Connect with us
Loading...
Loading...

ಪ್ರಚಲಿತ

ಪಾಕಿಸ್ತಾನದ ಈ ನಾಯಕ ಕುಲಭೂಷಣ್ ಜಾಧವ್ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದಾನೆ…ಏನದು ಮಾಹಿತಿ?

Published

on

 • 738
 •  
 •  
 •  
 •  
 •  
 •  
 •  
  738
  Shares

ಭಾರತದ ಪುತ್ರ ಕುಲಭೂಷಣ್ ಜಾಧವ್, ಈಗ ಸದ್ಯ ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ಕುಲಭೂಷಣ್ ಜಾಧವ್ ಭಾರತದ ಒಬ್ಬ ಗೂಢಚಾರಿ ಹಾಗಾಗಿ ನಾವು ಆತನನ್ನ ಬಂಧಿಸಿದ್ದೇವೆ ಅಂತ ಪಾಕಿಸ್ತಾನ ಹೇಳಿತ್ತು, ಅಷ್ಟೇ ಅಲ್ಲ ಕುಲಭೂಷಣ್ ಜಾಧವರಿಗೆ ಗಲ್ಲು ಶಿಕ್ಷೆಯನ್ನೂ ಜಾರಿ ಮಾಡಿತ್ತು.

ನರೇಂದ್ರ ಮೋದಿ ಸರ್ಕಾರ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಖಡಕ್ಕಾಗಿ ವಾದ ಮಂಡಿಸಿ “ಕುಲಭೂಷಣ್ ಜಾಧವ್ ನಮ್ಮ ಬೇಹುಗಾರಿಕಾ ಸಂಸ್ಥೆಯವರಲ್ಲ,‌ ಅವರನ್ನ ವಿನಾಕಾರಣ ಗೂಢಚಾರಿಯೆಂದು ಪಾಕಿಸ್ತಾನ ಬಂಧಿಸಿ ಈಗ ಆತನಿಗೆ ಗಲ್ಲು ಶಿಕ್ಷೆ ವಿಧಿಸಿದೆ, ಅಮಾಯಕನನ್ನ ಪಾಕಿಸ್ತಾನ ಚಿತ್ರಹಿಂಸೆ ನೀಡುತ್ತಿದೆ ಹೀಗಾಗಿ ಪಾಕಿಸ್ತಾನ ವಿಧಿಸಿದ್ದ ಮರಣದಂಡನೆ ರದ್ದು ಮಾಡಬೇಕು” ಅಂದಿತ್ತು.

ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯ ಸಿಕ್ಕಿತ್ತು ಇದರಿಂದ ಪಾಕಿಸ್ತಾನ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೊಳಗಾಗಿತ್ತು.

ಅಂತರಾಷ್ಟ್ರೀಯ ಒತ್ತಡದಿಂದ ಕುಲಭೂಷಣ್ ಜಾಧವ್ ರವರ ಗಲ್ಲು ಶಿಕ್ಷೆಯನ್ನಂತೂ ಪಾಕಿಸ್ತಾನ ತಾತ್ಕಾಲಿಕವಾಗಿ ಮುಂದೂಡಿತ್ತು.ಇದರ ಮಧ್ಯೆ ಈಗ ಕುಲಭೂಷಣ್ ಜಾಧವ್ ಬಗ್ಗೆ ಸ್ವತಃ ಪಾಕಿಸ್ತಾನಿ ನಾಯಕನೊಬ್ಬ ಸ್ಪೋಟಕ ಮಾಹಿತಿಯಿಂದನ್ನ ಬಿಚ್ಚಿಟ್ಟಿದ್ದಾನೆ.

ಆ ಸ್ಪೋಟಕ ಮಾಹಿತಿಯಾದರೂ ಏನು?

“ಪಾಕಿಸ್ತಾನ ಕುಲಭೂಷಣ್ ಜಾಧವರನ್ನ ಬಂಧಿಸಿಲ್ಲ ಬದಲಾಗಿ ಆತನನ್ನ ಪಾಕಿಸ್ತಾನ ಅಪಹರಿಸಿದೆ” ಅಂತ ಆ ನಾಯಕ ಬಾಯಿಬಿಟ್ಟಿದ್ದಾನೆ.ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಸಾಕಷ್ಟು ತಿರುವುಗಳು, ಸ್ಪೋಟಕ ಮಾಹಿತಿಗಳು ಒಂದರ ಮೇಲಂತೆ ಹೊರಬೀಳುತ್ತಿವೆ.

ಇತ್ತೀಚೆಗಷ್ಟೇ ಪಾಕ್ ಜೈಲಿನಲ್ಲಿರುವ ಕುಲಭೂಷಣ್ ಜಾಧವರನ್ನ ಭೇಟಿಯಾಗೋಕೆ ಆತನ ಪತ್ನಿ ಹಾಗು ತಾಯಿ ಪಾಕಿಸ್ತಾನಕ್ಕೆ ತೆರಳಿದ್ದಾಗ ಪಾಕಿಸ್ತಾನ ಅವರಿಬ್ಬರನ್ನೂ ಅವಮಾನಿಸಿತ್ತು.

ಕುಲಭೂಷಣ್ ಪತ್ನಿಯ ತಾಳಿ ಕಳಚಲಾಗಿತ್ತು, ಹಣೆಯ ಮೇಲಿನ ಸಿಂಧೂರವನ್ನ ಅಳಿಸಿಹಾಕಲಾಗಿತ್ತು, ಚಪ್ಪಲಿಯಲ್ಲಿ ಈಕೆ ಚಿಪ್ ಏನಾದರೂ ಇಟ್ಟುಕೊಂಡಿದ್ದಾಳಾ ಅಂತ ಆಕೆಯ ಚಪ್ಪಲಿ ತೆಗೆಸಿ ಬರಿಗಾಲಿನಲ್ಲಿ ನಡೆಸಿಕೊಂಡು ಹೋಗಿತ್ತು ಪಾಪಿ ಪಾಕಿಸ್ತಾನ. ಈ ವಿಷಯವನ್ನ ಇಡೀ ಜಗತ್ತೇ ಖಂಡಿಸಿ ಪಾಕಿಸ್ತಾನಕ್ಕೆ ಛೀಮಾರಿ ಹಾಕಿತ್ತು

ಇದರಿಂದ ಒಂದು ವಿಷಯವಂತೂ ಸ್ಪಷ್ಟವಾಗುತ್ತೆ ಪಾಕಿಸ್ತಾನಕ್ಕೆ ಮಾನವೀಯತೆ ಅನ್ನೋದು ಎಳ್ಳಷ್ಟೂ ಇಲ್ಲವೆಂದು. ಆದರೆ ಅವೆಲ್ಲದರ ಮಧ್ಯೆ ಈಗ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಕುಲಭೂಷಣರ ಪ್ರಕರಣದಲ್ಲಿ ಈಗ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಕಾಶ್ಮೀರದ ಬಲೂಚಿಸ್ತಾನ ಪ್ರಾಂತ್ಯದ ನಾಯಕ ‘ಮಾಮಾ ಕದೀರ್ ಬಲೋಚ್’ ಮಾತನಾಡುತ್ತ “ಪಾಕಿಸ್ತಾನದ ಐ.ಎಸ್.ಐ ಗುಪ್ತಚರ ಇಲಾಖೆಯೇ ಕುಲಭೂಷಣರನ್ನ ಇರಾಕಿನಿಂದ ಅಪಹರಣ ಮಾಡಿಕೊಂಡು ಬಂದಿದೆ ಹೊರತು ಅವರನ್ನ ಪಾಕಿಸ್ತಾನದಲ್ಲಿ ಬಂಧಿಸಿಲ್ಲ” ಎಂದಿದ್ದಾರೆ.

ಇದರ ಬಗ್ಗೆ ಮಾಹಿತಿ ನೀಡಿದ ಅವರು “ಪಾಕಿಸ್ತಾನಿ ಗುಪ್ತಚರ ಇಲಾಖೆ ಐ.ಎಸ್.ಐ ನ ಪರವಾಗಿ ಕೆಲಸ ಮಾಡುವ ಮುಲ್ಲಾ ಓಮರ್ ಬಲೂಚ್ ಇರಾನಿ ಎಂಬುವವನು ಕುಲಭೂಷಣರನ್ನ ಇರಾನಿನ ಛಾಭಾರ್ ನಿಂದ ಅಪಹರಿಸಿಕೊಂಡು ಬಂದಿದ್ದಾನೆ ” ಎಂದಿದ್ದಾರೆ.

ಈ ಅಪಹರಣಕ್ಕಾಗಿ ಪಾಕಿಸ್ತಾನ ಮುಲ್ಲಾ ಓಮರ್ ಗೆ ಕೋಟಿ ಕೋಟಿ ಹಣ ನೀಡಿದೆ ಎಂದು ಬಲೋಚ್ ಪ್ರಾಂತ್ಯದ ನಾಯಕ ಕದೀರ್ ಬಲೂಚ್ ಈ ಪ್ರಕರಣದ ಇನ್ನಷ್ಟು ಮಾಹಿತಿಗಳನ್ನ ಬಹಿರಂಗಗೊಳಿಸಿದ್ದಾರೆ.

ಪಾಕಿಸ್ತಾನ ನೀಚತನದಿಂದ ಎಷ್ಟು ಕೀಳುಮಟ್ಟಕ್ಕಿಳಿದು ಬೇಕಾದರೂ ಭಾರತ ದ್ವೇಷಿ ಕುತಂತ್ರ ನಡೆಸುತ್ತೆ ಅನ್ನೋದು ಸ್ಪಷ್ಟವಾಗಿ ಅರ್ಥವಾಗುತ್ತೆ.

ಅಷ್ಟಕ್ಕೂ ಈ ಸ್ಪೋಟಕ ಮಾಹಿತಿ ಕದೀರ್ ಗೆ ಸಿಕ್ಕಿದ್ದು ಹೇಗೆ?

ಬಲೋಚಿಸ್ತಾನದ ನಾಯಕ ಕದೀರ್ ಹೇಳುವ ಪ್ರಕಾರ ಅವರಿಗೆ ಈ ಸ್ಪೋಟಕ ಮಾಹಿತಿಯನ್ನ “ವಾಯ್ಸ್ ಆಫ್ ಮಿಸ್ಸಿಂಗ್ ಬಲೂಚ್ಸ್” ಎಂಬ ಸಂಸ್ಥೆಯೊಂದು ನೀಡಿದೆಯಂತೆ.

ನಿಮಗೆ ಗೊತ್ತಿರಲಿ ಕದೀರ್ ರವರು ಈ ವಾಯ್ಸ್ ಆಫ್ ಮಿಸ್ಸಿಂಗ್ ಬಲೂಚ್ ಸಂಸ್ಥೆಯ ಸಂಯೋಜಕರೂ ಆಗಿ ಕಾರ್ಯ ನಿರ್ವಹಿಸಿತ್ತಿದ್ದಾರೆ

ಕದೀರ್ ಹೇಳುವ ಪ್ರಕಾರ ಮುಲ್ಲಾ ಓಮರ್ ಇರಾನಿನ ಬಲೂಚಿಸ್ತಾನ ಪ್ರಾಂತ್ಯ ದಲ್ಲಿ ಐ.ಎಸ್.ಐ ಏಜೆಂಟ್ ಆಗಿ ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿದ್ದು ಬಲೋಚ್ ನಲ್ಲಿ ಪಾಕಿಸ್ತಾನದ ವಿರುದ್ಧ ಯಾರೇ ಧ್ವನಿಯೆತ್ತಿದರೂ ಅಂಥವರನ್ನ ಕಿಡ್ನ್ಯಾಪ್ ಮಾಡುವುದೇ ಈತನ ಕೆಲಸವಂತೆ.

ಪಾಕಿಸ್ತಾನ ಕರಾಳ ನರಿ ಮುಖ ಮತ್ತೊಮ್ಮೆ ಬಯಲಾಗಿದೆ,‌ ಆದಷ್ಟು ಬೇಗ ಕುಲಭೂಷಣ್ ಜಾಧವ್ ರವರನ್ನ ಭಾರತ ನರಕಕೂಪವಾಗಿರುವ ಪಾಕಿಸ್ತಾನದಿಂದ ವಾಪಸ್ ಕರೆತರಲಿ ಎಂಬುದೇ ಭಾರತೀಯರ ಆಶಯವಾಗಿದೆ

 •  
  738
  Shares
 • 738
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com