಮಗೆ ಅರ್ಥವಾಗುತ್ತಾಳೆ.

– Nationalist Mahi

  •  
    54
    Shares
  • 54
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com