Connect with us
Loading...
Loading...

ಪ್ರಚಲಿತ

ಕಾಂಗ್ರೆಸ್ಸಿಗೆ ಒಕ್ಕಲಿಗರು ಮತ ಹಾಕದಿದ್ದಕ್ಕೆ ಜವಾಬ್ದಾರಿ ಹೊರುತ್ತಾರಾ

Published

on

 • 10
 •  
 •  
 •  
 •  
 •  
 •  
 •  
  10
  Shares

ಕಾಂಗ್ರೆಸ್ಸಿಗೆ ಒಕ್ಕಲಿಗರು ಮತ ಹಾಕದಿದ್ದಕ್ಕೆ ಜವಾಬ್ದಾರಿ ಹೊರುತ್ತಾರಾ ಎಂದು ಸುವರ್ಣ ನ್ಯೂಸ್ ಮೂಲಕ ಡಿಕೆಶಿಗೆ ಎಂ.ಬಿ.ಪಾಟೀಲ್ ಸವಾಲು ಹಾಕಿದ್ದಾರೆ.

ಮಂಡ್ಯ, ಹಾಸನ, ರಾಮನಗರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದ್ದು, ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಲು ಯಾರು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅಲ್ಲಿ ಹಿನ್ನಡೆಯಾಗಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.

ಸುದ್ದಿ ಮಾಧ್ಯಮವೊಂದರ ಮೂಲಕ ಡಿಕೆ ಶಿವಕುಮಾರ್ ಗೆ ಸವಾಲು ಹಾಕಿದ್ದು, ಇದಕ್ಕೆ ಅವರು ಪಶ್ಚತ್ತಾಪವನ್ನೂ ಪಡಲಿ. ಕರಾವಳಿಯಲ್ಲಿ ಕಾಂಗ್ರೆಸ್ ಗೆ ಒಂದು ಸ್ಥಾನ ಬಂತು. ಕರಾವಳಿಯಲ್ಲಿ ಲಿಂಗಾಯತರಿದ್ದಾರಾ ಎಂದು ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಒಕ್ಕಲಿಗರ ಮತಗಳಿಗೆ ಡಿ.ಕೆ.ಶಿವಕುಮಾರ್ ಜವಾಬ್ದಾರಿ ತೆಗೆದುಕೊಳ್ಳುತ್ತಾರಾ ಎಂದು ಕೇಳಿರುವ ಅವರು, ಯಾರದ್ದೋ ತಪ್ಪನ್ನು ಯಾರ ಮೇಲೆ ಹೊರಿಸುವ ಡಿಕೆಶಿ ನಡೆ ಸರಿ ಇಲ್ಲ. ಸಿದ್ದರಾಮಯ್ಯರನ್ನು, ನನ್ನನ್ನು, ಲಿಂಗಾಯತರನ್ನು ದೂರುವುದು ತಪ್ಪು. ಬೇಜವಾಬ್ದಾರಿತನದ ಹೇಳಿಕೆ ನೀಡಿರುವ ಡಿಕೆಶಿ ನಡೆ ತಪ್ಪು ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ಪ್ರತ್ಯೇಕ ಧರ್ಮದ ಬಗ್ಗೆ ನೀಡಿರುವ ಹೇಳಿಕೆಗೆ ಡಿ‌ ಕೆ ಶಿವಕುಮಾರ್ ಬೆಲೆ ತೆರಬೇಕಾಗುತ್ತದೆ. ಡಿ ಕೆ ಶಿವಕುಮಾರ್ ಅವ್ರು ಕೆಪಿಸಿಸಿ ಅಧ್ಯಕ್ಷರಲ್ಲ, ಎಐಸಿಸಿ ಅಧ್ಯಕ್ಷರು ಕೂಡ ಹೀಗೆ ಹೇಳಿ ಅಂತ ಹೇಳಿಲ್ಲ. ಡಿ ಕೆ ಶಿವಕುಮಾರ್ ಅವ್ರು ನೀಡಿರುವ ಹೇಳಿಕೆ ಕುರಿತು ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮೊದಲಿಂದಲೂ ನಡೆದುಕೊಂಡು ಬಂದಿದೆ. ಈಗ ಡಿ ಕೆ ಶಿವಕುಮಾರ್ ಹೇಳಿಕೆ ಬಾಲೀಷತನದಿಂದ ‌ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಲಿಂಗಾಯತ ವೀರಶೈವ ಧರ್ಮ ರಚನೆ ಕುರಿತು ಹೋರಾಡಿದ ನಮ್ಮ ಹಿಂದಿನ ಕಾಂಗ್ರೆಸ್​ ಸರ್ಕಾರ ಈ ವಿಚಾರದಲ್ಲಿ ತಪ್ಪು ಮಾಡಿದ್ದೇವೆ. ಈ ಬಗ್ಗೆ ಜನರು ನಮ್ಮನ್ನು ಕ್ಷಮಿಸಬೇಕು ಎಂದು ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​ ಕ್ಷಮಾಪಣೆ ಕೇಳಿದರು.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರಂಭಾಪುರಿ ಶ್ರೀಗಳ ದಸರಾ ಧರ್ಮಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಮಾತನಾಡಿದರು. 2018ರ ರಾಜ್ಯ ವಿಧಾನ ಸಭೆಗೂ ಮುನ್ನ ಕೇಳಿ ಬಂದಿದ್ದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ನೀಡಲು ಈ ಹಿಂದಿನ ಕಾಂಗ್ರೆಸ್​ ಸರ್ಕಾರ ಮುಂದಾಗಿತ್ತು. ಆದರೆ ಸರ್ಕಾರ, ರಾಜಕಾರಣಿಗಳು ಧರ್ಮದ ವಿಚಾರಕ್ಕೆ ಕೈ ಹಾಕಬಾರದು ಎಂಬುದು ನಮಗೆ ತಿಳಿಯಿತು. ಈ ವಿಚಾರದಲ್ಲಿ ನಾವು ಎಡವಿದೆವು. ನಮ್ಮ ಸರ್ಕಾರದಿಂದ ದೊಡ್ಡ ತಪ್ಪಾಯಿತು ಎಂದು ಇದೇ ಮೊದಲಬಾರಿ ಈ ಕುರಿತು ತಪ್ಪೊಪ್ಪಿಕೊಂಡರು.

ಧರ್ಮದ ವಿಚಾರದಲ್ಲಿ ನಾವು ಮಾಡಿದ ಕಾರ್ಯ ಒಳ್ಳೆಯದಲ್ಲ. ಇದರಿಂದಾಗಿ ನಾನು ಹೃದಯತುಂಬಿ ಕ್ಷಮೆ ಕೇಳುತ್ತಿದ್ದು ಎಂದು ನೆರೆದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಿದರು.

ಈ ಹಿಂದಿನ ಸರ್ಕಾರದಿಂದ ಯಾಕೆ ಈ ಪ್ರಯತ್ನ

ರಾಜ್ಯದಲ್ಲಿ ಅತಿ ಹೆಚ್ಚಿನ ಮತ ಬ್ಯಾಂಕ್​ಗಳಾದ ಪ್ರತ್ಯೇಕ ಲಿಂಗಾಯತ ಧರ್ಮದ ಕಿಚ್ಚು ದಶಕಗಳಿಂದ ಇತ್ತು. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಮತಬ್ಯಾಂಕ್​ ಗಳಾಗಿರುವ ಈ ಲಿಂಗಾಯತ ಧರ್ಮವನ್ನು ತಮ್ಮತ್ತ ಸೆಳೆಯುವ ಉದ್ದೇಶದಿಂದಾಗಿ ಕಾಂಗ್ರೆಸ್​ ಸರ್ಕಾರ ಈ ವಿಚಾರಕ್ಕೆ ಮರು ಜೀವ ತುಂಬಿತು.

ಈ ಹಿಂದಿನ ಸರ್ಕಾರದ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ ಪಾಟೀಲ್​ ನೇತೃತ್ವದಲ್ಲಿ ಈ ವಿಚಾರದಲ್ಲಿ ಸರ್ಕಾರ ಪರೋಕ್ಷವಾಗು ಈ ಪ್ರತಿಭಟನೆಗೆ ಮುಂದಾಯಿತು. ವೀರಶೈವಗಳ ಪಂಚ ಪೀಠದ ಧರ್ಮ ಹಾಗೂ ಬಸವಣ್ಣ ಸ್ಥಾಪಿಸಿದ ಧರ್ಮಗಳು ಪ್ರತ್ಯೇಕವಾಗಿದೆ. ಇದರಿಂದಾಗಿ ನಮಗೆ ಪ್ರತ್ಯೇಕ ಲಿಂಗಾಯತ ಧರ್ಮದ ಸಂವಿಧಾನಿಕ ಸ್ಥಾನಮಾನ ನೀಡಬೇಕು ಎಂದು ಮಾತೇ ಮಹಾದೇವಿ ಸೇರಿದಂತೆ ಅನೇಕ ಮಠಾಧೀಶರು ಕೂಗು ಎತ್ತಿದ್ದರು.

ಆದರೆ ರಂಭಾಪುರಿ ಸೇರಿದಂತೆ ಪಂಚ ಸದಸ್ಯ ಪೀಠಗಳು ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿ, ಇದು ರಾಜಕೀಯ ಮತ ಪಡೆಯಲು ಸರ್ಕಾರ ನಡೆಸಿರುವ ಧರ್ಮ ಒಡೆಯುವ ತಂತ್ರ ಎಂದು ಆರೋಪಿಸಿದವು.

ಚುನಾವಣೆಗೂ ಭಾರೀ ಸದ್ದು ಮಾಡಿದ್ದ ಈ ವಿವಾದ ಕುರಿತು ಸರ್ಕಾರ ಕುರಿತು ಕೇಂದ್ರ ಸರ್ಕಾರಕ್ಕೂ ಸಹ ರಾಜ್ಯ ಸರ್ಕಾರ ಶಿಫಾರಸ್ಸು ಕಳಿಸಿತ್ತು. ಪ್ರತ್ಯೇಕ ಲಿಂಗಾಯತ ಅಸ್ತ್ರವನ್ನು ಇಟ್ಟು ಕೊಂಡು ಪ್ರತಿಭಟನೆ ನಡೆಸಿದ ಸಚಿವ ಎಂಬಿ ಪಾಟೀಲ್​ ಸೋಲುವುದರೊಂದಿಗೆ, ಕಾಂಗ್ರೆಸ್​ ಕೂಡ ಲಿಂಗಾಯತ ಮತ ಸೆಳೆಯುವಲ್ಲಿ ಚುನಾವಣೆಯಲ್ಲಿ ಸೋತು, ಬಹುಮತ ಪಡೆಯುವಲ್ಲಿ ವಿಫಲವಾಯಿತು.

 •  
  10
  Shares
 • 10
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com