Connect with us
Loading...
Loading...

ಪ್ರಚಲಿತ

ಬಿಗ್ ಬ್ರೇಕಿಂಗ್: ಕೊನೆಗೂ ಸಿಕ್ಕಿಬಿದ್ದ ಭಾರತದ ಬಿನ್ ಲಾಡೆನ್. ಅಷ್ಟಕ್ಕೂ ಯಾರು ಈ ಭಾರತದ ಬಿನ್ ಲಾಡೆನ್?

Published

on

  • 688
  •  
  •  
  •  
  •  
  •  
  •  
  •  
    688
    Shares

ಬಿನ್ ಲಾಡೆನ್ ಆ? ಎಲ್ಲರಿಗೂ ಅಚ್ಚರಿಯಾಗಿರಬಹದು. ಹೌದು ನೀವೆಲ್ಲ ಬಿನ್ ಲಾಡೆನ್ ಅಫ್ಘಾನಿಸ್ತನಾದವನು ಅಂತ ಆಲೋಚಿಸುತ್ತಿರಬಹುದು. ನಿಮ್ಮ ಆಲೋಚನೆ ಸರಿಯಾಗಿಯೇ ಇದೆ. ಈ ಬಿನ್ ಲಾಡೆನ್ ಬೇರೆ.

ಈತನು ಭಾರತದ ಬಿನ್ ಲಾಡೆನ್ ಎಂತಲೇ ಕುಖ್ಯಾತಿ ಪಡೆದಿದ್ದನು. ಭಾರತದ ಬಿನ್ ಲಾಡೆನ್ ಎಂದು ಕುಖ್ಯಾತಿ ಪಡೆದ ಉಗ್ರನ ಹೆಸರು ಅಬ್ದುಲ್ ಸುಭಾನ್ ಖುರೇಷಿ. ಈತ ಸಿಮಿ (SIMI-Students Islamic Movement of India ) ಎಂಬ ಉಗ್ರ ಸಂಘಟನೆ ಮತ್ತು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖಂಡ.

ಇಂದು ದೆಹಲಿ ಪೋಲಿಸರು ಭರ್ಜರಿ ಬೇಟೆಯಾಡಿದ್ದಾರೆ. ಅದೇನು ಗೊತ್ತಾ? ಬಿನ್ ಲಾಡೆನ್ ಕುಖ್ಯಾತಿಯ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬ್ದುಲ್ ಸುಭಾನ್ ಖುರೇಷಿಯನ್ನು ಬಂಧಿಸಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ಗುಜರಾತಿನಲ್ಲಿ ಸರಣಿ ಬಾಂಬ್ ಸ್ಪೋಟಗಳಾಗಿದ್ದವು. ಆ ಸ್ಪೋಟದ ರೂವಾರಿ ಇದೇ ಭಯೋತ್ಪಾದಕ ಬಿನ್ ಲಾಡೆನ್ ಕುಖ್ಯಾತಿಯ ಅಬ್ದುಲ್ ಸುಭಾನ್ ಖುರೇಷಿ.

ಸುಮಾರು 10 ವರ್ಷಗಳಿಂದ ಭಾರತಕ್ಕೆ ತುಂಬಾ ಬೇಕಾಗಿದ್ದ ಈ ಭಯೋತ್ಪಾದಕ. ಈಗ ದೆಹಲಿ ಪೋಲಿಸರ ಭರ್ಜರಿ ಬೇಟೆಗೆ ಸಿಕ್ಕಿಬಿದ್ದಿದ್ದಾನೆ. ದೆಹಲಿ ಪೋಲಿಸರು ಗುಜರಾತಿನ ಎಟಿಎಸ್ ಅಧಿಕಾರಿಗಳ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಿ ಬಿನ್ ಲಾಡೆನ್ ಕುಖ್ಯಾತಿಯ ಉಗ್ರನನ್ನು ಬಂಧಿಸಿದ್ದಾರೆ.

ಅಂದು 26 ಜುಲೈ 2008ರಂದು ಬೆಳ್ಳಂಬೆಳಿಗ್ಗೆ ಇಡೀ ಗುಜರಾತ್ ಬೆಚ್ಚಿ ಬಿದ್ದಿತ್ತು. ಕಾರಣವೇನು ಗೊತ್ತಾ? ಗುಜರಾತಿನ ಅಹಮದಾಬಾದಿನಲ್ಲಿ ಅಂದು ಬರೋಬ್ಬರಿ 21 ಸರಣಿ ಬಾಂಬ ಸ್ಪೋಟವಾಗಿದ್ದವು.‌

ಇದರಿಂದ ಇಡೀ ಗುಜರಾತ್ ನಲುಗಿ ಹೋಗಿತ್ತು. ಅಹಮದಾಬಾದಿನ ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಸುಮಾರು ನೂರು ಜನ ಆ ಸ್ಪೋಟಕ್ಕೆ ಬಲಿಯಾಗಿದ್ದರು.‌ ಆ ಸರಣಿ ಸ್ಪೋಟದ ರೂವಾರಿ ಇದೇ ಬಿನ್ ಲಾಡೆನ್ ಕುಖ್ಯಾತಿಯ ಅಬ್ದುಲ್ ಸುಭಾನ್ ಖುರೇಷಿ.

ಅಂದಿನಿಂದ ಇಲ್ಲಿಯವರೆಗೂ ಆ ಉಗ್ರ ಭೂಗತನಾಗಿದ್ದ. ಸುಮಾರು ಜನರ ಸಾವಿಗೆ ಕಾರಣನಾಗಿದ್ದ ಉಗ್ರ ಇಂದು ದೆಹಲಿ ಪೋಲಿಸರ ಕಾರ್ಯಾಚರಣೆಯಿಂದ ಸಿಕ್ಕಿಬಿದ್ದಿದ್ದಾನೆ.

2008ರಲ್ಲಿ ಗುಜರಾತಿನ ಅಹಮಾದಾಬಾದಿನಲ್ಲಿ ಸರಣಿ ಬಾಂಬ್ ಸ್ಪೋಟದ ರೂವಾರಿಯಾದ ಈ ಅಬ್ದುಲ್ ಸುಭಾನ್ ಖುರೇಷಿ, ಅದಕ್ಕೂ ಮೊದಲು ಮುಂಬೈನಲ್ಲಿ ಒಂದು ಸ್ಪೋಟದ ಹಿಂದೆ ಇದ್ದನಂತೆ. 70 ನಿಮಿಷಗಳ ಕಾಲ ನಡೆದ ಈ ಸ್ಫೋಟದಲ್ಲಿ 56 ಮಂದಿ ಸಾವಿಗೀಡಾಗಿದ್ದರೆ, 200 ಮಂದಿ ಗಾಯಗೊಂದಿದ್ದರು.


ಅದು 2006ರ ಸಮಯ ಅಂದು ಸುಮಾರು ಮಧ್ಯಾಹ್ನದ ಸಮಯವಿರಬಹುದು. ಮುಂಬೈ ಲೋಕಲ್ ರೈಲು ಇನ್ನೇನು ಹೊರಡಬೇಕಿತ್ತು ಆಗಲೇ ಒಂದು ದೊಡ್ಡ ಶಬ್ದ ಕೇಳಿ ಬಂದಿತ್ತು.‌ ಇಡೀಯ ರೈಲು ನಿಲ್ದಾಣ ಕ್ಷಣ ಮಾತ್ರದಲ್ಲಿ ಸ್ಮಶಾನದಂತಾಗಿತ್ತು. ಅಂದು ಆದ ಶಬ್ದ ಬೇರೇನೂ ಅಲ್ಲ.

ಬಾಂಬ್ ಸ್ಪೋಟವಾಗಿತ್ತು. ಅಂದು ಸುಮಾರು ನೂರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಈ ಬಾಂಬ್ ಸ್ಪೋಟದ ಹಿಂದೆಯೂ ಭಾರತದ ಬಿನ್ ಲಾಡೆನ್ ಕುಖ್ಯಾತಿಯ ಅಬ್ದುಲ್ ಸುಭಾನ್ ಖುರೇಷಿಯ ಕೈವಾಡವಿದೆಯೆಂದು ಮುಂಬೈ ಪೋಲಿಸರಿಗೆ ಮಾಹಿತಿ ಸಿಕ್ಕಿತ್ತು.

2006ರಲ್ಲಿ ಮುಂಬೈಯ ಸಬ್ ಅರ್ಬನ್ ರೈಲ್ವೆಯಲ್ಲಿ 7 ಕಡೆಗಳಲ್ಲಿ 11 ನಿಮಿಷಗಳ ಕಾಲ ನಡೆಸಿದ ಬಾಂಬ್ ದಾಳಿಯಲ್ಲಿ 200 ಜನ ಮೃತರಾಗಿದ್ದರೆ, 700 ಗಾಯಗೊಂಡಿದ್ದರು.

ಅಷ್ಟೇ ಅಲ್ಲ ದೆಹಲಿ, ಬೆಂಗಳೂರು ಮತ್ತು ಮುಂಬೈಗಳಲ್ಲಿ ನಡೆದ ವಿವಿಧ ಬಾಂಬ್ ಪ್ರಕರಣಗಳಲ್ಲಿ ಬಿನ್ ಲಾಡೆನ್ ಕುಖ್ಯಾತಿಯ ಅಬ್ದುಲ್ ಸುಭಾನ್ ಖುರೇಷಿಯ ಹೆಸರು ಕೇಳಿ ಬಂದಿದೆ. ಅದು ಅಲ್ಲದೆ ಅಹಮಾದಾಬಾದಿನ ಸರಣಿ ಸ್ಪೋಟದ ಜವಾಬ್ದಾರಿಯನ್ನು ಇಂಡಿಯನ್ ಮುಜಾಹಿದ್ದೀನ್ ಹೊತ್ತಿತ್ತು. ಇಂಡಿಯನ್ ಮುಜಾಹಿದ್ದಿನ್ ಜೊತೆಗೂ ಉಗ್ರನ ನಂಟಿದೆ ಎಂಬ ಶಂಕಿಸಲಾಗಿದೆ.

ಬಿನ್ ಲಾಡೆನ್ ಕುಖ್ಯಾತಿಯ ಈ ಉಗ್ರ ಭೂಗತನಾಗಿ ವೇಷ ಬದಲಾಯಿಸಿಕೊಂಡು ಓಡಾಡುತ್ತಿದ್ದನಂತೆ.‌ ಹಲವಾರು ಬಾರಿ ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಈತ ಇಂದು ದೆಹಲಿ ಪೋಲಿಸರ ವಶದಲ್ಲಿದ್ದಾನೆ.

ಈತ ಮೊದಲು ಸಿಮಿ (SIMI-Students Islamic Movement of India ) ಎಂಬ ಉಗ್ರ ಸಂಘಟನೆಯಲ್ಲಿದ್ದ. ಈ ಸಿಮಿ ಉಗ್ರ ಸಂಘಟನೆ ದೇಶವಿರೋಧಿ ಕೆಲಸದಲ್ಲಿ ತೊಡಗಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಆ ಉಗ್ರ ಸಂಘಟನೆಯನ್ನು ನಿಷೇಧಿಸಿತ್ತು. ಆ ಬಳಿಕ ಈ ಉಗ್ರ ಅಬ್ದುಲ್ ಸುಭಾನ್ ಖುರೇಷಿ ಇಂಡಿಯನ್ ಮುಜಾಹಿದ್ದೀನ್ ಎಂಬ ಉಗ್ರ ಸಂಘಟನೆಗೆ ಸೇರಿದ್ದ. ಆನಂತರವೇ ಸರಣಿ ಸ್ಪೋಟಗಳಲ್ಲಿ ಭಾಗವಹಿಸಿದ್ದ.

ಉಗ್ರ ಸಂಘಟನೆಯನ್ನು ನಿಷೇಧಿಸಿದರೂ ಉಗ್ರರನ್ನು ನಿಷೇಧಿಸಲು ಸಾಧ್ಯವಿಲ್ಲ ಎಂಬುದು ಈತನ ಪ್ರಕರಣದಿಂದ ಸಾಬೀತಾಗಿದೆ. ವಾಸ್ತವದಲ್ಲಿ ಬರಿ ಸಂಘಟನೆಗಳನ್ನು ನಿಷೇಧಿಸಬಹುದು ಆದರೆ ಅದರೊಳಗೆ ಇರುವ ವಿಷಜಂತುಗಳನ್ನು ಹೇಗೆ ನಿಷೇಧಿಸಲು ಆಗುವುದಿಲ್ಲ ಎಂಬುದು ಸತ್ಯವಾಯಿತು. ಸಿಮಿ ನಿಷೇಧವಾಯಿತೆಂದು ಇಂಡಿಯನ್ ಮುಜಾಹಿದ್ದಿನ್ ಎಂಬ ಉಗ್ರ ಸಂಘಟನೆಗೆ ಸೇರಿ ಸರಣಿ ಬಾಂಬ್ ಸ್ಪೋಟಿಸಿದ್ದ.

ಅಂದಹಾಗೆ ಇಲ್ಲಿ ಇನ್ನೊಂದು ವಿಚಾರವನ್ನು ಹೇಳಲೇಬೇಕು. ಬಿನ್ ಲಾಡೆನ್ ಕುಖ್ಯಾತಿಯ ಈ ಉಗ್ರ ಅಬ್ದುಲ್ ಖುರೇಷಿಯನ್ನು ದೆಹಲಿ ಪೋಲಿಸರು ಸುಲಭವಾಗಿ ಬಂಧಿಸಿಲ್ಲ. ಆತನ ಕಾರ್ಯಾಚರಣೆಯ ವೇಳೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಕೊನೆಗೂ ಆ ಗುಂಡಿನ ಚಕಮಕಿಯಲ್ಲಿ ಯಶಸ್ಸು ಸಾಧಿಸಿದ ದೆಹಲಿ ಪೋಲಿಸರು ಉಗ್ರನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

  •  
    688
    Shares
  • 688
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com