Connect with us
Loading...
Loading...

ಪ್ರಚಲಿತ

ಬ್ರೇಕಿಂಗ್ ನ್ಯೂಸ್: ಜಗತ್ತೇ ಬೆಕ್ಕಸ ಬೆರಗಾಗಿ ನೋಡುವಂತಹ ಬಜೆಟ್ ನೀಡಿದ ಮೋದಿ!!!

Published

on

 • 7
 •  
 •  
 •  
 •  
 •  
 •  
 •  
  7
  Shares

ಇಡೀ ಭಾರತವೇ ಮೋದಿಯವರ ಬಜೆಟ್ ಗಾಗಿ ಕಾತರಿಸುತ್ತಿತ್ತು. ಮೋದಿಯವರು ಯಾವ ತರಹದ ಬಜೆಟ್ ಮಂಡನೆ ಮಾಡಬಹುದು ಎನ್ನುವ ಕುತೂಹಲವೂ ಇತ್ತು. ಅದರ ಜೊತೆಗೆ ತುಂಬಾ ನಿರೀಕ್ಷೆಗಳನ್ನಿಟ್ಟುಕೊಂಡು ಕಾಯಿತ್ತಿದ್ದರು. ಆ ಕಾಯುವಿಕೆಗೆ ಇವತ್ತು ಉತ್ತರ ಸಿಕ್ಕಂತಾಗಿದೆ.

ಇವತ್ತು ಮೋದಿ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಮೋದಿ ಸರ್ಕಾರ ಅನೇಕ ಕೊಡುಗಗೆಗಳನ್ನು ಘೋಷಿಸಿದೆ.

ನಿರೀಕ್ಷೆಗಳನ್ನು ಹೊತ್ತು ಬಜೆಟ್ ಗಾಗಿ ಕಾಯುತ್ತಿದ್ದ ಭಾರತೀಯರಿಗೆ ಖುಷಿ ಆಗಿದೆಯಾ? ಈ ಬಾರಿಯ ಬಜೆಟ್ ನಲ್ಲಿ ಏನೆಲ್ಲಾ ಘೋಷಣೆಯಾಗಿದೆ ಗೊತ್ತಾ? ನಿರೀಕ್ಷೆಯ ಮಟ್ಟದ ಬಜೆಟ್ ಮಂಡನೆಯಾಗಿದೆಯಾ? ಇವುಗಳೆಲ್ಲವನ್ನೂ ತಲುಪಿಸುವ ಪ್ರಯತ್ನ ಮಾಡುತ್ತೇವೆ.

ಇಲ್ಲಿವರೆಗಿನ ಬಜೆಟ್ ಮಂಡನೆಯ ಸಾರಾಂಶಗಳು :

1) ಎಲ್ಲಾ ರೈಲು ನಿಲ್ದಾಣ ಹಾಗೂ ರೈಲುಗಳಲ್ಲಿ ಸಿಸಿಟಿವಿ ಕ್ಯಾಮರಾ, ವೈಫೈ ಅಳವಡಿಕೆಗೆ ನಿರ್ಧಾರ

2) 600 ಪ್ರಮುಖ 600 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಕ್ರಮ: ಜೇಟ್ಲಿ

3) ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿ ‘ಏಕಲವ್ಯ ಶಾಲೆ’

4) ಭವಿಷ್ಯ ನಿಧಿಗೆ ಮಹಿಳೆಯರ ಕೊಡುಗೆ ಶೇ.12ರಿಂದ 8ಕ್ಕೆ ಇಳಿಕೆ 

5) ಹೊಸ ನೌಕರರ ಭವಿಷ್ಯ ನಿಧಿಗೆ 3 ವರ್ಷ ಕಾಲಗಳ ಸರ್ಕಾರದಿಂದ ಶೇ.12ರಷ್ಟು ಪಾಲು 

6) ಅಮೃತ್‌ ಯೋಜನೆಯಡಿ 500 ನಗರಗಳಲ್ಲಿ ಎಲ್ಲಾ ಮನೆಗಳಿಗೆ ನೀರು ಸರಬರಾಜು 

7) 4 ಲಕ್ಷ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್‌ ಪೂರೈಕೆ 

8) ಬೆಂಗಳೂರಿನಲ್ಲಿ 160 ಕಿ.ಮೀ. ಸಬ್‌ ಅರ್ಬನ್‌ ರೈಲ್ವೆ ಜಾಲ 

9) ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ 56,619 ಕೋಟಿ ರೂಪಾಯಿ ಮೀಸಲು

10) ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ 39,135 ಕೋಟಿ ರೂಪಾಯಿ ಮೀಸಲು

11) ಜಗತ್ತಿನ ಅತಿ ದೊಡ್ಡ ಸರ್ಕಾರಿ ಅನುದಾನದ ಆರೋಗ್ಯ ಯೋಜನೆ ಘೋಷಣೆ

12) ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ ಘೋಷಿಣೆ

13) ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ಗೆ 1,200 ಕೋಟಿ ರೂಪಾಯಿ ಮೀಸಲು 

14) 10 ಕೋಟಿ ಜನ ಜನರನ್ನು ತಲುಪಲಿರುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ 

15) ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿ ನೆರವು 

16) 2022ರ ವೇಳೆಗೆ 33 ಲಕ್ಷ ಮನೆ ನಿರ್ಮಾಣದ ಗುರಿ

17) 2018-19ನೇ ಸಾಲಿನಲ್ಲಿ ಕೃಷಿ ಸಾಂಸ್ಥಿಕ ಸಾಲದ ಮೊತ್ತ 11 ಲಕ್ಷ ಕೋಟಿಗೆ ಹೆಚ್ಚಿಸಲು ಪ್ರಸ್ತಾಪ 

18) ಸ್ವಚ್ಛ ಭಾರತ ಅಭಿಯಾನದಡಿ 2 ಕೋಟಿಕ್ಕೂ ಅಧಿಕ ಶೌಚಾಲಯಗಳ ನಿರ್ಮಾಣದ ಗುರಿ

19) 8 ಕೋಟಿ ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಒದಗಿಸಲು ಸರ್ಕಾರ ಚಿಂತನೆ

20) ಕೃಷಿ ಹಾಗೂ ಗ್ರಾಮೀಣ ಆದಾಯ ಮೇಲೆ ಬಜೆಟ್‌ ಕೇಂದ್ರಿಕರಿಸಿದೆ

21) ಮೂರು ವರ್ಷಗಳಲ್ಲಿ ದೇಶವು ಶೇ 7.5ರ ಸರಾಸರಿ ಆರ್ಥಿಕ ಬೆಳವಣಿಗೆ

22) ಬಡ ಹಾಗೂ ಮಧ್ಯಮ ವರ್ಗ ಜೀವನ ನಿರ್ವಹಣೆಯನ್ನು ಸುಗಮಗೊಳಿಸಲಾಗಿದೆ

ಈತನಕ ಜೆಟ್ಲಿಯವರು ಘೋಷಿಸಿದ ಬಜೆಟ್ ನ ಸಾರಾಂಶ.‌ ಬಾಕಿಯ ಬಜೆಟ್ ಘೋಷಣೆ ಮುಂದುವರೆದಿದೆ. ಈಗ ಘೋಷಣೆಯಾಗಿರೋದಲ್ಲಿ ಮೆಡಿಕಲ್ ಬಜೆಟ್ ವಿಶ್ವ ದಾಖಲೆಯಾಗಿದೆ. ಈ ಕುರಿತಂತೆ ಅರುಣ್ ಜೇಟ್ಲಿಯವರೇ ಸ್ವತಃ ಮೆಡಿಕಲ್ ಬಜೆಟ್ ವಿಶ್ವ ದಾಖಲೆಯ ಬಜೆಟ್ ಎಂದು ಹೇಳಿದ್ದಾರೆ.

ಮೋದಿ ಸರ್ಕಾರದ ಮೆಡಿಕಲ್ ಬಜೆಟ್ ವಿಶ್ವ ದಾಖಲೆಯಾಗಿದೆ:


ಹೌದು ಇವತ್ತು ಭಾರತೀಯರು ನಿರೀಕ್ಷಿಸುತ್ತಿದ್ದ ಬಜೆಟ್ ಮಂಡನೆಯಾಗಿದ್ದು. ಮೋದಿ ಹಲವಾರು ಕ್ಷೇತ್ರಗಳಿಂದ ಬಂಪರ್ ಕೊಡುಗೆ ಘೋಷಣೆಯಾಗಿದೆ. ಅದರಲ್ಲೂ ಮೆಡಿಕಲ್ ಬಜೆಟ್ ಅಂತೂ ವಿಶ್ವದಾಖಲೆಯ ಬಜೆಟ್ ಆಗಿದೆ. ಭಾರತದ ಬಡ ಪ್ರಜೆಗಳ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸಿದ ಮೋದಿ ಸರ್ಕಾರ ಈ ವಲಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.

ಕಳೆದ ಬಾರಿಯಷ್ಟೇ ಮೆಡಿಕಲ್‍ನಲ್ಲಿ ಭಾರೀ ಬದಲಾವಣೆಯನ್ನು ಹೊರತಂದಿದ್ದ ಮೋದಿ ಸರ್ಕಾರ ಪ್ರತಿ ಕಡೆಗಳಲ್ಲೂ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ಜಾರಿಗೆ ತಂದಿತ್ತು. ಈ ಮೂಲಕ ಅತ್ಯಂತ ಕಡಿಮೆ ದರಗಳಲ್ಲಿ ಭಾರೀ ಜನರಿಗೆ ಔಷಧಿಯನ್ನು ನೀಡಿ ಆಶಾಕಿರಣವಾಗಿತ್ತು. ಈ ಬಾರಿ ಮತ್ತೆ ಈ ವಲಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದೆ.

ಅಷ್ಟಕ್ಕೂ ಏನದು ಮೆಡಿಕಲ್ ಬಜೆಟ್?

 

ಈ ಬಾರಿಯ ಮೋದಿ ಸರ್ಕಾರದ ಬಜೆಟ್ ನಲ್ಲಿ ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದಾರೆ. ಆ ಕುಟುಂಬದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಯಾವುದೇ ಆಸ್ಪತ್ರೆಯಲ್ಲೂ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಉಚಿತವಾಗಿ ದೊರೆಯಲಿದೆ. ಈ ಯೋಜನೆ ಭಾರತದ 10 ಕೋಟಿ ಕುಟುಂಬಗಳಿಗೆ ತಲುಪಲಿದ್ದು, ಬರೋಬ್ಬರಿ 50 ಕೋಟಿ ಜನರು, ಅಂದರೆ ಭಾರತದಲ್ಲಿ ವಾಸವಿರುವ ಹತ್ತಿರ ಹತ್ತಿರ ಅರ್ಧದಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಈ ರೀತಿಯ ಬಜೆಟ್ ಮಂಡನೆ ವಿಶ್ವದಲ್ಲೇ ಮೊದಲ ಬಾರಿಗೆ ಜಾರಿಗೆ ಬಂದಿದೆ. ಆದ್ದರಿಂದ ಇದು ವಿಶ್ವದಾಖಲೆಯಾಗಿದೆ.

ಇದೇ ಮೆಡಿಕಲ್ ಬಜೆಟ್ ನಲ್ಲಿ 10 ಮೆಡಿಕಲ್ ಕಾಲೇಜಗಳನ್ನು ಘೋಷಿಸಿದ್ದಾರೆ. ಆ 10 ಕಾಲೇಜುಗಳಲ್ಲಿ ಕರ್ನಾಟಕಕ್ಕೂ ಒಂದು ಎಂಬುದು ಕನ್ನಡಿಗರಿಗೆ ಖುಷಿಯ ವಿಚಾರ.

ಒಟ್ಟಿನಲ್ಲಿ ಮೋದಿ ಸರ್ಕಾರದ ಬಜೆಟ್ ಜನರು ನಿರೀಕ್ಷಿಸಿದಂತೆ ಮಂಡನೆಯಾಗಿದೆ ಎನ್ನಬಹುದು. ಈ ಬಾರಿಯ ಬಜೆಟ್ ಕುರಿತಂತೆ ಇನ್ನೂ ಹಲವಾರು Updates ಕೊಡುತ್ತೇವೆ ನಿರೀಕ್ಷಿಸಿ.

Team Nationalist Views

 •  
  7
  Shares
 • 7
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com