Connect with us
Loading...
Loading...

ಪ್ರಚಲಿತ

ಬಿಗ್ ನ್ಯೂಸ್: ತಾನು ರೈತರಪರ ಎಂದು ಮತ್ತೆ ಸಾಬೀತುಪಡಿಸಿದ ಮೋದಿ!! ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಿದ ಮೋದಿ!!

Published

on

 • 7.6K
 •  
 •  
 •  
 •  
 •  
 •  
 •  
  7.6K
  Shares

ಸಂಸತ್ತಿನ ಬಜೆಟ್ ಸೆಷನ್ ಆರಂಭವಾದ ದಿನ ಸದನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಂಸತ್ತಿನಲ್ಲಿ ಭಾಷಣ ಮಾಡಿದ್ದರು. ರಾಷ್ಟ್ರಪತಿಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಹಾಡಿ ಹೊಗಳಿದ್ದರು.

ರೈತರ ಶ್ರೇಯೋಭಿವೃದ್ಧಿಯ ಕುರಿತು ಪ್ರಧಾನಿ ಮೋದಿ ಕೈಗೊಂಡ ಹಾಗು ಬಜೆಟ್ ನಲ್ಲಿ ಬಂಪರ್ ಕೊಡುಗೆಗಳು ನೀಡುವುದರ ಬಗ್ಗೆ ಸುಳಿವು ನೀಡಿದ್ದರು.

ಪ್ರಧಾನಿ ಮೋದಿಯವರಿಗೆ ರೈತರ ಪರ ಇರುವ ಕಾಳಜಿಯನ್ನ ರಾಷ್ಟ್ರಪತಿಗಳು ಪ್ರಸ್ತಾಪಿಸಿದ್ದರು. ರೈತರ ಆದಾಯ 2022 ರ ವೇಳೆಗೆ ದುಪ್ಪಟ್ಟಾಗಿಸಲು ಮೋದಿ ಸರ್ಕಾರ ಶ್ರಮಪಡುತ್ತಿರುವುದರ ಬಗ್ಗೆ, ಅದು ಕಾರ್ಯಗತವಾದರೆ ರೈತರಿಗೆ ಹೇಗೆಲ್ಲಾ ಉಪಯೋಗವಾಗಲಿದೆ ಎನ್ನುವುದರ ಬಗ್ಗೆ ಮಾತನಾಡಿದ್ದರು.

ಇದರ ಜೊತೆ ಜೊತೆಗೆ ರೈತರ ಉತ್ಪಾದನೆಯಲ್ಲಿ ಶೇ. 38ರಷ್ಟು ಹೆಚ್ಚಳ ಕಂಡು ಬಂದಿದ್ದು, ಬೆಳೆ ಹಾನಿ ಪರಿಹಾರಕ್ಕಾಗಿ ‘ಕಿಸಾನ್ ಸಂಪದಾ’ ಯೋಜನೆಯನ್ನು ಜಾರಿಗೊಳಿಸಲಾಗುವುದರ ಬಗ್ಗೆಯೂ ಉಲ್ಲೇಖಿಸಿದ್ದರು.

ಇಂದು 5 ವರ್ಷದ ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡನೆಯಾಗಿದ್ದು ರೈತರಿಗೆ ಭರ್ಜರಿ ಗಿಫ್ಟ್ ಮೋದಿ ನೀಡಿದ್ದಾರೆ

ಅವುಗಳ್ಯಾವ್ಯಾವು ಅಂತ ಇಲ್ಲಿ ನೋಡಿ!!

-> ಈ ಬಾರಿಯ ಬಜೆಟ್ ನಲ್ಲಿ ಗ್ರಾಮಾಂತರ ಪ್ರದೇಶಗಳ ಗ್ರಾಮೀಣ ಅಭಿವೃದ್ಧಿಗೆ ಮೋದಿ ಸರ್ಕಾರ ಬರೋಬ್ಬರಿ 14.34 ಲಕ್ಷ ಕೋಟಿ ರೂ. ಅನುದಾನವನ್ನ ಮೀಸಲಿಟ್ಟಿದ್ದು, 2022 ರೊಳಗೆ ಭಾರತದ ರೈತರ ಆದಾಯವನ್ನು ಎರಡು ಪಟ್ಟು ಹೆಚ್ಚಿಸುವ ಗುರಿಯನ್ನು ಸಾಕಾರಗೊಳಿಸಲು ಮೋದಿ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ.

-> ರೈತರು ಮಳೆಗಾಗಿ ಕಾಯುತ್ತ ತಮ್ಮ ಹೊಲಗದ್ದೆಗಳು ಹಸಿರಾಗಿಸಲು ಪರದಾಡುವ ಪರಿಸ್ಥಿತಿಯು ಇನ್ನು ಮುಂದೆ ಇರುವುದಿಲ್ಲ. ಇದಕ್ಕೋಸ್ಕರ ಮೋದಿ ಸರ್ಕಾರ “ಆಪರೇಷನ್ ಗ್ರೀನ್” ಯೋಜನೆಗಂತಲೇ ಸುಮಾರು 500 ಕೋಟಿ ಮೀಸಲಿಟ್ಟಿದ್ದಾರೆ.

-> ಮೀನುಗಾರಿಕೆ, ಪಶುಸಂಗೋಪನೆ ನಡೆಸುವ ರೈತರಿಗಾಗಿ ಸುಮಾರು 10,000 ಕೋಟಿ ರೂ.ಗಳ ವೆಚ್ಚದಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಹಾಯ ನೀಡಲು ಮೋದಿ ಸರ್ಕಾರ ಕಟಿಬದ್ಧವಾಗಿದೆ.

-> ರೈತರಿಗೆ ನೀರಿನ ಬರ ನೀಗಿಸಲು ನೀರಾವರಿ ಯೋಜನೆಗಂತ 2,600 ಕೋಟಿ ರೂ.ಗಳನ್ನ ಎತ್ತಿಡಲಾಗಿದೆ.

-> ರೈತರು ತಾವು ಬೆಳೆದ ಬೆಳೆಗಳನ್ನ ಕೃಷಿ ಮಾರುಕಟ್ಟೆಯಲ್ಲೇ ಮಾರಬೇಕು. ಆದರೆ ಸದ್ಯ ಇರುವ ಕೃಷಿ ಮಾರುಕಟ್ಟೆಗಳು ಅಷ್ಟೊಂದು ಅಭಿವೃದ್ಧಿ, ಸೌಲಭ್ಯಗಳು ಇಲ್ಲದಿರುವುದನ್ನ ಮನಗಂಡ ಪ್ರಧಾನಿ ಮೋದಿ ಕೃಷಿ ಮಾರುಕಟ್ಟೆ ಅಭಿವೃದ್ಧಿ ಫಂಡ್ ಗೆ 2000 ಕೋಟಿ ರೂ. ಮೀಸಲಿಟ್ಟಿದ್ದಾರೆ.

-> ಗ್ರಾಮೀಣ ಭಾಗದಲ್ಲಿರುವ 20 ಸಾವಿರ ಕೃಷಿ ಉತ್ಪನ್ನ ಮಾರುಕಟ್ಟೆಗಳ ಆಧುನೀಕರಣ. ಎಪಿಎಂಸಿ ಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡುವದರಿಂದ ಸಣ್ಣ ರೈತರು ಸಹ ಉತ್ಪನ್ನಗಳನ್ನು ಆನ್ ಲೈನ್ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ.

-> ಕೃಷಿ ಉತ್ಪನ್ನಗಳ ರಫ್ತು 100 ಅರಬ್ ಡಾಲರ್‍ಗಳಿಗೆ ಹೆಚ್ಚಿಸುವ ಗುರಿಯನ್ನ ಮೋದಿ ಸರ್ಕಾರ ಹೊಂದಿದೆ

-> 2,000 ಕೋಟಿ ರೂ. ಅನುದಾನದಿಂದ ಕೃಷಿ ಮಾರುಕಟ್ಟೆ ಮತ್ತು ಸಂರಚನೆ ಮಾಡಲಾಗುವುದು.

-> ಮೀನುಗಾರರನ್ನ ಸಬಲೀಕರಣಗೊಳಿಸಲು ಮೀನುಗಾರಿಕೆ ಮತ್ತು ಪಶು ಸಂಗೋಪನಾ ಉದ್ಯಮಕ್ಕಾಗಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ ಮೋದಿ

-> ಕೃಷಿ ಸಾಲಕ್ಕಾಗಿ 11 ಲಕ್ಷ ಕೋಟಿ ಮೀಸಲು.

-> ಪೆಸ್ಟಿಸೈಡ್, ರಾಸಾಯನಿಕ ಗೊಬ್ಬರಗಳ ಹಾವಳಿಯಿಂದ ಕಂಗೆಟ್ಟಿರುವ ರೈತರ ಸಂಕಷ್ಟ ಬಗೆಹರಿಸಲು ಸರ್ಕಾರದಿಂದ ಜೈವಿಕ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತದೆ.

-> ಈರುಳ್ಳಿ, ಆಲೂಗಡ್ಡೆ, ಟೊಮೆಟೋ ಬೆಳೆಗಳಲ್ಲಿ ಹಸಿರು ಕ್ರಾಂತಿ ತಂದು ರೈತರ ಮೊಗದಲ್ಲಿ ನಗು ಮೂಡಿಸುವ ಕೆಲಸಕ್ಕೆ ಮೋದಿ ಕೈ ಹಾಕಿದ್ದಾರೆ.

ಒಟ್ಟಿನಲ್ಲಿ ತಮ್ಮ ಸರ್ಕಾರ ರೈತರ ಪರ ಅನ್ನೋದನ್ನ ಪ್ರಧಾನಿ ಮೋದಿ ಮತ್ತೆ ಸಾಬೀತು ಮಾಡಿದ್ದಾರೆ.

– Team Nationalist Views

 •  
  7.6K
  Shares
 • 7.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com