Connect with us
Loading...
Loading...

ಪ್ರಚಲಿತ

ಬಿಗ್ ಬ್ರೇಕಿಂಗ್: ಚಂದನ್ ಗುಪ್ತಾನನ್ನ ಕೊಂದ ಜಿಹಾದಿಯನ್ನ ಜೈಲಿಗಟ್ಟಿದ ಯೋಗಿ ಸರ್ಕಾರ!!

Published

on

  • 3.2K
  •  
  •  
  •  
  •  
  •  
  •  
  •  
    3.2K
    Shares

ಜನವರಿ 26ರಂದು ಉತ್ತರ ಪ್ರದೇಶದ ಕಾಸ್ಗಂಜ್ ಎಂಬ ನಗರದಲ್ಲಿ ಹಾಡುಹಗಲೇ ದೇಶಪ್ರೇಮಿಯೊಬ್ಬ ಹುಡುಗನನ್ನು ಮತಾಂಧನೊಬ್ಬ ಕೊಂದುಹಾಕಿದ್ದ. ಈ ಪ್ರಕರಣದಿಂದ ಉತ್ತರ ಪ್ರದೇಶಕ್ಕೆ ಉತ್ತರ ಪ್ರದೇಶವೇ ಬೆಚ್ಚಿಬಿದ್ದಿತ್ತು. ದೇಶಪ್ರೇಮಿ ಯುವಕ ಚಂದನ ಗುಪ್ತಾ ವಂದೇ ಮಾತರಂ ಘೋಷಣೆ ಕೂಗಿದ್ದಕ್ಕೆಯೇ ಮತಾಂಧ ಆ ದೇಶಪ್ರೇಮಿ ಯುವಕನನ್ನು ಕೊಂದಿದ್ದ.‌

ಇದರಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಿಂದೂ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯಾನಾಥರು ಸಿಡಿದೆದ್ದು ಘರ್ಜಿಸಿ, ಮತಾಂಧ ದೇಶದ್ರೋಹಿ ಎಲ್ಲೇ ಅಡಗಿದ್ದರೂ ಹುಡುಕಿ ತನ್ನಿ ಎನ್ನುವ ಆದೇಶವನ್ನು ಕೊಟ್ಟಿದ್ದರು. ಆ ಆದೇಶದಂತೆ ಇವತ್ತು ಆ ಮತಾಂಧ ದೇಶದ್ರೋಹಿಯನ್ನು ಬಂಧಿಸಿದ್ದಾರೆ.

ಅಷ್ಟಕ್ಕೂ ಏನಿದು ಪ್ರಕರಣ???

ಜನವರಿ 26ರಂದು ನಾವೆಲ್ಲಾ ಗಣರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದರೆ ಅತ್ತ ಉತ್ತರ ಪ್ರದೇಶದಲ್ಲಿ ಮತಾಂಧರು ಅಟ್ಟಹಾಸವನ್ನು ಮೆರೆದಿದ್ದರು. ನಮ್ಮ ಸಂಭ್ರಮಾಚರಣೆಯಲ್ಲಿ ಮತಾಂಧರು ಮೆರೆದಿದ್ದ ಅಟ್ಟಹಾಸ ಗೊತ್ತಾಗಲೇ ಇಲ್ಲ.

ಇಡೀ ದೇಶಕ್ಕೆ ದೇಶವೇ ರಾಜಪಥ್ ನಲ್ಲಿ ನಡೆಯುತ್ತಿರು ಗಣರಾಜ್ಯೋತ್ಸವದ ಆಚರಣೆ, ಪರೇಡ ನೋಡುತ್ತಿದ್ದೆವು. ನಾವೆಲ್ಲಾ ಸಂಭ್ರಮಾಚರಣೆಯಲ್ಲಿ ಇರುವುದರಿಂದಲೋ ಏನೋ ಉತ್ತರ ಪ್ರದೇಶದಲ್ಲಿ ಗಲಭೆ ಎಬ್ಬಿಸಿ ನಮ್ಮ ಸಂಭ್ರಮಾಚರೆಣೆಯನ್ನು ಮುರಿಯಲು ಮತಾಂಧರು ಪ್ರಯತ್ನಿಸಿದ್ದರು.

ಅಷ್ಟಕ್ಕೂ ಅಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು ಏನು ಗೊತ್ತಾ?

ಉತ್ತರ ಪ್ರದೇಶದಲ್ಲಿ ನಡೆದ ಗಲಭೆಯೂ ಇದೇ ಘೋಷಣೆಗಾಗಿ‌. ಜನವರಿ 26ರಂದು ಉತ್ತರ ಪ್ರದೇಶದಲ್ಲಿ ದೇಶಭಕ್ತರ ತಂಡವೊಂದು ತಿರಂಗಯಾತ್ರೆಯನ್ನು ಹಮ್ಮಿಕೊಂಡಿದ್ದರು.

ತಿರಂಗ ಯಾತ್ರೆ ಹಮ್ಮಿಕೊಂಡದ್ದು ತಪ್ಪಾ? ಗಣರಾಜ್ಯೋತ್ಸವದ ಆಚರಣೆ ಮಾಡುವುದು ತಪ್ಪಾ? ಮತಾಂಧರಿಗೆ ಅದು ತಪ್ಪಾಗಿ ಕಾಣಿಸಿತು. ಕಾರಣವಿಷ್ಟೆ ಅವರು ದೇಶಕ್ಕೆ ನಿಷ್ಠರಾಗಿಲ್ಲ. ದೇಶ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಖಂಡಿತವಾಗಿಯೂ ಇಷ್ಟವಾಗಲ್ಲ.

ಅಂದು ದೇಶಭಕ್ತರ ತಂಡವೊಂದು ಉತ್ತರ ಪ್ರದೇಶದ ಕಾಸ್ಗಂಜ್ ಎಂಬ ನಗರದಲ್ಲಿ ತಿರಂಗಯಾತ್ರೆ ಹಮ್ಮಿಕೊಂಡು, ವಂದೇ ಮಾತರಂ ಮತ್ತು ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಮೊಳಗಿಸುತ್ತಾ ಬೀದಿ ಬೀದಿಗಳಲ್ಲಿ ತಿರಂಗಾಯಾತ್ರೆ ಮಾಡುತ್ತಿದ್ದರು. ಈ ತಿರಂಗಾ ಯಾತ್ರೆ ಮತ್ತು ಘೋಷಣೆಗಳು ಆ ನಗರದಲ್ಲಿನ ಮತಾಂಧರಿಗೆ ಇಷ್ಟವಾಗಲಿಲ್ಲ. ಏಕಾಏಕಿ ಆ ದೇಶದ ಭಕ್ತರ ಮೇಲೆ ಮತಾಂಧರು ದಾಳಿ ನಡೆಸಿಬಿಟ್ಟರು‌.

ಒಮ್ಮೆಲೆ ಮತಾಂಧರ ಗುಂಡಿನ ಶಬ್ದ ಕೇಳಿಸಿತು. ಆ ಗುಂಡು ದೇಶಭಕ್ತ ಚಂದನ ಗುಪ್ತಾನ ಎದೆಗೆ ತಾಗಿತು. ಆ ದೇಶಭಕ್ತ ಯುವಕ ಒಂದೇ ಮಾತರಂ ಘೋಷಣೆಯೊಂದಿಗೆ ನೆಲಕ್ಕುರುಳಿ ತಾಯಿ ಭಾರತಾಂಬೆಗಾಗಿ ಪ್ರಾಣಾರ್ಪಣೆ ಮಾಡಿಬಿಟ್ಟ. ಆಗ ಬ್ರಿಟಿಷರು ಇದೇ ರೀತಿಯಲ್ಲಿ ಕ್ರಾಂತಿಕಾರಿಗಳ ಮೇಲೆ ಗುಂಡಿನ ಮಳೆ ಸುರಿಸುತ್ತಿದ್ದರು. ವಂದೇ ಮಾತರಂ, ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗುವುದೇ ಮಹಾಪರಾಧ ಎನ್ನುವಂತೆ ಬ್ರಿಟಿಷರು ಮಾಡಿಬಿಟ್ಟಿದ್ದರು‌.

ಆದರೆ ಈಗ ನಾವು ಸ್ವಾತಂತ್ರ್ಯದ ಗಾಳಿಯನ್ನು ಸೇವಿಸುತ್ತದ್ದೇವೆ. ಈಗಲೂ ಬ್ರಿಟಿಷರ ಹಾಗೆ ಮತಾಂಧರು ವಂದೇ ಮಾತರಂ, ಭಾರತ ಮಾತಾ ಕೀ ಜೈ ಘೋಷಣೆ ಕೇಳಿದರೆ ಉರಿದುಬೀಳ್ತಾರೆ. ಉರಿದು ಬಿದ್ದರೆ ಉರಿದು ಬೀಳಲಿ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಗುಂಡಿನ ಮಳೆ ಸುರಿಸಿದಂತೆ ಇಂದು ಮತಾಂಧರು ಗುಂಡಿನ ಮಳೆ ಸುರಿಸುತ್ತಿದ್ದಾರೆ ಅನ್ನುವುದೇ ವಿಪರ್ಯಾಸ.

ನರೇಂದ್ರ ಮೋದಿಯವರು ದೆಹಲಿಯ ರಾಜಪಥ್ ನಲ್ಲಿ ಆಸಿಯಾನ್ ರಾಷ್ಟ್ರಗಳ 10 ಮುಖ್ಯ ಅತಿಥಿಗಳೊಂದಿಗೆ ಗಣರಾಜ್ಯೋತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದರೆ, ನಾವೆಲ್ಲಾ ಅದನ್ನೇ ನೋಡುತ್ತಾ ಸಂತೋಷ ಪಡುತ್ತಿದ್ದೆವು. ಆದರೆ ಇತ್ತ ಉತ್ತರಪ್ರದೇಶದಲ್ಲಿ ಮತಾಂಧರು ಅಟ್ಟಹಾಸ ಮೆರೆದು ಬಿಟ್ಟಿದ್ದರು. ಇಡೀ ಉತ್ತರ ಪ್ರದೇಶ ಬೆಚ್ಚಿಬಿದ್ದು, ವಂದೇ ಮಾತರಂ ಮತ್ತು ಭಾರತ ಮಾತಾ ಕೀ ಜೈ ಎನ್ನುವುದೇ ತಪ್ಪಾ ಅಂತ ಕೇಳಿದ್ದರು.

ಇಡೀ ರಾಷ್ಟ್ರ ಕೆಲ ತಿಂಗಳುಗಳಿಂದ ಉತ್ತರ ಪ್ರದೇಶದ ಕಡೆ ನೋಡುತ್ತಲಿದೆ. ಕಾರಣವಿಷ್ಟೇ ಸಹೃದಯಿ ಸಂತ ಯೋಗಿ ಆದಿತ್ಯಾನಾಥರು ಉತ್ತರ ಪ್ರದೇಶದಲ್ಲಿ ಹೊಸ ಸಂವಲನ ಮೂಡಿಸಿ ಆ ಉತ್ತರ ಪ್ರದೇಶವನ್ನು ಆಳುತ್ತಿದ್ದಾರೆ‌. ವಂದೇ ಮಾತರಂ, ಭಾರತ ಮಾತಾ ಕೀ ಜೈ ಎಂಬ ಘೋಷಣೆಯಿಂದ ದೇಶಭಕ್ತ ಯುವಕ ಮಡಿದಿದ್ದ ಸುದ್ದಿ ಯೋಗಿ ಆದಿತ್ಯಾನಾಥರಿಗೆ ಆಘಾತವನ್ನುಂಟು ಮಾಡಿತ್ತು.

ಆಗಲೇ ನೋಡಿ ಸಹೃದಯಿ ಸಂತ ಹಿಂದೂ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯಾನಾಥರು ಸಿಡಿದೆದ್ದದ್ದು‌. ತಕ್ಷಣವೇ ಮತಾಂಧರು ಯಾವ ಮೂಲೆಯಲ್ಲಿ ಅಡಗಿದ್ದರೂ ಬಿಡಬೇಡಿ ಎಂದು ಆದೇಶ ಕೊಟ್ಟರು. ಯಾವುದೇ ಕಾರಣಕ್ಕೂ ಮತಾಂಧ ಆರೋಪಿಯ ಮೇಲೆ ಕರಣೆ ತೋರಬೇಡಿ, ಆತ ಯಾವ ಬಿಲದಲ್ಲಿ ಅಡಗಿದ್ದರೂ ಒದ್ದು ಬಂಧಿಸಿ, ತಕ್ಕ ಪಾಠ ಕಲಿಸಿ ಎಂಬ ಆದೇಶ ಕೊಟ್ಟಿದ್ದರು.

ಮೊದಲೇ ಯೋಗಿ ಆದಿತ್ಯಾನಾಥರು ದೇಶದ್ರೋಹಿಗಳನ್ನು ಕಂಡರೆ ಉರಿದು ಬೀಳುತ್ತಾರೆ. ಅಂತಹುದರಲ್ಲಿ ದೇಶದ್ರೋಹಿಯೊಬ್ಬ ದೇಶಪ್ರೇಮಿಯನ್ನು ಅದು ವಂದೇ ಮಾತರಂ ಘೋಷಣೆಗಾಗಿ ಕೊಂದಿದ್ದಾನೆಂದರೆ ಸುಮ್ಮನಿರುತ್ತಾರಾ? ಈಗಾಗಲೇ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯಾನಾಥರು ಅಧಿಕಾರಕ್ಕೆ ಬಂದಮೇಲೆ ಸರಿಸುಮಾರು 1000ಕ್ಕಿಂತಲೂ ಅಧಿಕ ಗೂಂಡಾಗಳನ್ನು ಎನ್‍ಕೌಂಟರ್ ಮೂಲಕ ಕೊಂದು ಬಿಸಾಕಿದವರು.

ಯೋಗಿ ಆದಿತ್ಯಾನಾಥರು ಆ ಮತಾಂಧ ದೇಶದ್ರೋಹಿಯ ಹೆಡೆಮುರಿಕಟ್ಟಲು ಹೇಗೆ ಕಾರ್ಯಾಚರಣೆಗೆ ಆದೇಶ ಕೊಟ್ಟಿದ್ದರು ಗೊತ್ತಾ?

ಒಬ್ಬ ದ್ರೋಹಿಯನ್ನು ಹುಡುಕಲು ಯಾವ ರೀತಿ ಪೊಲೀಸ್ ಪಡೆಯನ್ನು ಉಪಯೋಗಿಸುತ್ತಿದ್ದಾರೆ ಎಂದರೆ, ತನ್ನ ಸರ್ಕಾರದ ಅರೆ ಮಿಲಿಟರಿ ಪಡೆಯನ್ನೇ ಹಂತಕನ ಬಂಧನಕ್ಕೆ ನಿಯೋಜಿಸಿದ್ದಾರು. ಕರ್ಫ್ಯೂ ಜಾರಿಗೊಳಿಸಿದ ಸಂದರ್ಭದಲ್ಲಿ ಈ ಪಡೆಯನ್ನು ನಿಯೋಜಿಸುವು ಸಾಮಾನ್ಯ. ಆದರೆ ಓರ್ವ ಹಂತಕನನ್ನು ಬಂಧಿಸಲು ಈ ರೀತಿ ಸೈನ್ಯವನ್ನೇ ನಿಯೋಜಿಸಿದ್ದರಲ್ಲ ಅದು ಭಾರೀ ಅಪರೂಪ.

ಚಂದನ್ ಗುಪ್ತಾ ಹತ್ಯೆಯ ಆರೋಪಿಗಳ ಪತ್ತೆಹಚ್ಚಲು ತನ್ನ ಸೈನ್ಯವನ್ನೇ ಆ ನಗರದಲ್ಲಿ ಇರಿಸಿಬಿಟ್ಟಿತ್ತು. ಕಸ್ಗಂಜ್ ಎಂಬ ನಗರದಲ್ಲಿರುವ ಪೇಟೆಯಲ್ಲಿರುವ ಗಲ್ಲಿ ಗಲ್ಲಿಯನ್ನೂ ಬಿಡದೆ ಹಂತಕನಿಗೆ ಬಲೆ ಬೀಸಿದ್ದಾರು. ಆ ಗಲ್ಲಿಯಿಂದ ಆರೋಪಿ ತಪ್ಪಿಸಿಕೊಂಡು ಹೊರಹೋಗದಂತೆ ನೋಡಿಕೊಳ್ಳಲು ಡ್ರೋನ್ ಕ್ಯಾಮರಾವನ್ನು ಉಪಯೋಗಿಸುತ್ತಿದ್ದಾರು. ಹಂತಕ ಯಾವ ಮೂಲೆಯಲ್ಲೇ ಅವಿತಿದ್ದರೂ ನಾವು ಬಿಡೋದಿಲ್ಲ ಎಂಬ ಸಂದೇಶವನ್ನೇ ಸಾರಿದ್ದರು.

ಯೋಗಿ ಆದಿತ್ಯಾನಾಥರು ಬರೀ ಘರ್ಜಿಸಿ ಸುಮ್ಮನೆ ಕೂರಲಿಲ್ಲ. ಮತಾಂಧ ದೇಶದ್ರೋಹಿ ಯಾವ ಮೂಲೆಯಲ್ಲಿ ಅಡಗಿದ್ದರೂ ಸರಿ ಆತನನ್ನು ಒದ್ದು ಬಂಧಿಸಿ ಅಂತ ಆದೇಶ ಕೊಟ್ಟಿದ್ದರು. ಈ ಆದೇಶದ ಮೇರೆ ಅರೆ ಮಿಲಿಟರಿ ಪಡೆ ಮತ್ತು ಪೋಲಿಸರು ಕಾರ್ಯಾಚರಣೆಗೆ ಇಳಿದು ಇಂದು ಆ ಮತಾಂಧ ದೇಶದ್ರೋಹಿ ಸಲೀಮ್ ನನ್ನು ಬಂಧಿಸಿದ್ದಾರೆ.

ಯೋಗಿ ಆದಿತ್ಯಾನಥರ ಸರ್ಕಾರ ಇರುವುದರಿಂದ ಆ ಮತಾಂಧನಿಗೆ ದೊಡ್ಡ ಶಿಕ್ಷೆಯಾಗುವುದಂತು ಕಟ್ಟಿಟ್ಟ ಬುತ್ತಿ.

ದೇಶಪ್ರೇಮಿಯೊಬ್ಬನನ್ನು ಸ್ವಾತಂತ್ರ್ಯಾ ನಂತರವೂ ಕೊಲ್ಲುತ್ತಾರೆಂದರೆ ಎಂತಹ ಪರಿಸ್ಥಿತಿ ಅಲ್ವಾ? ಅಂದು ಬ್ರಿಟಿಷರು ಇದೇ ಕೆಲಸವನ್ನು ಮಾಡುತ್ತಿದ್ದರು. ಆದರೆ ಇಂದು ಬ್ರಿಟಿಷರು ಇರದಿದ್ದರೂ ಅವರ ಜಾಗದಲ್ಲಿ ಮತಾಂಧರು ನಿಂತು ಅದೇ ಕೆಲಸವನ್ನು ಮಾಡುತ್ತಿದ್ದಾರೆ.

  •  
    3.2K
    Shares
  • 3.2K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com