Connect with us
Loading...
Loading...

ಪ್ರಚಲಿತ

ಇವರ ಮೇಲೆ ಸದಾ ಉರಿದುಬೀಳುತ್ತಿದ್ದ ಸಿದ್ದರಾಮಯ್ಯ ಈಗ ಇವರಿಬ್ಬರನ್ನ ಹಾಡಿ ಹೊಗಳುತ್ತಿದ್ದಾರೆ!!! ಯಾಕೆ ಗೊತ್ತಾ?

Published

on

 • 2.9K
 •  
 •  
 •  
 •  
 •  
 •  
 •  
  2.9K
  Shares

ಬೆಂಗಳೂರಿನಲ್ಲಿ ನಡೆದ `ಕೈ’ ಸಭೆಯಲ್ಲಿ ಪ್ರತಾಪ್ ಸಿಂಹ, ಹೆಗ್ಡೆ ಭಾಷಣದ ಶೈಲಿಗೆ ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದ್ದಾರೆ!

“ಅರೆರೆ ಸಿದ್ದರಾಮಯ್ಯನವರು ಇವರಿಬ್ಬರನ್ಯಾಕೆ ಹೊಗಳಿದ್ದು? ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆಯವರೇನಾದರೂ ಕಾಂಗ್ರೆಸ್ಸಿಗೆ ಸೇರ್ಪಡೆಯಾದರಾ?” ಹೀಗೊಂದು ಅನುಮಾನ ನಿಮ್ಮ ತಲೇಲಿ ಒಂದು ಕ್ಷಣ ಬಂದು ಹೋಗಬಹುದು. ಆದರೆ ಅದಲ್ಲ ವಿಷ್ಯ, ಇಲ್ಲಿ ನಡೆದದ್ದೆ ಬೇರೆ.

ಅನಂತಕುಮಾರ್ ಹೆಗಡೆ, ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಹಿಂದೂ ಫೈರಬ್ರ್ಯಾಂಡ್ ಹೆಸರು, ಬಿಜೆಪಿ ಪಕ್ಷದ ಸಮಾವೇಶಗಳಲ್ಲಿ ಸದ್ಯ ಅತೀ ಹೆಚ್ಚು ಬೇಡಿಕೆಯಿರುವಂತಹ ನಾಯಕನೆಂದರೆ ಅದು ಅನಂತ ಕುಮಾರ್ ಹೆಗಡೆ.

ಅನಂತಕುಮಾರ್ ಹೆಗಡೆಯವರು ಮಾತನಾಡಲು ಮೈಕಿನೆದುರು ನಿಂತುಕೊಂಡರೆ ಸಾಕು ಶಿಳ್ಳೆ ಚಪ್ಪಾಳೆಗಳ ಸುರಿಮಳೆಯೇ ಹರಿದುಬಿಡುತ್ತವೆ.

ಅತ್ತ ಅನಂತಕುಮಾರ ಹೆಗಡೆ ಒಂದು ಕಡೆಯಾದರೆ ಇತ್ತ ಕಾಂಗ್ರೆಸ್ ಹಾಗು ಬುದ್ಧಿಜೀವಿಗಳ ಚಳಿಜ್ವರ ಬಿಡಿಸುವಂತೆ ಉತ್ತರ ನೀಡುವ ಇನ್ನೊಬ್ಬ ಬಿಜೆಪಿ ನಾಯಕನೆಂದರೆ ಅದು ಸಂಸದ ಪ್ರತಾಪ್ ಸಿಂಹ.

ಇವರಿಬ್ಬರಿಗೂ ಕಾಂಗ್ರೆಸ್ ಬೆದರಿದಂತೆ ಕಾಣುತ್ತಿದೆ. ಬಹಿರಂಗವಾಗಿ ಟಿವಿ ಮಾಧ್ಯಮಗಳೆದರು ಇವರಿಬ್ಬರ ವಿರುದ್ಧವೂ ಮಾತನಾಡುವ ಸಿಎಂ, ಹಾಗು ಉಳಿದ ಕಾಂಗ್ರೆಸ್ಸಿಗರು ಒಳಗೊಳಗೇ ಇವರಿಬ್ಬರ ಪ್ರತಿಯೊಂದು ಭಾಷಣವನ್ನೂ ಕೇಳುತ್ತಾರೆ ಅನ್ನೋದು ಸಾಬೀತಾದಂತಿದೆ.

“ಅನಂತಕುಮಾರ್ ಹೆಗಡೆ, ಮಂತ್ರಿಯಾಗೋಕೆ ನಾಲಾಯಕ್”, “ಪ್ರತಾಪ ಸಿಂಹ ಇನ್ನೂ ರಾಜಕೀಯದಲ್ಲಿ ಬೆಳೆಯಬೇಕಾದ ವ್ಯಕ್ತಿ, ಸ್ವಲ್ಪ ಸಂಯಮದಿಂದ ಇರಲಿ” ಅಂತ ಬಹಿಗವಾಗಿ ಹೇಳಿಕೆ ನೀಡುತ್ತಿದ್ದ ಕಾಂಗ್ರೆಸ್ಸಿಗರಿಗೇ ಸ್ವತಃ ಸಿಎಂ ವಿರೋಧಾಭಾಸದ ಮಾತುಗಳನ್ನಾಡಿ ಅಚ್ಚರಿಗೊಳಿಸಿದ್ದಾರೆ.

File photo

ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತು ಸಂಸದ ಪ್ರತಾಪ್ ಸಿಂಹರ ಹಾಗೆಯೇ ನಾವೂ ಕೂಡ ಜನರೆದುರು ಬಹಳ ಅಗ್ರೆಸ್ಸಿವ್ ಆಗಿ ಮಾತನಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ಚುನಾವಣಾ ಪ್ರಚಾರ ಸಮಿತಿ ಸದಸ್ಯರ ಮಹತ್ವದ ಸಭೆಯಲ್ಲಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಅನಂತ್ ಕುಮಾರ್ ಹೆಗಡೆ ಹಾಗೂ ಪ್ರತಾಪ್ ಸಿಂಹ ಬಹಳ ಅಗ್ರೆಸ್ಸಿವ್ ಆಗಿ ಮಾತಾಡ್ತಿದಾರೆ. ಆದ್ರೆ ಕಾಂಗ್ರೆಸ್ ನಲ್ಲಿ ಹಾಗೆ ಅಗ್ರೆಸ್ಸಿವ್ ಆಗಿ ಮಾತಾನಾಡುವವರು ಯಾರೂ ಇಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಹಳ ಜನ ಅಂದುಕೊಂಡಿದ್ದಾರೆ ಅನಂತ್ ಕುಮಾರ್ ಹೆಗ್ಡೆ ಮತ್ತು ಪ್ರತಾಪ್ ಸಿಂಹ ಮಾತುಗಳಿಂದ ಬಿಜೆಪಿಗೆ ನೆಗಟಿವ್ ಆಗುತ್ತೆ ಅಂತ. ಆದ್ರೆ ಅದು ಪಾಸಿಟಿವ್ ಆಗ್ತಾ ಇದೆ. ಜನ ಅವರ ಅಗ್ರೆಸ್ಸಿವ್ ಆಗಿ ಮಾತಾನಾಡುವ ಶೈಲಿಯನ್ನು ಇಷ್ಟ ಪಡುತ್ತಾರೆ. ಹಾಗಾಗಿ ನಾವು ಕೂಡ ಜನರ ಮುಂದೆ ಬಹಳ ಅಗ್ರೆಸ್ಸಿವ್ ಆಗಿ ಮಾತಾಡಬೇಕು. ಆದ್ರೆ ಮಾತಾನಾಡುವ ವೇಳೆ ಮಾತಿನ ಹಿಡಿತ ಕಳೆದುಕೊಳ್ಳಬಾರದು ಅಂತ ಸಿಎಂ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಭೆಗೆ ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯ, ಸಂಸದರಾದ ಕೆಎಚ್ ಮುನಿಯಪ್ಪ, ಹರಿಪ್ರಸಾದ್, ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ಎಚ್ ಸಿ ಮಹದೇವಪ್ಪ, ಕಾಗೋಡು ತಿಮ್ಮಪ್ಪ, ಟಿ ಬಿ ಜಯಚಂದ್ರ, ಎಚ್ ಆಂಜನೇಯ, ಪ್ರಿಯಾಂಕ ಖರ್ಗೆ, ಪ್ರಮೋದ್ ಮದ್ವರಾಜ್, ತನ್ವೀರ್ ಸೇಠ್, ರಮಾನಾಥ್ ರೈ, ರಮೇಶ್ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯೆ ಜಯಮಾಲ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಸ್ಯಾಂಡಲ್‍ವುಡ್ ಕಲಾವಿದರಾದ ಸಾಧು ಕೋಕಿಲಾ, ಮಾಲಾಶ್ರೀ, ಅಭಿನಯ ಹಾಗೂ ಪ್ರಚಾರ ಸಮಿತಿ ಸದಸ್ಯರು ಕೂಡ ಪಾಲ್ಗೊಂಡಿದ್ದರು.

ಸಿಎಂ ಹೀಗೆ ಹೇಳಿದ್ದನ್ನ ಕೇಳಿ ಸಭೆಯಲ್ಲಿದ್ದವರಿಗೆ ಒಂದು ರೀತಿಯ ಇರಿಸುಮುರಿಸಾದರೆ ಒಳಗೊಳಗೆ ಸಿಎಂ ಹೇಳ್ತಿರೋದು ನಿಜ ಅಂತ ಮೌನಂ ಸಮ್ಮತಿ ಲಕ್ಷಣಂ ಅನ್ನುವ ರೀತಿಯಲ್ಲಿ ಮೌನವಾಗಿದ್ದರಂತೆ.

ಒಟ್ಟಿನಲ್ಲಿ ಅನಂತ ಕುಮಾರ ಹೆಗಡೆ ಹಾಗು ಪ್ರತಾಪ್ ಸಿಂಹರವರ ಹರಿತವಾದ ಮಾತುಗಳು ಕಾಂಗ್ರೆಸ್ಸಿಗೆ ನಡುಕ ಹುಟ್ಟಿಸಿರೋದಂತೂ ಸತ್ಯ!!

ಅನಂತಕುಮಾರ್ ಹೆಗಡೆ, ಪ್ರತಾಪ್ ಸಿಂಹರ ಭಾಷಣದ ವಿಷಯವನ್ನ ತಮಗೆ ಬೇಕಾದಂತೆ ತಿರುಚಿ ಅವರ ವಿರುದ್ಧ ಜನ ತಿರುಗಿಬೀಳುವಂತೆ ಕಾಂಗ್ರೆಸ್ ಮಾಡಲೆತ್ನಿಸಿದರೂ ಅವರಿಬ್ಬರ ಜನಪ್ರೀಯತೆಯನ್ನ ಕುಗ್ಗಿಸೋಕೆ ಕಾಂಗ್ರೆಸ್ಸಿಗೆ ಆಗುತ್ತಿಲ್ಲ ಅನ್ನೋದು ಸಿಎಂ ಸಿದ್ದರಾಮಯ್ಯನವರ ಅಭಿಪ್ರಾಯದಿಂದ ಸ್ಪಷ್ಟವಾದಂತಿದೆ ಅಲ್ವಾ?

 •  
  2.9K
  Shares
 • 2.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com