Connect with us
Loading...
Loading...

ರಾಜಕೀಯ

ಹೈದರಾಬಾದ್ ಕರ್ನಾಟಕ ಜನತೆಗೆ ಸಿಹಿ ಸುದ್ದಿ ನೀಡಿದ ಬಿ ಎಸ್ ಯಡಿಯೂರಪ್ಪ ಮಾಡಿದ್ದೇನು ಗೊತ್ತಾ

Published

on

  •  
  •  
  •  
  •  
  •  
  •  
  •  
  •  

ಹೈದರಾಬಾದ್ ಕರ್ನಾಟಕ’ವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಬೇಕೆಂಬ ಆ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸುವ ಮುನ್ನುಡಿಯಾಗಿ ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹೆಸರನ್ನು ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ ಎಂದು ಬದಲಿಸಲು ಸೆಪ್ಟೆಂಬರ್ 6 ರ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಯಿತು.

ಹೈದರಾಬಾದ್ ಹೆಸರು ಏಕೆ ಬೇಕು, ಕಲ್ಯಾಣ ಕರ್ನಾಟಕ ಎಂದು ಬದಲಿಸಿ ಎಂಬ ಆ ಭಾಗದ ಬಹುದಿನಗಳ ಬೇಡಿಕೆ ಈಡೇರಿಸಲು ಒಪ್ಪಿದ್ದೇವೆಂದು ಕಾನೂನು ಸಚಿವ ಮಾಧುಸ್ವಾಮಿ ಸಭೆಯ ನಿರ್ಧಾರದ ಬಗ್ಗೆ ವಿವರಣೆ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹೆಸರು ಬದಲಾದ ಬಳಿಕ ಎಲ್ಲೆಲ್ಲಿ ‘ಹೈದರಾಬಾದ್ ಕರ್ನಾಟಕ’ ಎಂದು ನಮೂದಾಗಿದೆಯೋ ಅಲ್ಲೆಲ್ಲ ‘ಕಲ್ಯಾಣ ಕರ್ನಾಟಕ’ ಎಂದು ಬದಲಾವಣೆಯಾಗುವುದು ಸಹಜ ಎಂದು ಸ್ಪಷ್ಟಪಡಿಸಿದರು. ಜನರ

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೇಡಂ ಶಾಸಕ ರಾಜ್​ಕುಮಾರ್ ಪಾಟೀಲ್, ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಲು ನಮ್ಮ ಭಾಗದ 41 ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು, ಈ ಬೇಡಿಕೆಗೆ ಸ್ಪಂದನೆ ಸಿಕ್ಕಿದ್ದು ಸಂತೋಷ ತಂದಿದೆ ಎಂದರು.

ಮತ್ತೊಂದೆಡೆ ಹೊಸ ಸರ್ಕಾರ ಬಂದ ಬಳಿಕ ಈ ಪ್ರದೇಶದ ಅಭಿವೃದ್ಧಿಗಾಗಿ ರಚನೆಯಾದ ಮಂಡಳಿಗೆ ಹೊಸ ನೇಮಕ ಆಗಬೇಕಿದ್ದು, ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ಸಿಎಂ ವಿವೇಚನೆಗೆ ಬಿಡಲು ಸಂಪುಟ ನಿರ್ಧರಿಸಿತೆಂದು ಸಚಿವರು ವಿವರಿಸಿದರು.

ಮಾನವ ಹಕ್ಕು ಆಯೋಗದ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಿಸುವ ತೀರ್ಮಾನವನ್ನು ಹಿಂಪಡೆಯಲಾಗಿದೆ. ಈಗಾಗಲೇ ಆಯೋಗದ ಸದಸ್ಯರು ಪ್ರವಾಸ ಮಾಡುತ್ತಿದ್ದು, ಒಬ್ಬರನ್ನು ಮಾತ್ರ ಅಲ್ಲಿಗೆ ವರ್ಗಾಯಿಸುವುದು ಸರಿಯಲ್ಲ ಎಂದು ಆಯೋಗದಿಂದ ಅರ್ಜಿ ಬಂದ ಹಿನ್ನೆಲೆಯಲ್ಲಿ ತೀರ್ಮಾನ ಮಾಡಲಾಗಿದೆ. ಹೈಕೋರ್ಟ್ ಶಾಶ್ವತ ಪೀಠ ಸ್ಥಾಪನೆ ರೀತಿ ಅಲ್ಲೊಂದು ಆಯೋಗ ಕಚೇರಿ ತೆರೆಯುವ ಬಗ್ಗೆ ಮುಂದೆ ತೀರ್ಮಾನ ಮಾಡಲು ಸಂಪುಟ ನಿರ್ಧರಿಸಿದೆ.

– Team Nationalitst Views

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com