Connect with us
Loading...
Loading...

ಪ್ರಚಲಿತ

ಪಾಕಿಸ್ತಾನವನ್ನ ಹಿಗ್ಗಾಮುಗ್ಗಾ ಝಾಡಿಸುವ ಬಾಲಿವುಡ್‌ನ ಖಡಕ್ ಸೂಪರ್ ಸ್ಟಾರ್ ಗೆ ಸಿಕ್ಕೇ ಬಿಟ್ತು ಬಿಜೆಪಿ ಟಿಕೆಟ್; ಅಷ್ಟಕ್ಕೂ ಆ ನಟ ಯಾರು ಗೊತ್ತೇ?

Published

on

 •  
 •  
 •  
 •  
 •  
 •  
 •  
 •  

ಪಂಜಾಬಿನ ಗುರುದಾಸಪುರ ದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಾಲಿವುಡ್ ಖಡಕ್ ನಟ ಸನಿ ಡಿಯೋಲ್ ಗೆ ಟಿಕೆಟ್ ಘೋಷಣೆಯಾಗಿದೆ. ಅದೇ ಅನುಪಮ್ ಖೇರ್ ರವರ ಪತ್ನಿ ಕಿರಣ್ ಖೇರ್ ರವರಿಗೆ ಚಂಢಿಗಢ ಲೋಕಸಭ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಇವರ ಹೊರತಾಗಿ ಸೋಮ್ ಪ್ರಕಾಶ್ ರವರಿಗೆ ಹೋಶಿಯಾಪುರದಿಂದ ಟಿಕೆಟ್ ಸಿಕ್ಕಿದೆ.

ದೇಶದಲ್ಲಿ ಒಂದು ಕಡೆ 117 ಸೀಟುಗಳಿಗಾಗಿ ಮೂರನೆ ಹಂತದ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಇತ್ತ ಬಿಜೆಪಿ ಬಾಲಿವುಡ್ ದಿಗ್ಗಜ ನಟ ಸನ್ನಿ ಡಿಯೋಲ್ ರವರನ್ನ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಇದೀಗ ಸನ್ನಿ ಡಿಯೋಲ್ ತಮ್ಮ ಖಡಕ್ ವ್ಯಕ್ತಿತ್ವದಿಂದ ಗದರ್ ಧೂಳೆಬ್ಬಿಸಲು ತಯಾರಾಗಿದ್ದಾರೆ. ಫಿಲಂ ನಲ್ಲಿ ತಮ್ಮ ಖಡಕ್ ಅಭಿನಯದಿಂದಲೇ ಜನಮಾನಸದಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡಿರುವ ಸನ್ನಿ ಡಿಯೋಲ್ ಇದೀಗ ರಾಜಕೀಯದಲ್ಲೂ ತಮ್ಮ ಕೆರಿಯರ್ ಶುರು ಮಾಡಲು ಹೆಜ್ಜೆಯನ್ನಿಟ್ಟಿದ್ದಾರೆ.


ಈ ಕುರಿತು ಮಾತನಾಡಿದ ಅವರು ನನ್ನ ತಂದೆ ಅಟಲ್ ಬಿಹಾರಿ ವಾಜಪೇಯಿಯವರ ಜೊತೆಗಿದ್ದರು. ಈಗ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಜೊತೆಗಿದ್ದೇನೆ. ರಾಜಕೀಯದಲ್ಲಿ ನಾನೀಗ ಪದಾರ್ಪಣೆ ಮಾಡಿದ್ದನ್ನ ನೋಡಿದ ನನ್ನ ತಂದೆ ನನಗೂ ಪ್ರಧಾನಿ ಮೋದಿಯವರ ರೀತಿಯಲ್ಲೇ ದೇಶದ ಜನತೆಯ ಸೇವೆ ಮಾಡು ಎಂದು ಆಶೀರ್ವಾದ ಮಾಡಿದ್ದಾರೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಚಾರವೇನೆಂದರೆ ಇದೀಗ ಲೋಕಸಭಾ ಚುನಾವಣೆಯ ಮೂರನೆಯ ಹಂತದಲ್ಲಿ ದೇಶಾದ್ಯಂತ 63.24% ವೋಟಿಂಗ್ ಮುಗಿದಿದೆ. ಮೂರನೆಯ ಹಂತದ ವೋಟಿಂಗ್ ಎರಡನೆಯ ಹಂತದ ಮತದಾನಕ್ಕಿಂತಲೂ ಅಧಿಕ ದಾಖಲಾಗಿದೆ. ಲೋಕಸಭಾ ಚುನಾವಣೆಯ ಮೊದಲನೆ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತದಾನವಾಗಿತ್ತು, 20 ರಾಜ್ಯಗಳಲ್ಲಿ ಒಟ್ಟು 69.43% ಮತದಾನವಾಗಿತ್ತು. ಇದು ಎರಡನೆಯ ಹಂತಕ್ಕಿಂತಲೂ 8% ಅಧಿಕ ಮತದಾನ ದಾಖಲಾಗಿತ್ತು.

ಗುಜರಾತ್, ಕೇರಳ, ಕರ್ನಾಟಕ ಸಮೇತ ಒಟ್ಟು 15 ರಾಜ್ಯಗಳಲ್ಲಿ ನೆನ್ನೆಯಷ್ಟೇ 117 ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದೆ. ಈ ಹಂತದಲ್ಲಿ ಒಟ್ಟು 63% ಮತದಾನವಾಗಿದೆ. ಪ್ರತಿ ಚುನಾವಣೆಯಂತೆ ಈ ಚುನಾವಣೆಯಲ್ಲೂ ಪಶ್ಚಿಮ ಬಂಗಾಳದಲ್ಲಿ 80% ಮತದಾನ ದಾಖಲಾಗಿದೆ. ಮೂರೂ ಹಂತದ ಚುನಾವಣೆಯಲ್ಲಿ ಭರ್ಜರಿಯಾದ ಮತದಾನವಾಗಿದ್ದು ಒಟ್ಟು 543 ಕ್ಷೇತ್ರಗಳ ಪೈಕಿ 303 ಕ್ಷೇತ್ರಗಳಿಗೆ ಈಗಾಗಲೇ ಮತದಾನ ಮುಕ್ತಾಯವಾಗಿದ್ದು ಇನ್ನೂ 4 ಹಂತದ ಮತದಾನ ಪ್ರಕ್ರಿಯೆ ಬಾಕಿಯಿದ್ದು ಮೇ 19 ರವರೆಗೆ ಚುನಾವಣೆ ನಡೆಯಲಿವೆ.

– Team Nationalist Views

 •  
 •  
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com