Connect with us
Loading...
Loading...

ಅಂಕಣ

ಮುಸಲ್ಮಾನರಿಗೆ ಕುತ್ತು ತಂದ ಚೀನಾ ಸರ್ಕಾರ!! ಈ ರೀತಿಯಲ್ಲಿ ಚೀನಾ ಮುಸಲ್ಮಾನರನ್ನ ಹದ್ದುಬಸ್ತಿನಲ್ಲಿಡುತ್ತಿದೆ!!!

Published

on

 • 2.6K
 •  
 •  
 •  
 •  
 •  
 •  
 •  
  2.6K
  Shares

ಪಶ್ಚಿಮ ಚೀನಾದಲ್ಲಿ ಅಲ್ಲಿನ ಸರ್ಕಾರ ಚಳಿಗಾಲದ ನೆಪವೊಡ್ಡಿ ಮುಸ್ಲಿಂ ಮಕ್ಕಳಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದನ್ನ ನಿಷೇಧಿಸಿಬಿಟ್ಟಿದೆ.

ಈ ಪ್ರತಿಬಂಧದ ಅಲ್ಲಿನ ಶಿಕ್ಷಣ ಸಚಿವಾಲಯ ಆನಲೈನ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜಾರಿಗೆ ತಂದಿದೆ. ಈ ಪ್ರತಿಬಂಧದ ಪ್ರಕಾರ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯ ತರಗತಿಯಲ್ಲಿ ಅಥವ ಯಾವುದೇ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಅವರವರ ಧಾರ್ಮಿಕ ಗ್ರಂಥಗಳನ್ನ ಓದುವುದನ್ನ ನಿಷೇಧ ಮಾಡಿದೆ ಚೀನಾ ಸರ್ಕಾರ.

ಈ ಪ್ರತಿಬಂಧಕದ ಉದ್ದೇಶ ಚೀನಾ ರಾಜಕೀಯ ಉದ್ದೇಶವಿಟ್ಟುಕೊಂಡು ಮುಸಲ್ಮಾನರಿಂದ ದೇಶದಲ್ಲಿ ಗಲಭೆಗಳಾದಿರಲಿ ಅವರನ್ನ ಹದ್ದುಬಸ್ತಿನಲ್ಲಿಡಲು ತಯಾರಿಗಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ.

ನಿಮಗೆ ಗೊತ್ತಿರಲಿ ಚೀನಾ ಒಂದು ನಾಸ್ತಿಕ ದೇಶವಾಗಿದ್ದು ಅಲ್ಲಿ ದೇವರನ್ನ ಪೂಜಿಸುವುದು ತುಂಬಾ ಕಷ್ಟದ ವಿಚಾರವಾಗಿದೆ. ಚೀನಾ ಕಮ್ಯುನಿಸ್ಟ್ ದೇಶವಾದ್ದರಿಂದ ಕಮ್ಯುನಿಸ್ಟರು ಧರ್ಮ, ದೇವರು ಎಂಬ ವಿಷಯಗಳನ್ನು ನಂಬೋದೆ ಇಲ್ಲ.


ಕಳೆದ ವರ್ಷ ಅಕ್ಟೋಬರ್ ನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಚೀನಾ ಅನೇಕ ನಿರ್ಧಾರಗಳನ್ನ ತೆಗೆದುಕೊಂಡಿತ್ತು. ಅವುಗಳಲ್ಲಿ ಪ್ರಕಾರ ಮುಸ್ಲಿಂ ಧಾರ್ಮಿಕ ವಿಧಾನಗಳನ್ನ ತಹವಂದಿಗೆ ತರುವುದೇ ಚೀನಾದ ಉದ್ದೇಶವಾಗಿತ್ತು.

ಇದು ಚೀನಾ ಮುಸಲ್ಮಾನರ ವಿರುದ್ಧವಾಗಿ ಮೊದಲ ಜಾರಿಗೆ ತಂದ ಕಾನೂನುಗಳಲ್ಲ, ಇದಕ್ಕೂ ಮೊದಲು ಚೀನಾ ಮುಸ್ಲಿಮರನ್ನ ನಿಯಂತ್ರಿಸಲು ಹಲವು ಕಾನೂನುಗಳನ್ನ ತಂದಿದೆ.

ಚೀನಾ ಸರ್ಕಾರ ಕಳೆದ ತಿಂಗಳುಗಳ ಹಿಂದೆಯಷ್ಟೇ ಮಹತ್ವದ ಆದೇಶ ಹೊರಡಿಸಿತ್ತು. ಅಲ್ಲಿನ ಸ್ಥಳೀಯರು ಅಕ್ಕಪಕ್ಕದವರಿಗೆ ಮಸೀದಿಯ ಸ್ಪೀಕರ್‌ಗಳಿಂದ ತೊಂದರೆಯಾಗುತ್ತಿದೆ ಎಂದು ದೂರು ಕೊಟ್ಟಿದ್ದರಿಂದ ಚೀನಾ ಸರಕಾರ ಕ್ವಾ0ಗೈ ಪ್ರದೇಶದ 300 ಮಸೀದಿಗಳ ಮೇಲಿನ ಸ್ಪೀಕರ್‌ಗಳನ್ನು ತೆಗೆದುಹಾಕಿತ್ತು. ಚೀನಾ ಸರ್ಕಾರ ಬರೀ ಬೋಂಗಾ ಅಷ್ಟೇ ನಿಷೇಧಿಸಿಲ್ಲ ಬುರ್ಕಾ ಮತ್ತು ಗಡ್ಡವನ್ನು ನಿಷೇಧಿಸಲಾಗಿದೆ. ಈಗ ಅದರ ಬೆನ್ನಲ್ಲೇ ಚೀನಾ ಸರ್ಕಾರ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶಿಸಿದೆ.

​ಕ್ಸಿನ್ಜಿಯಾಂಗ್ ವಾಯವ್ಯ ಭಾಗದಲ್ಲಿ ಮುಸ್ಲಿಮರ ವಿರುದ್ಧ ಚೀನೀಯ ಅಧಿಕಾರಿಗಳು ಮತ್ತೆ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಾರೆ.
ಪ್ರದೇಶದ ಮೂಲಗಳ ಪ್ರಕಾರ, ಜನಾಂಗೀಯ ಅಲ್ಪಸಂಖ್ಯಾತ ಮುಸ್ಲಿಮ್ ಕುಟುಂಬಗಳು ಕುರಾನ್ ಮತ್ತು ನಮಾಜ್ ಮಾಡುವ ಮ್ಯಾಟ್ ಸೇರಿದಂತೆ ಧಾರ್ಮಿಕ ವಸ್ತುಗಳನ್ನು ಕಡ್ಡಾಯವಾಗಿ ಹಿಂದಿರುಗಿಸುವಂತೆ ಮುಸ್ಲಿಂ ಕುಟುಂಬಗಳಿಗೆ ಮತ್ತು ಮಸೀದಿಗಳಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಚೀನಾದಲ್ಲಿ ಎಲ್ಲ ಧರ್ಮದವರಿಗೆ ತಮ್ಮ-ತಮ್ಮ ಪದ್ಧತಿಯಿಂದ ಉಪಾಸನೆ ಮಾಡುವ ಸ್ವಾತಂತ್ರ್ಯವನ್ನು ಕೊಡಲಾಗಿದೆ ಆದರೆ ಇತರರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಅಥವಾ ಅವರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಉಪಾಸನೆಯನ್ನು ಮಾಡಬೇಕು. ಆದರೆ ಇಲ್ಲಿನ ಮೂಲಭೂತ ಇಸ್ಲಾಮಿಗರಿಂದ ಅಂತರಿಕ ಬೆದರಿಕೆಗಳನ್ನು ಅನುಭವಿಸುತ್ತಿದೆ ಹೀಗಾಗಿ ಚೀನಾ ಸರ್ಕಾರ ಈ ಕಠಿಣ ಕ್ರಮವನ್ನು ಕೈಗೊಂಡಿದೆ ಎಂದು ಚೀನಾ ಸರ್ಕಾರ ಸ್ಪಷ್ಟ ಪಡಿಸಿತ್ತು.

ಮಾನವ ಹಕ್ಕುಗಳ ಹೋರಾಟಗಾರರು ಚೀನಾ ಸರ್ಕಾರಕ್ಕೆ ಈ ಕುರಿತಂತೆ ಪ್ರಶ್ನಿಸಿದಾಗ ಚೀನಾ ಸರ್ಕಾರ ಖಡಕ್ ಆಗಿ ಉತ್ತರಿಸಿದೆ. “ಮೂಲಭೂತ ಇಸ್ಲಾಂನಿಂದ ಆಂತರಿಕ ಬೆದರಿಕೆಗಳನ್ನು ಚೀನಾ ಎದುರಿಸುತ್ತಿದೆ ಮತ್ತು ರಾಷ್ಟ್ರಿಯ ಭದ್ರತೆಗೆ ಸವಾಲಾಗಿರುವ ಮುಸ್ಲಿಮರ ವಿರುದ್ಧ ಕಾರ್ಯಾಚರಣೆ ಅತ್ಯಗತ್ಯ ಖಡಕ್ ಆಗಿ ಉತ್ತರಿಸಿದೆ. ಭಾರತದ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಹೊಡೆಯುವಂತೆ ಚೀನಾದಲ್ಲೂ ಹೊಡೆಯುತ್ತಾರೆ. ಆದರೆ ಚೀನಾ ಸರ್ಕಾರ ಅವರಿಗೆ ಕೊಡುವ ಶಿಕ್ಷೆಗೆ ಜೀವನದಲ್ಲಿ ಅವರು ಯಾವತ್ತಿಗೂ ಕಲ್ಲೇ ಮುಟ್ಟದ ಹಾಗೆ ಮಾಡುತ್ತಾರೆ.

ಚೀನಾದಲ್ಲಿ ನಿಷೇಧಿಸಿದಂತೆ ಸ್ವಿಟ್ಜರ್ಲೆಂಡ್‌‌ ನಲ್ಲಿಯೂ ಕೂಡಾ ಬುರ್ಕಾ ನಿಷೇಧಿಸಲಾಗಿದೆ. ಒಂದು ಸಲ ಸ್ವಿಟ್ಜರ್ಲೆಂಡ್‌‌ ನ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಒಬ್ಬ ಸಂಸದ ಎದ್ದು ನಿಂತು ಹೇಳ್ತಾನೆ.

“ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು. ಯಾಕೆಂದರೆ ಬುರ್ಕಾದ ಒಳಗಡೆ ಪ್ರತಿ ಸಂದರ್ಭದಲ್ಲಿಯೂ ಮಹಿಳೆಯೇ ಇರುತ್ತಾಳೆಂದು ಹೇಳಲಾಗುವುದಿಲ್ಲ. ಹಾಗಾಗಿ ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು”

ಒಟ್ಟಿನಲ್ಲಿ ಚೀನಾ ಸರ್ಕಾರ ತನ್ನ ಅಂತರಿಕ ಭದ್ರತಾ ದೃಷ್ಟಿಯಿಂದ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶಿಸಿದೆ.

ಆದರೆ ಭಾರತ ದೇಶದಲ್ಲಿ ಮುಸಲ್ಮಾನರಿಗೆ ಎಲ್ಲ ಸೌಲಭ್ಯಗಳನ್ನ, ಧಾರ್ಮಿಕ ಸ್ವಾತಂತ್ರ್ಯವನ್ನ ಯಥೇಚ್ಚವಾಗಿ ನೀಡಿದರೂ ಭಾರತ ಅಸಹಿಷ್ಣು ರಾಷ್ಟ್ರ ಅಂತ ಬೊಬ್ಬೆಯಿಡುವುದರಲ್ಲಿ ಹಿಂದೆ ಬೀಳಲ್ಲ!!

 •  
  2.6K
  Shares
 • 2.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com