Connect with us
Loading...
Loading...

ಅಂಕಣ

ಹೋಮ್ ಲ್ಯಾಂಡ್ ಡೇ: “ಹಿಂದುಗಳೇ ಕಾಶ್ಮೀರ ಬಿಟ್ಟು ತೊಲಗಿ ಆದರೆ ನಿಮ್ಮ ಹೆಂಡತಿಯರನ್ನು ಇಲ್ಲೇ ಬಿಟ್ಟು ಹೋಗಿ” ಎಂದು ಹೇಳಿ ಮಾರಣಹೋಮ ಮಾಡಿದ್ದ ಭಯಾನಕ ಕಥೆ!!

Published

on

 • 1.9K
 •  
 •  
 •  
 •  
 •  
 •  
 •  
  1.9K
  Shares

ನೆನ್ನೆ ಅಂದರೆ ಜನವರಿ 19 ಹಿಂದೂ ಸಮಾಜಕ್ಕೆ ಕರಾಳ ದಿನ ಯಾಕೆ ಗೊತ್ತಾ? ಪ್ರತಿ ವರ್ಷ ಆ ದಿನ ಬಂತೆಂದರೆ, ಕಾಶ್ಮೀರಿ ಪಂಡಿತರಿಗೆ ಆಕ್ರೋಶ ಉಕ್ಕಿ ಬರುತ್ತದೆ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಮನೆಯಲ್ಲಿ ದೇವರ ಪೂಜೆ ಮಾಡುತ್ತಿದ್ದ ಪಂಡಿತರನ್ನು ರಾತ್ರೋ ರಾತ್ರಿ ಎಳೆದು ಹೊರ ಹಾಕಿದ್ದರು ಅಲ್ಲಿನ ಮುಸಲ್ಮಾನರು.

ಪಂಡಿತರ ಮನೆಗಳಲ್ಲಿದ್ದ ಒಂದೆರಡು ಕಾಸು ಚಿನ್ನಾಭರಣಗಳನ್ನೂ ಲೂಟಿ ಮಾಡಿ, ಅವರ ಮನೆಯ ಹೆಣ್ಣು ಮಕ್ಕಳನ್ನು ಕೆಡಿಸಿದ ಮುಸಲ್ಮಾನರ ದೊಡ್ಡ ಗುಂಪು ರಕ್ಕಸ ನಗೆ ಬೀರುತ್ತಾ ಹೋಗಿತ್ತು. ಇದನ್ನು ನೋಡಿ ಇನ್ನಿತರರು ಊರು ಬಿಟ್ಟು ಓಡಿ ಹೋಗಿದ್ದರು. ಆ ರಾತ್ರಿ ಕಾಶ್ಮೀರಿ ಪಂಡಿತರು ಮನೆಯಿದ್ದರೂ ಅಕ್ಷರಶಃ ಬೀದಿಗೆ ಬಿದ್ದಿದ್ದರು. ಅರೆನಿದ್ರೆಯಲ್ಲಿ ಎದ್ದು ಎಲ್ಲಿ ಹೋಗಬೇಕು ಎಂದೂ ತಿಳಿಯದೇ ಓಡಿ ಓಡಿ ಊರೇ ಬಿಟ್ಟಿದ್ದರು.

ಅಂದು ಅಂದರೆ 19 ಜನವರಿ 1990 ಕಾಶ್ಮೀರದ ಮಸೀದಿಗಳ ಮೈಕ್ ಗಳಲ್ಲಿ ಅಂದು ಆಜಾನ್ ಮೊಳಗುವ ಬದಲು ಮಸೀದಿಗಳ ಮೌಲ್ವಿಗಳು ಕಾಶ್ಮೀರಿ ಪಂಡಿತರಿಗೆ ಕಾಶ್ಮೀರ ಬಿಟ್ಟು ತೆರಳುವಂತೆ ಆದೇಶ ನೀಡಿದ್ದರು. ಅವತ್ತು ಕಾಶ್ಮೀರದ ಮಸೀದಿಯ ಮೈಕುಗಳು ಘೋಷಣೆ ಕೂಗಲು ಶುರು ಮಾಡಿದವು. ಹಿಂದೂ ಗಂಡಸರನ್ನು ಓಡಿಸಿ , ಅವರ ಹೆಂಡತಿಯರನ್ನು ಉಳಿಸಿಕೊಳ್ಳಿ ಎಂಬ ಘೋಷಣೆಗಳು ಮತಾಂಧರು ಕೂಗಿದರು.

ಇದನ್ನು ಕೇಳಿ ಅಲ್ಲಿದ್ದ ಹಿಂದುಗಳಿಗೆ ಅಚ್ಚರಿಯಾಗಿತ್ತು, ತಮ್ಮೊಂದಿಗೇ ಬಾಯಿ ಬಹನ್ ಅಂತ ಮಾತನಾಡುತ್ತಿದ್ದ ಮುಸಲ್ಮಾನ ಬಾಂಧವರು ಈ ರೀತಿ ಹೇಳಲು ಸಾಧ್ಯವಿಲ್ಲ ಎಂದು ಹಲವರು ಅಂದುಕೊಂಡವರು.

ಆದರೆ ಕ್ಷಣಮಾತ್ರದಲ್ಲಿ ಇಡೀ ಕಾಶ್ಮೀರದ ಪರಿಸ್ಥಿತಿ ಬದಲಾಗಿತ್ತು ಪತ್ರಿಕೆಗಳು, ಪೋಸ್ಟರ್ ಗಳಲ್ಲಿ ಕೂಡ ಕಾಶ್ಮೀರದಿಂದ ಹಿಂದೂಗಳು ಹೊರಟುಹೋಗುವಂತೆ ಜಾಹಿರಾತುಗಳು ರಾರಾಜಿಸತೊಡಗಿದವು.

ಅಲ್ಲಿದ್ದ ಹಿಂದೂಗಳಿಗೆ ಶಾಂತಿಧೂತರು ನೀಡಿದ ಮೂರು ಆಯ್ಕೆಗಳು ರಲಿವ್, ಚಲಿವ್ ಅಥವಾ ಗಲಿವ್ ಅಂದರೆ ಒಂದಾ ಧರ್ಮಾಂತರವಾಗಿ ಮುಸಲ್ಮಾನ ಧರ್ಮಕ್ಕೆ ಮತಾಂತರವಾಗಿ, ಎರಡನೆಯ ಆಯ್ಕೆ ಕಾಶ್ಮೀರ ತೊರೆದು ಹೊರಟುಹೋಗಿ ಮತ್ತು ಕೊನೆಯ ಆಯ್ಕೆ ಮುಸಲ್ಮಾನರ ಖಡ್ಗಕ್ಕೆ ಬಲಿಯಾಗಲು ಸಿದ್ದರಾಗಿ.

ಈ ಮಾತು ಕೇಳಿದ ಕಾಶ್ಮೀರಿ ಪಂಡಿತರಿಗೆ ದಿಕ್ಕೇ ತೋಚದಂತಾಯಿತು. ಕೆಲವರು ಮುಸಲ್ಮಾನ ಜಿಹಾದಿಗಳ ಖಡ್ಗಕ್ಕೆ ಹೆದರಿ ಮತಾಂತರವಾದರು, ಇನ್ನೂ ಹಲವರು ಧರ್ಮಾತರವಾಗಲು ಇಚ್ಛೆಯಿಲ್ಲದೆ ತಮ್ಮ ಮನೆ ಮಠ ತೊರೆದು ಕಾಶ್ಮೀರ ತೊರೆದರು ಆದರೆ ಇನ್ನೊಂದು ಗುಂಪು ಧರ್ಮಾಂತರವೂ ಆಗಲು ಇಷ್ಟವಿಲ್ಲದೆ, ಹುಟ್ಟಿ ಬೆಳೆದ ಊರನ್ನೂ ಬಿಡಲಾಗದೆ ಮುಸಲ್ಮಾನ ಜಿಹಾದಿಗಳ ಬೆದರಿಕೆಗೆ ಜಗ್ಗದೆ ಅಲ್ಲೇ ಉಳಿದು ಬಿಟ್ಟರು.

ಆಗ ನಡೆದಿದ್ದೇ ರಕ್ತಪಾತ, ಮುಸಲ್ಮಾನ ಜಿಹಾದಿಗಳು ಕಾಶ್ಮೀರಿ ಪಂಡಿತರ ಮನೆಮನೆಗೆ ನುಗ್ಗಿ ಸಿಕ್ಕಸಿಕ್ಕವರನ್ನೆಲ್ಲ ಹತ್ಯೆಗೈದರು, ಮಹಿಳೆಯರು ಪುಟ್ಟ ಹೆಣ್ಣು ಮಕ್ಕಳೆಂದೂ ನೋಡದೆ ಅತ್ಯಾಚಾರ ಗೈದರು. ಅಂದೂ ಮುಸಲ್ಮಾನ ಜಿಹಾದಿಗಳು ನಡೆಸಿದ ನರಸಂಹಾರಕ್ಕೆ ಇಡಿಯ ಕಾಶ್ಮೀರವೇ ಅಮಾಯಕ ಹಿಂದೂಗಳ ರಕ್ತದಿಂದ ತೋಯ್ದು ಹೋಗಿತ್ತು.

ಇದಕ್ಕೂ ಮೊದಲು ಇಂತಹ ಘಟನೆಗಳು ಕಾಶ್ಮೀರದಲ್ಲಿ ನಡೆದಿದ್ದವು. ಕಾಶ್ಮೀರಿ ಪಂಡಿತರನ್ನು ಓಡಿಸುವ ಪ್ರಕ್ರಿಯೆ ಶುರುವಾಗಿದ್ದು ಸ್ವಾತಂತ್ರ್ಯಾ ನಂತರ ಅಂತ ಬಹುತೇಕರು ತಿಳಿದಿದ್ದಾರೆ. ಆದರೆ ನಿಜ ಸಂಗತಿ ಬೇರೆಯೇ ಇದೆ.

14ನೇ ಶತಮಾನದಲ್ಲಿ ಮೊದಲ ಬಾರಿಗೆ ಮುಸ್ಲಿಂ ದೊರೆಯೊಬ್ಬ ಆಳಲು ಕುಳಿತಾಗಲೇ ಶುರುವಾಗಿತ್ತು. ಆಗೇನು ಮುಸ್ಲಿಮರ ಸಂಖ್ಯೆ ಹೆಚ್ಚಿರಲಿಲ್ಲ. ಆಗ ಆ ಮುಸಲ್ಮಾನ ರಾಜ ಅಲ್ಲಿನ ಹಿಂದುಗಳ ಮನವೊಲಿಸಿ ಅಂತರ್ಜಾತಿ ವಿವಾಹ ಮಾಡಿಸಿ ಮತಾಂತರ ಮಾಡಲು ಯೋಜನೆ ಹಾಕಿದ.

ಅನಂತರ ಶುರುವಾಯ್ತು ಅವನ ಕ್ರೌರ್ಯ. ಅಧಿಕಾರಕ್ಕೆ ಬಂದ ಸಿಕಂದರ್ ಮಂದಿರಗಳನ್ನು , ಮೂರ್ತಿಗಳನ್ನು ಭಗ್ನಗೊಳಿಸಿ ಪಂಡಿತರನ್ನು ಕತ್ತಿ ಹಿಡಿದೇ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ. ಅದಕ್ಕಾಗಿಯೇ ಆತನಿಗೆ ಬುತ್ ಶಿಕನ್ ಬಿರುದು ಬಂತು. ಬುತ್ ಶಿಕನ್ ಎಂಬುದರ ಅರ್ಥವೇನು ಗೊತ್ತಾ?

ಮೂರ್ತಿ ಭಂಜಕ ಅಂತ. ಕಾಶ್ಮೀರ ಪಂಡಿತರು ಜೀವವುಳಿಸಿಕೊಂಡು ದಿಕ್ಕಾಪಾಲಾಗಿ ಓಡಿದರು. ಅನೇಕರು ಕತ್ತಿಗೆ ಬಲಿಯಾದರು. ಹಲವಾರು ಮತಾಂತರಗೊಂಡರು. ಶತಶತಮಾನಗಳ ಕಾಲ ಸಹಿಸುತ್ತಾ ಬಂದ ಕಾಶ್ಮೀರಿ ಪಂಡಿತ ಸ್ವಾತಂತ್ರ್ಯ ಬರುವ ಹೊತ್ತಿಗೆ ಬಹುಸಂಖ್ಯಾತನಿಂದ ಮೂರುವರೆ ಲಕ್ಷದಷ್ಟು ಸಂಖ್ಯೆಗೆ ಕುಸಿದುಬಿಟ್ಟಿದ್ದ.

ಸ್ವಾತಂತ್ರ್ಯಾ ನಂತರ ಮೊಹಮ್ಮದ್ ಅಬ್ದುಲ್ ಎಂಬ ಮತಾಂಧ ಒಂದು ಸಂಘಟನೆಯನ್ನು ಕಟ್ಟಿ ಜಿಹಾದ್ ಘೋಷಿಸಿ ಕಾಶ್ಮೀರಿ ಪಂಡಿತರನ್ನು ಓಡಿಸುವ ಪ್ರಯತ್ನ ಮಾಡಿದ.

ಮೊಹಮದ್ ಅಬ್ದುಲ್ ನ ನಂತರ ಬಂದವನು ಮತ್ತೊಬ್ಬ ಮತಾಂಧ ಗಿಲಾನಿ. ಅವನು ಬಂದ ನಂತರವಂತೂ ಕಾಶ್ಮೀರಿ ಪಂಡಿತರ ಸ್ಥಿತಿ ಹೇಳಲಿಕ್ಕೆ ಆಗದಂತಾಯ್ತು. ಗಿಲಾನಿ ಬಂದ ನಂತರವಂತೂ ಮದರಸಾಗಳಲ್ಲಿ ಕಾಫಿರ್ ಎಂದರೆ ಹಿಂದೂ , ಆತನನ್ನ ಮತಾಂತರಿಸಬೇಕು ಇಲ್ಲವೇ ಕೊಲ್ಲಬೇಕೆಂದು ಹೇಳಲು ಶುರುಮಾಡಿದ. ಆತ ರೇಡಿಯೋ , ಟಿವಿಗಳಲ್ಲಿ ಕಾಶ್ಮೀರಿ ಮುಸಲ್ಮಾನರಿಗೆ ಕರೆ ಕೊಟ್ಟ. ಚಿನ್ನ ಮಾರಿ ಶಸ್ತ್ರಾಸ್ತ್ರವನ್ನು ಖರೀದಿಸಿ ಎಂದು ಭಾಷಣ ಮಾಡಿದ. ಅಲ್ಲಿಗೆ ಮತ್ತೆ ಕಾಶ್ಮೀರಿ ಪಂಡಿತರ ರೋಧನ ಹೆಚ್ಚಾಯ್ತು.

19 ಜನವರಿ 1990ರ ಘಟನೆಯಿಂದ ಆಗ ಒಟ್ಟು 1,40,000 ಕಾಶ್ಮೀರಿ ಪಂಡಿತರನ್ನು ಓಡಿಸಿಬಿಟ್ಟರು. ಈಗಿನ ಅಂದಾಜಿನ ಪ್ರಕಾರ ಕಾಶ್ಮೀರದಲ್ಲಿ 23% ಹಿಂದುಗಳಿದ್ದ ಪ್ರದೇಶ ಈಗ 3%ಗೆ ಇಳಿದಿದೆ. ಆ 3% ಕೂಡಾ ಮುಸಲ್ಮಾನರಿಗೆ ಬೋಗದ ವಸ್ತುಗಳಾಗಿ ಬದುಕುತ್ತಿದ್ದಾರೆ. ದೇಶದ್ರೋಹಿಗಳಿಗೆ ಕಾನೂನು ಶಿಕ್ಷೆ ವಿಧಿಸಿದರೆ ಬೊಬ್ಬೆ ಹೊಡೆಯುವ ಕೆಲವರಿದ್ದಾರೆ.

ಆದರೆ ಅಷ್ಟೂ ಕಾಶ್ಮೀರಿ ಪಂಡಿತರನ್ನು ಓಡಿಸಿದಾಗ ಈ ಬೊಬ್ಬೆ ಹೊಡೆಯುವವರು ಎಲ್ಲಿ ಸತ್ತಿದ್ರೊ? ಇಂದಿಗೂ ಈ ಬೊಬ್ಬೆ ಹೊಡೆಯುವವರು ಹಿಂದುಗಳಿಗೆ ಅನ್ಯಾಯವಾದರೆ ಸತ್ತಂತೆ ಇರುತ್ತಾರೆ.

ಈ ಘಟನೆ ಜರುಗಿ 28 ವರ್ಷಗಳೇ ಕಳೆದಿದೆ ಆದರೆ ತಮ್ಮದೇ ದೇಶದಲ್ಲಿ ತಮ್ಮದೆಲ್ಲವನ್ನೂ ಕಳೆದುಕೊಂಡು ತಾವೇ ನಿರಾಶ್ರಿತರಂತೆ ಬಾಳುತ್ತಿರುವ ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಕ್ಕಿದೆಯೇ…???

ಇಲ್ಲಾ ಅಂದು ಮನೆ ಮಠ ತೊರೆದು ದೇಶಾಂತರ ಹೋದ ಕಾಶ್ಮೀರಿ ಪಂಡಿತರು ಇಂದು ಅಲ್ಲಲ್ಲಿ ನಿರಾಶ್ರಿತರಂತೆ ವಾಸಿಸುತ್ತಿದ್ದಾರೆ. ಘಟನೆ ನಡೆದು 28 ವರ್ಷಗಳು ಉರುಳಿದರೂ ನಾಲ್ಕೈದು ಸರ್ಕಾರಗಳು ಉರುಳಿದರೂ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಮರೀಚಿಕೆಯಾಗಿದೆ. ಬಹುಶಃ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಇದೊಂದು ಕಪ್ಪು ಚುಕ್ಕೆಯೇ ಸರಿ.

ಜನೇವರಿ 1990 ರಂದು ಅಂದು ನಡೆದ ಆ ಭಯಾನಕತೆಯನ್ನ ನೆನೆದು ಪಂಡಿತರು ಈಗಲೂ ನಾವು ನಮ್ಮ ಮನೆಗೆ ತೆರಳುವಂತಾಗಬೇಕು ಅಂತ ಈ ದಿನವನ್ನ ಹೋಮಲ್ಯಾಂಡ್ ಡೇ ಅಂತ ಆಚರಿಸುತ್ತಾರೆ

ಹಿಂದೂ ಸಮಾಜ ಈ ಎಲ್ಲಾ ಘಟನೆಗಳಿಂದ ಕಲಿಯಬೇಕಾಗಿರೋದು ತುಂಬಾ ಇದೆ. ಹಿಂದೂಗಳೇ ಬಹುಸಂಖ್ಯಾತರಾಗಿರುವ ಹಿಂದೂಸ್ತಾನದಲ್ಲಿ ಹಿಂದೂಗಳಿಗೆ ಇಂತಹುದೊಂದು ಪ್ರಸಂಗ ಎದುರಾಗುತ್ತೇ ಅದಕ್ಕೆ ಉಳಿದ ಹಿಂದೂಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ ಎಂದರೆ ಈ ಎಲ್ಲಾ ಘಟನೆಗಳಿಗೆ ಇಡಿಯ ಹಿಂದೂ ಸಮಾಜವೇ ಹೊಣೆ. ಹಿಂದೂಗಳು ಎಂದು ಜಾತಿ, ಪಂಗಡ, ಮೇಲು, ಕೀಳು ಎಂಬ ಕಟ್ಟುಪಾಡುಗಳಿಂದ ಹೊರಬರಲ್ವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತೆ….

– Nationalist Mahi

 •  
  1.9K
  Shares
 • 1.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com