Connect with us
Loading...
Loading...

ಅಂಕಣ

ಶಾಕಿಂಗ್: 300 ಜನ ಚೀನಿ ಸೈನಿಕರನ್ನ ಸದೆಬಡಿದು ಮಡಿದಿದ್ದ ಈ ವೀರ ಯೋಧನ ‘ಆತ್ಮ’ ಈಗಲೂ ಗಡಿ ಕಾಯುತ್ತಿದೆಯಂತೆ, ಭಾರತೀಯ ಸೈನಿಕರ ಜೊತೆ ಈಗಲೂ ಕೆಲಸ ಮಾಡುತ್ತಾನಂತೆ ಈ ಯೋಧ

Published

on

 • 10K
 •  
 •  
 •  
 •  
 •  
 •  
 •  
  10K
  Shares

ಅದ್ಭುತ, ಅವಿಶ್ವಸನೀಯ ಹಾಗು ರೋಚಕ ಕಹಾನಿಯೊಂದನ್ನ ಇಂದು ನಾವು ನಿಮಗೆ ತಿಳಿಸಲು ಹೊರಟಿದ್ದೇವೆ. 56 ವರ್ಷಗಳ ಹಿಂದೆ 1962 ರಲ್ಲಿ ಭಾರತ ಹಾಗು ಚೀನಾ ನಡುವೆ ನಡೆದಿದ್ದ ಘೋರ ಯುದ್ಧದಲ್ಲಿ ಅಪ್ರತಿಮ, ಕೆಚ್ಚೆದೆಯಿಂದ ಹೋರಾಡಿ ಪ್ರಾಣತ್ಯಾಗ ಮಾಡಿದ್ದ ವೀರ ಯೋಧ ಜಸ್ವಂತ್ ಸಿಂಗ್ ರಾವತ್ ರವರ ಆತ್ಮ ಈಗಲೂ ಭಾರತದ ಗಡಿ ಕಾಯುತ್ತಿದೆಯೆಂದರೆ ನೀವು ನಂಬುತ್ತೀರ? ನಂಬಲೇಬೇಕು ಹಾಗು ಇದು ಸತ್ಯ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ಈಗಲೂ ನಮಗೆ ಸಿಗುತ್ತವೆ.

ಭಾರತದ ಇತಿಹಾಸದಲ್ಲಿ ಜಸ್ವಂತ್ ಸಿಂಗ್ ರಾವತ್ ರವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಬಳಿಕವೂ ದೇಶವನ್ನ ಕಾಯುತ್ತಿರುವ ಏಕೈಕ ವ್ಯಕ್ತಿಯೆಂದರೆ ತಪ್ಪಾಗಲಾರದು. ದೇಶದ ಇತಿಹಾಸದಲ್ಲಿ ಒಬ್ಬ ಸೈನಿಕ ತೀರಿಕೊಂಡ ಬಳಿಕವೂ ಮೃತ ಸೈನಿಕನಿಗೆ ಬಡ್ತಿ ಸಿಕ್ಕಿದ್ದು ಯಾರಿಗಾದರೂ ಇದ್ದರೆ ಅದಿ ಜಸ್ವಂತ್ ಸಿಂಗ್ ರಾವತ್ ರಿಗೆ ಮಾತ್ರ. ಹೌದು ಯುದ್ಧಭೂಮಿಯಲ್ಲಿ ಪ್ರಾಣಾರ್ಪಣೆ ಮಾಡಿದ ಈ ವೀರ ಯೋಧನಿಗೆ ಸೈನ್ಯದಲ್ಲಿ ಬಡ್ತಿ ಸಿಕ್ಕಿದ್ದು ಆತನ ನಿವೃತ್ತಿ ವಯಸ್ಸಾದ ಬಳಿಕವೇ ಆತನಿಗೆ ನಿವೃತ್ತಿ ಘೋಷಿಸಲಾಗಿತ್ತು.

ತನ್ನ ಕೇವಲ 21 ವರ್ಷದ ವಯಸ್ಸಿನಲ್ಲಿಯೇ ಭಾರತದ ಈ ವೀರ ಪ್ರತಾಪಿ ಸೇನಾನಿಯು 1962 ರ ಭಾರತ ಚೀನಾ ಯುದ್ಧದಲ್ಲಿ ಮೂರು ದಿನಗಳ ಕಾಲ ಏಕಾಂಗಿಯಾಗಿ ಹೋರಾಟ ನಡೆಸಿ 300 ಚೀನಿ ಸೈನಿಕರನ್ನ ಹೊಡೆದುರುಳಿಸಿದ್ದ. ಆಗಷ್ಟ್ 19, 1941 ರಲ್ಲಿ ಉತ್ತರಾಖಂಡದ ಪೌರಿ ಗಢವಾಲ್ ಜಿಲ್ಲೆಯ ಬರ್ಯಾಣ್ ಗ್ರಾಮದಲ್ಲಿ ಶ್ರೀ ಗುಮಾನ್ ಸಿಂಗರ ಮನೆಯಲ್ಲಿ ಜನಿಸಿದ ಬಾಲಕನೊಬ್ಬ ಭಾರತೀಯ ಸೇನಾ ಇತಿಹಾಸದಲ್ಲಿ ತನ್ನ ಹೆಸರನ್ನ ಅಜರಾಮರವಾಗಿಸಿದ್ದ.

ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ತೋರಿದ ಅಪ್ರತಿಮ ಶೌರ್ಯಕ್ಕಾಗಿ ಜಸ್ವಂತ್ ಸಿಂಗ್ ತೋರಿಸಿದ ಛಾತಿಗಾಗಿ ಆತನ ಸ್ಮಾರಕವನ್ನ ಆತ ಚೀನೀ ಸೈನಿಕರನ್ನ ಹೊಡೆದುರುಳಿಸಿದ ಜಾಗದಲ್ಲೇ ನಿರ್ಮಿಸಲಾಗಿದೆ. 1962 ರ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಚೀನಿ ಸೈನಿಕರು ಜಸ್ವಂತ್ ಸಿಂಗರನ್ನ ಮುತ್ತಿಗೆ ಹಾಕಿಬಿಟ್ಟಿದ್ದರು, ಆಗ ಜಸ್ವಂತ್ ತನಗೆ ತಾನೇ ಗುಂಡು ಹಾರಿಸಿಕೊಂಡು ಬಿಟ್ಟಿದ್ದ. ಆಗ ಚೀನಿ ಸೈನಿಕರು ಜಸ್ವಂತ್ ಸಿಂಗರ ತಲೆಯನ್ನ ಕಡಿದು ಚೀನಾಗೆ ತೆಗೆದುಕೊಂಡು ಹೋಗಿ ಆತನ ಉಳಿದ ದೇಹವನ್ನ ಯುದ್ಧಭೂಮಿಯಲ್ಲೇ ಎಸೆದು ಹೋಗಿದ್ದರು.

ಭಾರತದ ಅದೇ ಪೋಸ್ಟ್ ನಲ್ಲಿ ಭಾರತೀಯ ಸೇನೆಯ ವತಿಯಿಂದ ಅವರ ನೆನಪಿನಲ್ಲಿ ಮಂದಿರವೊಂದನ್ನ ನಿರ್ಮಿಸಲಾಗಿದ್ದು ಅದನ್ನ “ಜಸ್ವಂತ್ ಗಢ್” ಎಂದೇ ಕರೆಯಲಾಗುತ್ತದೆ. ಆ ಮಂದಿರದಲ್ಲಿ ಅವರಿಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನ ಈಗಲೂ ಸುರಕ್ಷಿತವಾಗಿ ಇಡಲಾಗಿದೆ. ಭಾರತೀಯ ಸೇನೆಯ ಸಾಮಾನ್ಯ ಸೈನಿಕನಾಗಲಿ ಅಥವ ಆರ್ಮಿ ಚೀಫ್ ಜನರಲ್ ಆಗಲಿ ಈ ಪೋಸ್ಟ್ ನಿಂದ ತೆರಳಬೇಕಾದರೆ ಈ ಮಂದಿರದಲ್ಲಿನ ಜಸ್ಚಂತ್ ಸಿಂಗರ ದರ್ಶ‌ ಪಡೆಯದೆ ಮುಂದೆ ಹೋಗುವುದಿಲ್ಲ.

ಜಸ್ವಂತ್ ಸಿಂಗ್ ರಾವತ್ ರವರ ಮಂದಿರದ ರಕ್ಷಣೆಗಾಗಿ ಭಾರತೀಯ ಸೇನೆ ಬರೋಬ್ಬರಿ ಅರ್ಧ ಡಜನ್ ಅಂದರೆ 6 ಸೈನಿಕರನ್ನ ನಿಯುಕ್ತಿಗೊಳಿಸಲಾಗಿದ್ದು ಬೆಳಿಗ್ಗೆ 4.30 ಕ್ಕೆ ಚಹಾ ಹಾಗು ಬೆಳಿಗ್ಗೆ 9.30 ಕ್ಕೆ ಟಿಫನ್ ಹಾಗು ರಾತ್ರಿ ಊಟವನ್ನ ಈಗಲೂ ಆತನಿಗೆ ಭಾರತೀಯ ಸೇನೆ ನೀಡುತ್ತಿದೆ. ಪ್ರತಿದಿನವೂ ಅವರ ಕೋಣೆಯಲ್ಲಿನ ಅವರ ಸಮವಸ್ತ್ರವನ್ನ ಹಾಗು ಆತನ ಶೂ ಗಳನ್ನ ಪಾಲಿಷ್ ಮಾಡಿ ಇಡಲಾಗುತ್ತದೆ‌. ಆತ ಮಲಗಲು ಆತನ ಹಾಸಿಗೆ ದಿಂಬುಗಳನ್ನ ಜೋಡಿಸಿಡಲಾಗುತ್ತದೆ. ಇಂಟರೆಸ್ಟಿಂಗ್ ಹಾಗು ರೋಚಕ ವಿಷಯವೆಂದರೆ ಮರುದಿನ ಬೆಳಿಗ್ಗೆ ಆತನ ಕೋಣೆಗೆ ಹೋಗಿ ನೋಡಿದಾಗ ಅಲ್ಲಿ ಯಾರೋ ಮಲಗಿದ್ದರು ಎಂಬಂತೆ ಹಾಸಿಗೆಯೆಲ್ಲಾ ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬರುತ್ತದೆ.

ಅಷ್ಟೇ ಅಲ್ಲದೆ ಪಾಲಿಷ್ ಮಾಡಿಡಲಾಗಿದ್ದ ಶೂ ಗಳು ಕೂಡ ಕೊಖೆಯಾಗಿರುವುದು ಕಂಡು ಬರುತ್ತದೆ‌. ಭಾರತೀಯ ಸೇನೆಯಾಗಲಿ ಅಥವ ಸ್ಥಳೀಯರಾಗಲಿ ಅವರು ಹೇಳುವ ಪ್ರಕಾರ ಜಸ್ವಂತ್ ಸಿಂಗ್ ರಾವತ್ ರವರ ಆತ್ಮ ಈಗಲೂ ಭಾರತೀಯ ಗಡಿ ರಕ್ಷಣೆ ಮಾಡುತ್ತಿದೆ ಎಂದು ಹೇಳುತ್ತಾರೆ. ಭಾರತೀಯ ಸೇನೆಯ ಸೈನಿಕರು ಗಸ್ತು ತಿರುಗುತ್ತಿರುವಾಗ ಏನಾದರೂ ಕಣ್ಣು ಮುಚ್ಚಿ ನಿದ್ರೆಗೆ ಜಾರಿದರೆ ಈಗಲೂ ಜಸ್ವಂತ್ ಸಿಂಗ್ ಆ ಸೈನಿಕರ ಕಪಾಳಕ್ಕೆ ಹೊಡೆದು ಎಚ್ಚರಗೊಳಿಸಿ ಗಡಿ ರಕ್ಷಣೆ ನಮ್ಮ ಆದ್ಯ ಕರ್ತವ್ಯವೆಂದು ಎಚ್ಚರಿಸುತ್ತಾನಂತೆ.

ತನ್ನ ಸೇವಾ ಅವಧಿಯಲ್ಲಿ ಆತ ತೀರಿಕೊಂಡ ಬಳಿಕವೂ ಆತ ಯಾವಾಗ ರಜೆ ಕೇಳಿದರೂ(ಆತನ ಕುಟುಂಬಸ್ಥರು ರಜೆ ಕೇಳಿದರೂ) ಆತನಿಗೆ ರಜೆ ನೀಡಲಾಗುತ್ತಿತ್ತು. ಆತನ ಕುಟುಂಬಸ್ಥರು ಮಂದಿರದಲ್ಲಿನ ಆತ ಫೋಟೊವನ್ನ ತೆಗೆದುಕೊಂಡು ತಮ್ಮ ಹಳ್ಳಿಗೆ ಕೊಂಡೊಯ್ದು ರಜಾ ದಿನಗಳು ಮುಗಿದ ಬಳಿಕ ಆತನ ಫೋಟೋವನ್ನ ಮತ್ತೆ ಹಿಂದಿರುಗಿಸುತ್ತಿದ್ದರು. ಭಾರತದ ಹೆಮ್ಮೆಯ ಸೈನಿಕ ಭಾರತವನ್ನ ರಕ್ಷಿಸುತ್ತಾನೆ ಅನ್ನೋದಂತೂ ನಮಗೆಲ್ಲಾ ಗೊತ್ತಿರುವ ವಿಚಾರವೇ, ಆದರೆ ಸತ್ತ ಮೇಲೂ ಮಾತೃ ಭೂಮಿಯ ರಕ್ಷಣೆ ಮಾಡುವ ವೀರ ಯೋಧನ ಬಗ್ಗೆ ನೀವು ಕೇಳಿದ್ದು ಇದೇ ಮೊದಲ ಬಾರಿ ಅನಿಸುತ್ತೆ.

ಪ್ರಪಂಚದ ಸರ್ವಶ್ರೇಷ್ಠ ಹಾಗು ಅಪ್ರತಿಮ ಛಾತಿಯುಳ್ಳ ಸೈನಿಕರು ಕೇವಲ ಭಾರತೀಯ ಸೇನೆಯಲ್ಲಿ ಮಾತ್ರ ನೋಡಲು ಕಾಣಸಿಗುತ್ತಾರೆ‌. ಭಾರತಮಾತೆಯ ವೀರ ಸುಪುತ್ರ, ಭಾರತದ ಮುಕುಟಪ್ರಾಯವಾಗಿರುವ ಭಾರತೀಯ ಸೇನೆಯ ವೀರ ಯೋಧ ಜಸ್ವಂತ್ ಸಿಂಗ್ ರಾವತ್ ರವರ ಆತ್ಮ ಅಮರವಾಗಿರಲಿ ಹಾಗು ಅವರ ಯಶೋಗಾಥೆ ಹೀಗೇ ಜಗತ್ತಿನೆದುರು ಬೆಳಗುತ್ತಿರಲಿ. ಜಸ್ವಂತ್ ಸಿಂಗ್ ರವರ ಅದ್ಭುತ, ವಿಸ್ಮಯ ಕಾರ್ಯಗಳು ಹೀಗೇ ಮುಂದುವರೆಯಲಿ. ಜಯ್ ಜವಾನ್, ಜೈ ಭಾರತೀಯ ಸೇನೆ

– Vinod Hindu Nationalist

Nationalist Views ©2018 Copyrights Reserved

 •  
  10K
  Shares
 • 10K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com