Connect with us
Loading...
Loading...

ಇತಿಹಾಸ

ನಕಲಿ ಗಾಂಧಿ ಪರಿವಾರದ ವಿರುದ್ಧ ಸಿಡಿದೆದ್ದ ನೇತಾಜಿ ಸುಭಾಷಚಂದ್ರ ಬೋಸರ ಮೊಮ್ಮಗ; ನೆಹರುವಿನಿಂದ ಹಿಡಿದು ರಾಹುಲ್ ಗಾಂಧಿಯವರೆಗೂ ಹಿಗ್ಗಾಮುಗ್ಗಾ ಝಾಡಿಸಿ ಹೇಳಿದ್ದೇನು ಗೊತ್ತಾ?

Published

on

 • 8.6K
 •  
 •  
 •  
 •  
 •  
 •  
 •  
  8.6K
  Shares

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಇಡೀ ಜಗತ್ತೇ ಇಂದು ಹಾಡಿ ಹೊಗಳುತ್ತ ಅವರನ್ನ ಗ್ಲೋಬಲ್ ಲೀಡರ್ (ವಿಶ್ವನಾಯಕ) ಎಂದು ಹೊಗಳುತ್ತಿದ್ದರೆ ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಯಾವುದೇ ಸಾಕ್ಷಿ ಆಧಾರಗಳಿಲ್ಲದೆ ಪ್ರಧಾನಿ ಮೋದಿಯವರನ್ನ ಲೂಟಿಕೋರ, ಕಳ್ಳ ಎಂದು ಬೈಯುತ್ತಿದೆ. ಆದರೆ ಈ ಸುಳ್ಳು ಆರೋಪಗಳನ್ನ ಮಾಡುತ್ತಿರುವ ರಾಹುಲ್ ಗಾಂಧಿ ಮಾತ್ರ ಕೋರ್ಟಿನಲ್ಲಿ ನರೇಂದ್ರ ಮೋದಿಯವರ ವಿರುದ್ಧ ಯಾವುದೇ ದಾವೆ ಹೂಡದೆ, ಸಾಕ್ಷಿಗಳನ್ನ ತೆಗೆದುಕೊಂಡು ಹೋಗದೆ ಇರೋದು ಮಾತ್ರ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ರಾಹುಲ್ ಗಾಂಧಿ ಕಳ್ಳನೆಂದು ಕೇವಲ ನರೇಂದ್ರ ಮೋದಿಯವರನ್ನ ಕರೆದಿಲ್ಲ ಬದಲಾಗಿ ಇಡೀ ಜಗತ್ತೇ ಯಾರೆದುರು ಬಗ್ಗಿ ಸೆಲ್ಯೂಟ್ ಹೊಡೆಯುತ್ತೋ ಅಂತಹ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸುಳ್ಳು ಆರೋಪಗಳನ್ನ ಮಾಡುತ್ತ ಅವರ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಈ ಸುಳ್ಳು ಆರೋಪಗಳ ಕುರಿತಾಗಿ ಇಡೀ ದೇಶವೇ ನಕಲಿ ಗಾಂಧಿ ಪರಿವಾರದ ವಿರುದ್ಧ ಸಿಟ್ಟಿನಲ್ಲಿದೆ.

ಇದರ ಜೊತೆ ಜೊತೆಗೆ ನೇತಾಜಿ ಸುಭಾಷಚಂದ್ರ ಬೋಸರ ಕುಟುಂಬವೂ ಕಾಂಗ್ರೆಸಿನ ವಿರುದ್ಧ ಕೆಂಡಾಮಂಡಲವಾಗಿದೆ ಹಾಗು ನೇತಾಜಿಯವರ ಮೊಮ್ಮಗ ಚಂದ್ರಕುಮಾರ್ ಬೋಸ್ ರವರು ರಾಹುಲ್ ಗಾಂಧಿಯನ್ನ ಕಳ್ಳನೆಂದು ಕರೆದಿದ್ದಾರೆ ಹಾಗು ಸದ್ಯದಲ್ಲೇ ರಾಹುಕ್ ಗಾಂಧಿ ಜೈಲಿನ ಕಂಬಿಯೆಣಿಸುತ್ತ ಜೈಲಿನಲ್ಲಿರಲಿದ್ದಾರೆ ಎಂದಿದ್ದಾರೆ.

ಹೌದು ನೇತಾಜಿಯವರ ಮೊಮ್ಮಗ ಚಂದ್ರಕುಮಾರ್ ಬೋಸ್ ರವರು ಪ್ರಧಾನಿ ಮೋದಿಯವರ ವಿರುದ್ಧ ರಫೇಲ್ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿ ರಾಹುಲ್ ಗಾಂಧಿ ಮಾಡುತ್ತಿರುವ ಸುಳ್ಳು ಆರೋಪಗಳ ವಿರುದ್ಧ ಹರಿಹಾಯ್ದಿದ್ದು ನಕಲಿ ಗಾಂಧಿ ಪರಿವಾರ ಹಾಗು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಂದ್ರ ಕುಮಾರ್ ಬೋಸ್ ರವರು ಈ ಕುರಿತು ಟ್ವೀಟ್ ಮಾಡುತ್ತ ಹೀಗೇ ಹೇಳಿದಾರೆ ನೋಡಿ

“ರಾಹುಲ್ ಗಾಂಧಿ ಯಾವ ಆಧಾರವೂ ಇಲ್ಲದೆ ಸಾಕ್ಷಿಗಳೂ ಇಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಕಳ್ಳ ಎಂದು ಕರೆದಿದ್ದಾರೆ, ರಾಹುಲ್ ಗಾಂಧಿ ಸ್ವತಃ ಒಬ್ಬ ಕಳ್ಳನಾಗಿದ್ದಾ‌ನೆ. ಪ್ರಧಾ‌ನಿ ಮೋದಿಯವರ ವಿರುದ್ಧ ರಾಹುಲ್ ಗಾಂಧಿ ಬಳಿ ಸಾಕ್ಷಿಗಳಿದ್ದರೆ ಅವರು ಕೋರ್ಟಿಗ್ಯಾಕೆ ಹೋಗುತ್ತಿಲ್ಲ? ರಾಹುಲ್ ಗಾಂಧಿ ಪ್ರಧಾನಿ ಮೋದಿ ಕಳ್ಳ ಎಂದು ಸಾಬೀತುಪಡಿಸಲು ಅವರ ವಿರುದ್ಧ ಸಾಕ್ಷಿ ನೀಡಲಿ ಇಲ್ಲವಾದರೆ ತಾನೇ ಜೈಲಿಗೆ ಹೋಗಲು ಸಿದ್ಧರಾಗಲಿ”

“ನನಗೆ ಒಂದು ವಿಷ್ಯ ಅರ್ಥವಾಗುತ್ತಿಲ್ಲ ಒಬ್ಬ ಕಳ್ಳ (ರಾಹುಲ್ ಗಾಂಧಿ) ಯಾವುದೇ ಆಧಾರಗಳಿಲ್ಲದೆ ಅದ್ಹೇಗೆ ಪ್ರಧಾನಮಂತ್ರಿ ಮೋದಿಯವರನ್ನ ಕಳ್ಳ ಅಂತಾರೆ?” ಎಂದಿದ್ದಾರೆ. ಚಂದ್ರಕುಮಾರ್ ಬೋಸರು ನೆಹರುವಿನ ಕುರಿತಾಗಿ ಸ್ಪೋಟಕ ಮಾಹಿತಿಯೊಂದನ್ನ ಬಹಿರಂಗಗೊಳಿಸುತ್ತ ಜವಾಹರಲಾಲ್ ನೆಹರು ಸುಭಾಷಚಂದ್ರ ಬೋಸರ ಆಜಾದ್ ಹಿಂದ್ ಫೌಜ್ ನ ಖಜಾನೆಯನ್ನ ಲೂಟಿ ಮಾಡುವುದರಲ್ಲಿ ಶಾಮೀಲನಾಗಿದ್ದ ಎಂದು ಹೇಳಿದ್ದಾರೆ.

ಮುಂದೆ ಟ್ವೀಟ್ ಮಾಡುತ್ತ ಅವರು “ರಾಹುಲ್ ಗಾಂಧಿ ನರೇಂದ್ರ ಮೋದಿಯವರ ವಿರುದ್ಧ ತಾವು ಮಾಡುತ್ತಿರುವ ರಫೇಲ್ ಹಗರಣದ ಕುರಿತಾದ ಸಾಕ್ಷ್ಯಗಳನ್ನ ಮುಂದೆಯಿಡಲಿ ಇಲ್ಲವಾದರೆ ಜೈಲಿಗೆ ಹೋಗಲು ಸಿದ್ಧರಾಗಲಿ” ಎಂದು ಹೇಳಿದ್ದಲ್ಲದೆ ಇಡೀ ನೆಹರು ಪರಿವಾರವನ್ನೇ ಅವರು ಕಳ್ಳರೆಂದು ಹೇಳಿದ್ದು ರಾಹುಲ್ ಗಾಂಧಿಯನ್ನ ಪಪ್ಪು ಎಂದೂ ಕರೆದಿದ್ದು ಆತ ಬರೀ ವಿತಂಡವಾದಗಳನ್ನ ಮಾಡುತ್ತ ಸುಳ್ಳು ಸುದ್ದಿ ಹಬ್ಬಿಸುವವ ಎಂದು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಜವಾಹರಲಾಲ್‌ ನೆಹರೂ ಸರ್ಕಾರವು ನೇತಾಜಿ ಸುಭಾಸ್‌ಚಂದ್ರ ಬೋಸ್‌ ಸಂಬಂಧಿಕರ ಮೇಲೆ ಎರಡು ದಶಕಗಳ ಕಾಲ ಗೂಢಚರ್ಯೆ ನಡೆಸಿತ್ತು ಎನ್ನುವ ಅಂಶ ಲಭ್ಯ ‌ದಾಖಲೆಗಳಿಂದ ಬಹಿರಂಗವಾದಾಗ ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಬೋಸ್‌ ಅವರ ಅಣ್ಣ ಶರತ್‌ಚಂದ್ರ ಬೋಸ್‌ ಮಕ್ಕಳಾದ ಶಿಶಿರ್‌ ಕುಮಾರ್‌ ಹಾಗೂ ಅಮಿಯಾನಾಥ್‌ ಬೋಸ್‌ ಸೇರಿದಂತೆ ಬೋಸ್‌ ಅವರ ಹತ್ತಿರದ ಸಂಬಂಧಿಗಳ ಮೇಲೆ 1948 ರಿಂದ 1968ರ ವರೆಗೆ ಗೂಢಚರ್ಯೆ ಮಾಡಲಾಗಿತ್ತು ಎಂದು ಇತ್ತೀಚೆಗೆ ಬಹಿರಂಗಗೊಂಡ ಬೇಹುಗಾರಿಕಾ ದಳದ ದಾಖಲೆಗಳಲ್ಲಿ ಹೇಳಲಾಗಿತ್ತು.

ಕೋಲ್ಕತದ ವುಡ್‌ಬರ್ನ್‌ ಪಾರ್ಕ್‌ ಹಾಗೂ ಎಲ್‌ಜಿನ್‌ ರಸ್ತೆಯಲ್ಲಿರುವ ಬೋಸ್‌ ಕುಟುಂಬದ ಮನೆಗಳ ಮೇಲೆ ನಿಗಾ ಇಡಲಾಗಿತ್ತು. ಬೋಸ್‌ ಕುಟುಂಬದವರು ಬರೆದ ಪತ್ರಗಳನ್ನು ನಕಲು ಮಾಡಲಾಗಿತ್ತು. ಜತೆಗೆ ವಿದೇಶಿ ಪ್ರವಾಸದ ವೇಳೆಯೂ ಅವರನ್ನು ಹಿಂಬಾಲಿಸಿಕೊಂಡು ಹೋಗಲಾಗಿತ್ತು ಎಂದು ದಾಖಲೆಯಲ್ಲಿ ಹೇಳಲಾಗಿತ್ತು.

ಈ ಸ್ಫೋಟಕ ಮಾಹಿತಿಯಿಂದ ಆಘಾತಗೊಂಡಿದ್ದ ಕುಟುಂಬ, ‘ನೆಹರೂ ಕಾಲದಲ್ಲಿ ಪ್ರಜಾತಂತ್ರ ವ್ಯವಸ್ಥೆ ಯಾವ ಮಟ್ಟದಲ್ಲಿ ಇತ್ತು ಎನ್ನುವುದನ್ನು ಇದು ತೋರಿಸುತ್ತದೆ’ ಎಂದು ಪ್ರತಿಕ್ರಿಯಿಸಿತ್ತು.‘ಪಂಡಿತ್‌ ನೆಹರೂ ಸರ್ಕಾರದ ಸೂಚನೆ ಮೇರೆಗೆ ಗೂಢಚರ್ಯೆ ನಡೆದಿತ್ತು ಎನ್ನುವುದು ನಮಗೆ ಈಗ ಗೊತ್ತಾಗಿದೆ. ಬೋಸ್‌ ಕುಟುಂಬಕ್ಕೆ ಇದು ಆಘಾತಕಾರಿ ಸುದ್ದಿ’ ಎಂದು ಚಂದ್ರಕುಮಾರ್‌ ಬೋಸ್‌ ಪ್ರತಿಕ್ರಿಯಿಸಿದ್ದರು.

– Team Nationalist Views

Nationalist Views ©2018 Copyrights Reserved

 •  
  8.6K
  Shares
 • 8.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com