Connect with us
Loading...
Loading...

ಕುತೂಹಲಕಾರಿ

ಪ್ರಧಾನಿ ಮೋದಿಯವರೇ ಖುದ್ದು ಫೋನ್ ಮಾಡಿ ಕರೆದ ಈ ವ್ಯಕ್ತಿಯಾದರೂ ಯಾರು?ಆತ ಬಂದ ಬಳಿಕ ಪ್ರಧಾನಿ ಮೋದಿ ಮಾಡಿದ್ದೇನು ಗೊತ್ತಾ?

Published

on

 • 7.6K
 •  
 •  
 •  
 •  
 •  
 •  
 •  
  7.6K
  Shares

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಪ್ರಧಾನಿ ಮೋದಿ ಹೇಗೆ ಹಗಲು ರಾತ್ರಿಯೆನ್ನದೆ ದೇಶ ಸೇವೆ ಮಾಡುತ್ತಿದ್ದಾರೆ ಅನ್ನೋದರ ಬಗ್ಗೆಯಂತೂ ನಾವು ನಿಮಗೆ ಹೇಳುವ ಅವಶ್ಯಕತೆಯಿಲ್ಲ ಅನಿಸುತ್ತೆ. ಪ್ರಧಾನಿ ಮೋದಿಯವರು ಈಗಲೂ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದ ಬಳಿಕ ರಾತ್ರಿ ತಾವು ಮಲುಗುವವರೆಗೂ ಸದಾ ತಮ್ಮ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿಯೇ ಇರುತ್ತಾರೆ.

ದಿನವಿಡೀ ಅವರ ಬಿಡುವಿಲ್ಲದ ವೇಳಾಪಟ್ಟಿ ಕಾರ್ಯಕ್ರಮಗಳಿಂದ ಕೂಡಿರುತ್ತದೆ. ಪ್ರಧಾನಿ ಮೋದಿಯವರನ್ನ ಭೇಟಿಯಾಗಲು ದೇಶದ ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಮಿದಾರರು, ಅವರ ಅಭಿಮಾನಿಗಳು ತುದಿಗಾಲ ಮೇಲೆ ಕಾದು ಕುಳಿತಿರುತ್ತಾರೆ. ಆದರೆ ಅವರ ಬ್ಯುಸಿ ಶೆಡ್ಯೂಲ್ ನ ಕಾರಣ ಅವರು ಎಲ್ಲರನ್ನೂ ಭೇಟಿಯಾಗಲು ಸಾಧ್ತವಾಗುವುದಿಲ್ಲ ಆದರೆ ಇತ್ತೀಚೆಗಷ್ಟೇ ಹರಿಯಾಣಾಗೆ ತೆರಳಿದ್ದ ಪ್ರಧಾನಿ ಮೋದಿ ಮಾತ್ರ ಒಬ್ಬ ವ್ಯಕ್ತಿಯ ಜೊತೆಗೆ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಗಾಗುವಂತೆ ಮಾಡಿದ ಪ್ರಸಂಗ ನಡೆದಿತ್ತು.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬೇಕಾದ ವಿಷಯವೆಂದರೆ ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ಮೋದಿಯವರು ಹರಿಯಾಣಾದ ರೋಹಟಕ್ ಗೆ ತೆರಳಿ ಅಚಾನಕ್ಕಾಗಿ ಮಾಡಿದ ಕೆಲಸವೊಂದನ್ನ ಮಾಡಿ ಸಭೆಯಲ್ಲಿ ನೆರೆದಿದ್ದ ಜನರೆಲ್ಲಾ ಒಂದು ಬಾರಿ ಅಚ್ಚರಿಗೊಳಗಾಗಿವಂತೆ ಮಾಡಿದ್ದರು. ಹರಿಯಾಣಾದ ರೋಹಟಕ್ ತಲುಪಿದ ಬಳಿಕ ಪ್ರಧಾನಿ ಮೋದಿ ಏಕಾಏಕಿ ಒಬ್ಬ ವ್ಯಕ್ತಿಗೆ ಕರೆ ಮಾಡಿ ಆತನಿಗೆ ಬರಲು ಹೇಳಿದ್ದಾರೆ. ಆ ವ್ಯಕ್ತಿ ಬಂದ ತಕ್ಷಣ ಆತನನ್ನ ಪ್ರಧಾನಿ ಮೋದಿ ತಬ್ಬಿಕೊಂಡು ಆತನಿಗೆ ಧನ್ಯವಾದ ತಿಳಿಸಿದ್ದಾರೆ.

ಅಚಾನಕ್ಕಾಗಿ ನಡೆದ ಈ ದೃಶ್ಯವನ್ನ ಅಲ್ಲಿ ನೆರೆದಿದ್ದ ಕಾರ್ಯಕರ್ತರು ನೋಡಿ ಒಮ್ಮೆಲೆ ಯಾರಪ್ಪಾ ಈ ವ್ಯಕ್ತಿ? ಈತನನ್ನ ಪ್ರಧಾನಿ ಫೋನ್ ಮಾಡಿ ಕರೆಸಿದ್ದಾದರೂ ಯಾಕೆ? ಯಾರೀತ? ಅಂತ ಯೋಚಿಸುತ್ತ ಕುಳಿತುಕೊಂಡುಬಿಟ್ಟರಂತೆ. ಇಲ್ಲಿ ಇನ್ನೊಂದು ರೋಚಕ ವಿಷಯವೇನೆಂದರೆ ಪ್ರಧಾನಿ ಮೋದಿ ಫೋನ್ ಮಾಡಿ ಕರೆಸಿಕೊಂಡ ಆ ವ್ಯಕ್ತಿಯೇನು ರಾಜಕಾರಣಿಯಲ್ಲ, ನಟನಲ್ಲ ಅಥವ ಯಾವುದೋ ದೊಡ್ಡ ಉದ್ಯಮಿಯಾಗಿರಲಿಲ್ಲ ಬದಲಾಗಿ ರೋಹಟಕ್ ನ ಬಿಜೆಪಿ ಕಾರ್ಯಾಲಯದಲ್ಲಿ ಸಾಮಾನ್ಯ ಅಡುಗೆ ಕೆಲಸ ಮಾಡುವ ಕುಕ್ ಆಗಿದ್ದ. ಆತನ ಹೆಸರು ದೀಪಕ್ ಅಂತ.

ಅಷ್ಟಕ್ಕೂ ಪ್ರಧಾನಿ ಮೋದಿ ಆತನಿಗೆ ಫೋನ್ ಮಾಡಿ ಕರೆದದ್ದಾದರೂ ಯಾಕೆ? ಈ ದೀಪಕ್ ನಿಗೂ ಪ್ರಧಾನಿ ಮೋದಿಗಿರೋ ಸಂಬಂಧವಾದರೂ ಏನು ಅಂತ ನೀವು ಯೋಚಿಸುತ್ತಿರಬಹುದು, ಆದರೆ ಇದರ ಹಿಂದೆ ರೋಮಾಂಚಕಾರಿ ಕಥೆಯೊಂದು ಅಡಗಿದೆ. ದೀಪಕ್ ಹಾಗು ಪ್ರಧಾ‌ನಿ ಮೋದಿಯವರ ನಡುವಿನ ನಂಟು ಬಹಳ ಹಳೆಯದ್ದಾಗಿದೆ‌. 1995 ರಿಂದ 2000 ಇಸ್ವಿ ವರೆಗೆ ಪ್ರಧಾನಿ ಮೋದಿ ಹರಿಯಾಣಾ ರಾಜ್ಯದ ಬಿಜೆಪಿ ಪ್ರಭಾರಿಯಾಗಿದ್ದ ಸಮಯವದು, ಆ 5 ವರ್ಷಗಳ ಕಾಲವೂ ಈ ದೀಪಕನೇ ಪ್ರಧಾನಿ ಮೋದಿಯವರಿಗೆ ಕಾರ್ಯಾಲಯದಲ್ಲಿ ಅಡುಗೆ ಮಾಡಿಕೊಡುತ್ತಿದ್ದನಂತೆ.

ಆ ಘಟನೆ ನಡೆದು ಹತ್ತಿರತ್ತಿರ 20 ವರ್ಷಗಳೇ ಕಳೆಯುತ್ತಿವೆಯಾದರೂ ಪ್ರಧಾನಿ ಮೋದಿಯವರ ಸ್ವಭಾವ, ಗುಣ ಮಾತ್ರ ಇನ್ನೂ ಬದಲಾಗಿಲ್ಲ. ಅವರು ತಮ್ಮ ಹತ್ತಿರದ ಜನರನ್ನ, ತಮಗೆ ಸಹಾಯ ಮಾಡಿದವರನ್ನ ಈಗಲೂ ಮರೆತಿಲ್ಲ ಹಾಗು ಹರಿಯಾಣಾದ ರೋಹಟಕ್ ಗೆ ಬರುತ್ತಲೆ ದೀಪಕ್ ರನ್ನ ನೆನಪಿಸಿಕೊಂಡು ಅವರಿಗೆ ಫೋನ್ ಮಾಡಿ ಕರೆಸಿ ಕುಶಲೋಪರಿ ವಿಚಾರಿಸಿದ್ದಾರೆ ಪ್ರಧಾನಿ ಮೋದಿ.‌

ಪ್ರಧಾನಿ ಮೋದಿ ಕರೆ ಮಾಡಿದ ತಕ್ಷಣ ದೀಪಕ್ ರವರ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು,‌ ಯಾಕಂದ್ರೆ ಜಗತ್ತಿನ‌ ಸರ್ವಶ್ರೇಷ್ಡ ನಾಯ‌ಕ,‌ ಭಾರತದ ಅತ್ಯಂತ ಜ‌ಪ್ರೀಯ ಪ್ರಧಾನಿಯೊಬ್ಬರು ತನಗೆ ಫೋನ್ ಮಾಡಿದ್ದಾರೆಂದರೆ ಯಾರಿಗೆ ತಾನೆ ಖುಷಿಯಾಗಲ್ಲ ನೀವೇ ಹೇಳಿ.

ಪ್ರಧಾನಿ ಮೋದಿಯವರನ್ನ ಭೇಟಿಯಾದ ಬಳಿಕ ದೀಪಕ್ ಮಾತನಾಡುತ್ತ “ಸಾಮಾನ್ಯ ವ್ಯಕ್ತಿಯೊಬ್ಬನನ್ನ ಮೋದಿಜೀ ವಿಶೇಷ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ಪ್ರಧಾನಿ ಮೋದಿ ನನಗೆ ಕರೆ ಮಾಡಿ ಭೇಟಿಯಾಗೋಕೆ ಬಾ ಅಂತ ತಿಳಿಸಿದರು. ಇದಕ್ಕಿಂತ ಖುಷಿಯ ವಿಚಾರ ಏನಿದೆ? ಐದು ವರ್ಷಗಳ ಕಾಲ ಅವರು ನಾನು ಮಾಡಿದ ಅಡುಗೆಯನ್ನ ಊಟ ಮಾಡಿದ್ದಾರೆ. ಅದರಲ್ಲಿ ಅವರಿಗೆ ಖಿಚಡಿ ಹಾಗು ಸಸ್ಯಾಹಾರಿ ಊಟ ಬಹಳ ಇಷ್ಟದ ಖಾದ್ಯಗಳಾಗಿದ್ದವು” ಎಂದಿದ್ದಾರೆ ದೀಪಕ್

20 ವರ್ಷಗಳ ಹಿಂದಿನ ನೆನಪುಗಳನ್ನ ಮೆಲುಕು ಹಾಕುತ್ತ ”ಅವರನ್ನ ನೆನೆಯುತ್ತ ಅವರ ಭಾಷಣಗಳನ್ನ ಕಾರ್ಯಾಲಯದ ಟಿವಿಯಲ್ಲಿಯೇ ವೀಕ್ಷಿಸುತ್ತಿದ್ಧೆ, ಇವತ್ತೂ ಅವರ ಕಾರ್ಯಕ್ರಮವನ್ನ ಟಿವಿಯಲ್ಲಿ ನೋಡುತ್ತಿದ್ದಾಗಲೇ ಹರಿಯಾಣಾ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ರವರ ಫೋನ್ ಬಂತು, ಅವರು ಮಾತನಾಡುತ್ತ ದೀಪಕ್ ಎಲ್ಲಿದ್ದೀಯ? ಪ್ರಧಾನಿಗಳು ನಿನನ್ನ ನೆನೆಯುತ್ತಿದ್ದಾರೆ” ಎಂದು ಹೇಳಿದಾಗ ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.

“ಆ ಕರೆ ಬಂದ ತಕ್ಷಣ ಹೇಗೋ ಸ್ನೇಹಿತನೊಬ್ಬನ ಬೈಕ್ ತೆಗೆದುಕೊಂಡು ಸೀದಾ ಸಾಂಪಲಾ ಬಳಿ ಹೊರಟುಬಿಟ್ಟೆ. ಕಾರ್ಯಕ್ರಮ ಮುಗಿಯುವ ಹಂತಕ್ಕೆ ತಲುಪಿತ್ತು, ಸುರಕ್ಷತಾ ಸಿಬ್ಬಂದಿಗಳ ಕೆಲಸವೂ ಮುಗಿಯುತ್ತ ಬಂದಿತ್ತು. ಅಷ್ಟೊತ್ತಿಗಾಗಲೇ ಪ್ರಧಾನಿ ಮೋದಿ ತಮ್ಮ ಭಾಷಣ ಮುಗಿಸಿ ಸ್ಟೇಜ್ ಇಳಿದು ಬರುತ್ತಿದ್ದಂತೆ ನನ್ನನ್ನ ಭೇಟಿಯಾಗಿ ತಬ್ಬಿಕೊಂಡು ನನ್ನ ಕುಟುಂಬದವರ ಬಗ್ಗೆ ಹಾಗು ನನ್ನ ಬಗ್ಗೆ ಕುಶಲೋಪರಿಯನ್ನ ವಿಚಾರಿಸಿದರು” ಎಂದು ದೀಪಕ್ ಖುಷಿಯಿಂದಲೇ ನಡೆದ ಎಲ್ಲ ವಿಷಯವನ್ನೂ ತಿಳಿಸಿದ್ದ‌ರು.

ಪ್ರಧಾ‌ನಿ ಮೋದಿಯವರು ಹರಿಯಾಣಾದ ರೋಹಟಕ್ ಜಿಲ್ಲೆಯ ಸಾಂಪಲಾ ದಲ್ಲಿ ಚೌಧರಿ ಛೋಟುರಾಮ್ ಪ್ರತಿಮೆಯನ್ನ ಅನಾವರಣಗೊಳಿಸಲು ಹರಿಯಾಣಾಕ್ಕೆ ತೆರಳಿದ್ದರು. ಇದೇ ವೇಳೆಗೆ ಅವರು ದೀಪಕ್ ಗೆ ಅವರು ಮಾತನಾಡಿಸಿದ್ದನ್ನ ನೋಡಿ ಸಭೆಯಲ್ಲಿ ನೆರೆದಿದ್ದ ಜನರೆಲ್ಲ ಒಮ್ಮೆಲೆ ಹೌಹಾರಿ ಈತ ಯಾರಪ್ಪಾ? ಪ್ರಧಾ‌ನಿ ಮೋದಿಯವರನ್ನ ಭೇಟಿಯಾಗೋದೇ ಕಷ್ಟ ಅಂಥದ್ರಲ್ಲಿ ಈತ ಮಾತ್ರ ಪುಣ್ತವಂತನೇ ಸರಿ ಎಂದು ಮಾತನಾಡಿಕೊಳ್ಳುತ್ತ ನಮಗ್ಯಾವಾಗ ಪ್ರಧಾ‌ನಿ ಮೋದಿಯವರನ್ನ ಭೇಟಿಯಾಗುವ ಅವಕಾಶ ಸಿಗುತ್ತೋ ಅಂತ ಸಭೆಯಲ್ಲಿದ್ದ ಜನ ಮಾತನಾಡಿಕೊಳ್ಳುತ್ತಿದ್ದರಂತೆ.

Source: Punjab Kesari

– Team Nationalist Views

Nationalist Views ©2018 Copyrights Reserved

 •  
  7.6K
  Shares
 • 7.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com