Connect with us
Loading...
Loading...

ಪ್ರಚಲಿತ

ಅಮೇರಿಕಾ ಕೂಡ ನಡೆಸಿಬಿಟ್ಟಿತು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್!! ಭಾರತವಾಯಿತು ಇದೀಗ ಅಮೇರಿಕಾ ಸರದಿ!!

Published

on

  • 3.1K
  •  
  •  
  •  
  •  
  •  
  •  
  •  
    3.1K
    Shares

ಪಾಕಿಸ್ತಾನ್ ಅಲ್ಲ ಅಲ್ಲ ಟೆರರಿಸ್ತಾನ‌ ಇದು ಭಯೋತ್ಪಾದಕರನ್ನು(ಟೆರರಿಸ್ಟ್ ಗಳನ್ನು) ಪೋಷಿಸಿ ರಕ್ಷಣೆ ಕೊಡುತ್ತಿರುವುದರಿಂದ ಇದನ್ನು ಟೆರರಿಸ್ತಾನ ಅಂತ ಕರೆಯಬಹುದು. ಕೆಲವರಿಗೆ ಪಾಕಿಸ್ತಾನ ಸ್ವರ್ಗದಂತೆ ಭಾಸವಾಗುತ್ತದೆ. ಅದು ಯಾಕೋ ಏನೋ ನಾಕಾಣೆ. ಅಂತಹ ಸ್ವರ್ಗ ಆ ಪಾಪಿ ಪಾಕಿಸ್ತಾನದಲ್ಲಿ ತೋರಿಸಿದವನು ಯಾರೋ.

ಭಯೋತ್ಪಾದನೆ ಇಂದು ಜಗತ್ತನ್ನು ಆವರಿಸಿಕೊಂಡಿರುವ ಭೂತ. ಇಂದು ಇಡೀ ಜಗತ್ತು ಭಯೋತ್ಪಾದನೆಯಿಂದ ತತ್ತರಿಸಿ ಹೋಗಿದೆ. ಒಂದಕ್ಕಿಂತಲೂ ಒಂದು ದೇಶ ಭಯೋತ್ಪಾನೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಬಂದಿದೆ.

ಆದರೆ ಪಾಕಿಸ್ತಾನ ಮಾತ್ರ ಭಯೋತ್ಪಾದಕರನ್ನು ಪೋಷಿಸಿ, ಸಾಕುತ್ತಲೇ ಬಂದಿದೆ. ಪಾಕಿಸ್ತಾನವನ್ನು ಕೆಲವರು ಸ್ವರ್ಗ ಅಂತಲೂ ಕರೆದರು. ಆದರೆ ಪಾಪ ಅವರಿಗೆ ಗೊತ್ತಿರಲಿಕ್ಕಿಲ್ಲ ಅದೊಂದು ಭಯೋತ್ಪಾದಕರ ತವರು ಮನೆ ಅನ್ನೋದು.

ಈ ಭಯೋತ್ಪಾನೆ ಎಂಬ ಪೆಡಂಭೂತ ಎಷ್ಟು ಕ್ರೂರವಾಗಿದೆ ಅಂದ್ರೆ ಈ ಭಯೋತ್ಪಾದನೆ ಕಾಲಿಟ್ಟ ಕೇವಲ 15 ವರ್ಷಗಳಲ್ಲಿ ಇರಾನ್ ರಾಷ್ಟ್ರವು ಭಯೋತ್ಪಾದಕರ ತಾಣವಾಯಿತು.

ಅದೇ ಭಯೋತ್ಪಾದನೆಯ ಕ್ರೂರತೆಯಿಂದ ಇರಾಕ್ ರಾಷ್ಟ್ರ ಕೇವಲ 17 ವರ್ಷಗಳಲ್ಲಿ ಭಯೋತ್ಪಾದಕರ ಬೀಡಾಯಿತು. ಇನ್ನು ಈಜಿಪ್ಟ ಕೂಡಾ ಇದರ ಹೊರತಲ್ಲ. ಅದು ಕೂಡಾ ಭಯೋತ್ಪಾದನೆ ಕಾಲಿಟ್ಟ
ಕೇವಲ 21 ವರ್ಷಗಳಲ್ಲಿ ಭಯೋತ್ಪಾದಕರ ನೆಲವಾಯಿತು.

ಇವುಗಳು ಬರೀ ಉದಾಹರಣೆಗಳಷ್ಟೇ. ಭಯೋತ್ಪಾದನೆ ಎನ್ನುವುದು ಜಗತ್ತಿನ ಯಾವ ರಾಷ್ಟ್ರವನ್ನು ಬಿಟ್ಟಿಲ್ಲ. ಇಡೀ ಜಗತ್ತು ಇಂದು ತತ್ತರಿಸಿ ಹೋಗಿದೆ. ಆದರೆ ಪಾಕಿಸ್ತಾನ ಅವರನ್ನೇ ಬೆಳಸಿ ಇಡೀ ಜಗತ್ತಿನಾದ್ಯಾಂತ ಭಯೋತ್ಪಾದನೆಗೆ ಕಳಿಸುತ್ತಿದೆ. ಅದರಲ್ಲೂ ಭಾರತ ಮಾತ್ರ ಅದಕ್ಕೆ ದೊಡ್ಡ ಟಾರ್ಗೆಟ್.

ಪಾಕಿಸ್ತಾನ ಭಯೋತ್ಪಾದಕರನ್ನು ಪೋಷಿಸಿ ಬೆಳೆಸುತ್ತಿರೋದನ್ನು ಅಮೆರಿಕಾಗೂ ನೋಡಿ ನೋಡಿ ಸಾಕಾಗಿದೆ. ಬುದ್ಧಿ ಹೇಳಿಯೂ ಸಾಕಾಗಿದೆ. ಹೀಗಾಗಿ ಟ್ರಂಪ್ ಅಮೆರಾಕದ ಅಧ್ಯಕ್ಷರಾದೊಡನೆ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದ್ದರು. ಏನಂತ ಎಚ್ಚರಿಕೆ ಕೊಟ್ಟಿದ್ದರು ಗೊತ್ತಾ? ನೀವೇನಾದರೂ ಭಯೋತ್ಪಾದಕರಿಗೆ ರಕ್ಷಣೆ ಕೊಟ್ಟರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಹುಷಾರ್!! ಎಂದು ಟ್ರಂಪ್ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದ್ದರು.

ಆದರೆ ಪಾಕಿಸ್ತಾನ ಅಮೆರಿಕಾದ ಮಾತು ಕೇಳಿಸದಂತೆ ಮಾಡಿ, ಭಂಡ ಧೈರ್ಯ ಮಾಡಿ ತನ್ನ ಹಳೆ ಛಾಳಿಯನ್ನು ಮುಂದುವರೆಸಿತ್ತು. ಅಮೆರಿಕಾಗೂ ನೋಡಿ ನೋಡಿ ಹೇಳಿ ಹೇಳಿ ಸಾಕಾಗಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಮೊನ್ನೆ ತಕ್ಕ ಪಾಠ ಕಲಿಸಿದೆ.

ಅಷ್ಟಕ್ಕೂ ಹೇಗೆ ಏನು ಪಾಠ ಕಲಿಸಿದೆ ಗೊತ್ತಾ?

ಮೊನ್ನೆ ಮೊನ್ನೆಯಷ್ಟೆ ಯಾವುದೇ ಮುನ್ಸೂಚನೆಯನೆಯನ್ನು ಕೊಡದ ಅಮೆರಿಕಾ ಪಾಕಿಸ್ತಾನದೊಳಕ್ಕೆ ನುಗ್ಗಿ ಭಯೋತ್ಪಾದಕರ ತಾಣಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಇದರಿಂದ ಅನೇಕ ಭಯೋತ್ಪಾದಕರ ಸಂಹಾರವಾಗಿದೆ.

ಕೆಲ ದಿನಗಳ ಹಿಂದೆ ಟ್ರಂಪ್ ಪಾಕಿಸ್ತಾನದ ವಿರುದ್ಧ ಗುಡುಗಿದ್ದರು. ನಾವು ಸುಮಾರು ವರ್ಷಗಳಿಂದ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಲೇ ಬಂದಿದ್ದೇವೆ. ಆದರೆ ಪಾಕಿಸ್ತಾನ ನಮ್ಮ ಸಹಾಯಕ್ಕೆ ಪ್ರತಿಯಾಗಿ ಭಯೋತ್ಪಾದನೆಯನ್ನು ಕೊಟ್ಟಿದೆ.

ನಾವು ಇದನ್ನು ಸಹಿಸುವುದಿಲ್ಲ ಎಂದು ಹೇಳಿದ ಟ್ರಂಪ್ ಪಾಕಿಸ್ತಾನಕ್ಕೆ ಸಹಾಯ ಮಾಡುವುದನ್ನು ನಿಲ್ಲಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಅಂದರೆ ಎರಡು ದಿನಗಳ ಹಿಂದೆ ಅಮೆರಿಕಾ ಪಾಕಿಸ್ತಾನಕ್ಕೆ ಯಾವುದೇ ಮುನ್ಸೂಚನೆ ಕೊಡದೆ ಪಾಕಿಸ್ತಾನದೊಳಗೆ ನುಗ್ಗಿ ಅಲ್ಲಿನ ಉಗ್ರರನ್ನು ಡ್ರೋನ್ ದಾಳಿಯ ಮೂಲಕ ಹೊಡೆದುರುಳಿಸಿದೆ.

ಮಾಹಿತಿಯ ಪ್ರಕಾರ ಟ್ರಂಪ್ ತಾವು ಸುಮಾರು ವರ್ಷಗಳಿಂದ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಲೇ ಬಂದಿದ್ದೇವೆ ಆದರೆ ಪಾಕಿಸ್ತಾನ ಅದಕ್ಕೆ ಪ್ರತಿಯಾಗಿ ಭಯೋತ್ಪಾದನೆ ಕೊಟ್ಟಿದೆ ಅಂತ ಗುಡುಗಿದ್ದರೋ ಅದೇ ದಿನವೇ ಪಾಕಿಸ್ತಾನದ ಮೇಲೆ ಡ್ರೋನ್ ದಾಳಿ ಮಾಡುವ ಯೋಜನೆ ಹಾಕಿದ್ದರಂತೆ.


ಅಮೆರಿಕಾದ ಡ್ರೋನ್ ಎರಡು ಮಿಸೈಲ್ ಗಳ ಮೂಲಕ (Federally Administrated Tribal Areas) ಪಾಕಿಸ್ತಾನದ ದಾಪಾ ಮಾಮಝೋಯ್ ಹಳ್ಳಿಯಲ್ಲಿರುವ ಭಯೋತ್ಪಾದಕರ ಶಿಬಿರದ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಮುನ್ಸೂಚನೆ ಕೊಡದೆ ದಾಳಿ ಮಾಡಿ ಅಲ್ಲಿನ ಉಗ್ರರನ್ನು ಸಂಹರಿಸಿತ್ತು. ಡ್ರೋನ್ ದಾಳಿಯಿಂದ ಇಬ್ಬರು ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಸಂಹಾರವಾಗಿದೆ.

ಅಮೆರಿಕಾ ಯಾವುದೇ ಮುಲಾಜಿಲ್ಲದೆ ಯಾವ ದೇಶಕ್ಕಾದರೂ ಹೊಕ್ಕು ಭಯೋತ್ಪಾದಕರನ್ನು ಹೊಡೆದುರುಳಿಸುತ್ತೆ ಅನ್ನೋದು ಮತ್ತೆ ಸಾಬೀತಾಗಿದೆ.

ಹಿಂದೆಯೂ ಅಮೆರಿಕಾವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಳಗೆ ನುಗ್ಗಿ ತನ್ನ ಸೇನಯಿಂದ ಮತ್ತು ತನ್ನ ಡ್ರೋನ್ ದಾಳಿಯಿಂದ ಉಗ್ರರನ್ನು ಸದೆಬಡಿದಿತ್ತು.

2016ರಲ್ಲಿ ಅಮೆರಿಕಾದ ತನ್ನ ಡ್ರೋನ್ ನ್ನು ಪಾಕಿಸ್ತಾನದೊಳಗೆ ನುಗ್ಗಿಸಿತ್ತು. ಯಾಕೆ ಗೊತ್ತಾ? ಅಂದು ತಾಲಿಬಾನ್ ಉಗ್ರ ಸಂಘಟನೆಯ ಮುಖ್ಯಸ್ಥ ಮುಲ್ಲಾಹ್ ಅಕ್ತರ್ ನನ್ನು ಹೊಡೆದುರುಳಿಸಲು ಅಮೆರಿಕಾ ಡ್ರೋನ್ ನ್ನು ನದೊಳಕ್ಕೆ ನುಗ್ಗಿಸಿ ಆ ಉಗ್ರನನ್ನು ಹೊಡೆದುರುಳಿಸಿತ್ತು.

ಅದೇ ರೀತಿಯಾಗಿ ಬಿನ್ ಲಾಡನ್ ನನ್ನು ಅಮೆರಿಕಾವೆ ಸಂಹರಿಸಿತ್ತು. ಅದು ಕೂಡಾ ಇದೇ ಮಾದರಿಯ ದಾಳಿ ಮಾಡಿ. ಅಂದು ಸಹ ಅಮೆರಿಕಾ ತನ್ನ ಡ್ರೋನ್ ನ್ನು ಪಾಕಿಸ್ತಾನಕ್ಕೆ ಮುನ್ಸೂಚನೆ ಕೊಡದೆ ಪಾಕಿಸ್ತಾನದೊಳಕ್ಕೆ ನುಗ್ಗಿಸಿ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಬಿನ್ ಲಾಡೆನ್ ನ್ನು ಹೊಡೆದುರುಳಿಸಿ, ಅಂತ್ಯಸಂಸ್ಕಾರಕ್ಕೂ ಅವಕಾಶವಾಗದಂತೆ, ಲಾಡೆನ್ ಶವವನ್ನು ಸಮುದ್ರದ ಮಧ್ಯದಲ್ಲಿಯೇ ಎಸೆದಿತ್ತು.

ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ಅಮೆರಿಕಾ ತಕ್ಕ ಪಾಠ ಕಲಿಸಿದೆ.
ಪಾಕಿಸ್ತಾನ ಭಾರತದ ಜೊತೆ ಪದೇ ಪದೇ ಕ್ಯಾತೆ ತೆಗೆದ ಪರಿಣಾಮ 200ಕ್ಕೂ ಹೆಚ್ಚು ಉಗ್ರರನ್ನು ಕಳೆದುಕೊಂಡಿದೆ. ಉಗ್ರರನ್ನು ಪೋಷಿಸಿ ಬೆಳೊಸಿದ್ದ ಪರಿಣಾಮ ಇಂದು ಪಾಕಿಸ್ತಾನವನ್ನು ಟೆರರಿಸ್ತಾನ ಎಂದು ಕರೆಯುತ್ತಿದ್ದಾರೆ.

ಭಾರತದ ಜೊತೆ ಕ್ಯಾತೆ ತೆಗೆದು ತನ್ನ ಉಗ್ರರನ್ನು ಕಳೆದುಕೊಂಡ ಪಾಕಿಸ್ತಾನ ಈಗ ಅಮೆರಿಕಾದ ಮಾತು ಕೇಳದ ಪರಿಣಾಮ ಡ್ರೋನ್ ದಾಳಿಯಿಂದ ತತ್ತರಿಸಿ ಹೋಗಿದೆ.

ಭಾರತ ಸರ್ಜಿಕಲ್ ದಾಳಿ ಮಾಡಿ ಪಾಕಿಸ್ತಾನಿ ಉಗ್ರರನ್ನು ಸದೆ ಬಿಡಿದಿತ್ತು. ಭಾರತೀಯ ಸೇನೆ ಕೊಟ್ಟ ಏಟೇ ತಡೆದುಕೊಳ್ಳಲಾಗದ ಸ್ಥಿತಿಗೆ ಪಾಕಿಸ್ತಾನ ಬಂದು ನಿಂತಿತ್ತು. ಅಂತಹುದರಲ್ಲಿ ಈಗ ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗಿದೆ.

ಭಾರತೀಯ ಸೇನೆ ಕೊಟ್ಟ ಏಟಿನಿಂದಲೇ ಪಾಕಿಸ್ತಾನ ಬೆಂದು ಬಸವಳಿದಿತ್ತು. ಈಗ ಅಮೆರಿಕಾ ಕೂಡಾ ಸರ್ಜಿಕಲ್ ರೀತಿಯಲ್ಲೇ ದಾಳಿ ಮಾಡಿ, ಪಾಕಿಸ್ತಾನದ ಸದ್ದಡಗಿಸಿದೆ.

  •  
    3.1K
    Shares
  • 3.1K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com