Connect with us
Loading...
Loading...

ಪ್ರಚಲಿತ

ರಾಮಮಂದಿರ ನಿರ್ಮಾಣಕ್ಕೆ ಬಿಗ್ ಟ್ವಿಸ್ಟ್!! ನಿರ್ಮಾಣವಾಗಿಬಿಡುತ್ತ ರಾಮಮಂದಿರ?

Published

on

 • 7.2K
 •  
 •  
 •  
 •  
 •  
 •  
 •  
  7.2K
  Shares

ರಾಮ ಎಂದಾಕ್ಷಣ ನೆನಪಾಗೋದು ಅಯೋಧ್ಯಾ. ಅದು ರಾಮ ಜನ್ಮಭೂಮಿ. 100 ಕೋಟಿ ಹಿಂದುಗಳ ಆರಾಧ್ಯದೇವ ಮರ್ಯಾದಾ ಪುರುಷೋತ್ತಮನ ಒಂದು ಮಂದಿರವನ್ನು ನಮ್ಮಿಂದ ನಿರ್ಮಿಸೋಕೆ ಆಗುತ್ತಿಲ್ಲವಲ್ಲ ಅನೋದೆ ದೊಡ್ಡ ವ್ಯಥೆ.

ಅಷ್ಟಕ್ಕೂ ಅಯೋಧ್ಯೆ ಹಿಂದುಗಳಿಗೆ ಯಾಕೆ ಮುಖ್ಯ ಗೊತ್ತಾ? ಅಯೋಧ್ಯಾ, ಮಥುರಾ, ಮಾಯಾ, ಕಾಶಿ, ಕಾಂಚಿ, ಅವಂತಿಕಾ, ಪುರಿ, ದ್ವರವತಿ ಸಪ್ತತೈಕೆ ಮೋಕ್ಷದಾಯಕ. ಮೋಕ್ಷ ನೀಡುವ ಪವಿತ್ರ 7 ಕ್ಷೇತ್ರಗಳಲ್ಲಿ ಅಯೋಧ್ಯೆಗೆ ಮೊದಲ ಸ್ಥಾನ. ಸರಯೂ ನದಿ ತೀರದಲ್ಲಿರುವ ಭವ್ಯನಗರ ಅಯೋಧ್ಯೆ.

ಹಿಂದುಗಳ ಆರಾಧ್ಯದೇವ , ಮರ್ಯಾದಾ ಪುರುಷೋತ್ತಮನ ಜನ್ಮಭೂಮಿ ಅಯೋಧ್ಯೆ. 14-15 ನೇ ಶತಮಾನದಲ್ಲಿ ರಾಜ ವಿಕ್ರಮಾದಿತ್ಯನು 7 ಅಂತಸ್ತಿನ ಭವ್ಯ ಶ್ರೀರಾಮ ಮಂದಿರವನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕಟ್ಟಿಸಿ ಸಮಾಜಕ್ಕೆ ಅರ್ಪಿಸಿ, ಪ್ರಭು ಶ್ರೀರಾಮನ ನೆನಪನ್ನು ಶಾಶ್ವತವಾಗಿಸಿದ.

15 ನೇ ಶತಮಾನದಲ್ಲಿ ಭಯೋತ್ಪಾದಕ ಬಾಬರ್ ನ ಕೆಟ್ಟ ಕಣ್ಣು ಭಾರತದ ಮೇಲೆ ಬಿತ್ತು. ಬಾಬರ್ ಮಧ್ಯ ಏಶಿಯಾದ ಉಜ್ಬೇಕಿಸ್ತಾನದವನು. ಬಾಬರ್, ಮಧ್ಯ ಏಷ್ಯಾದ ಪ್ರಸಿದ್ಧ ದಾಳಿಕೋರರ ಟರ್ಕ್ ಮೂಲದ ತೈಮೂರ ಮತ್ತು ಮೊಗಲ್ ಮೂಲದ ಚೆಂಗಿಸ್ ಖಾನ್‌ರ ರಕ್ತಸಂಬಂಧಿಯಾಗಿದ್ದ. ಭಾರತಕ್ಕೆ ಬಂದು ದಾಳಿಮಾಡಿ ಮೊಗಲ ದೊರೆ ಎನಿಸಿಕೊಂಡ.

ಆ ಭಯೋತ್ಪಾದಕನ ಕೆಟ್ಟ ಕಣ್ಣು ಏಳು ಅಂತಸ್ತಿನ ಭವ್ಯ ರಾಮಮಂದಿರದ ಮೇಲೆ ಬಿತ್ತು. ಹಿಂದುಗಳ ಆರಾಧ್ಯ ದೇವ ಶ್ರೀರಾಮನ ಮಂದಿರ ಕೆಡವಿದರೆ ಹಿಂದೂ ಧರ್ಮವೇ ನಾಶವಾಗುತ್ತೆ ಎಂದು ಭಾವಿಸಿ ತನ್ನ ಸೇನೆಯನ್ನ ಮೀರ್ ಬಾಕಿ ನೇತೃತ್ವದಲ್ಲಿ ಮಂದಿರದ ಮೇಲೆ ದಾಳಿ ಮಾಡಿಸಿ ಕೆಡವಿದ.

ಅದೇ ಕೆಡವಿದ ಮಂದಿರದ ಅವಶೇಷಗಳಿಂದ ಮಸೀದಿಯನ್ನು ಕಟ್ಟಿಸಿದ . ಅದಕ್ಕೆ ಜನ್ಮಸ್ಥಾನ ಮಸೀದಿ ಎಂದು ಹೆಸರಿಟ್ಟ. 1985 ರವರೆಗೂ ಅದನ್ನ ಜನ್ಮಸ್ಥಾನ ಮಸೀದಿ ಅಂತಾನೇ ಕರೆಯುತ್ತಿದ್ದರು.
ಅರೇ ಜನ್ಮಸ್ಥಾನ ಮಸೀದಿ ಅಂದ್ರೆ ಯಾರ ಜನ್ಮಸ್ಥಾನ ಅನ್ನುವ ಪ್ರಶ್ನೆ ಕೇಳ್ಬಹುದು ಅನ್ಕೊಂಡು ಬಾಬರ್ ಕ್ರಿಯಾಸಮಿತಿ ಮತ್ತು ಕೆಲ ಅಡಕಸ್ಬಿಗಳು ಸೇರಿ ಬಾಬರೀ ಮಸೀದಿ ಅಂತ ಕರೆಯಲು ಪ್ರಯತ್ನ ಮಾಡಿದರು.

ಬಾಬರ್ ರಾಮ ಮಂದಿರವನ್ನು ಕೆಡವಿ ಮಸೀದಿ ಕಟ್ಟಿದಾಂಗಿದಲೂ ಹಿಂದುಗಳು ಅದರ ವಿರುದ್ಧ ಹೋರಾಡುತ್ತಲೇ ಬಂದರು. ಆದರೆ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿಯಿತು.

1989 ನವೆಂಬರನಲ್ಲಿ ಭಾರತೀಯ ಜನತಾ ಪಕ್ಷದ ಲಾಲ್ ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆವರೆಗಿನ 10,000km ರಥಯಾತ್ರೆ ಮಾಡಿ ಹಿಂದುಗಳಿಗೆ ಹೊಸ ಚೈತನ್ಯ ತುಂಬಿದರು.

ನ್ಯಾಯಾಲಯಕ್ಕೆ ಅಲೆದಾಡಿದ ಹಿಂದುವಿಗೆ ನ್ಯಾಯ ಮರೀಚಿಕೆ ಆಗಿಯೇ ಉಳಿಯಿತು. ಅದರಿಂದ ಹಿಂದುವಿನ ಸಹನೆ ಕಟ್ಟೆಯೊಡೆದು 1992 ಡಿಸೆಂಬರ್ 6 ಕ್ಕೆ ಸಿಡಿದೆದ್ದ.

ಗ್ರಾಮ ಗ್ರಾಮಗಳಿಂದ ಹಿಂದುಗಳು ಅಯೋಧ್ಯೆಯ ಕಡೆಗೆ ಹೊರಟು ನಿಂತರು. ಎಲ್ಲಿ ಕೇಳಿದರಲ್ಲಿ ಜೈ ಶ್ರೀರಾಮ ಜೈ ಶ್ರೀರಾಮ ಜೈ ಶ್ರೀರಾಮ ಅನ್ನುವ ಘೋಷಣೆಗಳು ಕೇಳಿ ಬರಲು ಶುರುವಾದವು. ಆ ಘೋಷಣೆಗೆ ದಾಸ್ಯದ ಕುರುಹಾಗಿದ್ದ ಮಸೀದಿ ಉರುಳಿತು.

ಇದು ರಾಮ ಮಂದಿರದ ಸಂಕ್ಷಿಪ್ತ ವಿವರಣೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬಂದತಹ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮೀಯರಿಗೂ ಬದುಕುವ ಹಕ್ಕನ್ನು ಕೊಟ್ಟಿದೆ. ತಮ್ಮ ಧರ್ಮದ ಆಚರಣೆಗಳನ್ನು ಆಚರಿಸಲು ಬಿಟ್ಟಿದೆ. ಕಾರಣ ಹಿಂದುಗಳು ಸಹಿಷ್ಣುಗಳು.

ಜಗತ್ತಿನಲ್ಲಿ ಯಾರೂ ನೆರವಾಗದೇ ಇದ್ದವರಿಗೆ ಭಾರತ ನೆರವಾಗಿದೆ. ಯಹೂದಿಯರನ್ನು ತಮ್ಮ ಮೂಲ ರಾಷ್ಟ್ರದಿಂದ ಓಡಿಸಿದಾಗ ಜಗತ್ತಿನ ಯಾವ ರಾಷ್ಟ್ರಗಳು ನೆಲೆ ಕಲ್ಪಿಸಿ ಕೊಡಲಿಲ್ಲ. ಆಗ ಭಾರತವೇ ಯಹೂರಿಗಳಿಗೆ ಆಸರೆಯಾಗಿ, ಭಾರತದಲ್ಲಿರಿಸಿಕೊಂಡು ಪೋಷಿಸಿತು. ಭಾರತ-ಪಾಕಿಸ್ತಾನ ವಿಭಜನೆಯಾದಾಗ ಮುಸಲ್ಮಾನರಿಗೆ ನೆರವು ನೀಡಿ ಪೋಷಿಸಿತು. ಇದುವೇ ನನ್ನ ಭಾರತ.

ಇದನ್ನೆಲ್ಲಾ ಅವಲೋಕಿಸಿದ ಭಾರತದ ಮುಸಲ್ಮಾನರು ರಾಮ ಮಂದಿರಕ್ಕೆ ಬೆಂಬಲ ಕೊಟ್ಟಿದ್ದಾರೆ. ನಿಜಕ್ಕೂ ಅಚ್ಚರಿ ಎನಿಸಿದರು ಇದು ಭಾರತದಲ್ಲಿ ನಡೆಯುವಂತದ್ದು. ಹಿಂದೂ ಮುಸ್ಲಿಂ ಜಗಳದಲ್ಲಿ ರಾಮಮಂದಿರವನ್ನು ಕಟ್ಟಲು ಮುಸಲ್ಮಾನರೇ ಬಿಡುತ್ತಿಲ್ಲ ಎನ್ನುತ್ತಿದ್ದ ವಿಚಾರ ಹುಸಿಯಾಗಿದೆ ಯಾಕೆಂದರೆ ರಾಮ ಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾಗಿರುವುದು, ಮುಸಲ್ಮಾನ ಸ್ನೇಹಿತರು!!

ಹೌದು.. ಇದೀಗ ರಾಮ ಮಂದಿರದ ಮರುನಿರ್ಮಾಣಕ್ಕೆ ಮುಂದಾದವರು ಕೆಲ ಮುಸಲ್ಮಾನರು. ಇದರಿಂದಾಗಿ ರಾಜಕೀಯವಾಗಿ ರಾಮ ಮಂದಿರದ ವಿಚಾರದಲ್ಲಿ ಭಾಷಣ ಬಿಗಿಯುತ್ತಿದ್ದ ಜಾತ್ಯಾತೀತವಾದಿಗಳ ಬಾಯಿಗೆ ಬೀಗ ಜಡಿದಂತಾಗಿದೆ. ಆದರೆ ಖುಷಿಯ ಸಮಾಚಾರ ಏನಂದರೆ ಕೆಲವೊಂದು ಮುಸ್ಲಿಂ ಸಹೊದರ-ಸಹೋದರಿಯವರು ರಾಮ ಮಂದಿರದ ಮರುನಿರ್ಮಾಣಕ್ಕೆ ಸಾಥ್ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ…

ವಿಪರ್ಯಾಸವೇನೆಂದರೆ ಮರುನಿರ್ಮಾಣಕ್ಕೆ ಸಾಥ್ ನೀಡಿರುವ ಮುಸಲ್ಮಾನ ಸ್ನೇಹಿತರ ಬಗೆಗೆ ಮುಖ್ಯವಾಹಿನಿ ಮಾಧ್ಯಮಗಳು ಯಾವುದೇ ರೀತಿಯ ಮಾಹಿತಿಯನ್ನು ಹೊರಹಾಕಿಲ್ಲ. ಒಂದೆರಡು ಮಾಧ್ಯಮಗಳನ್ನು ಬಿಟ್ಟರೇ ಈ ಬಗೆಗೆ ಯಾವುದೇ ರೀತಿಯ ವಿಷಯವನ್ನು ವ್ಯಕ್ತಪಡಿಸಿಲ್ಲ.

ನಿಜಾಂಶವನ್ನು ಭಿತ್ತರಿಸುವಲ್ಲಿ ಮಾಧ್ಯಮಗಳು ವಿಫಲರಾಗಿರುವುದು ಯಾಕೆ ಎನ್ನುವುದೇ ಒಂದು ಪ್ರಶ್ನೇ??? ಆದರೆ ಕೆಲವೊಂದು ಮುಸಲ್ಮಾರು, ರಾಮಮಂದಿರದ ಮರುನಿರ್ಮಾಣದ ಕುರಿತು ವಿರೋಧವನ್ನು ವ್ಯಕ್ತಪಡಿಸಿರುವ ಬಗೆಗೆ ಮಾಧ್ಯಮಗಳು ಕಾರ್ಯನಿರತರಾದರೇ ಹೊರತು ರಾಮಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾದವರನ್ನು ಶ್ಲಾಘಿಸಲೇ ಇಲ್ಲ.

ಅಂತೂ ಕೆಲವೊಂದು ಮುಸಲ್ಮಾನ ಸಹೊದರ-ಸಹೋದರಿಯವರು ರಾಮಮಂದಿರ ಮರುನಿರ್ಮಾಣಕ್ಕೆ ಕೈಜೋಡಿಸಿದ್ದಲ್ಲದೇ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತುಂಬುವಲ್ಲಿ ಮುಂದಾಗಿದ್ದಾರೆ. ಜಾತ್ಯಾತೀತವಾದಿಗಳೇ ಇನ್ನಾದರೂ ನಿಮ್ಮ ಕಣ್ಣು ತೆರೆಯಿರಿ.

ಭಾರತೀಯರು ಎಂದಿಗೂ ಯಾರ ಮೇಲೆಯೂ ದಾಳಿ ಮಾಡಿಲ್ಲ. ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಏಕೈಕ ಶ್ರೇಷ್ಠ ದೇಶ ನನ್ನ ಭಾರತ. ಹಾಗಂತ ದಾಳಿ ಮಾಡಿದಾಗ ಕೈಕಟ್ಟಿಕೊಂಡು ಸುಮ್ಮನೆಯೂ ಕುಳಿತಿಲ್ಲ, ದಾಳಿ ಮಾಡಿದಾಗ ಪ್ರತಿದಾಳಿ ಮಾಡಿ ಭಾರತೀಯರ ತಾಕತ್ತನ್ನು ತೋರಿಸಿತ್ತು. ನೆನಪು ಮಾಡಿಕೊಳ್ಳಿ ಶಿವಾಜಿ ಮಹಾರಾಜರನ್ನು, ನೆನಪು ಮಾಡಿಕೊಳ್ಳಿ ರಾಣಾ ಪ್ರತಾಪ ಸಿಂಹರನ್ನು, ನೆನಪು ಮಾಡಿಕೊಳ್ಳಿ ಪೃಥ್ವಿರಾಜ್ ಚೌಹಾಣರನ್ನು, ನೆನಪು ಮಾಡಿಕೊಳ್ಳಿ ಶ್ರೀಕೃಷ್ಣ ದೇವರಾಯರನ್ನು, ನೆನಪು ಮಾಡಿಕೊಳ್ಳಿ ಮದಕರಿ ನಾಯಕರನ್ನು, ನೆನಪು ಮಾಡಿಕೊಳ್ಳಿ ಗುರು ಗೋವಿಂದ ಸಿಂಗರನ್ನು. ಇವರೆಲ್ಲಾ ಭಾರತದ ಮೇಲೆ ದಾಳಿ ಮಾಡಿದಾಗ ತಮ್ಮ ಕ್ಷಾತ್ರ ತೇಜಸ್ಸನ್ನು ತೋರಿಸಿ ಅವರನ್ನು ಹಿಮ್ಮೆಟ್ಟಿಸಿ ಭಾರತದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದರು.

ಇದೀಗ ಭಾರತವನ್ನು ಪ್ರೀತಿಸುವ, ಭಾರತ ಸಂಸ್ಕೃತಿಯನ್ನು ಗೌರವಿಸುವ ಮುಸಲ್ಮಾನರು ರಾಮ ಮಂದಿರ ಕುರಿತಂತೆ ಬೆಂಬಲಿಸುತ್ತಿರುವುದು ಖುಷಿಯ ವಿಚಾರ.

ಭಾರತದಲ್ಲಿರುವ ನಿಜವಾದ ಮುಸಲ್ಮಾನರಿಗೆ ಗಲಭೆ ಬೇಕಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾದಂತಿದೆ. ಈಗ ಮುಸಲ್ಮಾನರೇ ರಾಮ ಮಂದಿರ ಕಟ್ಟುವುದಕ್ಕೆ ಬೆಂಬಲ ಕೊಟ್ಟಿದ್ದಾರೆಂದರೆ, ರಾಮ ಜನ್ಮಭೂಮಿಯಲ್ಲಿ ಆದಷ್ಟು ಬೇಗ ಪ್ರಭು ಶ್ರೀರಾಮನ ಮಂದಿರ ನಿರ್ಮಾಣವಾಗಲಿದೆ.

ಉತ್ತರ ಪ್ರದೇಶವನ್ನು ಹಿಂದೂ ಫೈರ್ ಯೋಗಿ ಆದಿತ್ಯಾನಾಥರು ಆಳುತ್ತಿದ್ದಾರೆ, ರವಿಶಂಕರ ಗುರೂಜಿಯವರು ಇತ್ತೀಚೆಗೆ ರಾಮ ಮಂದಿರದ ವಿವಾದದ ಕುರಿತಂತೆ ಮುಸಲ್ಮಾನ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಇವೆಲ್ಲವುಗಳು ರಾಮ ಮಂದಿರ ನಿರ್ಮಾಣವಾಗುವುದು ಸನಿಹದಲ್ಲಿದೆ ಎನ್ನುವುದನ್ನು ತೋರಿಸುತ್ತಿವೆ. ಓವೈಸಿ ಮಾತ್ರ ವಿರೋಧಿಸುತ್ತಲೇ ಇದ್ದಾನೆ. ಆದರೆ ಓವೈಸಿ ಮಾತನ್ನು ಯಾರು ಕಿವಿಗೆ ಹಾಕಿಕೊಳ್ಳಲ್ಲ.

ಒಟ್ಟಿನಲ್ಲಿ ಶೀಘ್ರದಲ್ಲಿ ಮರ್ಯಾದಾ ಪುರುಷೋತ್ತಮ, ಹಿಂದುಗಳ ಆರಾಧ್ಯದೇವ ಪ್ರಭು ಶ್ರೀರಾಮನ ಮಂದಿರ ನಿರ್ಮಾಣಗೊಳ್ಳುವುದು ಖಚಿತವಾಗಿದೆ.

 •  
  7.2K
  Shares
 • 7.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com