Connect with us
Loading...
Loading...

ಇತಿಹಾಸ

1965ರ ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ನಿಮಗೆಷ್ಟು ಗೊತ್ತು? ಭಾಗ-2

Published

on

  • 45
  •  
  •  
  •  
  •  
  •  
  •  
  •  
    45
    Shares

ಇದು ಓದುವ ಮುನ್ನ 1965ರ ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ನಿಮಗೆಷ್ಟು ಗೊತ್ತು? ಭಾಗ-1ನ್ನು ಓದಿ. ಯಾಕಂದ್ರೆ ಇದು ಅರ್ಥವಾಗಬೇಕೆಂದರೆ ಬಾಗ-1ನ್ನು ಓದಲೇಬೇಕು.

1962ರಲ್ಲಿ ಚೀನಾ ದಾಳಿ ಮಾಡಿದ ಸಂದರ್ಭದಲ್ಲಿ ಆಗಿನ ಪಾಕಿಸ್ತಾನದ ಅಧ್ಯಕ್ಷ ಅಯುಬ್ ಖಾನರು ಭಾರತ-ಪಾಕಿಸ್ತಾನ ಗಡಿಯಲ್ಲಿದ್ದ ತನ್ನ ಸೈನಿಕರನ್ನು ವಾಪಸ್ಸು ಕರೆಸಿಕೊಂಡಿತು. ಈ ಸಂದರ್ಬದಲ್ಲಿ ಯಾವುದೇ ಕಾರಣಕ್ಕೂ ಭಾರತಕ್ಕೆ ತೊಂದರೆ ಕೊಡಲ್ಲ , ನೀವು ಬೇಕಾದ ರೀತಿಯಲ್ಲಿ ಚೀನಾದೊಂದಿಗೆ ಯುದ್ಧ ಮಾಡಿ ನಾವು ನಿಮಗೆ ತೊಂದರೆ ಕೊಡಲ್ಲ ಅಂತ ಆಯುಬ್ ಖಾನರು ಹೇಳಿದರು. ಆದರೆ ದುರ್ದೈವ ಎಂದರೆ ಆಗಿನ ರಕ್ಷಣಾ ಸಚಿವ ನಮ್ಮ ಮೇಲೆ ದಾಳಿ ಮಾಡಿದ ಚೀನಾಕ್ಕೆ ಬೈಯ್ಯುವುದನ್ನು ಬಿಟ್ಟು ಪಾಕಿಸ್ತಾನಕ್ಕೆ ಬೈಯ್ಯಲು ಶುರು ಮಾಡಿದರು.

ಕಾರಣವಿಷ್ಟೇ ನಮ್ಮ ಪ್ರಧಾನಿಗೆ ಮತ್ತು ರಕ್ಷಣಾ ಸಚಿವರಿಗೆ ಒಂದು ಶಸ್ತ್ರ ಸಜ್ಜಿತ ಸೇನೆಯನ್ನು ತಯಾರು ಮಾಡದೇ ಚೀನಾದೆದರುಗೆ ಬಿಟ್ಟು ಯುದ್ಧ ಮಾಡೋಕಾಗದೇ ಸೈನಿಕರನ್ನು ಬಲಿಕೊಟ್ಟಿದ್ದರು. ಹೀಗಾಗಿ ಚೀನಾದ ಮೇಲಿನ ಸಿಟ್ಟನ್ನು ಸುಖಾಸುಮ್ಮನೆ ಪಾಕಿಸ್ತಾನಕ್ಕೆ ಬೈದು ತೀರಿಸಿಕೊಳ್ಳಲು ನೋಡಿದರು. ಇದರಿಂದ ಪಾಕಿಸ್ತಾನಕ್ಕೆ ಸಹಜವಾಗಿ ಕೋಪ ಬಂತು. ಆಗ ವಿರೋಧ ಬೆಳೆಯಿತು. ಆಗ ಪಾಕಿಸ್ತಾನ ನಿರ್ಧಾರ ಮಾಡಿತು. ಅದೇನು ಗೊತ್ತಾ? ನಾವು ಏನೇ ಮಾಡಿದರೂ ಭಾರತ ಸ್ನೇಹ ಬೆಳೆಸುತ್ತಿಲ್ಲ ಹೀಗಾಗಿ ನಾವು ವೈರತ್ವ ಬೆಳೆಸಿಕೊಳ್ಳುವುದೇ ಒಳ್ಳೆಯದು ಅಂದುಕೊಂಡಿತು. ಅಂದೇ ಪಾಕಿಸ್ತಾನ ವಿರೋಧ ಕಟ್ಟಿಕೊಳ್ಳಲು ನಿರ್ಧಾರ ಮಾಡಿತು.

ಆವಾಗಿನಿಂದ ಪಾಕಿಸ್ತಾನ ಕಾಶ್ಮೀರವನ್ನು ಕಿತ್ತುಕೊಳ್ಳಲು ಕತ್ತಮಸೆಯಲು ಶುರು ಮಾಡಿತು. ಆಗ ಪಾಕಿಸ್ತಾನ ಅಮೆರಿಕಾದೊಂದಿಗೆ ಸಂಭಂದವನ್ನು ಗಟ್ಟಿಮಾಡಿಕೊಂಡು ನ್ಯಾಟೋ ಮತ್ತು ಸೆಂಟೋದ್ ಮೇಂಬರ್ ಆಗಿ ಅಮೆರಿಕಾದ ಶಸ್ತ್ರಾಸ್ತ್ರಗಳನ್ನು ತನ್ನ ದೇಶಕ್ಕೆ ತಂದಿಟ್ಟುಕೊಳ್ಳುವ ವ್ಯವಸ್ಥೆ ಮಾಡಿತು. ಪಾಕಿಸ್ತಾನ ಅಮೆರಿಕಾದಿಂದ ಪೆಟನ್ ಟ್ಯಾಂಕ್ ಮತ್ತು ಸೇಬರ್ ಜೆಟ್ ಗಳನ್ನು ತಂದುಕೊಂಡಿತು.

ತೀರಾ ಬಲಿಷ್ಠವಾಗಿ ಬೆಳೆದು ನಿಂತು ಭಾರತದ ಮೇಲೆ ಯುದ್ಧ ಮಾಡುವ ತಯಾರಿ ನಡೆಸಿತು. ಅಷ್ಟೊತ್ತಿಗಾಗಲೇ ನೆಹರೂ ಅವರು ತೀರಿಕೊಂಡಿದ್ದರು. ಆಗ ಪಾಕಿಸ್ತಾನ ಹೊಂಚುಹಾಕಿತು. ಪ್ರಧಾನಿ ತೀರಿಹೋಗಿದ್ದರಿಂದ ಮುಂದಿನ ಪ್ರಧಾನಿ ಯಾರು ಎನ್ನುವ ಗೊಂದಲದಲ್ಲಿರುವಾಗಲೇ ನಾವು ಯುದ್ಧ ಮಾಡಬೇಕೆಂದು ತಯಾರಿ ನಡೆಸಿತು. ಆಗಲೇ ನಡೆದದ್ದು ಚಮತ್ಕಾರ. ಪರಮ ದೇಶಭಕ್ತ , ಪರಮ ಪ್ರಾಮಾಣಿಕ , ಅತ್ಯಂತ ಸರಳ ಜೀವಿಯಾದ ಲಾಲ್ ಬಹದ್ದೂರ್ ಶಾಸ್ತ್ರೀಯವರು ಪ್ರಧಾನಿಯಾಗಿ ಚುಕ್ಕಾಣಿ ಹಿಡಿದರು.

ಆಗ ಪಾಕಿಸ್ತಾನ ಪ್ರಯೋಗದ ರೀತಿಯಲ್ಲಿ ಗುಜರಾತಿನ ಕಚ್ಛ ಪ್ರದೇಶದ ಮೇಲೆ ದಾಳಿ ಮಾಡಿ ನೋಡಿತು. ಆಗ ಯುರೋಪ್ ಸಂಧಾನ ಆಡಿ ಅವರನ್ನು ಅವರ ದೇಶಕ್ಕೆ ಕಳಿಸಿತು. ಪಾಕಿಸ್ತಾನಕ್ಕೆ ಆ ದಾಳಿ ಪ್ರಯೋಗದ ರೀತಿಯದ್ದಾಗಿತ್ತು. ಕಚ್ಛ ಪ್ರದೇಶದ ತನಕ ಬಂದು ದಾಳಿ ಮಾಡಿ ಹೋದ ಪಾಕಿಸ್ತಾನಕ್ಕೆ ಈಗ ಮತ್ತಷ್ಟು ಧೈರ್ಯ ಬಂದಿತ್ತು. ಈಗ ಮತ್ತೆ ಕಾಶ್ಮೀರ ಮತ್ತು ಪಂಜಾಬಿನ ಮೇಲೆ ಕಣ್ಣು ಹಾಕಿತು. ಕಾಶ್ಮೀರ ಮತ್ತು ಪಂಜಾಬಿನ ಮೇಲೆ ದಾಳಿ ಮಾಡಿ ದೆಹಲಿಯವರೆಗೂ ವಶಪಡಿಸಿಕೊಳ್ಳುವ ಯೋಜನೆ ರೂಪಿಸಿತು. ಅಂತೂ ಇಂತೂ ತಯಾರಾಗಿಯೇ ಬಿಟ್ಟರು. ಪಾಕಿಸ್ತಾನ ಯಾವಾಗಲೂ ನರಿಯ ಬುದ್ದಿಯನ್ನೇ ಪ್ರದರ್ಶನ ತೋರಿಸುತ್ತಲೇ ಬಂದಿದೆ. ಈಗಲೂ ಹಾಗೆಯೇ ಆಯಿತು.

  •  
    45
    Shares
  • 45
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com