Connect with us
Loading...
Loading...

ಅಂಕಣ

1965 ರ ಯುದ್ಧದ ಬಗ್ಗೆ ನಿಮಗೆಷ್ಟು ಗೊತ್ತು? ಭಾಗ 1

Published

on

  • 7
  •  
  •  
  •  
  •  
  •  
  •  
  •  
    7
    Shares

1965 ರ ಭಾರತ-ಪಾಕಿಸ್ತಾನದ ಯುದ್ಧ ಅರ್ಥವಾಗಬೇಕೆಂದರೆ. ಸ್ವಲ್ಪ ಇದರ ಹಿಂದೆ ಏನೇನಾಗಿದ್ದವು. ಸ್ವಾತಂತ್ರ್ಯಾ ಪೂರ್ವ ಮತ್ತು ಸ್ವಾತಂತ್ರ್ಯ ಹೊಸ್ತಿಲಲ್ಲಿ ಏನೇನಾಯಿತು ಅಂತ ತಿಳಿಯಲೇಬೇಕು.

1947ರಲ್ಲಿ ಅಖಂಡ ಭಾರತ ಇಬ್ಭಾಗವಾಯಿತು. ಅಖಂಡ ಭಾರತವನ್ನು ಪೂರ್ವ ಪಾಕಿಸ್ತಾನ್ ,ಪಶ್ವಿಮ ಪಾಕಿಸ್ತಾನವನ್ನಾಗಿ ಅಖಂಡ ಭಾರತವನ್ನು ಇಬ್ಭಾಗ ಮಾಡಲಾಗಿತ್ತು.ವಿಶಾಲವಾದ ಬಂಗಾಳವನ್ನು ಕತ್ತರಿಸಿ ಪೂರ್ವ ಪಾಕಿಸ್ತಾನ್ , ವಿಶಾಲವಾದ ಪಂಜಾಬನ್ನು ಕತ್ತರಿಸಿ ಪಶ್ಚಿಮ ಪಾಕಿಸ್ತಾನವನ್ನಾಗಿ ಮಾಡಲಾಗಿತ್ತು. ಅದು ಸ್ವಾತಂತ್ರ್ಯದ ಹೊಸ್ತಿಲಾಗಿತ್ತು. ಆಗಿನ ಕಾಶ್ಮೀರದ ರಾಜ ಹರಿಶಿಂಗರಿಗೆ ಭಾರತದ ಜೊತೆ ವಿಲೀನವಾಗಬೇಕೋ ಅಥವಾ ಪ್ರತ್ಯೇಕವಾಗಿರಬೇಕೋ ಎಂಬ ಗೊಂದಲವಿತ್ತು. ಹರಿಸಿಂಗರು ಗೊಂದಲದಲ್ಲಿರುವಾಗಲೇ ಪಾಕಿಸ್ತಾನ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಲು ದಾಳಿ ಮಾಡಿತು.

ಆಗ ಹರಿಸಿಂಗರು ಭಾರತದ ಜೊತೆ ವಿಲೀನವಾಗುತ್ತೇನೆ ನಮ್ಮ ರಾಜ್ಯವನ್ನು ಉಳಿಸಿಕೊಡಿ ಎಂದು ಪ್ರಧಾನಿಗಳಿಗೆ ಪತ್ರ ಬರೆದರು. ಆಗ ಕಾರ್ಯಪ್ರವೃತ್ತರಾದ ಭಾರತೀಯ ಸೈನಿಕರು ಕಾಶ್ಮೀರಕ್ಕೆ ಹೋಗಿ ಗಡಿಯಲ್ಲಿಯೇ ಪಾಕಿ ಸೇನೆಯನ್ನು ಹಿಮ್ಮೆಟ್ಟಿಸಿ ಓಡಿಸಿತು. ಸ್ವಾತಂತ್ರ್ಯದ ಹೊಸ್ತಿಲಲ್ಲೇ ನಾವು ಪಾಕಿಗಳನ್ನು ಓಡಿಸಿ ಗೆದ್ದುಬಿಟ್ಟೆವು. ಪಾಕಿಸ್ತಾನವೂ ಅಷ್ಟೇ ಬಾಲ ಮುದುರಿಕೊಂಡ ನಾಯಿಯಂತೆ ಸುಮ್ಮನಾಯಿತು. ಆದರೆ ತನ್ನ ನರಿಬುದ್ಧಿಯನ್ನು ತೋರಿಸುವ ಸಲುವಾಗಿ ನೇರಯುದ್ಧ ಬಿಟ್ಟು ಛದ್ಮ ಯುದ್ಧದ ಉಪಾಯ ಮಾಡಿತು. ಆದರೆ ಆ ಉಪಾಯವೂ ಫಲಿಸಲಿಲ್ಲ. ಯಾಕೆಂದರೆ ಅಂದು ಕಾಶ್ಮೀರದಲ್ಲಿದ್ದ ಮುಸಲ್ಮಾನರು ಭಾರತದ ಪರವಾಗಿಯೇ ಇದ್ದರು. ಹೀಗಾಗಿ ಪಾಕಿಸ್ತಾನ ತನಗೆ ಏನೂ ಮಾಡಲಾಗದೇ ಸುಮ್ಮನಾಯಿತು.

ಆಗ ಪಾಕಿಸ್ತಾನದ ಅಧ್ಯಕ್ಷತೆ ವಹಿಸಿಕೊಳ್ಳಲು ಆಯುಬ್ ಖಾನರು ಬಂದರು. ಆಯುಬ್ ಖಾನರ ಬಗ್ಗೆ ಇತಿಹಾಸದಲ್ಲಿ ಮುಚ್ಚಿಡಲಾಗಿದೆ. ಪಾಕಿಸ್ತಾನ ತನ್ನೆಲ್ಲಾ ಪ್ರಯತ್ನ ಮಾಡಿ ಏನೂ ಮಾಡಲಾಗದೇ ಭಾರತದೊಂದಿಗೆ ದ್ವೇಷ ಬೇಡವೆಂದು ಸುಮ್ಮನಾಗಿತ್ತು. ಆಯುಬ್ ಖಾನರ ಪಾಕಿಸ್ತಾನದ ಅಧ್ಯಕ್ಷತೆ ವಹಿಸಿಕೊಂಡ ಮೇಲಂತೂ ತುಂಬಾ ಬದಲಾಯಿತು. ಆಯುಬ್ ಖಾನರಿಗೆ ಭಾರತ ಕಂಡರೆ ಪ್ರೀತಿ ಇತ್ತು. ಭಾರತದೊಂದಿಗೆ ಒಳ್ಳೆಯ ಸಂಭಂದ ಇಟ್ಟುಕೊಂಡು ಬೆಳೆಯಬೇಕೆಂಬ ಆಸೆಯೂ ಇತ್ತು. ಆಗಿನ ಭಾರತದ ಪ್ರಧಾನಿ ನೆಹರೂ ಅವರು ಪಾಕಿಸ್ತಾನದೊಂದಿಗೆ ಸಿಂಧೂ ನದಿ ಒಪ್ಪಂದ ಮಾಡಿಕೊಂಡಿದ್ದಕ್ಕೆ ಆಯುಬ್ ಖಾನರು ತುಂಬಾ ಸಂತೋಷಗೊಂಡಿದ್ದರು. ಹೀಗಾಗಿ ಆಯಬ್ ಖಾನರಿಗೆ ಭಾರತವನ್ನು ವಿರೋಧಿಸುವುದೇ ಬೇಡವಾಗಿತ್ತು. ಆದರೆ ಪ್ರಧಾನಿ ನೆಹರು ಅವರಿಗೆ ಚೀನಾದ ಜೊತೆ ಸಂಭಂದ ಬೆಳೆಸುವುದು ಮಾತ್ರ ಗೊತ್ತಿತ್ತು. ಚೀನಾಕ್ಕೆ ಭಾರತದ ಮೇಲೆ ಯಾವುದೇ ರೀತಿಯ ಒಲವು ಇರದೇ ಇದ್ದರೂ ನೆಹರೂ ಚೀನಿಯರ ಹಿಂದೆ ದುಂಬಾಲು ಬಿದ್ದುಬಿಟ್ಟರು.

ಹಿಂದೂ-ಚೀನಿ ಭಾಯಿ ಭಾಯಿ ಅಂತ ಬೊಗಳೆ ಬಿಡುತ್ತಿರುವಾಗಲೇ ಚೀನಾ ಭಾರತದ ಮೇಲೆ ದಾಳಿ ಮಾಡಿತು. ಅದು 1962ರ ಸಂದರ್ಭ. ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಭಾರತದ ಪರಿಸ್ಥಿತಿ ಯಾವ ರೀತಿ ಇತ್ತು ಅಂದ್ರೆ ಯಾವುದೇ ಕಾರಣಕ್ಕೂ ಭಾರತ ಆ ಯುದ್ಧದಲ್ಲಿ ಗೆಲ್ಲುವುದಿಲ್ಲ ಎಂದು ಯಾರೂ ಬೇಕಾದರೂ ಹೇಳುವ ಪರಿಸ್ಥಿತಿಯಲ್ಲಿದ್ದೆವು. ಆ ಎಲ್ಲಾ ಪರಿಸ್ಥಿತಿ ಗೊತ್ತಿದ್ದರೂ ಕೂಡಾ ನೆಹರೂ ಅವರು ಯುದ್ಧಕ್ಕೆ ಸಿದ್ಧರಿದ್ದೇವೆ ಎಂದು ಸೈನಿಕರನ್ನು ಗಡಿಯತ್ತ ಕಳಿಸಿಬಿಟ್ಟರು. ಅದರಿಂದಾಗಿ ನಾವು 3000 ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡೆವು.

ಮುಂದುವರೆಯುವುದು……

  •  
    7
    Shares
  • 7
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com