Connect with us
Loading...
Loading...

ಪ್ರಚಲಿತ

ಮತ್ತೆ ಸುದ್ದಿಯಲ್ಲಿದ್ದಾರೆ ಫೈರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ!! ಈ ಬಾರಿ ಅವರು ಏನು ಹೇಳಿದ್ದು ಗೊತ್ತಾ?

Published

on

 • 1.6K
 •  
 •  
 •  
 •  
 •  
 •  
 •  
  1.6K
  Shares

ಕೆಲ ದಿನಗಳ ಹಿಂದೆ ಜಾತ್ಯಾತೀತರು ಇವರ ತೇಜೊವಧೆ ಮಾಡಲು ಪ್ರಯತ್ನಿಸಿದ್ದರು. ಆ ಪ್ರಯತ್ನದಿಂದ ಅನಂತ ಕುಮಾರ್ ಹೆಗ್ಡೆಯವರ ಬಾಯಿಗೆ ಬೀಗ ಬೀಳುತ್ತದೆ ಎಂದೇ ಭಾವಿಸಿದ್ದರು. ಆದರೆ ಅನಂತ ಕುಮಾರ್ ಹೆಗ್ಡೆ ತಮ ಸಿದ್ಧಾಂತವನ್ನು ಯಾವತ್ತೂ, ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲವೆಂದು ಸಾಬೀತು ಮಾಡಿದ್ದರು.

ಆದರೆ ಈಗ ಅವರು ಮತ್ತೊಮ್ಮೆ ಧರ್ಮ ರಕ್ಷಣೆಯ ಕುರಿತು ಮಾತನಾಡಿದ್ದಾರೆ ಹಾಗು ಧರ್ಮವನ್ನ ಒಡೆಯುವವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ಈ ಬಾರಿ ಅನಂತಕುಮಾರ್ ಹೆಗಡೆಯವರು ಮಾತನಾಡಿದ್ದು ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ‌ ಸಿಗಬೇಕೆಂದು ಧರ್ಮವನ್ನ ಒಡೆಯಲು ಮುಂದಾಗಿರುವವರ ವಿರುದ್ಧ.

ಹೌದು ಅನಂತಕುಮಾರ್ ಹೆಗಡೆ ಈ ವಿಷಯದ ಕುರಿತು ಮಾತನಾಡಿದ್ದಾರೆ.

ಏನಂದ್ರು ಅನಂತಕುಮಾರ್ ಹೆಗಡೆ?

ವಿಶ್ವಗುರು ಬಸವಣ್ಣನವರು ಜಾತಿ ನಿರ್ಮೂಲನೆಗಾಗಿ ಹೋರಾಡಿದ್ದರು. ಆದರೆ, ಅವರ ಮಾರ್ಗದಲ್ಲಿ ನಡೆದು ಬಸವ ಅನುಯಾಯಿ ಆಗಬೇಕಿದ್ದ ಸಮುದಾಯವೇ ಇಂದು ಒಂದು ಜಾತಿ ಆಗಿಬಿಟ್ಟಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಜಗಳೂರು ಪಟ್ಟಣದಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಅಂದರೆ ಕೇವಲ ರಾಜ ಮಹಾರಾಜರ ಇತಿಹಾಸ ಇರುವ ದೇಶ ಮಾತ್ರವಲ್ಲ. ಭಾರತಕ್ಕೆ ಸಂತರ, ದಾರ್ಶನಿಕರ ಇತಿಹಾಸವಿದೆ. ಅದೇ ಕಾರಣಕ್ಕೆ ನಾನು ಕಾವಿಧಾರಿಗಳನ್ನು ಗೌರವಿಸುತ್ತೇನೆ ಎಂದು ಸಚಿವ ಅನಂತಕುಮಾರ ಹೆಗಡೆ ಪುನರುಚ್ಚರಿಸಿದರು.

ಅನಂತಕುಮಾರ್ ಹೆಗಡೆಯವರು ಪಕ್ಕಾ ಹಿಂದುತ್ವವಾದಿ ಹಾಗು ರಾಷ್ಟ್ರಭಕ್ತ ವ್ಯಕ್ತಿಯಾಗಿದ್ದಾರೆ. ಧರ್ಮಕ್ಕೆ ಚ್ಯುತಿ ಬಂದಾಗ ಅದನ್ನ ವಿರೋಧಿಸಿ ಧರ್ಮ, ದೇಶರಕ್ಷಣೆಗಾಗಿ ಧ್ವನಿಯೆತ್ತುತ್ತಲೇ ಬಂದಿದ್ದಾರೆ ಅನಂತಕುಮಾರ್ ಹೆಗಡೆ.

ಅವರ ಪೂರ್ವಾಪರದ ಇತಿಹಾಸ ಸ್ವಲ್ಪ ನೋಡೋಣ ಬನ್ನಿ!!

ಅನಂತ ಕುಮಾರ್ ಹೆಗ್ಡೆ ಅವರು ನಡೆದು ಬಂದ ಹಾದಿಯನ್ನು ಒಮ್ಮೆ ಅವಲೋಕನ ಮಾಡಿ ನೋಡಿ. ಇಂತಹ ನಾಯಕನನ್ನು ನೀವು ಬರೀ ಸಿನೆಮಾದಲ್ಲಷ್ಟೇ ನೋಡಿರುತ್ತೀರಿ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದು ನಿಜ.

ಅಧರ್ಮ ಯಾವಾಗ ತಾಂಡವವಾಡುತ್ತೋ ಆಗ ಶ್ರೀಕೃಷ್ಣ ಖಂಡಿತ ಅವತರಿಸುತ್ತಾನೆ. ಮೊಘಲರ ಅಟ್ಟಹಾಸವಾದಾಗ ಶಿವಾಜಿ ಮಹಾರಾಜರು ಅವತರಿಸಿದರು.

ಬ್ರಿಟಿಷರ ಅಟ್ಟಹಾಸವಾದಾಗ ಸಾವರ್ಕರ್ ಅವತರಿಸಿದರು. ಹಿಂದೂ ವಿರೋಧಿಗಳ ಅಟ್ಡಹಾಸ ಹೆಚ್ಚಾದಾಗ ನರೇಂದ್ರ ಮೋದಿ ಅವತರಿಸಿದರು. ಅಂತೆಯೇ ಹಿಂದೂ ವಿರೋಧಿಗಳ ಹುಟ್ಟಡಗಿಸಲು ಅನಂತ ಕುಮಾರ್ ಹೆಗ್ಡೆ ಅವತರಿಸಿದರೆಂದರೆ ಅತಿಶಯೋಕ್ತಿಯೆನಿಸಲಾರದೇನೋ.

ಅದು 1992-1993 ಇಸವಿ ಭಟ್ಕಳದಲ್ಲಿ ಮತಾಂಧರ ಅಟ್ಟಹಾಸ ಎಗ್ಗಿಲ್ಲದೆ ಸಾಗಿತ್ತು. ಅಲ್ಲಿನ ಹಿಂದುಗಳು ಮತಾಂಧರ ಅಟ್ಟಹಾಸಕ್ಕೆ ನಲುಗಿ ಹೋಗಿ ಇದ್ದೂ ಸತ್ತಂತಾಗಿ ಬಿಟ್ಟಿದ್ದರು. ಆ ಕಡೆ ಯಾವ ರಾಜಕೀಯ ಪುಡಾರಿಯೂ ಕಣ್ಣು ಹಾಯಿಸಿರಲಿಲ್ಲ.

ಯಾಕಂದ್ರೆ ಓಟ್ ಬ್ಯಾಂಕ್ ಅಲ್ಲಿನ ಮತಾಂಧರನ್ನು ವಿರೋಧಿಗಳನ್ನಾಗಿ ಮಾಡಿಕೊಂಡರೆ ಮುಸಲ್ಮಾನರ ಓಟುಗಳು ಹಾಳಾಗಬಹುದೆಂಬ ದುರಾಲೋಚನೆ. ಅಲ್ಲಿನ ಹಿಂದುಗಳು ತಮ್ಮ ಕಥೆ ಮುಗಿದೇ ಹೋಗಿದೆ ಎನ್ನುವಾಗ ಅನಂತ ಕುಮಾರ್ ಹೆಗ್ಡೆ ಭಟ್ಕಳಕ್ಕೆ ಕಾಲಿಟ್ಟರು. ಅಲ್ಲಿನ ಹಿಂದುಗಳು ಜಾಗ್ರರಾದರು. ಮತ್ತೆ ಮೈಗೊಡವಿ ಏಳಬೇಕೆಂಬ ಉತ್ಸಾಹ ಅವರಲ್ಲಿ ಮೂಡಿತು.

ಅನಂತ ಕುಮಾರ್ ಭಟ್ಕಳಕ್ಕೆ ಕಾಲಿಟ್ಟು ಮತಾಂಧರ ವಿರುದ್ಧ ತೊಡೆ ತಟ್ಟಿ ನಿಂತರು. ಉತ್ಸಾಹ ಭರಿತ ಹಿಂದುಗಳು ಅಲ್ಲಿನ ಮತಾಂಧ ಜಿಹಾದಿಗಳಿಗೆ ಹಿಂದುಗಳ ಒಗ್ಗಟ್ಟನ್ನು ತೋರಿಸಿ ಬಿಸಿ ಮುಟ್ಟಿಸಿದರು. ಅಲ್ಲಿಗೆ ಮತಾಂಧರ ಹುಟ್ಟಡಗಿತ್ತು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದರ ಬಗ್ಗೆ ಎಷ್ಟು ಜನಕ್ಕೆ ನೆನಪಿದೆ? ಎಷ್ಟು ಜನಕ್ಕೆ ಗೊತ್ತಿದೆ?

ಅಂದು ಅಂದರೆ 1994 ಅಗಸ್ಟ್ 15 ರಂದು ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವೆವು ಅಂತ ದೇಶಭಕ್ತರು ಹೊರಟರು. ಸುಮಾರು ನೂರು ಜನ ದೇಶಭಕ್ತ ಯುವಕರು ಅನಂತ ಕುಮಾರ ಹೆಗಡೆಯವರ ನೇತೃತ್ವದಲ್ಲಿ ಭಾರತಾಂಬೆಗೆ ಜೈಕಾರ ಹಾಕುತ್ತಾ ಹುಬ್ಬಳ್ಳಿಯ ಈದ್ಗಾ ಮೈದಾನದ ಹತ್ತಿರ ಬರುತ್ತಾರೆ.

ಪ್ರಾರಂಭದಲ್ಲೇ ಉಲ್ಫತ್ ಹುಸೇನ್ ಎಂಬ ಪೋಲಿಸ್ ಅಧಿಕಾರಿ ಅಡ್ಡಿ ಮಾಡಿದ್ದರು. ನಂತರ ಬಂದ ಡಿಜಿಪಿ ಬರ್ಮನ್ ಅಲ್ಲಿ ನೆರೆದವರ ದೇಶಭಕ್ತರ ಮೇಲೆ ನೇರಾನೇರ ಗುಂಡಿನ ಮಳೆಯನ್ನೇ ಸುರಿಸಿದರು.

ಈ ಯುವಕರು ಪೋಲಿಸರನ್ನು ತಳ್ಳಿ ಒಳನುಗ್ಗುತ್ತಾರೆ. ಪೋಲಿಸರ ಗುಂಡೇಟಿಗೆ ಮಂಜುನಾಥ ಭಟ್ ಎನ್ನುವ ಹುಡುಗ ಹುತಾತ್ಮನಾಗುತ್ತಾನೆ. ತದನಂತರ ಪ್ರಮೋದ್ ಎನ್ನುವ ಯುವಕನು ಕೂಡಾ ಗುಂಡೇಟಿಗೆ ಬಲಿಯಾಗುತ್ತಾನೆ.

ಅಷ್ಟು ಗಂಡಿನ ಮಳೆಗೈದರೂ ಆ ಬರ್ಮನ್ ಎಂಬ ಅಧಿಕಾರಿಗೆ ಆವತ್ತು ಧ್ವಜ ಹಾರಿಸುವುದನ್ನು ತಡೆಯಲಾಗಲಿಲ್ಲ. ಪೋಲಿಸರ ಏಟಿಗೆ ಜಗ್ಗದೆ ಅನಂತ ಕುಮಾರ ಹೆಗಡೆಯವರು ರಾಷ್ಟ್ರ ಧ್ವಜವನ್ನು ಹಾರಿಸಿಯೇ ಬಿಡುತ್ತಾರೆ.

ಇಷ್ಟೇ ಅಲ್ಲ ಮೊನ್ನೆ ಮೊನ್ನೆಯಷ್ಟೇ ಮತಾಂಧರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಕುಟುಂಬಕ್ಕೂ ಅನಂತ್ ಕುಮಾರ್ ಹೆಗಡೆ ಸಹಾಯ ಹಸ್ತ ಚಾಚಿದ್ದರು.

ದೀಪಕ್ ರಾವ್ ಅವರ ತಮ್ಮನಿಗೆ ಕೆಲಸ ಕೊಟ್ಟು ಆ ಕುಟುಂಬಕ್ಕೆ ಆಸರೆಯಾಗಿದ್ದರು.

ಮಂಗಳೂರಿನಲ್ಲಿರುವ ಕೇಂದ್ರ ಸರ್ಕಾರದ KIOCL( ಕುದುರೆ ಮುಖ ಐರನ್ ಒರ್ ಕಂಪೆನಿ ಲಿಮಿಟೆಡ್) ಎಂಬ ಕಂಪನಿಯಲ್ಲಿ ಕೆಲಸ ಕೊಡಿಸಿ, ಹಿಂದೂ ಹೃದಯಿ ಅಂತ ಸಾಬೀತು ಮಾಡಿದ್ದಾರೆ. ಕೆಲಸ ಕೊಡಿಸಿ ಅದರ ಪತ್ರವನ್ನು ದೀಪಕ್ ರಾವ್ ಮನೆಗೆ ಹೋಗಿ ಸಾಂತ್ವನ ಹೇಳಿ ಆ ಪತ್ರವನ್ನು ಕೊಟ್ಟಿ ಬಂದಿದ್ದರು ಅನಂತಕುಮಾರ್ ಹೆಗಡೆಯವರು.

ಇವರ ಈ ಗುಣಗಳೇ ಜನರಿಗೆ ಇಷ್ಟವಾಗೋದು, ಇಂತಹ ನೇರ, ದಿಟ್ಟ ರಾಜಕಾರಣಿ ಇತ್ತೀಚೆಗೆ ತುಂಬಾ ಸುದ್ದಿಯಲ್ಲಿದ್ದಾರೆ. ಅವರ ನೇರ ನುಡಿಗಳನ್ನ ಎಷ್ಟು ಜನ ವಿರೋಧಿಸುತ್ತಾರೆ ಅದಕ್ಕಿಂತ ಹೆಚ್ಚು ಜನ ಅವರ ನೇರ ವ್ಯಕ್ತಿತ್ವವನ್ನ ಇಷ್ಟಪಡುತ್ತಾರೆ.

 •  
  1.6K
  Shares
 • 1.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com