Connect with us
Loading...
Loading...

ಪ್ರಚಲಿತ

ಶಾಕಿಂಗ್ ನ್ಯೂಸ್: ಕಾಂಗ್ರೆಸ್ಸಿಗೆ ಬೆಂಬಲ ನೀಡಲಿದೆಯಂತೆ ಪಾಕಿಸ್ತಾನ!!! ಕಾರಣವೇನು ಗೊತ್ತಾ?

Published

on

 • 3.7K
 •  
 •  
 •  
 •  
 •  
 •  
 •  
  3.7K
  Shares

ಪಾಕಿಸ್ತಾನ ಎಂದರೆನೇ ಭಾರತೀಯರು ಉರಿದು ಬೀಳುತ್ತಾರೆ. ಕಾರಣ ನಮ್ಮೆಲ್ಲರಿಗೂ ಗೊತ್ತಿರೋದೆ.

ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸುತ್ತ, ಮುಂದೆ ಎದೆಯೊಡ್ಡಿ ಹೋರಾಡಲಾಗದೆ ಶಂಡರ ಹಾಗೆ ಉಗ್ರರನ್ನ ಭಾರತದ ಒಳ ನುಸುಳಿಸಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸೋದು, ಸೇನಾ ಕ್ಯಾಂಪಗಳ ಮೇಲೆ ದಾಳಿ ನಡೆಸೋದು, ಕಲ್ಲು ತೂರಾಟಗಾರರಿಗೆ 500, 1000 ರೂ ನೀಡಿ ಸೇನೆಯ ಮೇಲೆ ಕಲ್ಲು ತೂರಾಟ ಮಾಡಿಸೋದು, ಭಾರತದಲ್ಲಿ ಭಯೋತ್ಪಾದನಾ ಕೃತ್ಯವೆಸಗಲು ತನ್ನ ಗೂಢಚಾರ ಸಂಸ್ಥೆ ಐ.ಎಸ್.ಐ ಮೂಲಕ ಭಯೋತ್ಪಾದಕರ ಬೆಂಬಲ ನೀಡುವುದು ಹೀಗೆ ತನ್ನ ದೇಶದ ಅಭಿವೃದ್ಧಿಗಿಂತಲೂ ಭಾರತದ ಸರ್ವನಾಶವನ್ನೇ ಬಯಸುವ ಪಾಪಿ ಪಾಕಿಸ್ತಾನದ ಬಗ್ಗೆಯಂತೂ ನಮಗೆಲ್ಲಾ ಗೊತ್ತೇ ಇದೆ.

ಆದರೆ ಯಾವಾಗ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿ ಬಂದರೋ ಆಗಿನಿಂದ ಪಾಕಿಸ್ತಾನದ ಹೊಟ್ಟೆಗೆ ಬೆಂಕಿಯಿಟ್ಟಂತಹ ಅನುಭವವಾಗಿದೆ. ಮೊದಲೆಲ್ಲಾ ದಿನ ಬೆಳಗಾದರೆ ಭಾರತದ ಆ ಊರಲ್ಲಿ ಬಾಂಬ್ ಬ್ಲ್ಯಾಸ್ಟ್ ಆಯ್ತು, ಈ ಊರಲ್ಲಿ ಭಯೋತ್ಪಾದಕ ದಾಳಿ ಆಯ್ತು ಅನ್ನುವ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡುತ್ತಿದ್ದವು ಆದರೆ ಮೋದಿ ಪ್ರಧಾನಿಯಾದಾಗಿನಿಂದ ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಒಂದೇ ಒಂದು ಭಯೋತ್ಪಾದನಾ ಕೃತ್ಯ ನಡೆದಿಲ್ಲ. ಕಾಶ್ಮೀರ ಹಾಗು ಪಂಜಾಬಿನ ಸೇನಾ ನೆಲೆಯ ಮೇಲಿನ ದಾಳಿಯನ್ನ ಹೊರತುಪಡಿಸಿ.

ಭಾರತದಲ್ಲಿ ತನ್ನ ಉಗ್ರಗಾಮಿ ಚಟುವಟಿಕೆ ನಡೆಸೋಕೆ ಆಗದಂತೆ ಮೋದಿ ಪಾಕಿಸ್ತಾನಕ್ಕೆ ಒಂದು ರೀತಿಯ ದಿಗ್ಬಂಧನ ಹಾಕಿಬಿಟ್ಟಿದ್ದಾರೆ. ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನ ಛೀ ಥೂ ಅಂತ ಉಗಿಯೋ ಹಾಗೆ ಪ್ರಧಾನಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಏನ್ ಮಾಡೋದು ಹೇಳಿ, ನಮ್ಮ ದೇಶದ ಅನ್ನವೇ ತಿಂದು ಇಲ್ಲಿಯೇ ತಮ್ಮ ಹೊಲಸು ರಾಜಕಾರಣ ಮಾಡುವ ಪಾಕಿಸ್ತಾನೀ ಪ್ರೇಮಿ ಪಕ್ಷಗಳಿಗೆ ನಮ್ಮ ದೇಶದಲ್ಲಿ ಬರವಿಲ್ಲ. ಕೇವಲ ಮೋದಿಯೊಬ್ಬರನ್ನ ವಿರೋಧ ಮಾಡಲಿಕ್ಕಾಗಿ ಈ ದೇಶದ್ರೋಹಿ ಪಕ್ಷಗಳು ದೇಶವನ್ನೇ ಪಾಕಿಸ್ತಾನಕ್ಕೆ ಬರೆದು ಕೊಡೋಕೂ ರೆಡಿಯಿದಾರೆ.

ಹೌದು ಕೇವಲ ಮೋದಿಯೊಬ್ಬರನ್ನ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸೋಕೆ ಅಂತಹ ಹಲವಾರು ಪ್ರಯತ್ನಗಳು ನಡೆದಿವೆ. ಅದರ ಉದಾಹರಣೆಗಳು ಹೀಗಿವೆ ನೋಡಿ.

* ಮಣಿಶಂಕರ್ ಅಯ್ಯರ್ ಎಂಬ ಕಾಂಗ್ರೆಸ್ಸಿನ ಮುದಿ ದೇಶದ್ರೋಹಿ ನಾಯಕ ಕಾಶ್ಮೀರದ ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆಗೆ ತೆರಳಿ ಅಲ್ಲಿ ಅವರನ್ನ ತಬ್ಬಿಕೊಂಡು ಮಾತನಾಡಿಸಿ ಬರುತ್ತಾನೆ.

* ಅದೇ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೂ ಹೋಗಿ ಅಲ್ಲಿನ ಮಾಧ್ಯಮಗಳಲ್ಲಿ ಮೋದಿಯನ್ನ ನಾವು ಭಾರತದಲ್ಲಿ ಸೋಲಿಸಬೇಕಾದರೆ ನಮಗೆ ನಿಮ್ಮ(ಪಾಕಿಸ್ತಾನ) ಬೆಂಬಲ ಬೇಕು ಅಂತ ಹೇಳಿ ಬರ್ತಾನೆ.

* ಉತ್ತರಪ್ರದೇಶದಲ್ಲಿ ಪಾಕಿಸ್ತಾನಿ ಪ್ರೇಮಿ ಜನ ತಮ್ಮ ಮನೆಗಳ ಮೇಲೆ ಪಾಕಿಸ್ತಾನ ಧ್ವಜ ಹಾರಿಸಿ ತಮ್ಮ ಪಾಕ್ ಪ್ರೇಮ ಮೆರೆಯುತ್ತಾರೆ.

* ಭಾರತದ ಬದ್ಧ ವೈರಿ ರಾಷ್ಟ್ರವಾದ ಚೀನಾದ ರಾಯಭಾರಿಯನ್ನ ರಾಹುಲ್ ಗಾಂಧಿ ಭೇಟಿಯಾಗಿ ಬರ್ತಾರೆ, ಅದನ್ನ ಪ್ರಶ್ನಿಸಿದರೆ ನಾನು ಚೀನಾ ರಾಯಭಾರಿಯನ್ನ ಭೇಟಿ ಆಗೇ ಇಲ್ಲ ಅಂತ ಹೇಳ್ತಾನೆ. ನಂತರ ಚೀನಾ ತನ್ನ ಆಫಿಷಿಯಲ್ ಸೈಟ್ ಒಂದ್ರಲ್ಲಿ ರಾಹುಲ್ ಭೇಟಿ ಬಗ್ಗೆ ಹಾಕಿಕೊಂಡಾಗ “ಹೌದು ಭೇಟಿಯಾಗಿದ್ದೇನೆ ಅದರಲ್ಲಿ ತಪ್ಪೇನಿದೆ” ಅಂತ ಉಲ್ಟಾ ಹೊಡಿತಾನೆ.

* ನರೇಂದ್ರ ಮೋದಿಯವರೇ ಹೇಳುವಂತೆ ಹಿಂದಿನ ಪ್ರಧಾನಿ ಪಾಕ್ ರಾಯಭಾರಿಯ ಮನೆಗೆ ತೆರಳಿ ಮಾತುಕತೆ ನಡೆಸಿ ಬರ್ತಾರೆ

ಹೀಗೆ ಲಿಸ್ಟ್ ಮಾಡ್ತಾ ಹೋದರೆ ನಮ್ಮ ದೇಶದ ಪಾಕ್ ಪ್ರೇಮಿ ರಾಜಕಾರಣಿಗಳ ಲಿಸ್ಟ್ ಬೆಳೆಯುತ್ತಲೇ ಹೋಗುತ್ತೆ.

ಪ್ರಧಾನಿ ಮೋದಿಯನ್ನ ಹೇಗಾದರೂ ಮಾಡಿ ಅಧಿಕಾರದಿಂದಿಳಿಸಿ ತಾವು ಮತ್ತೆ ಅಧಿಕಾರಕ್ಕೆ ಬರಬೇಕಂತ ಕಾಂಗ್ರೆಸ್ ಸರ್ವಪ್ರಯತ್ನವನ್ನೂ ಮಾಡುತ್ತಿದೆ..

ಈ ಮಧ್ಯೆ ಪಾಕಿಸ್ತಾನದಿಂದ ಕೂಡ ಕಾಂಗ್ರೆಸ್ಸಿಗೂ ಒಂದು ಬೆಂಬಲ ಸಿಕ್ಕಿಬಿಟ್ಟಿದೆ. ಅದೇನು ಗೊತ್ತಾ?

ಪಾಕಿಸ್ತಾನದ ಪತ್ರಕರ್ತನೊಬ್ಬ ಇದೀಗ ಕಾಂಗ್ರೆಸ್ಸಿಗೆ ಪಾಕಿಸ್ತಾನ ಬೆಂಬಲ ನೀಡಲಿದೆ ಎನ್ನುವ ಸ್ಪೋಟಲ ಮಾಹಿತಿಯೊಂದನ್ನ ಬಹಿರಂಗಪಡಿಸಿದ್ದಾನೆ.

ಆತ ಹೇಳ್ತಾನೆ “ಮೋದಿಯನ್ನ ಅಧಿಕಾರದಿಂದ ಇಳಿಸಬೇಕಾದರೆ ನಾವು(ಪಾಕಿಸ್ತಾನ) ಭಾರತದ ಕಾಂಗ್ರೆಸ್ಸಿಗೆ ಬೆಂಬಲ ನೀಡಬೇಕು” ಅಂತ.

ಆತನ್ಯಾರು ಗೊತ್ತೆ?

ಆತನ ಹೆಸರು ಮುಬಾಶೇರ್ ಲುಕಮಾನ್ ಅಂತ. ಈತ ಪಾಕಿಸ್ತಾನದ ದೊಡ್ಡ ಪತ್ರಕರ್ತರಲ್ಲೊಬ್ಬ. ಈತನಿಗೆ ಭಾರತದ ಬಗ್ಗೆ ಮೋದಿ ಬಗ್ಗೆ ಅದೆಷ್ಟು ದ್ವೇಷ ಇದೆಯೆಂದರೆ ಈತ ಮುಂದುವರೆದು ಹೇಳ್ತಾನೆ

“ಮೋದಿ ಎಷ್ಟು ಡೇಂಜರಸ್ ಇದಾರೆ ಅಂತ ನಾವಂದುಕೊಂಡಿದ್ದೇವೋ ಅದಕ್ಕಿಂತ ನೂರು ಪಟ್ಟು ಮೋದಿ ಡೇಂಜರಸ್ ವ್ಯಕ್ತಿಯಿದಾನೆ, ಮೋದಿ ತನ್ನ ನಿಜವಾದ ಮುಖವನ್ನ ಇನ್ನೂ ನಮಗೆ ತೋರಿಸಿಲ್ಲ. ಒಂದು ವೇಳೆ ಆತ ಇಂಡಿಯಾದಲ್ಲಿ 2019 ರ ಚುನಾವಣೆಯೇನಾದರೂ ಗೆದ್ದರೆ ನಮಗೆ ಮಾಡಲು ಕೆಲಸವೇ ಇಲ್ಲದಂಗೆ ಮಾಡಿಬಿಡ್ತಾನೆ”

ಇಷ್ಟೇ ಹೇಳಿದ್ದರೆ ಅಚ್ಚರಿಪಡಬೇಕಾಗಿರಲಿಲ್ಲ ಆದರೆ ಮುಂದುವರೆದು ಆತ ಹೇಳ್ತಾನೆ

“2019 ರಲ್ಲಿ ಮೋದಿ ಇಂಡಿಯಾದಲ್ಲಿ ಸೋಲು ಕಾಣಬೇಕು, ಆತ ಸೋತರೆ ಪಾಕಿಸ್ತಾನಕ್ಕೆ ಅದೊಂದು ದೊಡ್ಡ ಜಯವಾಗುತ್ತೆ ಹಾಗು ಪಾಕಿಸ್ತಾನ ಮತ್ತೆ ಬಲಿಷ್ಟವಾಗಬಹುದು. ಒಂದು ವೇಳೆ ಮೋದಿ ಮತ್ತೆ ಗೆದ್ದುಬಿಟ್ಟರೆ ಜಗತ್ತಿನ ಜನ ಪಾಕಿಸ್ತಾನವೆಂಬ ಒಂದು ರಾಷ್ಟ್ರವೂ ಇದೆ ಅನ್ನೋದನ್ನೂ ಮರೆತುಬಿಡ್ತಾರೆ”

ಮುಬಾಶೇರ್ ಹೇಳುವ ಪ್ರಕಾರ “2019 ರಲ್ಲಿ ಮೋದಿಯನ್ನ ಸೋಲಿಸೋಕೆ ನಾವು(ಪಾಕಿಸ್ತಾನ) ಯಾವೆಲ್ಲಾ ಪ್ರಯತ್ನ ಮಾಡಬೇಕೋ ಆ ಅಸ್ತ್ರಗಳನ್ನೆಲ್ಲಾ ಪ್ರಯೋಗ ಮಾಡಿಬಿಡಬೇಕು. ಭಾರತದಲ್ಲಿ ಯಾರ್ ಯಾರು ಮೋದಿ ವಿರುದ್ಧ ಧ್ವನಿಯೆತ್ತಿದ್ದಾರೋ ಅವರೆಲ್ಲರಿಗೂ ನಾವು ಬೆಂಬಲ ನೀಡಿ ಮೋದಿಯನ್ನ ಸೋಲಿಸಬೇಕು”

ಇದನ್ನ ಆಧಾರರಹಿತವಾಗಿ ನಾವು ಹೇಳ್ತಿಲ್ಲ, ಈ ವಿಷ್ಯವನ್ನ ಸ್ವತಃ ಮುಬಾಶೇರ್ ಟ್ವೀಟ್ ಮಾಡಿದ್ದಾನೆ.

ಬರೀ ಮುಬಾಶೇರ್ ಮಾತ್ರ ಹೀಗೆ ಹೇಳಿಲ್ಲ, ಇದಕ್ಕೂ ಮುನ್ನ ಪಾಕಿಸ್ತಾನದ ಹಿಂದಿನ ಸೇನಾ ಅಧಿಕಾರಿಯಾಗಿದ್ದ ತಾರೀಕ್ ಪೀರಜಾದಾ ಅಂತೂ ಓಪನ್ನಾಗಿ
“ಮೋದಿಯನ್ನ ನಾವು ತಡೆಯಬೇಕಾದರೆ ಭಾರತದಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರೀವಾಲರಂಥವರನ್ನ ಬೆಂಬಲಿಸಬೇಕು. ಇದರ ಜೊತೆ ಜೊತೆಗೆ ಹಿಂದುಗಳ ಮಧ್ಯೆ ಜಾತಿ ಸಂಘರ್ಷ ಮಾಡಿಸಿ ದಂಗೆಯೆಬ್ಬಿಸಬೇಕು” ಅಂತ ಅಂದಿದ್ದ.

ಪಾಕಿಸ್ತಾನ ಸೇನೆಯ ಮಾಜಿ ರಾಷ್ಟ್ರಪತಿಯಾಗಿದ್ದ ಪರ್ವೇಜ್ ಮುಷರಫ್ ಹೇಳ್ತಾನೆ “ಪಾಕಿಸ್ತಾನ ವಿಶ್ವದಲ್ಲಿ ಕಳೆದುಕೊಂಡಿರುವ ತನ್ನ ಮಾನ ಮರ್ಯಾದೆ ಮತ್ತೆ ವಾಪಸ್ ಪಡೆಯಬೇಕಾದರೆ ನಾವು ಮೋದಿಯನ್ನ ಮೊದಲು ಇಂಡಿಯಾದಲ್ಲಿ ಸೋಲಿಸಬೇಕು”

ಈ ಹೇಳಿಕೆಗಳನ್ನೆಲ್ಲಾ ನೋಡದ್ರೆ ಒಂದು ವಿಷಯವಂತೂ ಸ್ಪಷ್ಟವಿದೆ ಪಾಕಿಸ್ತಾನ, ಅಲ್ಲಿನ ಪತ್ರಕರ್ತರು, ಅಲ್ಲಿನ ಸೇನೆ, ಅಲ್ಲಿನ ಬುದ್ಧಿಜೀವಿಗಳು ಇಂಡಿಯಾದಲ್ಲಿ ಮೋದಿಯನ್ನ ಸೋಲಿಸಿ ಮತ್ತೆ ಕಾಂಗ್ರೆಸ್ಸನ್ನ ಅಧಿಕಾರಕ್ಕೆ ವಾಪಸ್ ತರಲು ರಣಹದ್ದುಗಳಂತೆ ಕಾದು ಕುಳಿತಿದ್ದಾರೆ.

ಕಾರಣವಿಷ್ಟೇ, ಕಾಂಗ್ರೆಸ್ ಭಾರತದಲ್ಲಿ ಅಧಿಕಾರಕ್ಕೆ ಬಂದರೆ ತಮ್ಮ ಭಾರತದ ಸರ್ವನಾಶದ ಕನಸು ಸಲೀಸಾಗುತ್ತೆ ಅನ್ನೋದು ಅವರ ಲೆಕ್ಕಾಚಾರ.

ಪಾಕಿಸ್ತಾನದಲ್ಲಿ ಯಾವ ರೀತಿಯಾಗಿ ಮೋದಿಯನ್ನ ಸೋಲಿಸೋಕೆ ಪ್ಲ್ಯಾನ್ ಮಾಡಿಕೊಂಡು ಕೂತಿದ್ದಾರೋ ಅದೇ ರೀತಿಯಲ್ಲಿ ಭಾರತದಲ್ಲೂ ಮೋದಿ ವಿರೋಧಿಗಳು ಪ್ಲ್ಯಾನ್ ಮಾಡಿಕೊಂಡು ಮೋದಿಯನ್ನ ಶತಾಯಗತಾತವಾಗಿ ಸೋಲಿಸೋಕೆ ದೇಶದ್ರೋಹಿ ರಣತಂತ್ರ ರೂಪಿಸುವಲ್ಲಿ ಕಾರ್ಯನಿರತರಾಗಿದ್ದಾರೆ.

ಈಗ ನೀವೇ ಹೇಳಿ ನೀವು ಮೋದಿಜೀಯ ಬೆಂಬಲಕ್ಕೆ ನಿಲ್ತೀರೋ ಅಥವ ಪಾಕಿಸ್ತಾನಿ ಬೆಂಬಲಿತ ಕಾಂಗ್ರೆಸ್ಸಿನ ಬೆಂಬಲಕ್ಕೆ ನಿಲ್ತೀರೋ?

– Team Nationalist Views
(©2018 Copyrights Reserved)

 •  
  3.7K
  Shares
 • 3.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com