Connect with us
Loading...
Loading...

ಅಂಕಣ

ಶಾಕಿಂಗ್: ಬಾಲಿವುಡ್ ಖ್ಯಾತ ನಟನ ವಿರುದ್ಧವೇ ಕೇಸ್ ದಾಖಲಿಸಿದ ಕಾಂಗ್ರೆಸ್; ಯಾಕೆ ಗೊತ್ತಾ?

Published

on

 • 1.5K
 •  
 •  
 •  
 •  
 •  
 •  
 •  
  1.5K
  Shares

ಮುಸಲ್ಮಾನರ ವೋಟಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರರ ಸಂವಿಧಾನವನ್ನೇ ಧಿಕ್ಕರಿಸಿತ್ತು ಕಾಂಗ್ರೆಸ್. ಹೌದು ಮುಸಲ್ಮಾನರ ವೋಟಿಗಾಗಿ ಸುಪ್ರೀಂಕೋರ್ಟಿನ ತೀರ್ಪನ್ನು ಧಿಕ್ಕರಿಸಿ ಷರೀಯಾ ಕಾನೂನನ್ನು ಜಾರಿಗೆ ತಂದಿತ್ತು ಕಾಂಗ್ರೆಸ್!! ಈ ವಿಷಯ ಅದೆಷ್ಟು ಜನರಿಗೆ ಗೊತ್ತಿದೆಯೋ ಏನೋ ಆದರೆ ಪ್ರಸ್ತುತ ಘಟನಾವಳಿಗಳನ್ನು ನೋಡಿದರೆ ಹಿಂದೆ ಕಾಂಗ್ರೆಸ್ ಸಂವಿಧಾನಕ್ಕೆ ಮಾಡಿದ ದ್ರೋಹ ನೆನಪಾಗ್ತಿದೆ. ಮುಸಲ್ಮಾನ ವೋಟ್ ಬ್ಯಾಂಕ್ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರರು ರಚಿಸಿದ ಸಂವಿಧಾನವನ್ನೇ ಧಿಕ್ಕರಿಸಿ, ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ನಡೆದಿದ್ದರು. ಹೌದು ಅಚ್ಚರಿಯಾದರೂ ಸತ್ಯ!! ಬಾಯಿಬಿಟ್ಟರೆ ಬಿಜೆಪಿಗರನ್ನು ಸಂವಿಧಾನ ವಿರೋಧಿಗಳೆಂದು ಬಿಂಬಿಸುವ ಕಾಂಗ್ರೆಸ್ಸಿಗರು ಅಂದು ಸಂವಿಧಾನವನ್ನೇ ಧಿಕ್ಕರಿಸಿದ್ದರು! ಇದೀಗ ಭಾರತದಲ್ಲಿರುವ ಮುಸಲ್ಮಾನರು ಷರೀಯಾ ಕಾನೂನು ಬೇಡಿಕೆ ಇಟ್ಟಿದ್ದಾರೆ.

ಷರೀಯಾ ಕಾನೂನು ಬೇಡಿಕೆ ಅಂದ್ರೆ ಅವರು ಭಾರತದ ಕಾನೂನನ್ನು ಬಿಟ್ಟು ಷರೀಯಾ ಕಾನೂನನ್ನು ಪಾಲಿಸುತ್ತಾರೆ ಎಂದರ್ಥ. ಬಾಬಾ ಅಂಬೇಡ್ಕರರ ಸಂವಿಧಾನವನ್ನು ಧಿಕ್ಕರಿಸಿ ಮುಸಲ್ಮಾನರು ಷರೀಯಾ ಕಾನೂನಿಗೆ ಬೇಡಿಕೆ ಇಟ್ಟಿದ್ದಲ್ಲದೇ ಈಗಾಗಲೇ ಭಾರತದ ಒಂದೆರಡು ಊರುಗಳಲ್ಲಿ ಷರೀಯಾ ಕೋರ್ಟು ಶುರು ಮಾಡಿದ್ದಾರೆಂತೆ. ಮುಸಲ್ಮಾನರ ಈ ಸಂವಿಧಾನಿ ವಿರೋಧಿ ಕೆಲಸಕ್ಕೆ ಕಾಂಗ್ರೆಸ್ಸಿಗರ ಬೆಂಬಲವಿದೆ. ಷರೀಯಾ ಕೋರ್ಟಿಗೆ ಬೇಡಿಕೆ ಇಟ್ಟ ಮುಸಲ್ಮಾನರು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ಕಾಂಗ್ರೆಸ್ಸಿಗರು ಇವರ ಬೆಂಬಲಕ್ಕೆ ನಿಲ್ಲುತ್ತಾರಲ್ಲ ಇದಕ್ಕಿಂತ ವಿಪರ್ಯಾಸದ ಸಂಗತಿ ಏನಿದೆ??

ಕಾಂಗ್ರೆಸ್ ಪಕ್ಷ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹಪಹಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನ ಶತಾಯಗತಾಯವಾಗಿ ‌ಸೋಲಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್ಸಿನ ಹಿರಿಯ ನಾಯಕನಾದ ಶಶಿ ತರೂರ್ ಭಾರತವನ್ನ ‘ಹಿಂದೂ ಪಾಕಿಸ್ತಾನ’ ವೆಂದು ಹೋಲಿಸಿ ಭಾರತೀಯರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ.

ಸದಾ ಒಂದಿಲ್ಲೊಂದು ವಿವಾದಗಳಲ್ಲಿ ವ್ಯಸ್ಥವಾಗಿರುವ ಕಾಂಗ್ರೆಸ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಈ ಬಾರಿ ಕಾಂಗ್ರೆಸ್ ಎದುರು ಹಾಕಿಕೊಂಡಿದ್ದು ರಾಜಕಾರಣಿಗಳನ್ನ, ಬಿಜೆಪಿಯನ್ನಲ್ಲ ಬದಲಾಗಿ ಬಾಲಿವುಡ್ ಚಿತ್ರರಂಗವನ್ನ. ಹೌದು ಕಾಂಗ್ರೆಸ್ ಬಾಲಿವುಡ್ ನ ಖ್ಯಾತ ನಟರೊಬ್ಬರ ಮೇಲೆ ಕೇಸ್ ದಾಖಲಿಸಿದೆ. ಕಾರಣವೇನೆಂದು ತಿಳಿದರೆ ನೀವು ಕೂಡ ಕಾಂಗ್ರೆಸ್ಸನ್ನ ಕ್ಷಮಿಸಲಾರಿರಿ.

ಅಷ್ಟಕ್ಕೂ ಕಾಂಗ್ರೆಸ್ ಆ ಬಾಲಿವುಡ್ ನಟನ ವಿರುದ್ಧ ಕೇಸ್ ದಾಖಲಿಸಿದ್ಯಾಕೆ ಅಂತ ತಿಳಿದುಕೊಳ್ಳುವ ಮುನ್ನ ನೀವು ಅದರ ಹಿನ್ನೆಲೆಯನ್ನ ತಿಳಿದುಕೊಳ್ಳಲೇಬೇಕು.

ಕಾಂಗ್ರೆಸ್ ಮುಸ್ಲಿಂ ವೋಟ್ ಗಾಗಿ ಎಂಥಾ ಕೀಳು ಮಟ್ಟಕ್ಕೆ ಇಳಿದಿತ್ತು ನಿಮಗೆ ಗೊತ್ತೆ?????

ಕಾಂಗ್ರೆಸ್ ಮುಸ್ಲಿಂ ವೋಟ್ ಗಾಗಿ ಸುಪ್ರೀಂಕೋರ್ಟ್ ನಿರ್ಧಾರವನ್ನು ತನಗಿರುವ ಬಹುಮತದಿಂದ ಬದಲಾಯಿಸಿ, ಅವಮಾನಗೊಳಿಸಿದ್ದು ಗೊತ್ತೆ?? ರಾಜೀವ್ ಗಾಂಧಿ ಮುಸ್ಲಿಂ ಮುಲ್ಲಾ ಗಳಿಗೆ ಹೆದರಿ, ಒಬ್ಬ 62 ವರ್ಷದ ನಿಸ್ಸಾಯಕ ಮುಸ್ಲಿಂ ಹೆಣ್ಣು ಮಗಳ ಬಾಳು ಹಾಳಾಗಲು ಕಾರಣವಾಗಿದ್ದ ಘಟನೆ ಬಗ್ಗೆ ಗೊತ್ತೆ ? ಹೌದು ಇದು ಕಾಂಗ್ರೆಸ್ ಕರಾಳ ಸತ್ಯ. ಇದು ಇಡೀ ಜಗತ್ತನ್ನೇ ದಿಗ್ರಭಮೆಗೊಳಿಸಿದ “ಶಹಾ ಬಾನೋ ತಲಾಖ್ ಕೇಸ್ “. 1932 ರಲ್ಲಿ ಶಹಾ ಬಾನೊ ಎಂಬ ಸುಂದರ ಹುಡುಗಿಯ ಜೊತೆ ಮಹಮ್ಮದ್ ಅಹಮದ್ ಖಾನ್ ಎಂಬ ವಕೀಲನ ಮದುವೆ ಆಯಿತು. ತುಂಬಾ ಸುಖದಿಂದ ಇಬ್ಬರೂ ಸಂಸಾರ ನಡೆಸಿ 5 ಮಕ್ಕಳಿಗೆ ಜನ್ಮ ನೀಡಿದರು.

ಮದುವೆ ಆದ 14 ವರ್ಷದ ನಂತರ ಮೊಹಮ್ಮದ್ ಮತ್ತೊಬ್ಬ ಚಿಕ್ಕ ವಯಸ್ಸಿನ ಹುಡುಗಿಯ ಜೊತೆ ಮದುವೆ ಆದ. ಇಬ್ಬರೂ ಹೆಂಡಂದಿರ ಜೊತೆಗೆ ಮಹಮ್ಮದ್ ತುಂಬಾ ವರ್ಷ ಜೀವನ ನಡೆಸಿದ. ಶಹಾ ಬಾನೊ 62 ವರ್ಷದ ಮುದುಕಿಯಾದಾಗ ,ಅವಳಿಗೆ ಇಸ್ಲಾಮಿಕ್ ತಲಾಖ್ (Divorce) ಅನ್ನು ನೀಡಿ, ಅವಳು & ಅವಳ ಐದು ಮಕ್ಕಳನ್ನು ಮನೆ ಹೊರಗೆ ಹಾಕಿದ.

ವಿಚಾರ ಮಾಡಿ, ಜೀವನ ಪರ್ಯಂತ ಯಾರ ಜೊತೆ ಜೀವನ ಮಾಡಿ, ಕಷ್ಟ ಸುಖ ಹಂಚಿಕೊಂಡಳೊ, ಅವಳಿಗೆ ವಯಸ್ಸಾಗಿ ಮುಪ್ಪು ಬಂದಾಗ ಅದೂ ಕಾರಣ ಇಲ್ಲದೇ ವಿಚ್ಛೇದನ ಕೊಟ್ಟಾಗ ಎಷ್ಟು ನೋವು ಆಗಬೇಡ ? ಇಷ್ಟೇ ಅಲ್ಲ, ಮನೆಯಿಂದ ಹೊರ ಹಾಕಿ ಶಹಾ ಬಾನೊಗೆ ಜೀವನ ನಡೆಸಲು ಒಂದು ರೂಪಾಯಿ ಕೊಡುವುದಿಲ್ಲ ಎಂದರೆ ಆ ನಿಸ್ಸಾಹಯಕ ಮುದಿ ಹೆಣ್ಣು ಎಲ್ಲಿಗೆ ಹೋಗಬೇಕು ಹೇಳಿ ?

ಶಹಾ ಬಾನೊ ಕೇಸ್ ಹಾಕಿದಳು!! 1986 ರಲ್ಲಿ ಸುಪ್ರೀಂ ಕೋರ್ಟ್ ಶಹ ಬಾನೊ ಪರ ತೀರ್ಪು ನೀಡಿ‌, ಅವಳಿಗೆ ಭಾರತೀಯ ಕಾನೂನಿನ ಪ್ರಕಾರ ಆಜೀವ ಪರ್ಯಂತ ಜೀವನ ಮಾಡಲು ಹಣ ಕೊಡಬೇಕು ಎಂದು‌ ನ್ಯಾಯಯುತವಾದ‌ ತೀರ್ಪು ನೀಡಿತು!! ಇದು ತಪ್ಪು ತೀರ್ಪಾ ಅಂತ ವಿಚಾರ ಮಾಡಿ? ಈ ತೀರ್ಪನ್ನು ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB – ಭಾರತದ ಪ್ರತಿ ಜಿಲ್ಲೆಯಲ್ಲಿ ಷರೀಯಾ ಕೋರ್ಟ್ ಗಳನ್ನು ಮಾಡುತ್ತೆವೆ ಎಂದು ಹಾರಾಡ್ತಾ ಇದಾರಲ್ಲ ಅವರು ) ತಿರಸ್ಕರಿಸಿ, ದೇಶಾದ್ಯಂತ ಎಲ್ಲಾ ಮುಸ್ಲಿಂ ಮುಲ್ಲಾಗಳು ಪ್ರತಿಭಟನೆ ನಡೆಸಿದರು.

ಎಂಥಾ ನ್ಯಾಯಯುತ ವಿಚಾರಕ್ಕೆ ಪ್ರತಿಭಟನೆ ಅಲ್ಲವೇ?

ಈ ಘಟನೆ ನೋಡಿದ ರಾಜೀವ್ ಗಾಂಧಿ, ಮುಸ್ಲಿಂ ಮುಲ್ಲಾಗಳ ಒತ್ತಾಯಕ್ಕೆ ಹೆದರಿ, ಮುಸ್ಲಿಂ ವೋಟ್ ಗಳ ಆಸೆಗೆ, ಸಂಸತ್ತಿನಲ್ಲಿ ಬಹುಮತ ಇದ್ದ ಕಾರಣ, ಸುಪ್ರೀಂ ಕೋರ್ಟ್ ನಿರ್ಧಾರವನ್ನು ಧಿಕ್ಕರಿಸುವ ಒಂದು ಹೊಸ ಕಾನೂನನ್ನು ಜಾರಿಗೆ ತಂದರು. ಆ ಕಾನೂನು ಏನು ಗೊತ್ತೆ? “ಮುಸ್ಲಿಂ ಹೆಣ್ಣಿಗೆ ವಿಚ್ಛೇದನ ಆದ ನಂತರ, ಅವಳ ಗಂಡ ಕೇವಲ 90 ದಿವಸ ಅಥವಾ 3 ತಿಂಗಳುಗಳವರೆಗೆ ಮಾತ್ರ ಅವಳ ಜೀವನಾಧಾರಕ್ಕೆ ದುಡ್ಡು ಕೊಡಬೇಕು. ಅಮೇಲೆ ಆ ಹೆಣ್ಣಿನ ಜವಾಬ್ದಾರಿ ಗಂಡನ ಮೇಲೆ ಇರುವುದಿಲ್ಲ”

ಇದರಲ್ಲಿ ವಿಶೇಷತೆ ಏನಂದರೆ ಇದು ಇಸ್ಲಾಮಿಕ್ ಷರೀಯಾ ಕಾನೂನಿನ ಪ್ರತಿ (exact copy)ಅಂದರೆ ಷರೀಯಾ ಕಾನೂನನ್ನೆ ರಾಜೀವ್ ಗಾಂಧಿ, ಭಾರತೀಯ ಕಾನೂನು ಪದ್ಧತಿಗೆ ಸೇರಿಸಿದ ಪುಣ್ಯಾತ್ಮ!! ಅಂದರೆ ಹೊಸ ಕಾನೂನಿಂದ ಸುಪ್ರೀಂ ಕೋರ್ಟ್ ತೀರ್ಪು ಸಂಪೂರ್ಣ ಅರ್ಥ ಕಳೆದುಕೊಳ್ಳುತ್ತದೆ & ಷರೀಯಾ ಕಾನೂನು ಗೆದ್ದಂತೆ ಆಗುತ್ತದೆ.

ಈಗ ಹೇಳಿ ಸುಪ್ರೀಂ ಕೋರ್ಟ್ ನ ತೀರ್ಪು ಸರಿಯಾದದ್ದೊ ಅಥವಾ ಕಾಂಗ್ರೆಸ್ ನ ರಾಜೀವ ಗಾಂಧಿ ಭಾರತೀಯ ಕಾನೂನಿಗೆ ಸೇರಿಸಿದ, ಷರೀಯಾ ಕಾನೂನು ಶ್ರೇಷ್ಠವೋ? ರಾಜೀವ ಗಾಂಧಿ & ಕಾಂಗ್ರೆಸ್ ತಮ್ಮ ರಾಜಕೀಯ ಲಾಭಕ್ಕಾಗಿ ಒಬ್ಬ 62 ವರ್ಷದ ನಿಸ್ಸಹಾಯಕ ಮುಸ್ಲಿಂ ಹೆಣ್ಣಿನ ಬಾಳು ಮಾಡಿದ್ದು ಸರಿಯೋ?? ಈಗ ಇದೇ ಕಾಂಗ್ರೆಸ್ ಮುಸಲ್ಮಾನರ ಷರೀಯಾ ಕಾನೂನಿಗೆ ಬೆಂಬಲ ನಿಂತು ಮತ್ತೊಮ್ಮೆ ಸಂವಿಧಾನದ ವಿರುದ್ಧ ತಿರುಗಿಬಿದ್ದಿದೆ!!

ಕಾಂಗ್ರೆಸ್ ಮುಸ್ಲಿಂ ವೋಟ್ ಗಳಿಗಾಗಿ, ಅಂಬೇಡ್ಕರರು ಹೇಳಿದ ಭಾರತೀಯ ಕಾನೂನು ಕಿತ್ತು ಹಾಕಿ, ಇಸ್ಲಾಮಿಕ್ ಷರೀಯಾ ಕಾನೂನು ತರಲು ಯಾವ ಮಟ್ಟಿಗಾದರೂ ಇಳಿಯಬಹುದು ಎಂಬುದು ತಿಳಿಯಿತೇ?? ಏಕರೂಪ ನಾಗರಿಕ ಸಂಹಿತೆ – Uniform Civil Code – ಅಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಧರ್ಮದವರಿಗೂ ಒಂದೇ ಕಾನೂನು ಬರುವಂತೆ ಆಗಬೇಕು ಅಲ್ಲವೇ??

Netflix ಇತ್ತೀಚೆಗಷ್ಟೇ ಶುರು ಮಾಡಿರುವ SACRED GAMES ಎಂಬ ಶಿರ್ಷಿಕೆಯಡಿಯಲ್ಲಿ ಶುರುವಾಗಿರುವ ಪ್ರೋಗ್ರಾಂ ಒಂದರಲ್ಲಿ ರಾಜೀವ್ ಗಾಂಧಿ ಶಾ ಬಾನೋ ಕೇಸಿನಲ್ಲಿ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿದ್ದರ ಕುರಿತು ತೋರಿಸಲಾಗಿತ್ತು.ಇದರ ಕುರಿತು ಬಾಲಿವುಡ್ ನಾಯಕನಟ ನವಾಜುದ್ದೀನ್ ಸಿದ್ದಿಕಿ ಆ ಸೀರಿಸ್ ವಿಡಿಯೋಗೆ ಹಿನ್ನೆಲೆ ಧ್ವನಿ ನೀಡಿದ್ದರು. ಇದ್ದದ್ದನ್ನ ಇದ್ದ ಹಾಗೇ ತೋರಿಸಿ ಅದರ ಬಗ್ಗೆ ಮಾತನಾಡಿದ್ದಕ್ಕೆ ಆ ಬಾಲಿವುಡ್ ನಟನ ವಿರುದ್ಧ ಕಾಂಗ್ರೆಸ್ ಕೇಸ್ ದಾಖಲಿಸಿದೆ.

ದೇಶದಲ್ಲಿ ಮೋದಿ ಸರ್ಕಾರದ ನೇತೃತ್ವದಲ್ಲಿ ಅಸಹಿಷ್ಣುತೆ ಭುಗಿಲೆದ್ದಿದೆ, ಮುಕ್ತವಾಗಿ ಮಾತನಾಡುವುದಕ್ಕೂ ಭಯವಿದೆ, ಜನರ ವಾಕ್ ಸ್ವಾತಂತ್ರ್ಯ ಹರಣವಾಗಿದೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆಯೆಂದು ಬೊಬ್ಬೆಯಿಡುವ ಕಾಂಗ್ರೆಸ್ ಹಾಗು ಕಾಂಗ್ರೆಸ್ ಬೆಂಬಲಿತ ಬುದ್ಧಿಜೀವಿಗಳು, ಸಾಹಿತಿಗಳು ಮಾತ್ರ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನದಿರುವುದು ಮಾತ್ರ ಇವರ ಸೆಲೆಕ್ಟಿವ್ ಸೆಕ್ಯೂಲರಿಸಮ್ಮಿಗೆ ಹಿಡಿದ ಕೈಗನ್ನಡಿಯಾಗಿದೆ

ನವಾಜುದ್ದಿನ್ ಸಿದ್ದಿಕಿ ವಿರುದ್ಧ ಕಾಂಗ್ರೆಸ್ ದಾಖಲಿಸಿರುವ ಪ್ರತಿ ಇಲ್ಲಿದೆ ನೋಡಿ

ಅಷ್ಟಕ್ಕೂ ಕಾಂಗ್ರೆಸ್ ಕೇಸ್ ದಾಖಲಿಸಿದ್ದು ಯಾವ ಕಾರಣಕ್ಕೆ ಗೊತ್ತಾ? ಅದು ಈ ವಿಡಿಯೋ ಕಾರಣಕ್ಕಾಗಿ ಹಾಗು ಇದರ ಹಿನ್ನೆಲೆ ಧ್ವನಿ ನವಾಜುದ್ದಿನ್ ಸಿದ್ದಿಕಿ ಯದ್ದಾಗಿರುವುದು

ಆ ವಿಡಿಯೋ ತುಣುಕು ಇಲ್ಲಿದೆ ನೋಡಿ

ಈ ಪೋಸ್ಟ್ ಅನ್ನು ಒಬ್ಬ ಹೆಣ್ಣಿಗೆ ಕಾಂಗ್ರೆಸ್ ಮಾಡಿದ ಘೋರ ಅನ್ಯಾಯಕ್ಕಾಗಿ ಹಾಗೂ ಸಂವಿಧಾನದ ವಿರುದ್ಧ ನಡೆದ ಕಾಂಗ್ರೆಸ್ಸಿನ ಕರಾಳ ಮುಖವನ್ನು ಬಯಲು ಮಾಡಲು ಶೇರ್ ಮಾಡಿ ಪ್ಲೀಸ್ !! ಕೊನೆಯಲ್ಲಿ, ಪಪ್ಪು ಗೆ ಇಲ್ಲಿ ತನಕ ಮದುವೆ ಆಗದೆ ಇರುವುದು ಶಹಾ ಬಾನೊಗೆ, ರಾಜೀವ ಗಾಂಧಿ ಮಾಡಿದ ಅನ್ಯಾಯದ ಕರ್ಮ ಇರಬಹುದು ಅಲ್ಲವೇ??

(Proof – https://en.m.wikipedia.org/wiki/Mohd._Ahmed_Khan_v._Shah_Bano_Begum )

– Smitha Patil

 •  
  1.5K
  Shares
 • 1.5K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com