Connect with us
Loading...
Loading...

ಪ್ರಚಲಿತ

ಅಂತರಾಷ್ಟ್ರೀಯ ಮಟ್ಟದಲ್ಲಿ ಭೇಷ್ ಎನ್ನುವಂತಹ ಬಜೆಟ್ ನೀಡಿದ ಮೋದಿಜೀ!! ಅಂಥದ್ದೇನಿದೆ ಗೊತ್ತಾ ಈ ಬಜೆಟ್ ನಲ್ಲಿ?!!

Published

on

 • 1.7K
 •  
 •  
 •  
 •  
 •  
 •  
 •  
  1.7K
  Shares

ಅಂತೂ ಇಂತೂ ಮೋದಿ ಸರ್ಕಾರದ ಬಜೆಟ್ ಮಂಡನೆ ಆಗಿದೆ. ನಿರೀಕ್ಷೆಯ ಮಟ್ಟವನ್ನು ನಿಜವಾಗಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಷ್ಟು ವಿರೋಧಿಗಳನ್ನು ಹೊರತುಪಡಿಸಿದರೆ, ಉಳಿದವರೆಲ್ಲಾ ಈ ಬಜೆಟ್ ಬಗ್ಗೆ ಶ್ಲಾಘನೆಯನ್ನು ವ್ಯಕ್ತ ಪಡಿಸಿದ್ದಾರೆ. ಅದು ಅಲ್ಲದೇ ಮಾಧ್ಯಮದವರು ಒಳ್ಳೆ ಬಜೆಟ್ ಅಂತಲೇ ತೋರಿಸಿದ್ದಾರೆ. ಈ ಎಲ್ಲಾ ಮೂಲಗಳನ್ನು ಗಮನಿಸಿದರೆ ಈ ಬಾರಿಯ ಬಜೆಟ್ ನಿರೀಕ್ಷೆಯ ಮಟ್ಟವನ್ನು ತಲುಪಿದೆ ಅನ್ನಬಹುದು.

ಬರಾಕ್ ಒಬಾಮಾ ಅಮೆರಿಕಾದ ಅಧ್ಯಕ್ಷನಾಗಿದ್ದಾಗ ಘೋಷಿಸಿದ ಮಂಡನೆಯಂತೆಯೇ ಮೋದಿಯವರು ಒಬಾಮಾನನ್ನು ಅನುಸರಿಸಿ, ಅದೇ ರೀತಿಯ ಬಜೆಟ್ ನ್ನು ಮಂಡಿಸಿದ್ದಾರೆ ಎನ್ನಲಾಗುತ್ತಿದೆ.

ಬರಾಕ್ ಒಬಾಮಾ ಮೆಡಿಕಲ್ ಬಜೆಟ್ ನ್ನು ದೊಡ್ಡಾದಾಗಿ ಮಂಡಿಸಿದದ್ದರಂತೆ, ಅದರಂತೆ ಮೋದಿ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಮೆಡಿಕಲ್ ಬಜೆಟ್ ನ್ನು ವಿಶ್ವದಾಖಲೆಯಾಗುವಂತೆ ಮಂಡಿಸಿದೆ. ಅದೇನೆ ಇರಲಿ ಈ ಬಜೆಟ್ ನಿಂದ ಭಾರತೀಯರಿಗೆ ಒಳ್ಳೆಯದಾದರಷ್ಟೇ ಸಾಕು.

ಮೋದಿಯವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಯ್ತು. ಅವರ ಸರ್ಕಾರದ ಹಿಂದಿನ ಹಾಗೂ ಈಗಿನ ಬಜೆಟ್ ಯಾವ ಯಾವ ಕಡೆ ಗಮನ ಹರಿಸಿದೆ. ಅವರ ಸರ್ಕಾರದ ಇಲ್ಲಿಯವರೆಗೂ ಆದ ಬಜೆಟ್ ಗಳಿಂದಾದ ಸುಧಾರಣೆಗಳೇನು?

* ಬಡತನವನ್ನು ಹೋಗಲಾಡಿಸಲು ಕ್ರಮ ಕೈಗೊಂಡು ಅದರ ಕಡೆ ಗಮನ ಹರಿಸಿದ್ದಾರೆ.

* ಮೋದಿಯವರ ಸರ್ಕಾರ ಬಂದು ನಾಲ್ಕು ವರ್ಷಗಳಾಯ್ತು. ಸ್ವಚ್ಛತೆಯ ಕಡೆಗೆ ತುಂಬಾ ಗಮನ ಹರಿಸಿದ್ದಾರೆ. ಮುಂದೆಯೂ ಸ್ವಚ್ಛತೆಯ ಕಡೆಯ ಗಮನ ಹರಿಸುವ ಧ್ಯೇಯವನ್ನು ಹೊಂದಿದ್ದಾರೆ.

* ಮೋದಿಯವರು ಕೈಗೊಂಡ ಐತಿಹಾಸಿಕ ನಿರ್ಣಾಯಗಳಾದ ನೋಟ್ ಬ್ಯಾನ್ ಮತ್ತು ಜಿಎಸ್ ಟಿ ಗಳಿಂದ ಭಾರತದ ಆರ್ಥಿಕತೆ ಸುಧಾರಣೆ ಆಗುತ್ತಿದೆ.

* ಮಧ್ಯಮ ವರ್ಗದವರಿಗೆ ಮತ್ತು ಬಡ ವರ್ಗದವರಿಗೆ ಆವಾಸ್ ಯೋಜನೆ.

* ‎ಮೇಕ್ ಇನ್ ಇಂಡಿಯಾ ಎಂಬ ಹೊಸ ಸಂಚಲನವನ್ನುಂಟು ಮಾಡುವ ಯೋಜನೆ. ಇದರಿಂದ ಉದ್ಯಮ ಸ್ಥಾಪನೆ ಸುಲಭವಾಗಿದೆ. ಹಾಗೂ ಒಂದೇ ದಿನದಲ್ಲಿ ಕಂಪನಿ ನೊಂದಣಿಯಾಗುವಂತಾಗಿದೆ.

* ಬಡ ಕುಟುಂಬದಿಂದ ಪ್ರಧಾನಿ ಹುದ್ದೆಗೆ ಹೋದ ಮೋದಿಯವರಿಗೆ ರೈತನ ಪರಿಸ್ಥಿತಿ ಗೊತ್ತಿದೆ. ಆದ್ದರಿಂದ ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆಗಳನ್ನು ಕೊಟ್ಟಿದ್ದಾರೆ‌.

* ನಾನು ತಿನ್ನೋದಿಲ್ಲ, ನಿಮಗೂ ತಿನ್ನೋದಕ್ಕೆ ಬಿಡಲ್ಲವೆಂದು ಭ್ರಷ್ಟಾಚಾರಕ್ಕೆ ದೊಡ್ಡ ಪೆಟ್ಟನ್ನು ಮೋದಿ ಕೊಟ್ಟಿದ್ದಾರೆ. ನೋಟ್ ಬ್ಯಾನ್ ನಿಂದ ಭ್ರಷ್ಟಾಚಾರ ನಿಂತಿಲ್ಲವಾದರೂ ಕಡಿಮೆಯಂತೂ ಆಗಿದೆ.

* ದೇಶದ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿದೆ. ಈಗ ದೇಶದ ಜಿಡಿಪಿ ಶೇ. 7.2 ರಿಂದ 7.5ಕ್ಕೆ ಏರಿದೆ‌.

* ನೋಟ್ ಬ್ಯಾನ್ ನಿಂದ ನೇರ ನಗದು ವರ್ಗಾವಣೆ ಮೂಲಕ ವ್ಯವಹಾರದಲ್ಲಿ ಪಾರದರ್ಶಕತೆಯಾಗಿದೆ.

* ಬಡವರಿಗಾಗಿ ಜನರಿಕ್ ಔಷಧ ಕೇಂದ್ರಗಳ ಪ್ರಾರಂಭವಾಗಿವೆ.

ಈ ಬಾರಿಯ ಬಜೆಟ್ ನ ಸಂಕ್ಷಿಪ್ತ ವಿವರಣೆ:

* ಭಾರತ ಹಳ್ಳಿಗಳ ದೇಶ. ಭಾರತದಲ್ಲಿ ಸುಮಾರು ಲಕ್ಷ ಹಳ್ಳಿಗಳಿವೆ. ಅಷ್ಟು ಹಳ್ಳಿಗಳಿದ್ದರೂ ಕೂಡಾ ಸಾವಯವ ಕೃಷಿ ಪದ್ದತಿ ಕಡಿಮೆಯಾಗಿದೆ. ಆ ನಿಟ್ಟಿನಲ್ಲಿ ಮೋದಿ ಸರ್ಕಾರ ಸಾವಯವ ಕೃಷಿಗೆ ಆಧ್ಯತೆ ನೀಡಿದೆ. ಕೃಷಿ ಉಗ್ರಾಣ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ಆ ಮೂಲಕ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ.

* ಭಾರತವನ್ನು ಬಡತನ ಮುಕ್ತವಾಗಿಸಲು ಆಹಾರ ಸಂಸ್ಕರಣೆ ಮಾಡುವ ಯೋಜನೆ.
ಸುಮಾರು ಒಂದು ಸಾವಿರ ಹೆಕ್ಟೆರ್ ಪ್ರದೆಶದಲ್ಲಿ ಸಾವಯವ ಕೃಷಿಗೆ ಒತ್ತು ನೀಡಲಾಗಿದ್ದು, ರೈತರಿಗೆ ಉತ್ತಮ ಬೆಲೆ ನಿಗದಿಗೆ ಆಧ್ಯತೆ ನೀಡಲಾಗುವುದು. ಆಹಾರ ಸಂಸ್ಕರಣೆಗಾಗಿ ನೀಡುವ ಅನುದಾನದಲ್ಲಿ ಹೆಚ್ಚಳವಾಗಲಿದೆ.

* ರೈತ ತಾನು ಬೆಳೆದಿದ್ದನ್ನು ಕೃಷಿ ಮಾರುಕಟ್ಟಗೆ ಕೊಂಡೊಯ್ಯತ್ತಾನೆ. ಈ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಯ ಕಡೆ ಗಮನ ಕೊಡಲಾಗಿದೆ. ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ ಸರ್ಕಾರ ರೂ. 2,000 ಕೋಟಿ ಮೊತ್ತದಲ್ಲಿ ‘ಕೃಷಿ ಮಾರುಕಟ್ಟೆ ನಿಧಿ’ ನಿಗದಿ ಪಡಿಸಿದೆ. ಬಿದಿರು ಕೃಷಿಗಾಗಿ ನಿಧಿ ಮೀಸಲು.

* ಮೊದಲೆಲ್ಲಾ ಭಾರತದಲ್ಲಿ ಶ್ರೀಮಂತಿಕೆಯನ್ನು ಆ ಮನೆಯಲ್ಲಿ ಎಷ್ಟು ಗೋವುಗಳಿವೆ ಎನ್ನುವುದರ ಆಧಾರದ ಮೇಲೆ ಅಳೆಯುತ್ತಿದ್ದರಂತೆ. ಈ ನಿಟ್ಟಿನಲ್ಲಿ ಮೀನುಗಾರಿಕೆ, ಪಶುಸಂಗೋಪನೆಗೆ ಅನುದಾನ ನೀಡಲಾಗಿದೆ. ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಸೇರಿದಂತೆ ಹಲವು ಮೂಲಸೌಲಭ್ಯ ಅಭಿವೃದ್ಧಿಗೆ ರೂ. 10 ಸಾವಿರ ಕೋಟಿ ಅನುದಾನ.

* ಅಪರೇಷನ್ ಗ್ರೀನ್ ಎನ್ನುವ ಯೋಜನೆಯನ್ನು ‎500 ಕೋಟಿ ರೂಪಾಯಿಗಳ ಆನುದಾನದಲ್ಲಿ ಮಾಡಲಾಗುತ್ತದೆ.

* ಮೋದಿಯವರು ಅಧಿಕಾರಕ್ಕೆ ಬಂದಾಗ ಭಾರತೀಯರನ್ನು ಕುರಿತು ನಿಮಗೆ ಅವಶ್ಯಕತೆ ಇಲ್ಲದೇ ಇದ್ದರೂ ಗ್ಯಾಸ್ ಸಬ್ಸೀಡಿ ತೆಗೆದುಕೊಳ್ಳುತ್ತಿದ್ದರೆ ದೇಶಕ್ಕಾಗಿ ಬಿಟ್ಟುಕೊಡಿ, ನಾವದನ್ನು ಬಡವರಿಗೆ ಕೊಡುತ್ತೇವೆ ಎಂದು ಕೇಳಿಕೊಂಡಿದ್ದರು. ಮೋದಿಯವರ ಮಾತಿಗೆ ಓಗೊಟ್ಟು ಬರೋಬ್ಬರಿ 1 ಕೋಟಿ ಜನ ತಮ್ಮ ಗ್ಯಾಸ್ ಸಬ್ಸೀಡಿಯನ್ನು ಬಿಟ್ಟುಕೊಟ್ಟಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಬಡ ಕುಟುಂಬದ ಎಂಟು ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸೌಲಭ್ಯ ಕಲ್ಪಿಸಲಾಗುವುದು ಎಂದು ಜೇಟ್ಲಿ ಹೇಳಿದರು.

* ಹಳ್ಳಿಗಳ ನಾಡಾದ ಭಾರತದಲ್ಲಿ ಕೋಟ್ಯಾಂತರ ಜನ ರೈತರಿದ್ದಾರೆ. ರೈತ ಈ ದೇಶದ ಬೆನ್ನೆಲುಬು. ಆದರೆ ಅದೇ ರೈತ ಸಾಲದಿಂದಾಗಿ ಸಾಯುವಂತಾಗಿದೆ. ಇಡೀ ಜಗತ್ತಿಗೆ ಅನ್ನವನ್ನು ಕೊಡುವ ರೈತನಿಗೆ ಈ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ, ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶವನ್ನು ಈ ಬಾರಿಯ ಬಜೆಟ್ ಮಂಡನೆಯಲ್ಲಿ ಘೋಷಣೆಯಾಗಿದೆ.

* ಭಾರತದಲ್ಲಿರುವ ಪ್ರತಿಯೊಬ್ಬ ಭಾರತೀಯನಿಗೂ ಇರಲು ಒಂದು ಸೂರು ಇರಬೇಕು. ಇದು ಮೋದಿ ಸರ್ಕಾರದ ಕನಸು. ಅದಕ್ಕಾಗಿ 2022ರವರೆಗೆ ಸುಮಾರು 33 ಲಕ್ಷ ಮನೆ ನಿರ್ಮಾಣದ ಗುರಿಯನ್ನು ಈ ಬಾರಿಯ ಬಜೆಟ್ ನಲ್ಲಿ ಹೇಳಲಾಗಿದೆ.

* ಜಗತ್ತಿನಲ್ಲಿ ಅತೀ ಹೆಚ್ಚು ಯುವಕರನ್ನು, ಯುವತಿಯರನ್ನು ಹೊಂದಿದ ದೇಶ ಭಾರತ. ಚೀನಾ ಜನಸಂಖ್ಯೆಯಲ್ಲಿ ಜಾಸ್ತಿ ಇದ್ದರೂ ಕೂಡಾ, ಆ ದೇಶದಲ್ಲಿ ಯುವಕರ % ಕಡಿಮೆ ಇದೆ. ಭಾರತ ಅತೀ ಹೆಚ್ಚು ಯುವಕರನ್ನು, ಯುವತಿಯರನ್ನು ಹೊಂದಿದ ದೇಶ. ಈ ನಿಟ್ಟಿನಲ್ಲಿ ಅವರಿಗೆಲ್ಲಾ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯಕ್ಕೆ ಆದ್ಯತೆ. 20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಬ್ಯ್ಲಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಸೌಲಭ್ಯ. ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ನಿಲಯ.

* ಸ್ವಚ್ಛ ಭಾರತ ಇದು ಮೋದಿಯವರ ಕನಸಿನ ಕೂಸು. ಅವರು ಪ್ರಧಾನಿಯಾದ ತಕ್ಷಣವೇ ಸ್ವಚ್ಛ ಭಾರತದ ಕನಸನ್ನು ಭಾರತೀಯರೆದುರಿಗೆ ತೆರೆದಿಟ್ಟರು. ಪ್ರತಿಯೊಂದು ಮನೆಯಲ್ಲೂ ಶೌಚಾಲಯವಿರಬೇಕು. ಅದಕ್ಕೆ ಸರ್ಕಾರದ ಕಡೆಯಿಂದ ಹಣವಿನ ನೆರವು ಸಿಗುವ ಯೋಜನೆಯನ್ನು ತಂದರು‌. ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಆರು ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ.

* ಆರೋಗ್ಯ ಕ್ಷೇತ್ರಕ್ಕೆ ಸಂಭಂದಿಸಿದಂತೆ ರಾಷ್ಟ್ರೀಯ ಆರೋಗ್ಯ ಯೋಜನೆ ಮೂಲಕ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ರಾಷ್ಟ್ರೀಯ ಸ್ವಾಥ್ಯ ವಿಮಾ ಯೋಜನೆಗೆ 30 ಸಾವಿರ ಕೋಟಿ ಅನುದಾನವನ್ನು ಈ ಬಾರಿಯ ಬಜೆಟ್ ಘೋಷಿಸಲಾಗಿದೆ.

* ನವೋದಯ ಶಾಲೆಯ ಮಾದರಿಯಲ್ಲಿ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕೆ ಏಕಲವ್ಯ ವಸತಿ ನಿಲಯ ಸ್ಥಾಪನೆ.

* ಮೆಡಿಕಲ್ ಬಜೆಟ್ ಗೆ ಸಂಭಂದಿಸಿದಂತೆ ವಿಶ್ವದಾಖಲೆಯ ಬಜೆಟ್ ಮಂಡನೆಯಾಗಿದೆ. ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ ರೂ. 1200 ಕೋಟಿ ಅನುದಾನ ಬಿಡುಗಡೆ. ಅತಿಹೆಚ್ಚು ಮೊತ್ತದ ಆರೋಗ್ಯ ವಿಮೆ ಸೌಲಭ್ಯವನ್ನು 50 ಲಕ್ಷ ಜನರಿಗೆ ಈ ಯೋಜನೆಯಡಿ ನೀಡಲಾಗುವುದು. ಒಂದು ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಆರೋಗ್ಯ ವಿಮೆ ಒದಗಿಸಲಾಗುವುದು. ಈ ಯೋಜನೆ 10 ಕೋಟಿ ಕುಟುಂಬಗಳಿಗೆ ಸಿಗಲಿದೆ.

* ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ರೂ.56,619 ಕೋಟಿ ಹಾಗೂ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ರೂ. 39,135 ಕೋಟಿ ಘೋಷಣೆ ಮಾಡಲಾಗಿದೆ.

* ಈಗಿನ ಪರಿಸ್ಥಿತಿಯಲ್ಲಿ ಉದ್ಯೋಗದ ಸಮಸ್ಯೆಯಂತು ತುಂಬಾ ಆಗಿದೆ. ಈ ನಿಟ್ಟಿನಲ್ಲಿ ಸುಮಾರು 70 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗಿದೆ. ಸಣ್ಣ, ಅತೀ ಸಣ್ಣ, ಮಧ್ಯಮ ಗಾತ್ರದ ಉದ್ಯಮಕ್ಕೆ 3794 ಕೋಟಿ ಮೀಸಲು ಹಾಗು ಸಾರ್ವಜನಿಕ ಹೂಡಿಕೆಗೆ ಒತ್ತು ನೀಡಲಾಗುವುದು ಎಂದು ಘೋಷಣೆಯಾಗಿದೆ.

* ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸಲು, ಉದ್ದಿಮೆಗಳನ್ನು ಮಾಡಲು, ಹೊಸ ಹೊಸ ಯೋಜನೆಗಳಿಗೆ, ಕೌಶಲ್ಯವಿದ್ದರೆ ಅದಕ್ಕೆ ಅನುಗುಣವಾಗುವ ವಾತಾವರಣ ನಿರ್ಮಾಣ ಮಾಡಲು ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಿತ್ತು. ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರದ ಬಹುಮುಖ್ಯ ಯೋಜನೆಯಾದ ಮುದ್ರಾ ಯೋಜನೆಗೆ ರೂ. 3 ಲಕ್ಷ ಕೋಟಿ ಅನುದಾನ ನೀಡಲಾಗಿದೆ.

* ನೀರಿನ ದಾಹ ತಾಗಿಸಲು, ನೀರಿನ ಸಮಸ್ಯೆ ನೀಗಿಸಲು ಸುಮಾರು 500 ನಗರಗಳಲ್ಲಿನ ಮನೆಗಳಿಗೆ ನೀರು ಸೌಲಭ್ಯ ವಿತರಣೆಗಾಗಿ ಅಮೃತ್ ಯೋಜನೆ ಪ್ರಾರಂಭ.

* ಡಿಜಿಟಲ್ ಇಂಡಿಯಾ ಕೂಡಾ ಮೋದಿ ಸರ್ಕಾರದ ಒಂದು ಕನಸು. ಈ ನಿಟ್ಟಿನಲ್ಲಿ ದೇಶದ ಎಲ್ಲಾ ರೇಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗು ವೈಫೈ ಸೌಲಭ್ಯ ಅಳವಡಿಸಲಾಗುವುದು. ಅಲ್ಲದೆ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ 25,000 ಎಸ್ಕಲೇಟರ್ ವ್ಯವಸ್ಥೆ ಮಾಡಲಾಗುವುದು.

* ಈಗ ಇಂಟರ್ನೆಟ್ ಎಂಬುದು ಅತ್ಯವಶ್ಯವಾಗಿದೆ. ಇಂಟರ್ನೆಟ್ ಇಲ್ಲದೆ ಈಗ ಯಾವುದೇ ಕಲೆಸ ನಡೆಯುವುದಿಲ್ಲ ಎಂಬಂತಾಗಿದೆ.
ಎಲ್ಲಾ ಭಾಗದ ಜನರು ಈ ವ್ಯವಸ್ಥೆಯನ್ನು ಅನುಭವಿಸಬೇಕು. ಈ ನಿಟ್ಟಿನಲ್ಲಿ ದೇಶದ ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುವುದು. ಚೆನ್ನೈ ಐಐಟಿಯಲ್ಲಿ 5ಜಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವುದಾಗಿ ಪ್ರಸ್ತಾಪ. ಇದು ಈ ಬಾರಿಯ ಬಜೆಟ್ ಸಂಕ್ಷಿಪ್ತ ವಿವರಣೆ.

– Team Nationalist Views

(2018 Copyrights Reserved)

 •  
  1.7K
  Shares
 • 1.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com