Connect with us
Loading...
Loading...

ಪ್ರಚಲಿತ

ಸಾಲು ಸಾಲು ರೇಲ್ವೆ ದುರ್ಘಟನೆಗಳ ಹಿಂದಿನ ಸಂಚು ಬಯಲು!! ಪ್ರಧಾನಿ ಮೋದಿಯನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ?!!!

Published

on

 • 8.4K
 •  
 •  
 •  
 •  
 •  
 •  
 •  
  8.4K
  Shares

ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ರಾಜಕೀಯ ವಿರೋಧಿಗಳು, ಭಯೋತ್ಪಾದಕರು, ಪಾಕಿಸ್ತಾನ ಹೀಗೆ ಪ್ರಧಾನಿ ಇವರೆಲ್ಲರ ಹಿಟ್ ಲಿಸ್ಟ್ ನಲ್ಲಿರೋದು ತಮಗೆಲ್ಲಾ ಗೊತ್ತಿರುವ ವಿಚಾರವೇ.

ಪ್ರಧಾನಿ ಮೋದಿ ರಾಷ್ಟ್ರದ ಒಳಿತಿಗಾಗಿ ದಿನದ 18 ಗಂಟೆ ಅವಿರತವಾಗಿ ಶ್ರಮಪಡುತ್ತಿದ್ದಾರೆ. ದೇಶ ವಿದೇಶಗಳಿಗೆ ತೆರಳಿ ದೇಶದ ರಕ್ಷಣೆಗಾಗಿ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ಪ್ರಧಾನಿ ಮೋದಿಯ ವರ್ಚಸ್ಸು ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿದೆ ಹೊರತು ಕುಗ್ಗುತ್ತಿಲ್ಲ, ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಮೊನ್ನೆ ಮೊನ್ನೆಯಷ್ಟೇ ಅಂತರಾಷ್ಟ್ರೀಯ ಸಂಸ್ಥೆಯೊಂದು ನಡೆಸಿದ ಸರ್ವೇ.

ಆ ಸರ್ವೆಯಲ್ಲಿ ಬಯಲಾದ ಸಂಗತಿಯೆಂದರೆ ಪ್ರಧಾನಿ ಮೋದಿ ಜಗತ್ತಿನ ಮೂರನೇ ಪ್ರಬಲಶಾಲಿ ವ್ಯಕ್ತಿ ಎಂದು. ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೋದಿಯ ಜನಪ್ರೀಯತೆಯಿಂದ ಕಂಗೆಟ್ಟಿರುವ ವಿರೋಧಿಗಳು ಒಂದಿಲ್ಲ ಒಂದು ಷಡ್ಯಂತ್ರ ಮಾಡಿ ಪ್ರಧಾನಿ ಮೋದಿಯನ್ನ ಹಳಿಯಲು ಸಜ್ಜಾಗಿ ನಿಂತಿದ್ದಾರೆ.

ಅಂತಹ ಷಡ್ಯಂತ್ರಗಳಲ್ಲಿ ಒಂದು ಸರಣಿ ರೈಲು ಅಪಘಾತಗಳು.
ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ದೇಶದಲ್ಲಿ ಸರಣಿ ರೈಲು ದುರಂತಗಳು ಸಂಭವಿಸುತ್ತವೆ. ಈ ಮುನ್ನ ದಕ್ಷ ವ್ಯಕ್ತಿಯಾಗಿದ್ದ ರೇಲ್ವೇ ಸಚಿವರಾಗಿದ್ದ ಸುರೇಶ್ ಪ್ರಭು ಸರಣಿ ರೈಲು ದುರಂತಗಳಿಗೆ ಮನನೊಂದು ರಾಜೀನಾಮೆ ಕೊಟ್ಟಿದ್ದರು.

ಸರಣಿ ರೈಲು ಅಪಘಾತಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಈ ದುರ್ಘಟನೆಗಳ ಹಿಂದೆ ಷಡ್ಯಂತ್ರವಿದೆ, ಬೇಕು ಬೇಕಂತಲೇ ಇಂತಹ ಘಟನೆಗಳನ್ನ ಸಂಭವಿಸುವ ಹಾಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ, ಭಯೋತ್ಪಾದಕ ಸಂಘಟನೆಗಳ ಕೈವಾಡವೂ ಇದರಲ್ಲಿದೆ ಎಂಬ ಮಾಹಿತಿಯನ್ನ ಹೊರಹಾಕಿದ್ದರು.

ಹೌದು ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ದೇಶದ ಯಾವ ಭಾಗದಲ್ಲೂ ಉಗ್ರರ ದುಷ್ಕೃತ್ಯಗಳು ನಡೆದಿಲ್ಲ, ಕಾಶ್ಮೀರ ಹಾಗು ಪಠಾಣಕೋಟ್ ದಾಳಿಯನ್ನ ಹೊರತುಪಡಿಸಿ.

ಪ್ರಧಾನಿ ಮೋದಿಯವರ ಗುಪ್ತಚರ ಇಲಾಖೆ ಎಷ್ಟು ಬಲವಾಗಿದೆಯೆಂದರೆ ದೇಶದ ಒಳ ನುಗ್ಗಿ ಭಯೋತ್ಪಾದನಾ ಕೃತ್ಯಗಳು ಎಸಗಲು ಭಯೋತ್ಪಾದಕರು ತಿಣಯಕಾಡುತ್ತಿದ್ದಾರೆ. ಗಡಿ ದಾಟಿ ನುಸುಳಿ ಬರಬೇಕೆಂದರೆ ನುಸುಳುವ ಹೊತ್ತಲ್ಲೇ ನಮ್ಮ ಯೋಧರು ಭಯೋತ್ಪಾದಕರನ್ನ ಅವರ ಜನ್ನತ್ ನತ್ತ ಕಳಿಸಿಕೊಡುತ್ತಿದ್ದಾರೆ.

ಇದರಿಂದ ಕಂಗೆಟ್ಟಿರುವ ಭಯೋತ್ಪಾದಕರು ಭಾರತದಲ್ಲಿ ಒಂದು ರೀತಿಯ ಪ್ರಾಕ್ಸಿ ವಾರ್ ಶುರು ಮಾಡಿಬಿಟ್ಟಿದ್ದಾರೆ. ಅದೇನೆಂದರೆ ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈ ಎನ್ನುವ ಹಲಾಲ್ಕೋರರನ್ನ ಬಳಸಿಕೊಂಡು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನ ಎಸಗುವುದು.

ಹೌದು ಸರಣಿ ರೈಲು ಅಪಘಾತಗಳ ಹಿಂದೆಯೂ ಈ ಶಕ್ತಿಗಳ ಕೈವಾಡವೇ ಇದೆ. ಅದರ ಷಡ್ಯಂತ್ರ ಈಗ ಒಂದೊಂದಾಗಿ ಮೋದಿ ಸರ್ಕಾರ ಬಯಲು ಮಾಡುತ್ತಿದೆ.

30 ವರ್ಷದ ಫುರ್ಕಾನ್ ಎಂಬ ಮುಸಲ್ಮಾನನ್ನ ಇತ್ತೀಚೆಗಷ್ಟೇ ಪೋಲಿಸರು ಬಂಧಿಸಿದ್ದು ಆತನಿಂದ ಸ್ಪೋಟಕ ಮಾಹಿತಿಯಿಂದನ್ನ ಬಾಯಿ ಬಿಡಿಸಿದ್ದಾರೆ.

30 ವರ್ಷದ ಫುರ್ಕಾನ್ ಎಂಬ ವ್ಯಕ್ತಿ ರೇಲ್ವೇ ಅವಘಡ ಸಂಭವಿಸಲು ಉತ್ತರಪ್ರದೇಶದ ಮುರಾದ್ ನ ಹತ್ತಿರ ರೇಲ್ವೆ ಹಳಿಯ ಫಿಶ್ ಪ್ಲೇಟ್ ಗಳನ್ನ ಕೀಳುತ್ತಿದ್ದ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಮುಂಬೈ-ಡೆಹರಾಡೂನ್ ಎಕ್ಸಪ್ರೆಸ್ ನ್ನ ಟಾರ್ಗೇಟ್ ಮಾಡಲು ಈತ ಸಂಚು ರೂಪಿಸಿದ್ದ ಎಂದು ಹೇಳಲಾಗುತ್ತಿದೆ. ಈ ರೈಲನ್ನ ಹಳಿತಪ್ಪಿಸುವಂತೆ ಮಾಡಲು ಫುರ್ಕಾನ್ ರೈಲು ಕಂಬಿಗಳಲ್ಲಿನ ಫಿಶ್ ಪ್ಲೇಟ್ ಗಳನ್ನ ಕೀಳುವುದಕ್ಕೆ ಮುಂದಾಗಿದ್ದ.

ಹದ್ ಫುರ್ಕಾನ್ ಎಂಬ ಈ ವ್ತಕ್ತಿ ಮೂಲತಃ ರಾಜಸ್ಥಾನದ ಬಿಜನೋರ್ ನಿವಾಸಿಯಾಗಿದ್ದು ಈತ ಫಿಶ್ ಪ್ಲೇಟ್ ಗಳನ್ನ ಕಿತ್ತುವಾಗ ಹತ್ತಿರದ ಗ್ರಾಮದ ಮೂವರು ಯುವಕರು ನೋಡಿ ಈತನನ್ನ ಬಂಧಿಸಿ ಪೋಲಿಸರಿಗೊಪ್ಪಿಸಿದ್ದಾರೆ.

ಇದರಿಂದ ಮತ್ತೆ ನೂರಾರು ಜನ ರೈಲು ದುರಂತದಲ್ಲಿ ಜೀವಕಳೆದುಕೊಳ್ಳುವ ಭಾರಿ ದುರಂತವೊಂದು ತಪ್ಪಿದಂತಾಗಿದೆ.

ಇದೇನಾದರೂ ಸಂಭವಿಸಿದ್ದಿದ್ದರೆ ಅದನ್ನ ಮತ್ತೆ ಯಾರ ತಲೆಗೆ ಕಟ್ಟಲಾಗುತ್ತಿತ್ತು? ಮತ್ತೆ ಪ್ರಧಾನಿ ಮೋದಿಯನ್ನೇ ಈ ವಿಷಯಕ್ಕಾಗಿ ಟಾರ್ಗೇಟ್ ಮಾಡಿಬಿಡುತ್ತಿದ್ದರೇನೋ.

ಫುರ್ಕಾನ್ ಎಂಬ ಜಿಹಾದಿಯನ್ನ ಅರೆಸ್ಟ್ ಮಾಡಿದ ಪೋಲಿಸರಿಗೆ ಹಾಗು ಭಯೋತ್ಪಾದನಾ ನಿಗ್ರಹ ದಳಕ್ಕೆ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ.

ಆತ ವಿಚಾರಣೆಯಲ್ಲಿ ಬಾಯಿಬಿಟ್ಟ ಸತ್ಯವೇನು ಗೊತ್ತಾ?

“ನನಗೆ ಈ ರೀತಿಯ ರೈಲು ಹಳಿಗಳ ಧ್ವಂಸ ಮಾಡೋಕೆ ಹಣ ಸಿಗುತ್ತಿತ್ತು ಹಾಗಾಗಿ ದುಡ್ಡಿಗಾಗಿ ಹೀಗೆ ಮಾಡ್ತಾ ಇದ್ದೆ” ಎಂದಿದ್ದಾನೆ ಫುರ್ಕಾನ್

ಕೆಲ ತಿಂಗಳುಗಳ ಹಿಂದೆಯೂ ಕೂಡ ಘಾಜಿಯಾಬಾದ್ ನ ಹತ್ತಿರ ಮೂರು ಜನ ಬಿಹಾರ್ ನಲ್ಲಿ ರೈಲ್ವೇ ಹಳಿಯ ಫಿಶ್ ಪ್ಲೇಟ್ ಕೀಳುವಾಗ ಬಂಧಿತರಾಗಿದ್ದು ಅವರೂ ಕೂಡ ತಮಗೆ ಇದಕ್ಕಾಗಿ ಹಣ ಸಿಗುತ್ತಿತ್ತು ಎಂಬ ಸ್ಪೋಟಕ ಮಾಹಿತಿಯನ್ನ ಬಾಯಿಬಿಟ್ಟಿದ್ದರು.

ಫುರ್ಕಾನ್ ಎಂಬ ಜಿಹಾದಿಯನ್ನ ರೆಡ್ ಹ್ಯಾಂಡ್ ಆಗಿ ಸರಿಯಾದ ಸಮಯದಲ್ಲಿ ಹಿಡಿದ ಆ ಹಳ್ಳಿಯ ಮೂವರು ಯುವಕರಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು. ಇವರು ಈ ಸಾಹಸ ಮಾಡದಿದ್ದರೆ ನೂರಾರು ಜನ ಅಮಾಯಕರು ಪ್ರಾಣ ಕಳೆದುಕೊಂಡಿರಬೇಕಾಗುತ್ತಿತ್ತೇನೋ.

ಪ್ರಧಾನಿ ಮೋದಿಯನ್ನ ರಾಜಕೀಯವಾಗಿ ಮುಗಿಸಲು ವಿರೋಧಿಗಳು ಯಾವ ಹಂತಕ್ಕೂ ಹೋಗಬಲ್ಲರು ಎಂಬುದು
ಇದರಿಂದ ಸ್ಪಷ್ಟವಾಗಿ ತಿಳಿದುಬರುವ ಸಂಗತಿ.

 •  
  8.4K
  Shares
 • 8.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com