Connect with us
Loading...
Loading...

ಅಂಕಣ

ಈ ನಶೆಯ ಬಗ್ಗೆ ಏನಂತೀರ ರಮ್ಯಾ? ಮೋದಿಯವರ ದೇಶಾಭಿಮಾನವೇ ನಶೆಯಾದರೆ ಇದೇನು ರಮ್ಯಾ?

Published

on

 • 2.4K
 •  
 •  
 •  
 •  
 •  
 •  
 •  
  2.4K
  Shares

ಮೊನ್ನೆ ಮೊನ್ನೆ ತಾನೆ ನರೇಂದ್ರ ಮೋದಿ ರಾಜ್ಯ ಪ್ರವಾಸಕ್ಕೆ ಬಂದು ಹೋದ ಮೇಲೆ ಬೆಂಕಿ ಬಿದ್ದವರಂತೆ ಆಡಿದವರಲ್ಲಿ ರಮ್ಯಾರವರು ಒಬ್ಬರು. ಅವರು ಹೇಳಿದ ನಶೆಯ ಪ್ರಧಾನಿ ಯಾರೆಂದು ಪಾಪ ಆಕೆಗೆ ಸರಿಯಾಗಿ ಗೊತ್ತಿಲ್ಲ. ಮೋದಿಯ ದೇಶಾಭಿಮಾನವೇ ನಶೆಯ ರೀತಿ ಕಂಡಿದೆ ಬಿಡಿ.

ಆದರೆ ನಿಜವಾಗಲೂ ನಶೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡವರ ಬಗ್ಗೆ ಹೇಳ ಬೇಕೆನಿಸುತ್ತಿದೆ. ಯಾರದ್ದೇಕೆ 1947ರಲ್ಲಿ ಪ್ರಧಾನಿಯಾದವರ ಬಗ್ಗೆಯೆ!!

ಯಾರದು ಗೊತ್ತಾ?

ಅವರೆ ದೇಶದಲ್ಲಿ ಮಕ್ಕಳ ದಿನಾಚಾರಣೆ ಎಂದು ಆಚರಿಸುವ ದಿನದಂದು ಜನ್ಮ ಪಡೆದವರು. ವಿಪರ್ಯಾಸ ನೋಡಿ ಆ ವ್ಯಕ್ತಿ ಮಕ್ಕಳ ಜೊತೆ ಇರುವ ಒಂದೇ ಒಂದು ಪಟ ಸಿಗುವುದಿಲ್ಲ. ಕೇವಲ ಹೆಂಗಸರ ಪಲ್ಲಂಗದಲ್ಲೇ ತೇಲುವ ಚಿತ್ರಗಳೆ ಅತೀ ಹೆಚ್ಚು!!

ಹೌದು ನೀವೆಲ್ಲ ತಿಳಿದು ಕೊಂಡದ್ದು ಸತ್ಯ ಅವರೇ ಜವಹರಲಾಲ್ ನೆಹರೂ..

ಆತನ ಬಗ್ಗೆ ಅಮೇರಿಕಾದ ಅಧಿಕಾರಿ “ಮ್ಯಾಕ್ ನಮರ್” ಹೀಗೆ ಹೇಳಿದ್ದಾರೆ ‘ಮೋತಿಲಾಲರಿಗೆ’ ಹುಟ್ಟಿರದಿದ್ದರೆ, ಮಹಾತ್ಮ ಗಾಂಧೀಜಿಯವರ ಪಾಳಯಕ್ಕೆ ಬರದಿದ್ದರೆ ಜವಹರಲಾಲ್ ನೆಹರೂ ಅದೆಲ್ಲಿರುತ್ತಿದ್ದರು? ಎಂದು..

ಮೋತಿಲಾಲರ ಮಗನಾಗಿ ಹುಟ್ಟಿದ ಈ ನೆಹರೂ ಚಿಕ್ಕವಯಸ್ಸಿನಿಂದಲೇ ಆಂಗ್ಲರು ಮೈಮೇಲೆ ಬಂದವರಂತೆ ಆಡಲು ಶುರುಮಾಡಿದರು. ಅವರ ಅಪ್ಪನ ಜೊತೆಯಲ್ಲೆ ಕೂತು ಸ್ಕಾಚ್ ಕುಡಿಯೋ ತನಕ ತನ್ನ ವಿಪರೀತ ಖರ್ಚಿನಿಂದ ವಿದೇಶದ ಸುತ್ತಾಟದಿಂದ ಆತನ ಯವ್ವನ ಪ್ರಾರಂಭವಾಯಿತು.

ಮತ್ತು ಹೇಳುವುದೆಂದರೆ ಮೋತಿಲಾಲರದು ಅದೇ ಬುದ್ಧಿ. ತನ್ನ ಮಗ ಆಂಗ್ಲರಂತೆ ಬೆಳೆಯುತ್ತಿರುವುದು ಅವರಿಗು ಅತಿಯಾದ ಖುಷಿಯ ವಿಚಾರವಾಗೇ ಇತ್ತು. ಅಪಾರ ಸಂಪತ್ತಿನೊಡೆಯನಾಗಿದ್ದ ಮೋತಿಲಾಲರು ತನ್ನ ಮಗನ ಎಲ್ಲ ಆಸೆಯನ್ನ ಪುರೈಸುವಲ್ಲಿ ಸಿದ್ಧರಿರುತ್ತಿದ್ದರು.

ಬೆಳೆದ ಮಗನನ್ನು ಹೇಗಾದರು ಮಾಡಿ ರಾಷ್ಟ್ರ ರಾಜಕಾರಣದಲ್ಲಿ ಬೆಳೆಸ ಬೇಕೆಂಬ ಮಹಾದಾಸೆ ಆ ಮೋತಿಲಾಲರಿಗೆ ಇತ್ತು. ಅಂತೂ ಅವರ ಆಸೆಯನ್ನು ನೆರವೇರಿಸುವಂತೆ ಗಾಂಧಿಯ ಹಿಂದೆ ಬಿದ್ದು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೆಹರೂರವರನ್ನು ಆರಿಸ ಬೇಕೆಂದು ದುಂಬಾಲು ಬಿದ್ದರು. ಕೊನೆಗೂ ಅವರ ಕಾಟದಿಂದಲೋ ಅಥವ ಮೋತಿಲಾಲರ ಕಾಂಗ್ರೆಸ್ ಒಡೆಯುವ ಹುನ್ನಾರವಿದ್ದಿದ್ದರಿಂದಲೋ ಗಾಂಧೀ 1929ರ ಆ ಚುನಾವಣೆಯಲ್ಲಿ ಪಟೇಲರನ್ನು ಹಿಂದಕ್ಕೆ ನಿಲ್ಲಿಸಿ, ಈ ಭೂಪನಿಗೆ ಅಧ್ಯಕ್ಷ ಪದವಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿಯೇ ಬಿಟ್ಟರು!!

ಇಲ್ಲಿಂದಲೇ ನೆಹರೂವಿನ ಹಿಂಬದಿ ಆಟಗಳು ಪ್ರಾರಂಭವಾಗಿದ್ದು..

ಗಾಂಧೀಜಿಯ ಸುತ್ತಲಲ್ಲಿ ಇದ್ದ ಅಗ್ರಗಣ್ಯರಲ್ಲಿ ಈ ನೆಹರೂರು ಒಬ್ಬರು. ಅವರಲ್ಲಿ ಯಾರೊಬ್ಬರು ಧೂಮಪಾನವಾಗಲಿ ಕುಡಿತವಾಗಲಿ ಮಾಡುವಂತಿರಲಿಲ್ಲ. ಆದರೇ ಈ ಮಹಾಶಯ ಮರದ ಹಿಂದೆ ನಿಂತು ಧೂಮಪಾನ ಮಾಡಿ, ನಂತರ ಮತ್ತೆ ಗಾಂಧಿ ಎದುರು ಕುಳಿತು ಇಷ್ಟುದ್ದದ ಭಾಷಣ ಬಿಗಿಯುತ್ತ ಧೂಮಪಾನ ಮಾಡುವುದೇ ತಪ್ಪು ಎಂದು ಗಾಂಧೀಯನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗುತ್ತ ಬಂದರು.

ಇವರು ಗಾಂಧೀ ಜೊತೆಗಿದ್ದರೆ ಖಾಧಿ ಕುರ್ತ ತೊಟ್ಟು ಓಡಾಡುತ್ತಿದ್ದರೆ, ಅಲ್ಲಿಂದ ಆಚೆ ಬಂದರೆ ಅದನ್ನ ಕಿತ್ತೆಸೆದು ಸೂಟು-ಬೂಟು ತೊಟ್ಟು ಪಕ್ಕಾ ಬ್ರಿಟಿಷರಂತೆ ಸಿದ್ಧರಾಗಿ ನಿಲ್ಲುತ್ತಿದ್ದರು.

ಇವೆಲ್ಲದರ ನಡುವೆ ಆತನ ಕೋಪ ಮತ್ತು ಬೈಗುಳಗಳಿಗೆ ಪಾರವೇ ಇರಲಿಲ್ಲ‌. ಒಂದೊಮ್ಮೆ ಯಾವುದೋ ಕಾರ್ಯಕ್ರಮ ಮುಗಿಸಿ ಹೋಗುವ ಸಂದರ್ಭದಲ್ಲಿ ಒಬ್ಬ ಆತನ ಬಳಿ ಹೋಗಿ Autograph sir ಅಂತ ಕೇಳಿ ಪೇಪರ್ ಪೆನ್ನು ನೀಡಿದನಂತೆ. ಆದರೆ ಆ ಪೆನ್ನು ಬರೆಯದೇ ಇದ್ದ ಒಂದೇ ಕಾರಣಕ್ಕೆ ಎಲ್ಲರ ಮುಂದೆ ಆತನ ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿಂದ ಕಾಲ್ಕಿತ್ತಿದ್ದರು ಈ ಗಾಂಧೀ ಅನುಯಾಯಿ ಎಂಬ ಮುಖವಾಡದಾರಿ!!

ಸ್ವಾತಂತ್ರ್ಯ ಸಮಯದ ಆಸುಪಾಸಿನಲ್ಲಿ ಇವರ ಜೊತೆಯಾದದ್ದು ಎಡ್ವಿನ ಅಥವ ಲೇಡಿ ಮೌಂಟ್ ಬ್ಯಾಟನ್!! ಆಕೆಯ ಜೊತೆಯಾದ ನೆಹರೂವಿನ ಲೋಕ ಮತ್ತೊಷ್ಟು ಬದಲಾಯಿತು!!

ಆಕೆ ನೆಹರೂವನ್ನ ಸೇರಿದ್ದೇ ದೇಶವನ್ನ ಇಬ್ಭಾಗ ಮಾಡಲು. 1930 ಜನವರಿ 27ರಂದು ಪೂರ್ಣ ಸ್ವರಾಜ್ಯವೆಂದು ಕೂಗಿದ್ದ ಇದೇ ಕಾಂಗ್ರೇಸ್ ನಾಯಕ ಎಡ್ವಿನ ಸೇರುತ್ತಿದ್ದಂತೆ ಡೋಮಿನಿಯನ್ ಸ್ಟೇಟಸ್ ನ್ನು(ಅರ್ಧ ಸ್ವತಂತ್ರ್ಯ ಅಂದರೆ ಎಲ್ಲವೂ ನಮ್ಮ ಕೈಯಲ್ಲೆ ಇದ್ದರು ಆ ನಮ್ಮವರ ಜುಟ್ಟು ಬ್ರಿಟೀಷರ ಕೈಯಲ್ಲಿ) ಒಪ್ಪಿಯೇ ಬಿಟ್ಟರು!!

ಬರೀ ಇಷ್ಟೆ ಅಲ್ಲ. ದೇಶ ಇಬ್ಭಾಗವಾಗಲು ಇವರ ಮಹಿಮೆ ಅಪಾರವೇ ಸರಿ. ಪಾಕೀಸ್ತಾನ ವಿಭಜನೆಯಾಗಿ ಲಕ್ಷ ಲಕ್ಷ ಹಿಂದೂ ಮತ್ತು ಸಿಖ್ ಸಮುದಾಯದವರು ಪ್ರಾಣ ಕಳೆದು ಕೊಂಡದ್ದು ಇದೇ ವಿಭಜನೆಯಿಂದ. ಆದರ ಪರಿವೇ ಇಲ್ಲದೆ ಎಡ್ವಿನಾ ನಶೆಯಲ್ಲಿ ತೇಲುತ್ತಿದ್ದ. ದೇಶದ ಈ ಪ್ರಭಾವಿ ನಾಯಕ ಈ ಅತ್ಯಾಚಾರಗಳನ್ನ ಗಮನಿಸಲೇ ಇಲ್ಲ!!

ಈ ದೇಶದಲ್ಲಿ ಬುದ್ಧಿಜೀವಿಗಳು ಕೂಗುತ್ತಿರುವ “ಸೆಕ್ಯೂಲರ್” ಅನ್ನು ದೇಶಕ್ಕೆ ಪರಿಚಯ ಮಾಡಿಕೊಟ್ಟವರು ಈ ಜಾತ್ಯಾತೀತನೇ!! ಸೆಕ್ಯೂಲರ್ ಎಂದರೆ ‘ಎಲ್ಲರು ಸಮಾನರು’ ಎಂದು ಅರ್ಥ. ಆದರೆ ಈ ಮಹಾಶಯ ಸೆಕ್ಯೂಲರ್ ಪದವನ್ನ ಅಲ್ಪಸಂಖ್ಯಾತ ಬಹುಸಂಖ್ಯಾತರೆಂದು ಬೇರೆ ಮಾಡಿ ಎಲ್ಲದರಲ್ಲೂ ಅಲ್ಪ ಸಂಖ್ಯಾತರಿಗೆ ಮಣೆ ಹಾಕುತ್ತ ಸೆಕ್ಯೂಲರ್ ಪದದ ಅರ್ಥವನ್ನೆ ಬದಲಿಸಿ ಬಿಟ್ಟರು.

ಮುಂದೆ ಇದೇ ಕಾಂಗ್ರೆಸ್ ಓಟ್ ಬ್ಯಾಂಕ್ ಆಗಿಯು ಸಿದ್ಧಿಸಿದ್ದು. ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಇದರ ಜೊತೆಗೆ ಹಿಂದೂಗಳಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತ ಆಯಾ ಸಮುದಾಯವಿರುವಲ್ಲೆ ಆ ಸಮುದಾಯಕ್ಕೆ ಸೇರಿದವರನ್ನೇ ಚುನಾವಣೆಗೆ ನಿಲ್ಲಿಸುತ್ತ ದೇಶದ ಜಾತ್ಯಾತೀತ ಎಂಬ ಹೆಸರಿಗೆ ವಿರುದ್ಧವಾಗಿಯೇ ನಡೆದರು.

ಇಷ್ಟೆಲ್ಲ ಆದ ಮೇಲೆ ಆತನು ಮುಂದಿನ ದೇಶದ ಚುಕ್ಕಾಣಿ ಕೊಡಲು ತನ್ನ ಮಗಳನ್ನೆ ಸಿದ್ದೆವಾಗುವಂತೆ ಪ್ರೇರೇಪಿಸಿ ಕೊನೆಗೂ ಅದು ಆಕೆಯ ಕೈಗೆ ದೊರಕುವುದರಿಂದ ಆತನ ಕೊನೆಯ ಆಸೆಯು ನೆರವೇರಿತು.

ಮತ್ತೆ ಎಡ್ವಿನಾ ಈ ದೇಶದ ಪ್ರಭಾವಿ ನಾಯಕನ ಜೊತೆ ಸೇರಿ ದೇಶದ ದಿಕ್ಕನ್ನೆ ಬದಲಿಸಿದ್ದಕ್ಕೆ ಆಕೆಗೆ ಬ್ರಿಟಿಷ್ ಸರ್ಕಾರ ಕೊಟ್ಟ ಬಹುಮಾನ ಜಿ.ವಿ.ಇ (ಜೈನಿಸ್ ಆರ್ಡರ್ ಆಫ್ ಬ್ರಿಲಿಂಸಟ್ ಸ್ಟಾರ್). ಮತ್ತೆ ಆಕೆಯನ್ನು ನೆಹರೂ ಜೊತೆ ಓಡಾಡಿ ಕೊಂಡಿರಲು ಸಹಾಯ ಮಾಡಿದ ಆಕೆಯ ಗಂಡ ಮೌಂಟ್ ಬ್ಯಾಟನ್ನಿಗೆ (ಲೂಯಿ ಫ್ರ್ಯಾನ್ಸಿಸ್ ಎಲ್ಬರ್ಟ್ ನಿಕೋಲಾಸ್ ಮೌಂಟ್ ಬ್ಯಾಟನ್) “ಆರ್ಲ್” ಪದವಿ ನೀಡಿ ಗೌರವಿಸಿತು!!

ಆದರೆ ದೇಶ ಮಾತ್ರ ನೆಹರೂ ಎಂಬ ನಾಯಕನನ್ನು ಪಡೆದು ಮತ್ತಷ್ಟು ಕೆಳಗಿಳಿಯಿತು..

ಇವರು ಆಕಡೆ ಅಮೆರಿಕಾದ ಜೊತೆಯು ಸರಿಯಾದ ಸಂಪರ್ಕದಲ್ಲಿರಲಿಲ್ಲ. ಈಕಡೆ ಲೆನಿನ್ ನ ಕುರಿತು ಓದಿಕೊಂಡಿದ್ದರೂ ರಷ್ಯಾ ಸಂಭಂಧವನ್ನು ಗಟ್ಟಿ ಮಾಡಿಕೊಳ್ಳಲಿಲ್ಲ. ಇದರಿಂದ ಅಮೇರಿಕಾ ಪಾಕೀಸ್ತಾನಕ್ಕೆ ಸಹಾಯ ಮಾಡಿ ದೇಶವನ್ನ ದುರ್ಬಲಗೊಳಿಸುತ್ತಿದ್ದರೆ ರಷ್ಯಾ ನೆಹರೂವನ್ನ ನಂಬದೆ ತಟಸ್ಥವಾಗಿದ್ದುಬಿಟ್ಟಿತು.

ಈ ಮಹಾಶಯನಿಗೆ ಯಾರಾದರು ಹಿಂದೂಗಳಿಗೆ ದೇಶದ ಇತಿಹಾಸ ತಿಳಿಸಲು ಶುರು ಮಾಡಿದರೆ ಅವರನ್ನ ಕೋಮುವಾದಿಗಳು ಎಂದು ಜರಿಯುವುದು ಹಾಗೂ ಅವರನ್ನ ಶಿಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡುವುದು ಇದೇ ಕೆಲಸವಾಗಿ ಹೋಗಿತ್ತು.

ಗಾಂಧೀ ಹತ್ಯೇಯ ಸಮಯದಲ್ಲಿ ಸಾವರ್ಕರ್ ಎಂಬ ಮಹಾನ್ ದೇಶ ಭಕ್ತನನ್ನು ಜೈಲಿಗೆ ಕಳಿಸಿದ್ದಲ್ಲದೆ, ಪೂರ್ಣ ಆರ್.ಎಸ್.ಎಸ್. ಅನ್ನೇ ಜರಿಯಲು ಪ್ರಾರಂಭಿಸಿ ಬಿಟ್ಟರು. ಕೊನೆಗೆ ಪಟೇಲರ ಸಮಯ ಪ್ರಜ್ಞೆಯಿಂದ ಆರ್.ಎಸ್.ಎಸ್ ದೋಷ ಮುಕ್ತವಾಯಿತಾದರೂ, ಈ ಸೆಕ್ಯೂಲರ್ ಗಳು ಎಂದು ಕಿರಿಚಾಡೋ ಬುದ್ಧಿಜೀವಿಗಳು ಈಗಲೂ ಅದನ್ನೇ ಹೇಳುತ್ತ ತಿರುಗಾಡುವುದು ನೋಡಿದರೇ ತಿಳಿಯುತ್ತದೆ ನೆಹರೂವಿನ ಬೀಜ ಅದೆಷ್ಟು ಹೆಮ್ಮರವಾಗಿದೆ ಎಂದು.

ಇಷ್ಟೆಲ್ಲವಿದ್ದ ನೆಹರೂವಿನ ಹೆಸರಲ್ಲಿ ಮಾತ್ರ ಇಂದಿಗೂ ಮಕ್ಕಳ ದಿನಾಚಾರಣೆ ಮಾಡುತ್ತಿರುವುದು ಮಾತ್ರ ದುರ್ವಿದಿಯೇ ಸರಿ!!

ಕೊನೆಯದಾಗಿ ಒಂದು ಮಾತು, ನೆಹರೂವನ್ನು ರಷ್ಯನ್ನರು “Imperialismನ ಬೆನ್ನ ಹಿಂದೋಡುವ ನಾಯಿ”ಎಂದು ಕರೆದರೆ ಅಮೇರಿಕನ್ನರು, “ಅನುಮಾನಿಸಬೇಕಾದ ಕಮ್ಯುನಿಸ್ಟೇತ” ಎಂದು ಕರೆದರು..

ಈ ಸಾಲುಗಳೆ ಹೇಳುತ್ತವೆ ವಿದೇಶಿಯರು ನೆಹರೂವನ್ನ ಹೇಗೆ ನೋಡುತ್ತಿದ್ದರೆಂದು.

– Hemanth C Shekhar

 •  
  2.4K
  Shares
 • 2.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com