Connect with us
Loading...
Loading...

ಅಂಕಣ

ನೀವು ಹಿಂದುಗಳೇ? ಹಾಗಿದ್ದರೆ ನಿಮ್ಮ ಧರ್ಮದ ಬಗ್ಗೆ ನಿಮಗೆ ಈ ವಿಶೇಷತೆಗಳ ಬಗ್ಗೆ ಗೊತ್ತೆ? ಗೊತ್ತಿರದಿದ್ದರೆ ಮಿಸ್ ಮಾಡದೆ ಓದಿ!!!

Published

on

 • 1.9K
 •  
 •  
 •  
 •  
 •  
 •  
 •  
  1.9K
  Shares

ನೀವು ಹಿಂದೂಗಳೇ ಹಾಗಾದರೆ ನಿಮ್ಮ ಧರ್ಮದಲ್ಲಿರುವ ವಿಶೇಷಗಳು ಗೊತ್ತೇ…?

ಈ ಕೆಳಗಿನ ವಿಚಾರಗಳು ನಿಮಗೆ ಸಿಗುವುದು ಸನಾತನ ಧರ್ಮದಲ್ಲಷ್ಟೆ ಸಾಧ್ಯ.!!

1) ನೀವು ದೇವರನ್ನು ನಂಬುವಿರೇ..?
ಹಾಗಾದರೆ ನೀವು “ಆಸ್ತಿಕರು”.

2) ನೀವು ದೇವರನ್ನು ನಂಬುವುದಿಲ್ಲವೇ..?
ತೊಂದರೆ ಇಲ್ಲ ನೀವು “ನಾಸ್ತಿಕರು”.

3) ನೀವು ವಿಗ್ರಹಗಳನ್ನು ಪೂಜಿಸಲು ಬಯಸುತ್ತೀರಾ?
ದಯವಿಟ್ಟು ಮುಂದುವರಿಸಿ.. ನೀವು ಮೂರ್ತಿ ಪೂಜಾ ಆರಾಧಕರು.

4) ವಿಗ್ರಹಗಳನ್ನು ಪೂಜಿಸಲು ನೀವು ಬಯಸುವುದಿಲ್ಲವೇ..?
ತೊಂದರೆ ಇಲ್ಲ, ನೀವು ನಿರ್ಗುಣನಾದ ಬ್ರಾಹ್ಮಣ, ಆಕಾರವಿಲ್ಲದ, ರೂಪವಿಲ್ಲದ, ಅಪರಿಮಿತವಾದ, ಆರಂಭ ಹಾಗು ಅಂತ್ಯವಿಲ್ಲದ ಸೃಷ್ಟಿಕರ್ತನನ್ನು ಆರಾಧಿಸಿರಿ..(ನಿರ್ವಿಕಲ್ಪ ಬ್ರಾಹ್ಮಣ)

5) ನಮ್ಮ ಧರ್ಮದಲ್ಲಿ ಏನಾದರೂ ಟೀಕಿಸಲು ನೀವು ಬಯಸುವಿರೇ..?
ಹಾಗಾದರೆ ದಯವಿಟ್ಟು ಮುಂದೆ ಬನ್ನಿ. ನಾವು ತಾರ್ಕಿಕ, ನ್ಯಾಯ, ಹಾಗು ತರ್ಕಾ ಇತ್ಯಾದಿ ಒಳಗೊಂಡ ಚಿಂತನೆಗಳನ್ನು ಹೊಂದಿದ್ದೇವೆ..

6) ನೀವು ಈಗಾಗಲೇ ನಮ್ಮಲ್ಲಿರುವ ನಂಬಿಕೆಗಳನ್ನು ಅದರಂತೆಯೇ ಹಿಂಬಾಲಿಸಲು ಇಚ್ಚಿಸುವಿರಾ?
ಮುಂದುವರೆಯಿರಿ..

7) ನೀವು ನಿಮ್ಮ ಜೀವನದ ಪಯಣವನ್ನು ಭಗವದ್ಗೀತೆ ಓದುವುದರ ಮೂಲಕ ಪ್ರಾರಂಭಿಸುವಿರೇ..?
ದಯವಿಟ್ಟು ಮುಂದುವರೆಯಿರಿ..

8) ಉಪನಿಷತ್ತು ಓದುವ ಮೂಲಕ ನಿಮ್ಮ ಜೀವನವನ್ನು ಆರಂಭಿಸುತ್ತಿರಾ..?
ದಯವಿಟ್ಟು ಮುಂದುವರಿಯರಿ..

9) ನೀವು ಪುರಾಣವನ್ನು ಓದುವ ಮೂಲಕ ಅದರ ಪ್ರಕಾರ ಇರಲು ಇಚ್ಚಿಸುವಿರೇ..?
ಸಮಸ್ಯೆಯೇ ಇಲ್ಲ ಮುಂದುವರೆಸಿ..

10) ನೀವು ಈ ಮೇಲಿನ ಯಾವುದೇ ಗ್ರಂಥಗಳನ್ನು ಓದುವುದಿಲ್ಲವೇ..?
ತೊಂದರೆಯಿಲ್ಲ, ನೀವು ಭಕ್ತಿ ಮಾರ್ಗದಲ್ಲಿ ಮುನ್ನಡೆಯಿರಿ..

11) ನಿಮಗೆ ಭಕ್ತಿ ಮಾರ್ಗದಲ್ಲಿ ಮುನ್ನಡೆಯಲು ಇಷ್ಟವಿಲ್ಲವೆ..?
ತೊಂದರೆ ಇಲ್ಲ.! ನೀವು ನಿಮ್ಮ ಕೆಲಸದಲ್ಲಿ ದೇವರನ್ನು ಕಂಡು ಕರ್ಮಯೋಗಿಯಾಗಿರಿ..

12) ನೀವು ನಿಮ್ಮ ಜೀವನವನ್ನು ಮೋಜು‌ ಮಸ್ತಿ ಮಾಡುವ ಮೂಲಕ ಕಳೆಯಬೇಕೆಂದಿದ್ದೇರೆ..?
ಸಮಸ್ಯೆಯಿಲ್ಲ. ಇದು ಚಾರ್ವಾಕ ತತ್ವವಾಗಿದ್ದು ನಮ್ಮದೇ ಧರ್ಮದ ಒಂದು ಭಾಗವಾಗಿದೆ…

13) ನೀವು ನಿಮ್ಮ ಜೀವನದ ಎಲ್ಲಾ ಸುಖಗಳನ್ನು ತ್ಯಜಿಸಿ ದೇವರನ್ನು ಹುಡುಕಲು ಬಯಸುವಿರೇ..?
ಶಹಭಾಶ್ ನೀವು ಸಾಧುಗಳಾಗಬಹುದು..

14) ನಿಮಗೆ ದೇವರು ಎಂಬ ವಿಚಾರದಲ್ಲಿ ನಂಬಿಕೆ ಇಲ್ಲವೇ..? ನೀವು ಪ್ರಕೃತಿಯನ್ನು ಆರಾಧಿಸುವಿರೆ..?
ಸಮಸ್ಯೆಯೇ ಇಲ್ಲ ನಾವೂ ಸಹ ಪ್ರಕೃತಿಯಲ್ಲಿ ದೇವರನ್ನು ಕಾಣುತ್ತೇವೆ.

15) ನೀವು ಒಂದೇ ದೇವರಲ್ಲಿ ನಂಬಿಕೆ ಇಡುತ್ತೀರಾ..?
ತೊಂದರೆ ಇಲ್ಲ ನೀವು ಆದ್ವೈತ ತತ್ವದಂತೆ ಮುನ್ನಡೆಯಿರಿ…

16) ನಿಮಗೆ ಗುರುವಿನ ಮಾರ್ಗದರ್ಶನ ಬೇಕು..?
ಗುರುವನ್ನು ಹುಡುಕು. ಜ್ಞಾನ ಯೋಗವನ್ನು ಸಂಪಾದಿಸು.

18) ನಿಮಗೆ ಸ್ತೀ ಶಕ್ತಿಯ ಮೇಲೆ ನಂಬಿಕೆಯಿದೆಯೇ.?
ಮುಂದುವರೆಸಿ ಇದೂ ಒಂದು ಶಕ್ತಿಯನ್ನು ಆರಾಧಿಸುವ ಕ್ರಮ.

19) ಎಲ್ಲಾ ಮನುಷ್ಯರು ಸಮಾನರು ಎನ್ನುವಿರೇ..?
ಹಾಗಾದರೆ ಹಿಂದೂಧರ್ಮವನ್ನು ಅಚರಿಸಿ. “ವಸುಧೈವ ಕುಟುಂಬಕಂ” ಪ್ರಪಂಚವೇ ಒಂದು ಕುಟುಂಬ ಎಂದು ಹೇಳಿದ ಏಕೈಕ ಧರ್ಮ ನಮ್ಮದಲ್ಲವೆ…

20) ನಿಮಗೆ ಹಬ್ಬ ಹರಿದಿನವನ್ನು ಆಚರಿಸಲು ಸಮಯ ಸಿಗುತ್ತಿಲ್ಲವೇ..?ಪರವಾಗಿಲ್ಲ, ನಮ್ಮ ಧರ್ಮದಲ್ಲಿ ತುಂಬಾ ಹಬ್ಬಗಳಿವೆ. ಸಮಯ ಇರುವಾಗ ಆಚರಿಸಿರಿ..

21) ನೀವು ನಿಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದಿರಾ.?ಧರ್ಮಾಚರಣೆಗಳಿಗೆ ನಿಮ್ಮಲ್ಲಿ ಸಮಯವಿಲ್ಲವೇ.?
ತೊಂದರೆ ಇಲ್ಲ. ಸಮಯ ಸಿಕ್ಕಾಗ ಆಚರಿಸಿರಿ ಆದರೆ ಈಗಲೂ ಸಹ ನೀವು ಹಿಂದೂಗಳೆ..

22) ನಿಮಗೆ ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆಯೇ.?
ಮುಂದುವರೆಸಿರಿ..

23) ನೀವು ದೇವಸ್ಥಾನಕ್ಕೆ ಹೋಗುವುದಿಲ್ಲವೇ.?
ಪರವಾಗಿಲ್ಲ ನೀವು ದೇವಸ್ಥಾನಕ್ಕೆ ಹೋಗದಿದ್ದರೂ ಸಹ ಹಿಂದೂಗಳೆ..

24) ನಿಮಗಿದು ಗೊತ್ತೇ..?
ಹಿಂದೂ ಧರ್ಮ ಎಂಬುದು ಒಂದು ಜೀವನದ ಮಾರ್ಗ, ಇಲ್ಲಿ ನಿಮಗೆ ಎಲ್ಲಾ ತರಹದ ಸ್ವಾತಂತ್ರವು ಇದೆ..

25) ನೀವು ಎಲ್ಲದರಲ್ಲೂ ದೇವರಿದ್ದಾನೆ ಎಂದು ನಂಬುವರೇ.?
ಹಾಗಾದರೆ ನೀವು ನಿನ್ನ ತಂದೆ, ತಾಯಿ , ಗುರು, ಮರ, ನದಿ, ಭೂಮಿ ಎಲ್ಲವನ್ನೂ ಪೂಜಿಸಿರಿ..

26) ನೀವು ಎಲ್ಲದರಲ್ಲೂ ದೇವರಿದ್ದಾನೆ ಎಂದು ನಂಬುವುದಿಲ್ಲವೆ..?
ಸಮಸ್ಯೆಯಿಲ್ಲ ನಿಮ್ಮ ದ್ರಷ್ಠಿಕೋನವನ್ನು ನೀವು ಗೌರವಿಸಿರಿ..

27) ಸರ್ವೇ ಜನ ಸುಖಿನೋ ಭವಂತು.
(ಎಲ್ಲರೂ ಸುಖ ಹಾಗು ಸಂತೃಪ್ತಿಯ ಜೀವನ ನಡೆಸಿರಿ)

ಪ್ರಿಯ ಹಿಂದೂಗಳೇ ನೀವು ಇದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು‌ ಜೀವನ ಮುಂದುವರೆಸಬಹದು..

ನಿಮಗಿದು ಗೊತ್ತಿರಲಿ..
ನೀವು ಪಾಲಿಸುತ್ತಿರುವ “ಸನಾತನ ಧರ್ಮ” ಪ್ರಪಂಚದಲ್ಲಿ ಉಳಿದಿರುವ ಅತ್ಯಂತ ಪುರಾತನ ಧರ್ಮ.. ಅಂದರೆ ಸಾವಿರಾರು ವರ್ಷಗಳಿಂದಲೂ ನೀವೂ ಹಾಗು ನಿಮ್ಮ ಕುಟುಂಬಸ್ಥರು ಹಿಂದೂಗಳಾಗಿಯೇ ಉಳಿದಿದ್ದೀರಿ..

ಕಾರಣ ಇಷ್ಟೆ ಇಲ್ಲಿ ಎಲ್ಲದಕ್ಕೂ ಮುಕ್ತ ಅವಕಾಶವಿದೆ ಜೊತೆಗೆ ಇಲ್ಲಿ ಇದನ್ನೇ ಪಾಲಿಸಬೇಕು ಎಂದು‌ ಎಲ್ಲಿಯೂ ಹೇಳಿಲ್ಲ.! ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ ಎಂಬುದರ ಮೇಲೆ ನಿಮ್ಮ ವಿಚಾರ ನಿಂತಿರುತ್ತದೆ.

ನಾಗರಿಕತೆ ಹುಟ್ಟಿದ ಮೇಲೆ ಮೊದಲಿಗೆ ಸೃಷ್ಟಿಯಾದ ಜ್ಞಾನ ಭಂಡಾರ ಎಂದು ಕರೆಯುವ “ಋಗ್ವೇದ” ದಲ್ಲಿ ಸನಾತನ ಧರ್ಮದ ಸಾರವನ್ನು ಎರಡು ಸಾಲಿನಲ್ಕಿ ಹೇಳಲಾಗಿದೆ. “ಅನೋ ಬದ್ರ್ಹಾ ಕೃತವೋ ಯಂತು” ಅಂದರೆ “ಎಲ್ಲಾ ಮಾರ್ಗಗಳಿಂದಲೂ ನಮಗೆ ಜ್ಞಾನ ಸಿಗಲಿ” ಎಂದು…

ಸನಾತನ ಧರ್ಮದಲ್ಲಿ ಹುಟ್ಟಿರುವ ನೀವೇ ಸ್ವತಂತ್ರರು. ನಿಮಗೆ ಸತ್ಯ ಕಂಡುಕೊಳ್ಳಲು ಹಲವಾರು ದಾರಿಗಳಿವೆ ಹಾಗು ಸನಾತನ ಧರ್ಮವು ಸಾರುವುದೂ ಸಹ ಇದನ್ನೇ..
ಹೆಮ್ಮೆಯಿಂದ ಶೇರ್ ಮಾಡಿ..

ಕೃಪೆ: ವಾಟ್ಸ್ಯಾಪ್

(ಇದನ್ನ ಬರೆದವರಿಗೇ ಇದರ ಶ್ರೇಯ ಸಲ್ಲಲಿ)

 •  
  1.9K
  Shares
 • 1.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com