Connect with us
Loading...
Loading...

ಪ್ರಚಲಿತ

ಬಿಗ್ ನ್ಯೂಸ್ ಫ್ಲ್ಯಾಷ್: ಬಡ ವಯೋವೃದ್ಧ ‘ರೈತ’ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಂಗ್ರೆಸ್ ಗೂಂಡಾ!!!

Published

on

 • 690
 •  
 •  
 •  
 •  
 •  
 •  
 •  
  690
  Shares

ಕಾಂಗ್ರೆಸ್ಸಿನ ಹಣೆಬರಹ ಸರಿಯಿಲ್ಲವೋ ಏನೋ, ಚುನಾವಣರ ಹತ್ತಿರವಿರುವ ಸಮಯದಲ್ಲೇ ಕಾಂಗ್ರೆಸ್ಸಿಗೆ ಶನಿ ಒಕ್ಕರಿಸಿದಂತೆ ಮೇಲಿಂದ ಮೇಲೆ ಅವರ ಪಕ್ಷದ ಗೂಂಡಾಗಳೇ ತಮ್ಮ ಗೂಂಡಾಗಿರಿಯನ್ನ ಬಹಿರಂಗವಾಗಿಯೇ ಪ್ರದರ್ಶ‌ನ ಮಾಡಿ ತಾವೆಷ್ಟು ಸ್ಟ್ರಾಂಗ್ ಅಂತ ತೋರಿಸೋಕೆ ಹೋಗಿ ತಮ್ಮ ಮಾನವನ್ನ ತಾವೇ ರಾಜ್ಯದ ಜನರೆದುರು ಹರಾಜು ಹಾಕಿಕೊಳ್ಳುತ್ತಿದ್ದಾರೆ.

ಅವರ ಮಾನದ ಬಾಯಿಗ್ ಬೀಳಲಿ ಮಣ್ಣು ಅದನ್ ಕಟ್ಗೊಂಡ್ ಜನಕ್ಕೇನಾಗ್ಬೇಕಿದೆ, ಮಾನ ಮರ್ಯಾದೆ ಇದ್ರೆ ಇಂಥಾ ನಾ(ಲಾ)ಯಕರಿಗೆ. ಅಲ್ಲೆಲ್ಲೋ ಆತ ಪ್ರಿನ್ಸ್ ಅಂತೆ ಆತನಿಗೆ ಯಾರೂ ಪ್ರಶ್ನೆ ಮಾಡಬಾರದಂತೆ, ಮಾಡದ್ರೆ ಸಾಯೋ ಹಾಗೆ ಹೊಡೀತಾನಂತೆ, ಇನ್ನೊಂದ್ ಕಡೆ ಅಕ್ರಮವಾಗಿ ಖಾತಾ ವಿವರ ತೆಗೆದುಕೊಡು ಇಲ್ಲಾಂದ್ರೆ ಬಿಬಿಎಂಪಿ ಕಛೇರೀನೇ ಸುಟ್ಟಾಕ್ತೀನಿ‌ ಅಂತ ಪೆಟ್ರೋಲ್ ಹಿಡ್ಕೊಂಡ್ ಬರೋನು ಇನ್ನೊಬ್ನು.

ಇಂಥವರಿಗ್ ನಾನೇನ್ ಕಮ್ಮಿ ಅಂತ ಇನ್ನೊಬ್ಬ ಕಾಂಗ್ರೆಸ್ ಗೂಂಡಾ ತನ್ನ ಗೂಂಡಾಗಿರಿಯನ್ನ ಕಲಬುರಗಿ ಜಿಲ್ಲೆಯಲ್ಲಿ ತೋರ್ಸಿದಾನೆ ನೋಡಿ!!

ಈತನ ಹೆಸರು ಸೀತಾರಾಂ ಸುಬೇದಾರ್ ಅಂತ, ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಆ್ಯಂಡ್ ಜೇವರ್ಗಿ ಶಾಸಕರಾದ ಅಜಯ್ ಸಿಂಗ ಹಾಗು ಅಫ್ಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರರಿಗೂ ಆಪ್ತ ಅಂತ ಆತನೇ ಹೇಳ್ಕೊಳ್ತಾನೆ, ಅದರ ಸಾಕ್ಷಿಗಳೂ ಇಲ್ಲಿವೆ ನೋಡಿ.


ಅಷ್ಟಕ್ಕೂ ಆತ ಮಾಡಿರೋ ಘನಂದಾರಿ ಕೆಲಸವೇನು ಗೊತ್ತಾ?

ತಾನು ಒಬ್ಬ ಮಾಜಿ ಕಾಂಗ್ರೆಸ್ ನ ತಾಲೂಕು ಪಂಚಾಯತಿ ಸದಸ್ಯನಾಗಿದ್ದು, ತನ್ನ ಕಾರು ಬಂದಾಗ ಎದ್ದು ನಿಂತು ಮರ್ಯಾದೆ ಕೊಡದಿರುವದಕ್ಕೆ ಬಡ ವಯೋವೃದ್ಧ ರೈತನ ಮೇಲೆ ಕಲಬುರಗಿ ತಾಲೂಕಿನ ಫಿರೋಜಾಬಾದ ಮಾಜಿ ತಾಲೂಕು ಪಂಚಾಯತಿ ಸದಸ್ಯ ಸೀತಾರಾಮ ಸುಬೇದಾರ ಮತ್ತು ಆತನ ಅಳಿಯ ಕಾಂಗ್ರೆಸ್ ನ ಗ್ರಾಮ ಪಂಚಾಯತಿ ಸದಸ್ಯ ಇಂದ್ರಜೀತ ರಿಂದ ಮಾರಣಾಂತಿಕ ಹಲ್ಲೆ ನಡೆಸಿ ತಮ್ಮ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ.

ಬಡ ರೈತನ ಮೇಲೆ ಹಲ್ಲಡ ನಡೆಸುವಾಗ ಯಾವ PSI ನಿನಗ್ ಪರಿಚಯ ಇದ್ರೂ ಅವನೇನೂ ಕಿತ್ಗೋಳ್ಳಕ್ಕಾಗಲ್ಲ, ನಾನ್ಯಾರಂತ ನಿನಗ್ ಗೊತ್ತಿಲ್ಲ ಮಗನೇ ಅಂತ ಇನ್ನೂ ಇಲ್ಲಿ ಬರೆಯಲಾಗದಂತಹ ಕೆಟ್ಟ, ಅವಾಚ್ಯ ಶಬ್ದಗಳಿಂದ ರೈತನಿಗೆ ಬೈದಿದ್ದಾರೆ.

ನಂತರ ಸೀತಾರಾಮ್ ಸುಬೇದಾರ್ ಹಾಗು ಆತನ ಅಳಿಯ ಗ್ರಾಮ ಪಂಚಾಯಿತಿ ಸದಸ್ಯ ಇಂದ್ರಜಿತ್ ಇಬ್ಬರೂ ಸೇರಿ ವಯೋವೃದ್ಧ ಬಡ ರೈತನಿಗೆ ಹಿಗ್ಗಾಮುಗ್ಗ ಥಳಿಸಿ, ದರದರನೆ ಎಳೆದುಕೊಂಡು ತಮ್ಮ ಕಾರಿನ ಬಾಗಿಲು ತೆರೆದು ಅದರೊಳಗೆ ಎಳೆದೊಯ್ಯೋಕೆ ಪ್ರಯತ್ನಿಸಿದ್ದಾರೆ, ಆ ಬಡಜೀವ ವಿರೋಧಿಸಿದಾಗ ಕಾರಿನ ಹತ್ತಿರವೇ ವಯೋವೃದ್ಧ ಅನ್ನೋದನ್ನೂ ನೋಡದೆ ಮುಖ ಮೂತಿ ನೋಡದೆ ಚಚ್ಚಿದ್ದಾರೆ.

ಈ ಕಾಂಗ್ರೆಸ್ ಗೂಂಡಾಗಳಿಂದ ಹಲ್ಲೆಗೊಳಗಾದ ರೈತನನ್ನ ಹಸನಾಪುರದ ಲಕ್ಕಪ್ಪ ಪೂಜಾರಿ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ರೈತನನ್ನ ಇದೀಗ ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ಬಡ ಲಕ್ಕಪ್ಪ ಪೂಜಾರಿಯ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಗೂಂಡಾ ಸೀತಾರಾಮ ಸುಬೇದಾರ್ ನ ಮೇಲೆ ಅದಾಗಲೇ 11 ಪ್ರಕರಣಗಳಿವೆಯಂತೆ. ಈತ ಫರತಾಬಾದ ಪೋಲಿಸ್ ಠಾಣೆಯಲ್ಲಿ ರೌಡಿ ಶೀಟರ್ ಇದ್ದು ಇತ್ತೀಚಿಗೆ ಈತನ ಮೇಲೆ ಗೂಂಡಾ ಕಾಯ್ದೆಯಡಿಯೂ ಕೇಸ್ ಹಾಕಲಾಗಿದೆಯಂತೆ.

ಇಷ್ಟು ಕೇಸ್ ಗಳಿರೋ ಗೂಂಡಾಗಳು ಕಾಂಗ್ರೆಸ್ಸಿನಲ್ಲಿ ಮಾತ್ರ ಲೀಡರ್ ಗಳು!!

ಘಟನೆಗೆ ಸಂಬಂಧಪಟ್ಟ ಹಲ್ಲೆಯ ವಿಡಿಯೋ ದೃಶ್ಯಾವಳಿಗಳು:

 

ನಂಬರ್ 1 ಸರ್ಕಾರ ಅಂತ ಹೇಳಿಕೊಳ್ಳುವ ಸಿದ್ದರಾಮಯ್ಯನವರೇ ಇದೇನಾ ನಿಮ್ಮ ನಂಬರ್ 1 ಸರ್ಕಾರದ ಗೂಂಡಾಗಿರಿ?

24 ಜನ ಹಿಂದೂ ಸಂಘಟನೆತ ಕಾರ್ಯಕರ್ತರ ಬರ್ಬರ ಹತ್ಯೆಗಳಾದ್ವು,

ಎಂಎಂ ಕಲಬುರಗಿ, ಗೌರಿ ಲಂಕೇಶ್ ಹತ್ಯೆ ಆದ್ವು,

ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಆಯ್ತು,

ಲೋಕಾಯುಕ್ತರಿಗೇ ಚೂರಿ ಇರಿತ ಆಯ್ತು,

ಇಲ್ಲೀವರೆಗೆ ನಿಮ್ಮ ಆಡಳಿತಾವಧಿಯಲ್ಲಿ ಮೂರುವರೆ ಸಾವಿರ ರೈತರ ಆತ್ಮಹತ್ಯೆಗಳಾದ್ವು

ಅಷ್ಟಲ್ಲದೆ ಇದೀಗ ನಿಮ್ಮ ಪಕ್ಷದ ಮತ್ತೊಬ್ಬ ಗೂಂಡಾನಿಂದ ರೈತನ ಮೇಲೆಯೇ ಮಾರಣಾಂತಿಕ ಹಲ್ಲೆ!!

ಇದೇನಾ ಸ್ವಾಮಿ ನಿಮ್ ನಂಬರ್ 1 ರಾಜ್ಯ?

ಈ ಬಡ ರೈತನ ಮೇಲೆ ನಿಮಗೆ ಕನಿಕರವಿದ್ದರೆ ಆತನ ಮೇಲೆ ನಡೆದ ಈ ಹಲ್ಲೆಯನ್ನ ರೈತಪರ, ಕನ್ನಡಪರ,‌ ಪ್ರಗತಿಪರ ಸಂಘಟನೆಗಳು ಒಕ್ಕೋರಲಿನಿಂದ ವಿರೋಧಿಸಿ ಆ ಗೂಂಡಾಗಳಿಗೆ ತಕ್ಕ ಶಿಕ್ಷೆ ಆಗುವ ಹಾಗೆ ಸರ್ಕಾರಕ್ಕೆ ಒತ್ತಡ ತರುವ ಪ್ರಯತ್ನ ಮಾಡೋಣ ಬನ್ನಿ!!

– Team Nationalist Views

©2018 Copyrights Reserved

 •  
  690
  Shares
 • 690
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com